ನಿಮ್ಮ ತಲೆಯಲ್ಲಿನ ಸ್ವಲ್ಪ ಜಾಗದಲ್ಲಿ ಕೂದಲು ಕಡಿಮೆಯಾಗುವುದು ಅಥವಾ ದಿನಕ್ಕೆ 125 ಕ್ಕಿಂತ ಹೆಚ್ಚು ಕೂದಲು ಉದುರುತ್ತಿದ್ದಲ್ಲಿ, ನೀವು ವೈದ್ಯರ ಬಳಿಗೆ ಹೋಗುವುದು ಉತ್ತಮ – ಡಾ.ರಮ್ಯಾ ಭಟ್ , ಕೂದಲು ಉದುರುವಿಕೆಗೆ ಕಾರಣಗಳ ಕುರಿತು ಓದುಗರೊಂದಿಗೆ ಇನ್ನಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಕೂದಲು ಉದುರುವುದಕ್ಕೆ ಕಾರಣಗಳೇನು?
1. ವಯಸ್ಸು: ಸಾಮಾನ್ಯವಾಗಿ 40 ವರ್ಷದ ನಂತರ ಕೂದಲು ಉದುರುವುದು
2. ಪ್ರಸೂತಿಯ ನಂತರ ಮಹಿಳೆಯರಲ್ಲಿ ಸಾಮಾನ್ಯ
3. ಕೀಮೋಥೆರಪಿಯಂತಹ ಕ್ಯಾನ್ಸರ್ ಚಿಕಿತ್ಸೆಗೆ ಒಳಪಡುತ್ತಿರುವವರಲ್ಲಿ
4. ಪೋಷಕಾಂಶಗಳ ಕೊರತೆ
5. ವಿವಿಧ ರೀತಿಯ ಡಯಟ್‌ನಲ್ಲಿ ಇರುವುದರಿಂದ
6. ಅತಿಯಾದ ಮಾನಸಿಕ ಒತ್ತಡ
7. ಅತೀ ವ್ಯಾಯಾಮ
8. ಥೈರಾಯ್ಡ್ ಖಾಯಿಲೆಗಳು
9. ರಕ್ತದೊತ್ತಡ, ವಾತರಕ್ತ, ಆಮವಾತ ಮೊದಲಾದ ಖಾಯಿಲೆಗಳ ಔಷಧಿಗಳು
10. ಹಾರ್ಮೋನುಗಳ ವೈಪರೀತ್ಯ
11. ವಂಶವಾಹಿನಿಗಳು
12. ಮುಟ್ಟು ನಿಲ್ಲುವ ಹಂತ
13. ಸೌಂದರ್ಯವರ್ಧಕ ಚಿಕಿತ್ಸೆಗಳು
14. ವಿವಿಧ ರೀತಿಯ ಕೇಶ ವಿನ್ಯಾಸಗಳು
15. ಕೃತ ಬಣ್ಣಗಳ ಉಪಯೋಗ
16. ರಕ್ತಹೀನತೆ
17. ಚರ್ಮದ ಖಾಯಿಲೆಗಳು
18. ಹಾರ್ಮೋನು ಸಂಬಂಧಿತ ಮಾತ್ರೆಗಳು
19. ಕೃತ ಗರ್ಭಧಾರಣೆ
20. ಅತಿಯಾದ ಶ್ಯಾಂಪೂ , ಹೇರ್ ಸೀರಂಗಳ ಬಳಕೆ
21. ಅತಿಯಾದ ಹೆಲ್ಮೆಟ್ ಬಳಕೆ
ಕೂದಲು ಉದುರುವುದನ್ನು ತಡೆಗಟ್ಟುವ ಸಾಮಾನ್ಯ ಚಿಕಿತ್ಸೆಗಳು:
ಇಲ್ಲಿ ಹೇಳಲಾಗಿರುವ ಚಿಕಿತ್ಸಾ ಕ್ರಮಗಳನ್ನು ವೈದ್ಯಕೀಯ ಸಲಹೆಯ ಮೇರೆಗೆ ಉಪಯೋಗಿಸುವುದು ಉತ್ತಮ. ಆಯುರ್ವೇದ ಚಿಕಿತ್ಸೆಯು ಮನುಷ್ಯನ ದೇಹ ಪ್ರಕೃತಿಯ ಮೇಲೆ ಅವಲಂಬಿತವಾಗಿರುತ್ತದೆ.
1. ರಸಾಯನ ಚಿಕಿತ್ಸೆ:
ಪೌಷ್ಟಿಕಾಂಶದ ಕೊರತೆಯಿಂದ ಉಂಟಾಗುವವ ಕೂದಲು ಉದುರುವಿಕೆಯನ್ನು ತಡೆಗಟ್ಟಲು ಈ ಚಿಕಿತ್ಸಾ ಕ್ರಮವನ್ನು ಬಳಸಲಾಗುತ್ತದೆ. ನರಸಿಂಹ ರಸಾಯನ, ಕೂಷ್ಮಾಂಡ ರಸಾಯನ, ಆಮಲಕ್ಕಿ ರಸಾಯನ ಮೊದಲಾದವುಗಳನ್ನು ಕೊಡಲಾಗುತ್ತದೆ.
2. ದೈನಂದಿನವಾಗಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲು ಉದುರುವುದನ್ನು ತಡೆಗಟ್ಟಬಹುದು. ಕೂದಲಿಗೆ ಎಣ್ಣೆ ಹಚ್ಚುವುದರಿಂದ ಕೂದಲಿನ ಬೆಳವಣಿಗೆಯು ಹೆಚ್ಚುತ್ತದೆ.
ಕೊಬ್ಬರಿ ಎಣ್ಣೆ ಹಾಗೂ ಸಾಸಿವೆ ಎಣ್ಣೆಯನ್ನು ಬಳಸಲಾಳಗುತ್ತದೆ.
3. ಹೆನ್ನಾ/ಭೃಂಗರಾಜ, ಜಟಾಮಾಂಸಿ,ದಾಸವಾಳ, ತ್ರಿಫಲಾ, ಘೃತಕುಮಾರಿ, ಶೀಕಾಕಾಯಿ ಹಾಗೂಲ ಬ್ರಾಹ್ಮಿ ಮೊದಲಾದವುಗಳಿಂದ ತಯಾರಿಸಲಾದ ಶ್ಯಾಂಪೂ ಬಳಸುವುದರಿಂದ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
4. ಶಿರೋ ಅಭ್ಯಂಗ– ನೀಲಿ ತೈಲ, ಚಂದನಾದಿ ತೈಲ, ತ್ರಿಫಲಾದಿ ತೈಲ, ಭೃಂಗಾಮಲಕ ತೈಲ, ಮಾಲತ್ಯಾದಿ ತೈಲ ಮೊದಲಾದವುಗಳಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ.
5. ಶಿರೋಲೇಪಗಳು
– ಈ ಕೆಳಗಿನ ಲೇಪಗಳು ಕೂದಲು ಉದುರುವುದನ್ನು ತಡೆಗಟ್ಟುವುದಕ್ಕೆ ಸಹಕಾರಿಯಾಗಿದೆ.
• ಜ್ಯೇಷ್ಠಮಧು+ ನೆಲ್ಲಿಕಾಯಿ+ಮಧು
• ತಿಲ+ ನೆಲ್ಲಿಕಾಯಿ+ಕೊಬ್ಬರಿ ಎಣ್ಣೆ
• ಭೃಂಗರಾಜ ಲೇಪ
• ಆಮ್ಲಚೂರ್ಣ+ ದಾಸವಾಳ+ ತ್ರಿಫಲಾ ಕಷಾಯ
• ತಿಲ ಲೇಪ
• ಕರವೀರ ಲೇಪ
• ಕಹಿಬೇವಿನ ಚೂರ್ಣ_ಗುಂಜಾ ತೈಲ
ಇದಲ್ಲದೆ ಕೇಶದ್ರವ್ಯಗಳಿಂದ ತಯಾರಿಸಲ್ಪಟ್ಟ ಲೇಪ, ತೈಲ ಎಲ್ಲವೂ ಉಪಕಾರಿ ಆಗಿದೆ. ಕೇಶ ದ್ರವ್ಯಗಳು, ಅಳಲೆಕಾಯಿ, ಜ್ಯೇಷ್ಠಮಧು, ಬಾಕುಚಿ, ಗಂಭಾರಿ, ಭೃಂಗರಾಜ, ದಾಸವಾಳ, ತಿಲ, ಗೋರಂಟಿ
6. ಶಿರೋಧಾರ
7. ದಾಳಿಂಬೆ, ಬಸಳೆ, ಕೋಕಂ, ಕರಿಬೇವಿನ ಸೊಪ್ಪು ಮೊದಲಾದವುಗಳಿಂದ ತಯಾರಿಸಲಾದ ಕಷಾಯ ಅಥವಾ ರಸಗಳ ಸೇವನೆಯು ಕೂದಲು ಉದುರುವುದನ್ನು ನಿಲ್ಲಿಸುತ್ತದೆ.
- ಡಾ.ರಮ್ಯಾ ಭಟ್ – ಆಯುರ್ವೇದ ವೈದ್ಯರು, ವೈದಕೀಯ ಬರಹಗಾರರು, ಬೆಂಗಳೂರು.( ಸಂಪರ್ಕ : 88676 27297)