‘ಗೋಡೆ ಎದ್ದಿದೆ’ ಕವನ – ಸ್ವಭಾವ ಕೋಳಗುಂದ



‘ಒಂದೇ ಒಂದು ನಗು, ಇಷ್ಟೇ ಇಷ್ಟು ಪ್ರೀತಿ, ಸಾಕಲ್ಲವೇ? ಈ ಗೋಡೆಯ ಕೆಡವಲು’…ಕವಿ ಸ್ವಭಾವ ಕೋಳಗುಂದ ಅವರ ಲೇಖನಿಯಲ್ಲಿ ಮೂಡಿ ಬಂದ ಅರ್ಥಪೂರ್ಣ ಸಾಲುಗಳು, ಮುಂದೆ ಓದಿ… 

ಬಯಲೆಲ್ಲ ಗೋಡೆಯೆದ್ದು
ಬಂಧೀಖಾನೆಯಾಗಿದೆ
ಇಲ್ಲ ಎಲ್ಲರೂ ಕಳ್ಳರೇ
ಗೋಡೆ ಮಾತ್ರ ಇದೆ

ಪ್ರೀತಿಯ ನಡುವೆ
ಮುನಿದ ಮನವ ದೂರ ಮಾಡಿದ
ಒಲವಿನ ಮಾತಿಲ್ಲದ
ಮೌನದ
ಗೋಡೆ ಎದ್ದಿದೆ

ಒಂದೇ ಮನೆಯೊಳಗೆ
ಎಷ್ಟೊಂದು ಗೋಡೆಗಳು
ಎಲ್ಲರೂ ಅವಿತಿದ್ದಾರೆ
ಮರೆಯಲ್ಲಿ
ಅವರಿಗೆ ಇವರು
ಇವರಿಗೆ ಅವರು
ಕಾಣಬಾರದೆಂದು

ದೇಶಗಳು ಕಟ್ಟಿಕೊಂಡಿವೆ ಗೋಡೆ
ಇಲ್ಲಿನವರು ಅಲ್ಲಿಗೆ
ಅವರು ಇಲ್ಲಿನ
ಕೊಡು ಕೊಳ್ಳುವಿಕೆ
ಇರಬಾರದೆಂದು
ಅಪ್ಪಿತಪ್ಪಿ ಗೋಡೆ ದಾಟಿದೆಯೋ
ಶತ್ರುದೇಶದ ಗೂಢಾಚಾರನೆಂಬ ಶಂಕೆ
ಅನುಮಾನ ವಿಚಾರಣೆ
ಬಿಡುಗಡೆಯ ನಾಟಕ
ನಾಲ್ಕು ಗೋಡೆಗಳ ನಡುವೆ

ಬಿತ್ತಿ ಬೆಳೆವ ಹೊಲದಲ್ಲಿ
ಅನ್ನದ ಬಟ್ಟಲಿಗೂ
ಕಳ್ಳ ಪೋಲಿ ದನಗಳ
ಮೇವಿಗೆ ಬಲಿಯಾಗದ ಬೇಲಿ

ಯಾವ ಹಾರೆಗೂ ಬೀಳದ
ಸಿಡಿಮದ್ದಿಗೆ ಸಿಡಿದು ಚೂರಾಗದ
ಸಂಬಂಧಗಳಿಗೆ ಸಂಕೋಲೆ ತೊಡಿಸುವ
ಗೋಡೆ ಬೇಕೆ

ಒಂದೇ ಒಂದು ನಗು
ಇಷ್ಟೇ ಇಷ್ಟು ಪ್ರೀತಿ
ಸಾಕಲ್ಲವೇ ಈ ಗೋಡೆಯ ಕೆಡವಲು
ಎಲ್ಲ ಅಡ್ಡಿಯನ್ನು
ಅಡ್ಡಡ್ಡ ಮಲಗಿಸುವ
ಬಂಧಗಳನೆಲ್ಲ ಬಿಡಿಸುವ
ನಮ್ಮವರೆನ್ನುವ ಆತ್ಮವ ಬೆಸೆಯಲು


  • ಸ್ವಭಾವ ಕೋಳಗುಂದ ( ಗೌರವ ಕಾರ್ಯದರ್ಶಿ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು) ಅರಸೀಕೆರೆ

One thought on “‘ಗೋಡೆ ಎದ್ದಿದೆ’ ಕವನ – ಸ್ವಭಾವ ಕೋಳಗುಂದ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading