ತಜ್ಞ ವೈದ್ಯರು ಅಂದರೆ ಯಾರು? – ಭಾಗ ೨

ನಮ್ಮ ದೇಹದಲ್ಲಿ ಸಣ್ಣ ಬದಲಾವಣೆಯಾದರೂ ನಮ್ಮ ದೇಹ ಮುನ್ಸೂಚನೆ ನೀಡುತ್ತದೆ. ಅಂದರೆ ನಮ್ಮ ದೇಹ ಮೊದಲನೆಯ ವೈದ್ಯನಾಗಬೇಕು. ೪೦ ವರ್ಷ ದಾಟಿದ ಪ್ರತಿಯೊಬ್ಬರೂ ಕೆಲವು ವೈದಕೀಯ ತಪಾಸಣೆ ಮಾಡಿಸಿದರೆ ಉತ್ತಮ… ಆರೋಗ್ಯದ ಕುರಿತು ದೇವರಾಜ ಚಾರ್ ಅವರು ಓದುಗರಿಗೆ ಇನ್ನಷ್ಟು ಮಾಹಿತಿ ನೀಡುತ್ತಾರೆ ಮುಂದಿನ ಭಾಗವನ್ನು ತಪ್ಪದೆ ಓದಿ…

ತಜ್ಞ ವೈದ್ಯರುಗಳು :

7. ಮೂಳೆ ತಜ್ಞರು (orthopedic surgeon) :

ದೇಹದಲ್ಲಿರುವ ಮೂಳೆಗಳಿಗೆ ಸಂಬಂಧಪಟ್ಟ ತೊಂದರೆಗಳಿಗೆ ಚಿಕಿತ್ಸೆ ಕೊಡುತ್ತಾರೆ. ಮೂಳೆಗೆ ಪೆಟ್ಟಾದಾಗ, ಮೂಳೆ ಸವೆದಾಗ, ಮೂಳೆ ಮುರಿದಾಗ ಚಿಕಿತ್ಸೆ ಕೊಡುತ್ತಾರೆ . ಮಂಡಿ ನೋವಿಗೆ, ಮಂಡಿ ಚಿಪ್ಪು ಸವೆದಿದ್ದಲ್ಲಿ, ಚಿಕಿತ್ಸೆ ಕೊಡುತ್ತಾರೆ. ಅವಶ್ಯವಿದ್ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿ ಮಂಡಿ ಚಿಪ್ಪನ್ನು ಬದಲಾಯಿಸುತ್ತಾರೆ.

8. ಮಾನಸಿಕ ತಜ್ಞರು (psyychitrist ) :

ಮನಸ್ಸಿಗೆ ಸಂಬಂಧಪಟ್ಟ ಕಾಯಿಲೆಗಳಿಗೆ ಔಷಧ ಕೊಡುತ್ತಾರೆ. ದುರ್ಬಲ ಮನಸ್ಸುಗಳಿಗೆ ತಿಳುವಳಿಕೆ ನೀಡುತ್ತಾರೆ. ನರಗಳಿಗೆ ಸಂಬಂಧಪಟ್ಟ ರೋಗಗಳಿಗೆ ಔಷಧ ಕೊಡುತ್ತಾರೆ. ನೆನಪು ಹೋದರೆ, ಮೆದುಳಿಗೆ ಪೆಟ್ಟಾದಾಗ ಸರಿಪಡಿಸುವವರು ಇದೇ ವೈದ್ಯರು.

9.ಎದೆ ಮತ್ತು ಶ್ವಾಸಕೋಶ ತಜ್ಞರು (pulmonologist):

ಅಸ್ತಮಾ, ಕ್ಷಯ ರೋಗ, ಶ್ವಾಸಕೋಶ ದಲ್ಲಿ ತೊಂದರೆ ಇದ್ದಲ್ಲಿ ಚಿಕಿತ್ಸೆ ಕೊಡುತ್ತಾರೆ. ಎದೆ ಭಾಗದಲ್ಲಿ ನೋವು, ಎದೆಯಲ್ಲಿ ಕಫ ಕಟ್ಟಿಕೊಂಡಿದ್ದರೆ,ಉಸಿರಾಟದ ತೊಂದರೆ, ಕೆಮ್ಮು,ಸೀನು ಇದ್ದಲ್ಲಿ, ಧೂಳು ಮತ್ತು ಘಾಟಿಗೆ ಅಲರ್ಜಿ ಇದ್ದರೆ ಇವರು ಪರೀಕ್ಷಿಸಿ, ಎದೆ ಭಾಗದ x-ray ಮತ್ತು ಉಸಿರಾಟದ ಪರೀಕ್ಷೆ ಮಾಡಿ ಔಷಧ ಕೊಡುತ್ತಾರೆ. X-ray ವರದಿಯಲ್ಲಿ ರೋಗ ಪತ್ತೆ ಹಚ್ಚಲು ಸಾಧ್ಯವಾಗದಿದ್ದಲ್ಲಿ ct ಅಥವಾ m.r.i scan ಮಾಡಿಸಲು ಹೇಳುತ್ತಾರೆ. ವರದಿ ನೋಡಿಕೊಂಡು ಚಿಕಿತ್ಸೆ ಕೊಡುತ್ತಾರೆ.

10. ಕಣ್ಣಿನ ತಜ್ಞರು (eye specialist ):

ಓದಲು, ಬರೆಯಲು ತೊಂದರೆಯಾದಲ್ಲಿ,ಕಣ್ಣು ನೋವು ಇದ್ದಲ್ಲಿ, ಕಣ್ಣಲ್ಲಿ ನೀರು ಬರುತ್ತಿದ್ದಲ್ಲಿ, ಕಣ್ಣಿನ ವೈದ್ಯರ ಹತ್ತಿರ ತೋರಿಸಿಕೊಳ್ಳಬೇಕು. 40 ವರ್ಷ ವಯಸ್ಸಿನ ನಂತರ, ಸಕ್ಕರೆ ಕಾಯಿಲೆ ಇದ್ದವರು, ಯಾವುದೇ ಸಮಸ್ಯೆ ಇಲ್ಲದಿದ್ದರೂ ಸಹ ಕಣ್ಣಿನ ವೈದ್ಯರ ಹತ್ತಿರ ಪರೀಕ್ಷೆ ಮಾಡಿಸಿಕೊಳ್ಳಬೇಕು. ಅವಶ್ಯವಿದ್ದಲ್ಲಿ ಕನ್ನಡಕ ಹಾಕಿಕೊಳ್ಳಲು ತಿಳಿಸುತ್ತಾರೆ. ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ತಿಳಿಸಬಹುದು. ಅಂದರೆ glaucoma, cataract ಇತ್ಯಾದಿ…ಕಣ್ಣಿಗೆ ಸಂಬಂಧಪಟ್ಟ ಶಸ್ತ್ರಚಿಕಿತ್ಸೆ ಇವರೇ ಮಾಡುತ್ತಾರೆ.

11. ಮೂತ್ರ ಶಾಸ್ತ್ರಜ್ಞ (urologist):

ಇವರು ಮೂತ್ರಕೋಶ, ಮೂತ್ರನಾಳದಲ್ಲಿ ತಜ್ಞರಾಗಿರುತ್ತಾರೆ. ಮೂತ್ರ ವಿಸರ್ಜಿಸುವಾಗ ನೋವು, ಮೂತ್ರದ ಕಳಪೆ ಹರಿವು,ಮೂತ್ರದಲ್ಲಿ ರಕ್ತ,ಮೂತ್ರ ನಿಯಂತ್ರಿಸಲು ಸಾಧ್ಯವಾಗದಿದ್ದಾಗ ಇತ್ಯಾದಿ ಸಮಸ್ಯೆ ಇದ್ದಾಗ ಇವರನ್ನು ಕಾಣಬೇಕಾಗುತ್ತದೆ. ಮೂತ್ರಕೋಶ ಸೋಂಕು, ಕಿಡ್ನಿ ಗೆ ಸಂಬಂಧಪಟ್ಟ ಕ್ಯಾನ್ಸರ್ ಇತ್ಯಾದಿಗೆ ಚಿಕಿತ್ಸೆ ಕೊಡುತ್ತಾರೆ. ಪ್ರೋಸ್ತೆಟ್ ಗ್ರಂಥಿ ಹಿಗ್ಗಿದ್ದರೆ ಅದರ ತಪಾಸಣೆಯನ್ನು ಮಾಡಿ ಔಷದ ಕೊಡುತ್ತಾರೆ.

12. ಮೂತ್ರ ಪಿಂಡ ಶಾಸ್ತ್ರಜ್ಞ (nephrologist or renologist):
ಹೊಟ್ಟೆಯ ಪಕ್ಕೆಲುಬುಗಳಲ್ಲಿ ನೋವು ಕಂಡು ಬಂದರೆ, ಮೂತ್ರದಲ್ಲಿರಕ್ತ ಹೋದರೆ, ಮೂತ್ರಪಿಂಡಗಳಲ್ಲಿ ಕಲ್ಲಾದರೆ ಈ ತಜ್ಞವೈದ್ಯರನ್ನು ಕಾಣಬೇಕಾಗುತ್ತದೆ. ಶಸ್ತ್ರಚಿಕಿತ್ಸೆ ಮಾಡದೆ ಮೂತ್ರಪಿಂಡದ ಕಲ್ಲನ್ನು ಕರಗಿಸುತ್ತಾರೆ. ಮೂತ್ರಪಿಂಡಕ್ಕೆ ಸಂಬಂಧಪಟ್ಟ ರೋಗ ಗಳನ್ನು ಚಿಕಿತ್ಸೆ ಮಾಡುತ್ತಾರೆ ಮತ್ತು ಮೂತ್ರಪಿಂಡಗಳ ಬದಲಾವಣೆ ಮಾಡುತ್ತಾರೆ.

13. ಅರಿವಳಿಕೆ ತಜ್ಞರು (anesthesist) :

ಈ ವೈದ್ಯರು ರೋಗಿಗಳಿಗೆ ನೇರ ಸಂಪರ್ಕವಿರುವುದಿಲ್ಲ. ಆದರೆ ರೋಗಿಗಳಿಗೆ ಯಾವುದಾದರೂ ಶಸ್ತ್ರ ಚಿಕಿತ್ಸೆ ಮಾಡಬೇಕಾದ ಸಂದರ್ಭದಲ್ಲಿ ಈ ವೈದ್ಯರು ಮುಖ್ಯಪಾತ್ರ ವಹಿಸುತ್ತಾರೆ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಶಸ್ತ್ರಚಿಕಿತ್ಸೆಗು ಮೊದಲು ಅರಿವಳಿಕೆ ತಜ್ಞರ ಗಮನಕ್ಕೆ ತರ್ತಾರೆ. ಅರಿವಳಿಕೆ ತಜ್ಞರು ರೋಗಿಯ ಹಿನ್ನೆಲೆ, ರೋಗಿಗೆ ಇರುವ ರೋಗ ಲಕ್ಷಣಗಳನ್ನು ಕೂಲಂಕುಶವಾಗಿ ಅಧ್ಯಯನ ಮಾಡುತ್ತಾರೆ. ತದನಂತರ ರೋಗಿಯನ್ನು ಕೌನ್ಸಿಲಿಂಗ್ ಮಾಡುತ್ತಾರೆ. ರೋಗಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ಆಗುವ ಪ್ರಕ್ರಿಯೆ, side effects ಇತ್ಯಾದಿ ಮನವರಿಕೆ ಮಾಡಿಕೊಡುತ್ತಾರೆ. ಶಸ್ತ್ರಚಿಕಿತ್ಸೆಗು ಮೊದಲು ರೋಗಿಯ ಜ್ಞಾನ ತಪ್ಪಿಸಲು ಚುಚ್ಚುಮದ್ದನ್ನು ಕೊಡುತ್ತಾರೆ.. ಈ ವೈದ್ಯರು ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಇದ್ದುಕೊಂಡು ಶಸ್ತ್ರಚಿಕಿತ್ಸೆ ಮುಂದುವರಿಸಲು ಹೇಳುತ್ತಾರೆ. ಶಸ್ತ್ರಚಿಕಿತ್ಸೆ ಆದ ನಂತರವೂ ಸಹ ಅರಿವಳಿಕೆ ತಜ್ಞರು ರೋಗಿಯ ನಿಗ ಮಾಡುತ್ತಾರೆ. ದೇಹದ ಭಾಗದಲ್ಲಿ ನೋವುಗಳಿದ್ದರೆ ಶಮನ ಮಾಡುವುದರಲ್ಲಿ,ತುರ್ತು ಚಿಕಿತ್ಸೆಯ ಸಂಬಂಧದಲ್ಲಿ ರೋಗಿಯ ನಿಗಾ ವಹಿಸುತ್ತಾರೆ.

14.ವಿಧಿ ವಿಜ್ಞಾನ ತಜ್ಞರು (forensic medicine ) :

ಮನುಷ್ಯನನ್ನು ಕೊಲ್ಲಲು ಆಯುಧಗಳನ್ನು ಉಪಯೋಗಿಸಿದ್ದರೆ, ಅದು ಯಾವ ಆಯುಧ ಎಂದು ಪತ್ತೆ ಹಚ್ಚುವಲ್ಲಿ ನಿಪುಣರಾಗಿರುತ್ತಾರೆ. ಮನುಷ್ಯ ಅಕಾಲಿಕ ಮರಣ ಹೊಂದಿದ್ದರೆ, ಕೊಲೆಯಾಗಲ್ಪಟ್ಟರೆ,ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅಸಹಜ ಸಾವಾಗಿದ್ದರೆ, ಈ ವೈದ್ದರೂ ಪರೀಕ್ಷಿಸಿ ವಿಶ್ಲೇಷಣೆ ಮಾಡಿ ಕಾರಣಗಳನ್ನು ತಿಳಿದುಕೊಂಡು,ವರದಿ ಕೊಡುತ್ತಾರೆ.

ವಿಶೇಷ ತಜ್ಞರು (super specialist ) :

ಇಂತಹ ವೈದ್ಯರು ಎಂಬಿಬಿಎಸ್ ಆದ ನಂತರ ಜನರಲ್ ಮೆಡಿಷನ್ನಲ್ಲಿ ಎಂಡಿ ಮಾಡಿರುತ್ತಾರೆ. ನಂತರದಲ್ಲಿ “ಡಿಎಂ” ಪದವಿ ಪಡೆದುಕೊಂಡು ವಿಶೇಷ ತಜ್ಞರಾಗುತ್ತಾರೆ.

1. ಹೃದಯ ರೋಗ ತಜ್ಞರು (cardiologist):

ಇವರು ರೋಗಿಯ ಹಿಸ್ಟರಿ ತಿಳಿದುಕೊಂಡು ecg ಮಾಡಿಸುತ್ತಾರೆ. ಅವಶ್ಯವಿದ್ದಲ್ಲಿ ಹೃದಯದ 2D echo, tmt ಮಾಡಿಸುತ್ತಾರೆ. ರಕ್ತದಲ್ಲಿನ ಕೊಬ್ಬಿನ ಅಂಶ,ಸಕ್ಕರೆ ಪ್ರಮಾಣ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಲು ಹೇಳುತ್ತಾರೆ. ರೋಗಿಯ ಪರೀಕ್ಷಾ ವರದಿಯಲ್ಲಿ ನ್ಯೂನತೆ ಕಂಡು ಬಂದಲ್ಲಿ ಆಂಜಿಯೋಗ್ರಾಂ ಮಾಡಿಸಲು ತಿಳಿಸುತ್ತಾರೆ. ಈ ಪರೀಕ್ಷೆಯಿಂದ ರೋಗಿಯ ರಕ್ತನಾಳಗಳಲ್ಲಿ blockage ಆಗಿದ್ದರೆ, ಸಂಕು ಚಿತಗೊಂಡಿದ್ದರೆ ತಿಳಿಯುತ್ತೆ. ಇಂತಹ ಸಂದರ್ಭದಲ್ಲಿ angioplasty ಮಾಡಿಸಿಕೊಳ್ಳಲು ತಿಳಿಸುತ್ತಾರೆ. ಈ ಚಿಕಿತ್ಸೆಯಲ್ಲಿ ರಕ್ತನಾಳವನ್ನು ಹಿಗ್ಗಿಸಿ stunt/plasty ಅಳವಡಿಸುತ್ತಾರೆ. ಇದರಿಂದ ರಕ್ತ ಸಂಚಾರ ಸುಗಮವಾಗಿ ಆಗುತ್ತದೆ. ರಕ್ತನಾಳಗಳಲ್ಲಿ Blockage ಜಾಸ್ತಿ ಆಗಿದ್ದಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಲಹೆ ಕೊಡುತ್ತಾರೆ.

2. ಜಠರ ತಜ್ಞ (gastroenterologist )

ಅಜೀರ್ಣದ ಸಮಸ್ಯೆ, ಕಾಮಾಲೆ ರೋಗ, ಯಕೃತ್ತು ಸಮಸ್ಯೆ, ಇತ್ಯಾದಿ ಕಾಯಿಲೆಗಳಿದ್ದರೆ ಈ ತಜ್ಞ ವೈದ್ಯರು ಪರೀಕ್ಷಿಸಿ ಔಷಧ ಕೊಡುತ್ತಾರೆ. ಅಗತ್ಯ ಬಿದ್ದಲ್ಲಿ ಸ್ಕ್ಯಾನ್ ಮಾಡಿಸುತ್ತಾರೆ. endoscopy ಸಹ ಇವರೇ ಮಾಡುತ್ತಾರೆ. ಅಗತ್ಯ ಕಂಡು ಬಂದಲ್ಲಿ bioscopy ಸಹ ಮಾಡಿಸುತ್ತಾರೆ.

3. ಅಂತ:ಶ್ರಾವ ಶ್ಶಾಸ್ತ್ರಜ್ಞ (endocrynologist):

ದೇಹದಲ್ಲಿ ಹಾರ್ಮೋನ್ ಹೆಚ್ಚು ಕಡಿಮೆ ಆದಲ್ಲಿ, ಕೆಲವು ನ್ಯೂನತೆಗಳು ಕಂಡು ಬರುತ್ತವೆ. ಈ ತಜ್ಞರು ರೋಗವನ್ನು ವಿಶ್ಲೇಷಿಸಿ ಸರಿಪಡಿಸುತ್ತಾರೆ. ವಿಶೇಷವಾಗಿ ಇವರು ಥೈರಾಯ್ಡ್ ಪ್ರಾಬ್ಲಂ ಮತ್ತು ಸಕ್ಕರೆ ರೋಗ ಇರುವವರನ್ನು ಸರಿಪಡಿಸುತ್ತಾರೆ.

ಈ ಕೆಳಗೆ ಕಾಣಿಸಿದ ವೈದ್ಯರು ಎಂಬಿಬಿಎಸ್ ಪದವಿ ನಂತರ, ಆಯಾಯ ವಿಷಯಗಳಲ್ಲಿ ಎಂಡಿ ಮಾಡಿರುತ್ತಾರೆ ಇವರುಗಳು ರೋಗಿಗಳಿಗೆ ನೇರ ಸಂಪರ್ಕವಿಲ್ಲದೆ ಇದ್ದರೂ ಸಹ, ರೋಗಿಗಳ x-ray, ಸ್ಕ್ಯಾನಿಂಗ್, ವಿವಿಧ ಬಗೆಯ ರಕ್ತ ಪರೀಕ್ಷೆ ಮುಂತಾದವುಗಳ ವರದಿಯನ್ನ ತಯಾರಿಸಿ ರೋಗವನ್ನು ವಿಶ್ಲೇಷಿಸುತ್ತಾರೆ. ಎಂಬಿಬಿಎಸ್ ಮತ್ತು ಎಂ ಡಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಬೋಧಕರಾಗಿರುತ್ತಾರೆ.

1.Radiologist
2.Biochemist
3.pathologist
4.microbiologist

F. ತೆರೆಯ ಮರೆಯ ವೈದ್ಯರು

ಈ ಕೆಳಕಂಡ ವೈದ್ಯರು ವೈದ್ಯಕೀಯ ವಿದ್ಯಾರ್ಥಿಗಳನ್ನು ತಯಾರು ಮಾಡುವ ಬೋಧಕರು. ವೈದ್ಯರಾಗಬೇಕಾದರೆ ಈ ಕೆಳಕಂಡ ವಿಷಯಗಳಲ್ಲಿ ತೇರ್ಗಡೆಯಾಗಲೇಬೇಕು. ರೋಗಿಗಳಿಗೆ ಚಿಕಿತ್ಸೆ ಕೊಡಬೇಕಾದ ಸಂದರ್ಭದಲ್ಲೂ ಸಹ ಈ ಕೆಳಗಿನ ವಿಷಯಗಳು ತುಂಬಾನೇ ಮುಖ್ಯವಾಗಿರುತ್ತದೆ.

1.Anatomist
2. Physiologist
3.Biochemist
4.micro biologist
5.pathologist
6.pharmacologist
7.Forensic medicine
8.community medicine

ಮೇಲೆ ತಿಳಿಸಿದ ಎಲ್ಲಾ ತಜ್ಞರು ಎಂ ಬಿ ಬಿ ಎಸ್ ಮುಗಿಸಿ ತಮ್ಮ ತಮ್ಮ ವಿಷಯಗಳಲ್ಲಿ ಎಂಡಿ ಮಾಡಿರುತ್ತಾರೆ. ಬೋಧನೆ ಮಾಡುವುದರಲ್ಲಿ ನಿಪುಣರು..


  • ದೇವರಾಜ ಚಾರ್ , ಮೈಸೂರು

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW