ದಿ ಪಂಡಿತ ವೆಂಕಟೇಶ್ ಗೋಡ್ಖಿಂಡಿ ಅವರ ಸ್ಮರಣಾರ್ಥಕವಾಗಿ ಸೆಪ್ಟೆಂಬರ್ ೯, ೨೦೨೩ ರಂದು ಅಂದರೆ ಇಂದು ಶನಿವಾರ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಲಾಗುತ್ತದೆ.
ಕಾರ್ಯಕ್ರಮದ ವಿವರ :
ಸ್ಥಳ : ಚೌಡಯ್ಯ ಮೆಮೋರಿಯಲ್ ಹಾಲ್
ದಿನಾಂಕ : ಶನಿವಾರ ೯, ೨೦೨೩
ಸಮಯ : ಸಂಜೆ ೪ ಗಂಟೆ
ಈ ಕಾರ್ಯಕ್ರಮದಲ್ಲಿ ಪಂಡಿತ ಪ್ರವೀಣ್ ಗೋಡ್ಖಿಂಡಿ ಸೇರಿದಂತೆ ಸಂಜೋಗ ಬನ್ಸುರಿ ವಿದ್ಯಾಲಯದಿಂದ ೨೦೦ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಾಡು, ಕಥಕ್, ಡ್ರಮ್ , ತಬಲಾ, ಜುಗಲಬಂದಿ ಸೇರಿದಂತೆ ಸಂಗೀತ ಶೋತೃಗಳಿಗೆ ರಸದೌತಣ ಸಿಗಲಿದೆ.
- ಆಕೃತಿಕನ್ನಡ ನ್ಯೂಸ್