‘ಹೈಕು’ ಕವನ

‘ಮಾಡಬೇಕಾದ್ದು ಬಹಳಷ್ಟು ಬಿದ್ದಿದೆ ಎಚ್ಚೆತ್ತು ಕೊಳ್ಳಿ’…ಇಂದು ಪ್ರಿಯಶಂಕರ ಅವರ ಲೇಖನಿಯಲ್ಲಿ ಮೂಡಿದ ಹನಿಗವನಗಳನ್ನು ತಪ್ಪದೆ ಮುಂದೆ ಓದಿ…

ಛಲವಿರಲಿ
ತುಸು ನಕ್ಕು ಹೇಳ್ಬಿಡಿ
ಮನಸು ಬಿಚ್ಚಿ

***

ಮರೆತು ಬಿಡಿ
ಹಗೆತನ,ವಿರಸ,
ಇರಲಿ ಖುಷಿ

***

ಸಮಸ್ಯೆಗಳು
ಸಹಜ ಜನುಮಕೆ
ಇರಲಿ ತಾಳ್ಮೆ

***

ನಿರ್ಲಕ್ಷ್ಯ ಮಾಡಿ
ಯಾರಿಗೂ ತಿಳಿಯದು
ಭವೀಷ್ಯ ಕತೆ

***

ನಾಳೆ ಮನುಷ್ಯ
ಸಿಗುತ್ತಾನೋ ಇಲ್ಲವೋ!
ಇಂದೆ ಒಂದಾಗಿ

***

ಆತ್ಮ ವಿಶ್ವಾಸ
ತುಂಬಿಕೊಳ್ಳಿ ಇವತ್ತು,
ಜಗತ್ತು ನಮ್ದೆ

***

ನಾಳೆ ಯಾವತ್ತೂ
ಬದುಕು ಹೊಂದಾಣಿಕೆ
ನಮ್ಮ ಕೈಯಲ್ಲಿ

***

ಮಾಡ ಬೇಕಾದ್ದು
ಬಹಳಷ್ಟು ಬಿದ್ದಿದೆ
ಎಚ್ಚೆತ್ತು ಕೊಳ್ಳಿ

***

ಮೂರು ದಿನದ
ಈ ಜಿಂದಗಿ ನೀರ್ಗುಳ್ಳೆ
ಅರಿತುಕೊಳ್ಳಿ

***

ಎನೇ ಬರಲಿ
ಇರುವಷ್ಟು ದಿನವು
ನಗುತ್ತಾ ಕೇಳಿ

‌***

ಸಂಘರ್ಷ ದಾರಿ
ಪರೀಕ್ಷೆಯ ಕೊಠಡಿ
ನಿನ್ನನ್ನು ಅರಿ


  • ಇಂದು ಪ್ರಿಯಶಂಕರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading