ಸಿಹಿಗಿಹಿ ತಿನ್ಕೊಂಡ್ … ಮನೇವ್ರ ಜೊತೆ ಚೆನ್ನಾಗಿ ನೆಡ್ಕೊಂಡ್ … ಹಾಯಾಗಿರೋದೇ ಬದುಕು …ಕವಿ ಮಿತ್ತೂರು ರಾಮಪ್ರಸಾದ್ ಅವರ ಕವನವನ್ನು ಪೂರ್ತಿ ತಪ್ಪದೆ ಮುಂದೆ ಓದಿ…
ಹಳ್ಳಿಯಾಗೆ ಹುಟ್ದೋನ್ಗೆ /
ಗುಡ್ಸ್ಲಾಗೆ ಬೆಳ್ದೂನ್ಗೆ /
ಬದುಕು ಏನೂಂತ ಗೊತ್ತಿಲ್ವ
ಹೊಲ ಗದ್ದೆ ಉತ್ತೊಂಗೆ /
ಅವ್ವನ್ ಕೈತುತ್ ತಿನ್ದೋನ್ಗೆ /
ಬದುಕು ಎನೊಂತ ಗೊತ್ತಿಲ್ವ/
ಗೆಳೆಯೊರ್ ಜೊತೆ ಕೂಡಿಹಾಡಿ/
ಊರ್ನೋರ್ಗೆಲ್ಲ ಗೇಲಿ ಮಾಡಿ /
ಧನ ಕುರಿಗಳ್ನ ದೊಡ್ಡಿಲಿ ಕೂಡಿ /
ಊರ್ ದ್ಯಾವರ್ಗಳ್ಗೆ ಪೂಜೆ ಮಾಡಿ /
ಹಾಯಾಗಿರೋದೇ ಬದುಕು /
ದ್ಯಾವ್ರ ಮುಂದ್ಯಾವ್ರ ಮಾಡ್ಕೊಂಡ್/
ಬರೋ ಹಬ್ಬಗಳ್ನ ನೆಡ್ಸ್ಕೊಂಡ್ /
ಸಿಹಿಗಿಹಿ ತಿನ್ಕೊಂಡ್ /
ಮನೇವ್ರ ಜೊತೆ ಚೆನ್ನಾಗಿ ನೆಡ್ಕೊಂಡ್ /
ಹಾಯಾಗಿರೋದೇ ಬದುಕು /
ಆಗೋದೆಲ್ಲ ಆಶೀರ್ವಾದ ಅನ್ಕೊಂಡ್/
ಇರೋದ್ರಲ್ ತೃಪ್ತಿ ಪಡ್ಕೊಂಡ್/
ಎಲ್ಲರ ಜೊತೆ ಪ್ರೀತಿಲಿ ಇದ್ಕೊಂಡ್ /
ದಿನಾನೂ ನಕ್ಕೊಂಡ್ ಕುಣಕೊಂಡ್ /
ಹಾಯಾಗಿರೋದೇ ಬದುಕು /
ಬೇರೆವ್ರ್ ಕಷ್ಟ ಸುಖಕ್ಕಾಗಿ /
ಬೇಕಾದಾಗ ಊರುಗೋಲಾಗಿ /
ಜೊತೆ ಜೊತೆಯಾಗಿ ಖುಷಿ ಖುಷಿಯಾಗಿ /
ದೇವ್ರಿಗೆ ದಿಂಡ್ರಿಗೆ ಬದ್ಧರಾಗಿ /
ಹಾಯಾಗಿರೋದೇ ಬದುಕು
- ಮಿತ್ತೂರು ರಾಮಪ್ರಸಾದ್