ಉತ್ತರ ಕರ್ನಾಟಕದ ಜೋಳದ ರೊಟ್ಟಿ ಜೊತೆಗೆ ಶೇಂಗಾ ಚಟ್ನಿಪುಡಿ ಕೂಡ ಪ್ರಸಿದ್ಧ. ಅದೇ ಶೇಂಗಾ ಚಟ್ನಿಪುಡಿಯನ್ನು ಉತ್ತರ ಕರ್ನಾಟಕದವರು ಮತ್ತು ಅಲ್ಲಿಯ ಹಿರಿಯರಿಂದ ಕಲಿತರೆ ಚಟ್ನಿ ಪುಡಿ ಗಮ್ಮತ್ತೆ ಬೇರೆ. ಶಾಂತ ಹೂಲಿ ಅವರು ಕಡಿಮೆ ಸಾಮಗ್ರಿಗಳನ್ನು ಬಳಸಿ ಅದ್ಬುತ ಶೇಂಗಾ ಚಟ್ನಿಪುಡಿ ಮಾಡುವುದು ಹೇಗೆ ಎನ್ನುವುದನ್ನು ಆಕೃತಿಯಲ್ಲಿ ತಿಳಿಸಿದ್ದಾರೆ…
ಬೇಕಾಗುವ ಪದಾರ್ಥಗಳು :
೧. ಶೇಂಗಾ ನಿಮಗೆ ಬೇಕಾಗುವಷ್ಟು
೨. ಖಾರದ ಪುಡಿ
೩. ಬೆಳ್ಳುಳ್ಳಿ ಎಸಳು
೪. ಕರಿಬೇವು
೫. ಉಪ್ಪು
ಮಾಡುವ ವಿಧಾನ :
- ಶೇಂಗಾವನ್ನು ತವೆಯಲ್ಲಿ ಹಾಕಿ ಹುರಿಯಿರಿ.
- ಹುರಿದು ಆರಿದ ನಂತರ ಮಿಕ್ಸಿ ಜಾರಿಗೆ ಹಾಕಿ.
- ಒಂದು ಎರಡು ಸುತ್ತು ತಿರುಗಿಸಿ (ನಿಮಗೆ ಬೇಕಾಗುವಷ್ಟು ಸಣ್ಣಗೆ ಮಾಡಿಕೊಳ್ಳಿ). ಅದಕ್ಕೆ ಇನ್ನೊಂದು ಜಾರಿಗೆ ಬೆಳ್ಳುಳ್ಳಿ ಎಸಳುಗಳನ್ನು ಹಾಕಿ, ಮಿಕ್ಸಿ ಮಾಡಿ.
- ಪುಡಿ ಮಾಡಿದ ಶೇಂಗಾ, ಅಚ್ಚ ಖಾರದ ಪುಡಿ, ಉಪ್ಪು, ಬೆಳ್ಳುಳ್ಳಿ, ಹುರಿದ ಕರಿಬೇವು ಎಲ್ಲವನ್ನು ಹಾಕಿ ಮಿಕ್ಸ ಮಾಡಿ.
- ಎಲ್ಲ ಮಾಡಿದ ಮೇಲೆ ಸಿದ್ದಗೊಂಡ ಶೇಂಗಾ ಚಟ್ನಿಪುಡಿಯನ್ನು ರೊಟ್ಟಿ, ಚಪಾತಿ,ದೋಸೆ ಜೊತೆ ಮೊಸರು ಅಥವಾ ಎಣ್ಣೆ ಹಾಕಿಕೊಂಡು ತಿಂದರೆ, ಪಲ್ಯ ಬೇಕೆನ್ನಿಸುವುದಿಲ್ಲ. ನೀವು ಒಂದು ಸರಿ ಮಾಡಿ ನೋಡಿ.
ಸುಲಭವಾದ ಚಟ್ನಿಪುಡಿ ಮಾಡಿ, ನಿಮ್ಮ ಅಭಿಪ್ರಾಯ ತಿಳಿಸಿ.
- ಕೈ ಚಳಕ : ಶಾಂತಾ ಹೂಲಿ