ಹಳೆಯ ನೆನಪು – ಮೇಗರವಳ್ಳಿ ರಮೇಶ್



ನೆನಪುಗಳು ಮಧುರ ಹಾಗೂ ಸುಂದರವಾಗಿರುತ್ತವೆ. ಪ್ರೇಮಿಗಳ ದಿನದಂದು ಹಳೆಯ ಗೆಳತಿಯ ನೆನಪಿನಲ್ಲಿ ಬರೆದಂತಹ ಈ ಕವನವನ್ನು ಓದಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

ಗೊತ್ತಿದೆ, ನೀನೀಗ ಬಳುಕುವ ಬಳ್ಳಿಯಾಗುಳಿದಿಲ್ಲ.

ರಾತ್ರಿ ರಾಣಿಯ ಗ೦ಧ
ಕೊ೦ಡೊಯ್ಯುವುದು ನನ್ನ ಗ೦ಧಮಾದನಕೆ
ನಿನ್ನ ನೆನಪಿನತ೦ಗಾಳಿ ತೀಡಿದಾಗ.

ನನ್ನೊಳಗಿನ ಖಾಲಿ ಖೋಲಿಯ ತು೦ಬ
ತುಳಿಕ್ಯಾಡುವುದು ಬೆಳದಿ೦ಗಳು
ನಿನ್ನ ನೆನಪಿನ ಚ೦ದ್ರ ಮೂಡಿದಾಗ.

ನನ್ನ ಒ೦ಟಿತನ ಹೆಪ್ಪುಗಟ್ಟುವುದು
ಕೊರೆವ ಛಳಿ ರಾತ್ರಿಯಾಗಸದಲ್ಲಿ ಒ೦ಟಿ ಚಕೋರ
ವಿರಹ ಗೀತೆ ಹಾಡುತ್ತಾ ಹಾರಿ ಹೋಗುವಾಗ.

ತುಟಿಗಿಟ್ಟ ನಿನ್ನ ನೆನಪಿನ ಮದಿರೆ
ಬಟ್ಟಲೊಳಗೆ ಥಳ ಥಳಿಸುವುವು
ವಿರಹ ಗೀತೆಯ ಸಾಲುಗಳು.

ಗೊತ್ತು, ನೀನೀಗ ಬಳುಕುವ ಬಳ್ಳಿಯಾಗುಳಿದಿಲ್ಲ
ಆದರೂ

ನನ್ನ ನೆನಪಿನ ಬೀದಿಗಳಲ್ಲಿ ನೀನಿನ್ನೂ
ದಾವಣಿಯುಟ್ಟು ಜೋಡಿ ಜಡೆ ತೂಗಿ ನಡೆಯುತ್ತೀಯ.
ದೇಕುತ್ತಿರುವ ನನ್ನ ಕವಿತೆಗಳಿಗೆ ಉಸಿರು ನೀಡುತ್ತೀಯ


  • ಮೇಗರವಳ್ಳಿ ರಮೇಶ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading