ಯಾನ ಪಯಣದಿ ಸಪ್ತಪದದಿ ಜೊತೆಗೂಡಿದೆ…ಲತೆಯು ಅರಳಿ ಕಥೆಯೊಂದು ಶುರು ಮಾಡಿದೆ…ರೇಖಾ ವಿ ಕಂಪ್ಲಿ ಅವರ ಸುಂದರ ಸಾಲುಗಳನ್ನು ತಪ್ಪದೆ ಮುಂದೆ ಓದಿ…
ನಿನ್ನೊಲುಮೆ ಕಾಡಿಗೆಯು ಕಣ್ತುಂಬಿದೆ
ನನ್ನೊಲುಮೆ ಬಾಡಿಗೆಯು ಮನ್ದುಂಬಿದೆ
ಜಾರುತ ಆಕಾಶದಿ ಹನಿಯು ಮುತ್ತಾಗಿದೆ
ತೊರುತ ಒಲವ ಬೆಸುಗೆಯು ಸ್ವತ್ತಾಗಿದೆ……
ಅದೇನು ಹೇಳಿಲಿ ಮನ ತಂಗಾಳಿಯಾಗಿದೆ
ಇದೇನು ಕಾತರ ಜನ ಸ್ತೋಮವೇ ಮರೆತಿದೆ
ಸೊಜುಗದ ಚುಕ್ಕಿಯು ಮಿನುಗಿ ಹೊಳೆದಿದೆ
ಮೋಜುಗದ ಮೀನಂತೆ ನಯನವೇ ಕರೆದಿದೆ….
ಗಾನ ಗುಡಿಯಲಿ ನುಡಿದ ರಾಗವು ಮಿಡಿದಿದೆ
ಯಾನ ಪಯಣದಿ ಸಪ್ತಪದಿ ಜೊತೆಗೂಡಿದೆ
ಲತೆಯು ಅರಳಿ ಕಥೆಯೊಂದು ಶುರು ಮಾಡಿದೆ
ಜೊತೆಯು ಬಯಸಿ ಶಿಲೆಯೊಂದು ಮಾತಾಡಿದೆ…..
ಭಾವದ ದೋಣಿಯಲಿ ಮುಂದೆ ಮುಂದೆ ಸಾಗಿದೆ
ಹವಾದ ಮಹಲಿನಲಿ ನಿನ್ನದೆ ಅಮಲಿನಲಿ ತೇಲಿದೆ
ಬಾನಾಡಿ ಬಯಲಿ ಸೇರಿ ನನಸಿನ ಗೋಪುರ ಕಟ್ಟಿದೆ
ನಾವಾಡಿ ನಲಿದ ನವಿಲೊಂದು ಗರಿ ಬಿಚ್ಚಿ ಹಾಡಿದೆ….
- ರೇಖಾ ವಿ ಕಂಪ್ಲಿ
