ಮೂಲಂಗಿಯನ್ನು ಆಹಾರವಾಗಿ ನಾವು ಹೆಚ್ಚಿನ ಉಪಯೋಗ ಪಡೆದಿರುತ್ತೇವೆ. ಇದರ ಎಲೆ ಗಡ್ಡೆ ಹೂವು ಬೀಜ ಎಲ್ಲವೂ ಔಷಧೀಯ ಗುಣವನ್ನು ಹೊಂದಿದೆ. ನಾಟಿ ವೈದ್ಯ ಸುಮನಾ ಮಳಲಗದ್ದೆ ಅವರು ಮೂಲಂಗಿ ಮಹತ್ವವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
1) ಉಸಿರಾಟದ ಸಮಸ್ಯೆ ಇದ್ದಾಗ ಮತ್ತು ದಮ್ಮು ಇದ್ದಾಗ ಗಂಟೆಗೆ ಒಂದು ಬಾರಿ ಮೂಲಂಗಿ ಕಷಾಯ ಮಾಡಿ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದರಿಂದ ಗುಣವಾಗುತ್ತದೆ.
2) ಚೇಳು ಕಡಿದಾಗ ಮೂಲಂಗಿ ಗಡ್ಡೆಯ ಭಾಗವನ್ನು ಕತ್ತರಿಸಿ ಕಚ್ಚಿದ ಜಾಗದಲ್ಲಿ ಇಟ್ಟರೆ ನೋವು ಶಮನವಾಗಿ ವಿಷ ಏರುವುದಿಲ್ಲ.
3) ಹೊತ್ತಿಗೆ ಕಾಲು ಕಪ್ ಅಷ್ಟು ಮೂಲಂಗಿ ಎಲೆ ಸಹಿತ ರುಬ್ಬಿ ರಸ ತೆಗೆದು ದಿನಕ್ಕೆ ಮೂರು ಹೊತ್ತು ಕೊಡುವುದರಿಂದ ಕಾಮಾಲೆ ಗುಣವಾಗುತ್ತದೆ.
ಫೋಟೋ ಕೃಪೆ : healthybuddha
4) ಪ್ರತಿ ದಿನ ಒಂದು ಮೂಲಂಗಿ ರಸವನ್ನು ಸೇವಿಸುವುದರಿಂದ ಜಲೋದರ ರೋಗ ಗುಣವಾಗುತ್ತದೆ. ತುಂಬಾ ಸಮಯದವರೆಗೆ ಮಾಡಬೇಕಾಗುತ್ತದೆ.
5) ಹಸಿ ಮೂಲಂಗಿಯನ್ನು ಕೋಸುಂಬರಿ ಮಾಡಿ ಒಂದೆರಡು ಕಾಳುಮೆಣಸು ಹಾಕಿ ತಿನ್ನುವುದರಿಂದ ಮೂಲವ್ಯಾದಿ ಗುಣವಾಗುತ್ತದೆ.
6) ಮೂಲಂಗಿ ಬೀಜವನ್ನು ಬಿಳಿ ತೋನ್ನಿನ ಔಷಧಿಗೆ ಉಪಯೋಗಿಸುತ್ತೇನೆ.
7) ಮೂಲಂಗಿ ಹೂವಿನ ಪೇಸ್ಟ್ ಮಾಡಿ ಕಣ್ಣಿನ ರೆಪ್ಪೆಗೆ ಹಚ್ಚುವುದರಿಂದ ಕಣ್ಣಿನ ಕಾಂತಿ ಹೆಚ್ಚುತ್ತದೆ. ಕಣ್ಣಿನ ದೃಷ್ಟಿ ಒಳ್ಳೆಯದಾಗುತ್ತದೆ.
8) ಮೂಲಂಗಿಯನ್ನು ಆಹಾರದಲ್ಲಿ ಹದವಾಗಿ ಬಳಸುವುದರಿಂದ ಹೃದಯ ರೋಗ ಬರುವುದಿಲ್ಲ.
9) ಹೆಚ್ಚು ಉಪಯೋಗಿಸಿದರೆ ಉಷ್ಣ ಹಿತಮಿತವಾಗಿ ಉಪಯೋಗಿಸುವುದು ಒಳ್ಳೆಯದು.
- ಸುಮನಾ ಮಳಲಗದ್ದೆ – ನಾಟಿವೈದ್ಯೆ (ಸಂಪರ್ಕ – 9980182883).