ಆರೋಗ್ಯಕರ ಜೀವನಕ್ಕೆ ಕೈ ಜೋಡಿಸಿ

ಒಳ್ಳೆಯ ಅಭ್ಯಾಸಗಳ ಬಗ್ಗೆ ಗೊತ್ತಿದ್ದರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲು ಹಿಂದೇಟು ಹಾಕುತ್ತೇವೆ ಅಥವಾ ಉದಾಸೀನ ತೋರುತ್ತೇವೆ. ಆದರೆ ಆರೋಗ್ಯಕರ ಜೀವನಕ್ಕೆ ಈ ಮಾರ್ಗಗಳನ್ನು ಇಂದಿನ ದಿನಗಳಲ್ಲಿ ಅಳವಡಿಸಿಕೊಳ್ಳುವುದು ಅತ್ಯವಶ್ಯಕ. ನಿಮ್ಮ ಆರೋಗ್ಯ ನಿಮ್ಮ ಅಂಗೈಯಲ್ಲಿದೆ ಎನ್ನುವುದನ್ನು ಮರೆಯದಿರಿ. ಮುಂದೆ ಓದಿ…

 • ಕಾಫಿಯನ್ನು ಮಿತವಾಗಿ ಸೇವಿಸಿದಾಗ ಮಧುಮೇಹ, ಪಿತ್ತಜನಕಾಂಗದ ಹಾನಿ, ಕ್ಯಾನ್ಸರ್ ಮತ್ತು ಖಿನ್ನತೆಯನ್ನು ಕಡಿಮೆ ಮಾಡುತ್ತದೆ.

ಫೋಟೋ ಕೃಪೆ : WhiskAffair

 • ೨೦೦೩ ರ ಅಧ್ಯಯನದ ಪ್ರಕಾರ, ನಗುವುದು ದೇಹದಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ನಗುವಿನಲ್ಲಿ ರೋಗ ನಿರೋಧಕ ಶಕ್ತಿಯಿದೆ. ಆದಷ್ಟು ಮನಸ್ಸು ಬಿಚ್ಚಿ ನಗಿ ಮತ್ತು ಇತರರನ್ನು ನಗಿಸಿ. ನಗಿ ಎಂದ ಮಾತ್ರಕ್ಕೆ ಎಲ್ಲೆಂದರಲ್ಲಿ ನಗುತ್ತ ಕೂಡ ಬೇಡಿ. ಯಾರಾದರೂ ಮಾತನಾಡಿಸಿದಾಗ ಮನಸ್ಸು ಬಿಚ್ಚಿ ಮಾತನಾಡಿ, ನಗುತ್ತ ಉತ್ತರಿಸಿ.
 • ಸಂಗೀತವನ್ನು ಕೇಳುವುದರಿಂದ ಮನಸ್ಸಿನಲ್ಲಿನ ದುಗುಡ ಕಡಿಮೆಯಾಗುತ್ತದೆ. ಸಂಗೀತವನ್ನು ಆಲಿಸುತ್ತಾ, ಬೆಳಗಿನ ಕೆಲಸವನ್ನು ಆರಂಭಿಸಿ. ಸಂಗೀತ ಮನಸ್ಸನ್ನು ಸಂತೋಷವಾಗಿಡುತ್ತದೆ. ಮತ್ತು ದಿನ ಶುಭಾರಂಭವಾಗುವುದು.

ಫೋಟೋ ಕೃಪೆ : Peachmode

 • ಮಸಾಲೆ ಪದಾರ್ಥಗಳನ್ನು ಮಿತಿಗಿಂತ ಹೆಚ್ಚಾಗಿ ಬಳಸುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ, ಎದೆ ಉರಿತ, ಮೂಲವ್ಯಾಧಿ ಸಮಸ್ಯೆಗಳು ಉಲ್ಭಣವಾಗುತ್ತದೆ.  ಮಸಾಲೆಯನ್ನು ಮಿತವಾಗಿ ಬಳಸಿ.
 • ಸಲಾಡ್ ಗಳಲ್ಲಿ ಆಲಿವ್ ಎಣ್ಣೆಯನ್ನು ಬಳಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಪ್ರೊಸೀಡಿಂಗ್ಸ್‌ನಲ್ಲಿ ಪ್ರಕಟವಾದ ೨೦೧೪ ರ ಅಧ್ಯಯನವೊಂದರ ಪ್ರಕಾರ, ಆಲಿವ್ ಎಣ್ಣೆ ಮತ್ತು ಲೆಟಿಸ್‌ನ ಸಂಯೋಜನೆಯು ನೈಟ್ರೊ ಕೊಬ್ಬಿನಾಮ್ಲಗಳನ್ನು ಸೃಷ್ಟಿಸುತ್ತದೆ. ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ.

ಫೋಟೋ ಕೃಪೆ : Tesco Real Food

 • ಹೊರಗೆ ಹೋದಾಗ ಲಘು ಆಹಾರವನ್ನಾಗಿ ಚಿಪ್ಸ್ ಅಥವಾ ಇತರೆ ಕುರುಕಲು ತಿಂಡಿಗಳನ್ನು ಬಳಸುವ ಬದಲು ಆರೋಗ್ಯಕರವಾದ ಒಣ ದ್ರಾಕ್ಷಿ,ಗೋಡಂಬಿ, ಇತರೆ ಪ್ರೋಟೀನ್ ಬಾರ್‌ಗಳನ್ನು ಬಳಸಿ. ಬ್ಯಾಗ್ ನಲ್ಲಿ ಈ ರೀತಿ ಲಘು ಆಹಾರಗಳನ್ನು ಇಟ್ಟಿಕೊಳ್ಳುವುದು ಒಳ್ಳೆಯ ಅಭ್ಯಾಸ.
 • ಸಮಯವಿದ್ದಾಗ ಕೈತೋಟ ಮಾಡುವ ಅಭ್ಯಾಸವನ್ನಿಟ್ಟುಕೊಳ್ಳಿ. ಹಸಿರಿನ ನಡುವೆ ಉಸಿರು. ಕೈತೋಟ ಮನಸ್ಸಿಗೆ ಸಂತೋಷವಾಗುತ್ತದೆ. ಕಣ್ಣಿಗೆ, ಉಸಿರಾಟಕ್ಕೆ ಈ ಹವ್ಯಾಸ ಒಳ್ಳೆಯದು. ೨೦೦೬ ರ ಮೆಡಿಕಲ್ ಜರ್ನಲ್ ಆಫ್ ಆಸ್ಟ್ರೇಲಿಯಾದಲ್ಲಿ ಪ್ರಕಟವಾದ ಒಂದು ಅಧ್ಯಯನದಲ್ಲಿ ತೋಟಗಾರಿಕೆ ಕೆಲಸದಿಂದ ಆರೋಗ್ಯದಲ್ಲಿನ ಅಪಾಯದ ಮಟ್ಟವನ್ನು ಶೇಕಡಾ ೩೬ರಷ್ಟು ಕಡಿಮೆಗೊಳಿಸುತ್ತದೆ ಎಂದು ತಿಳಿದು ಬಂದಿದೆ.

ಫೋಟೋ ಕೃಪೆ : American Senior Communities

 • ಜರ್ನಲ್ ಸರ್ಕ್ಯುಲೇಷನ್ ನಲ್ಲಿ ಪ್ರಕಟವಾದ ೨೦೧೩ ರ ಅಧ್ಯಯನದ ಪ್ರಕಾರ, ಸಾಕು ಪ್ರಾಣಿಗಳನ್ನು ಮನೆಯಲ್ಲಿ ಸಾಕುವುದರಿಂದ ಆರೋಗ್ಯದಲ್ಲಿ ಉತ್ತಮ ಫಲಿತಾಂಶವನ್ನು ಕಾಣಬಹುದು ಎಂದು ಹೇಳಲಾಗುತ್ತದೆ. ಆಫೀಸ್ ನ ಕೆಲಸದ ಒತ್ತಡದಿಂದ ಮನೆಗೆ ಬಂದಾಗ ನಿಮ್ಮ ಬಗ್ಗೆ ಅಪಾರ ಕಾಳಜಿಯನ್ನು ತೋರುವ ಜೀವಿಯೆಂದರೆ ನೀವು ಸಾಕಿದ ಪ್ರಾಣಿಗಳು. ಅವುಗಳ ಪ್ರೀತಿ ನಿಷ್ಕಲ್ಮಷವಾಗಿರುತ್ತವೆ. ನಿಮ್ಮ ಧಣಿವನ್ನು ಕ್ಷಣಾರ್ಧದಲ್ಲೇ ದೂರ ಮಾಡುವ ಶಕ್ತಿ ಅವುಗಳಲ್ಲಿವೆ.  ವರದಿಯೊಂದರ ಪ್ರಕಾರ ಸಾಕು ಪ್ರಾಣಿಗಳಿದ್ದ ಮನೆಯಲ್ಲಿ ಹೃದಯಾಘಾತ ಸಂಭವಿಸುವುದು ವಿರಳ ಎನ್ನಲಾಗುತ್ತದೆ.

ಫೋಟೋ ಕೃಪೆ : Bumppy

 • ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಅವಿಭಕ್ತ ಕುಟುಂಬವು ಅತ್ಯಗತ್ಯ. ಪ್ರಿವೆಂಟಿವ್ ಮೆಡಿಸಿನ್ ಜರ್ನಲ್ನಲ್ಲಿ ಪ್ರಕಟವಾದ ೨೦೧೮ ರ ಅಧ್ಯಯನವು  ಅವಿಭಕ್ತ ಕುಟುಂಬದಿಂದ ಮಾನಸಿಕ ಒತ್ತಡ, ಒಂಟಿತನ ಮತ್ತು ಆತಂಕದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ.
 • ಸೈಕಾಲಜಿ ಮತ್ತು ಸೈಕೋಥೆರಪಿ ಜರ್ನಲ್ನಲ್ಲಿ ಪ್ರಕಟವಾದ ೨೦೧೬ ರ ಅಧ್ಯಯನದ  ಪ್ರಕಾರ ಸಕಾರಾತ್ಮಕ ಯೋಚನೆಗಳು ಮನುಷ್ಯನ ಆರೋಗ್ಯವನ್ನು ಉತ್ತಮವಾಗಿಡುತ್ತವೆ ಎಂದು ಕಂಡು ಹಿಡಿದಿದೆ. ಉತ್ತಮ ಮನಸ್ಥಿತಿಯನ್ನು ಹೆಚ್ಚಿಸಲು, ಆತಂಕವನ್ನು ತೊಡೆದುಹಾಕಲು, ಸುರಕ್ಷತೆಯ ಭಾವನೆಗಳನ್ನು ಹೆಚ್ಚಿಸಲು ಸಂತೋಷದ ವಿಷಯದ ಬಗ್ಗೆ ಯೋಚಿಸಬೇಕು.

ಫೋಟೋ ಕೃಪೆ : The Economic Time

 • ನೀವು ಮೇಜಿನ ಮೇಲೆ ನಿರಂತರವಾಗಿ ಕೂತು ಕೆಲಸ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ.  ಅಮೇರಿಕನ್ ಜರ್ನಲ್ ಆಫ್ ಎಪಿಡೆಮಿಯಾಲಜಿಯಲ್ಲಿ ಪ್ರಕಟವಾದ ೨೦೧೮ ರ ಒಂದು ಅಧ್ಯಯನದ ಪ್ರಕಾರ, ಪ್ರತಿದಿನ ಮೂರು ಗಂಟೆಗಳಿಗಿಂತ ಕಡಿಮೆ ಕುಳಿತುಕೊಳ್ಳುವವರಿಗೆ ಹೋಲಿಸಿದರೆ, ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕಾಲ ಕುಳಿತುಕೊಳ್ಳುವ ಜನರು ಅಕಾಲಿಕ ಮರಣದ ಅಪಾಯವನ್ನು ಶೇಕಡಾ ೧೯ ರಷ್ಟು ಹೆಚ್ಚಿದೆ.  ಆದರಿಂದ ಆದಷ್ಟು ನಿರಂತರವಾಗಿ ಕೂತು ಕೆಲಸ ಮಾಡುವುದನ್ನು ನಿಲ್ಲಿಸಿ. ಕಾಲು ನಡಿಗೆಯನ್ನು ಆದಷ್ಟು ಅಭ್ಯಾಸವನ್ನಾಗಿಟ್ಟುಕೊಳ್ಳಿ.

 • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW