ಪುರಂದರ ಗಡ (ಕೋಟೆ) – ಮಮತಾ ತೋಟೇಶ್



ಮಮತಾ ತೋಟೇಶ್ ಅವರು ಪುರಂದರ ಗಡ (ಕೋಟೆ) ಹೋಗುವಾಗ ತಮ್ಮ ಕ್ಯಾಮೆರಾ ಕಣ್ಣುಗಳಲ್ಲಿ ಸೆರೆ ಹಿಡಿದ ಸುಂದರ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಸ್ವರ್ಗ ಎಲ್ಲಿದೆ ಅಂದ್ರೆ… ಭೂಮಿ ಮೇಲೇ…ಮಳೆಗಾಲ… ಸಣ್ಣ ಸಣ್ಣ ಜಲಪಾತ… ಎಲ್ಲಿ ನೋಡಿದ್ರೂ ಹಸಿರು…. ಬೆಟ್ಟ ಗುಡ್ಡ… ಬಿಳಿ ಮೋಡಗಳು… ಮಂಜಿನ ಹನಿಗಳು… ಇದರೊಟ್ಟಿಗೆ ಬಿಸಿ ಬಿಸಿ ಚಹಾ.. ಬೆಂಕಿಯಲ್ಲಿ ಸುಟ್ಟಿರೋ ಜೋಳ…ಇದರೊಟ್ಟಿಗೆ ಮಹಾರಾಷ್ಟ್ರ ಸ್ಪೆಷಲ್ ಮಿಸಳ್…ಜೋಳದ ರೊಟ್ಟಿ ಜುಣಕ…..

This slideshow requires JavaScript.

ವಾರದ ಕೊನೇಲಿ ಹೀಗೊಂದು ಪ್ರಯಾಣ.. ಆಹಾ..ಮಹಾರಾಷ್ಟ್ರದಲ್ಲಿ ತುಂಬಾ ಕೋಟೆ ಕೊತ್ತಲುಗಳು… ಈ ದಿನ ನಾವು ಹೋಗಿದ್ದು ಪುರಂದರ ಗಡ (ಕೋಟೆ). ಮಹಾರಾಷ್ಟ್ರದಲ್ಲಿ ಸುಮಾರು ೩೦ಕೋಟೆಗಳಿವೆ, ಅವುಗಳಲ್ಲಿ ಬಹುತೇಕ ಕೋಟೆಗಳನ್ನು ಮಹಾ ಯೋಧ ಛತ್ರಪತಿ ಶಿವಾಜಿ ಮಹಾರಾಜನು ನಿರ್ಮಿಸಿದ್ಧವಾಗಿವೆ.

ಮೊನ್ನೆ ಪುರಂದರ ಗಡ (ಕೋಟೆ)ಗೆ ದಾರಿ ಊಟಿ ನೋಡಿದ ಹಾಗಾಯ್ತು, ಕಿರಿದಾದ ರಸ್ತೆಗಳು, ತೀವ್ರ ತಿರುವುಗಳು, ಮಂಜು ಮುಸುಕಿದ, ಮೋಡದೊಳಗೆ ನಾವು ಅನ್ನೋ ಹಾಗೇ..ಎದುರಿಗೆ ಯಾರು ಬರ್ತಾ ಇದ್ದಾರೆ ಗೊತ್ತಾಗೊಲ್ಲ…ಸಖತ್ ಚಳಿ, ಸಣ್ಣ ಮಳೆ, ಸ್ವಚ್ಛ ಗಾಳಿ ಸುಂದರ ಪರಿಸರ ಖುಷಿಕೊಟ್ಟಿತು .


  • ಕ್ಯಾಮೆರಾ ಹಿಂದಿನ ಕಣ್ಣು ಮತ್ತು ಲೇಖನ : ಮಮತಾ ತೋಟೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading