ಸರ್ವಕುಟುಂಬದ ರಕ್ಷಕ ನೀನಾಗು ವಿನಾಯಕನೇ, ಸುಖ ಸಮೃದ್ಧಿಯ ಬಾಳಿಗೆ ಬೆಳಕಾಗು ಏಕದಂತನೆ…ಸವಿತಾ ಮುದ್ಗಲ್ ಅವರ ಗಣೇಶ ಭಜನೆಯನ್ನು ತಪ್ಪದೆ ಮುಂದೆ ಓದಿ…
ಗಜಮುಖನೆ ಗಣಪತಿಯೇ ನಿನಗೆ ವಂದನೆಗಳು
ಗಜಮುಖನೆ ಗಣಪತಿಯೇ ನಿನಗೆ ಕೋಟಿ ನಮನಗಳು||ಪ ||
ಮನದ ಅಜ್ಞಾನವಿಂದುಮೇಲುಗೈ ಸಾಧಿಸುತ ಕುಣಿಯುತಿದೆ ಮನದವಿಕಾರಗಳಿಂದು ಕಾಲ್ತುಳಿತಕೆ ಹೃದಯ ತಲ್ಲಣಿಸುತ್ತಿದೆ||1||
ವಿದ್ಯೆಯ ಕಲಿತ ಮನಸ್ಸಿಗೆ ದಾರಿ ತೋರಿಸು
ಗಣಪನೆ ಬುದ್ದಿ ನೀಡಿ ಮುನ್ನೆಡೆಸು
ಮುಂದಿನ ಬಾಳಿನಪಯಣಕೆ||2||
ಭಕ್ತಿಭಾವದಿಂದ ನಿತ್ಯಪೂಜಿಸುವೆ ನಿನಗೆ
ಕಾಪಾಡು ಅಷ್ಟವಕ್ರಗಳ ನಿವಾರಿಸಿ
ಶುಭದ್ರತೆಯ ಕೊಟ್ಟು ಕಾಪಾಡು||3||
ಸರ್ವಕುಟುಂಬದ ರಕ್ಷಕ ನೀನಾಗು
ವಿನಾಯಕನೇ
ಸುಖಸಮೃದ್ಧಿಯ ಬಾಳಿಗೆ ಬೆಳಕಾಗು ಏಕದಂತನೆ||4||
ಸಿಹಿಭಕ್ಷಿಗಳ ಸವಿಯುತ ಸದಾ ನೀನಿರು
ಕಹಿ ಜೀವನದ ಸುಳಿಯಲ್ಲಿ ಬಿಡದಂತೆ ನನ್ನ ಕಾಪಾಡು ಮುದ್ದು ಗಣಪತಿಯೆ ||5||
- ಸವಿತಾ ಮುದ್ಗಲ್ – ಬಳ್ಳಾರಿ
