ಹರ್ನಿಯಾ ಸಮಸ್ಯೆಗೆ ಕಾರಣಗಳು

ಹರ್ನಿಯಾ ಈಗ ಸಾಮಾನ್ಯವಾಗಿ ಹೆಣ್ಣು – ಗಂಡು ಭೇದವಿಲ್ಲದೆ ಬರುವ ಕಾಯಿಲೆಯಾದರೂ ಗಂಡಸರಿಗೆ ಬರುವುದು ಹೆಚ್ಚು. ಗಂಡಸರಿಗೆ ತೊಡೆಯ ಸಂದುಗಳಲ್ಲಿ, ವೃಷಣದಲ್ಲಿ, ಹೊಕ್ಕಳು, ಉದರದ ಒಳಭಾಗದಲ್ಲಿ ಬಂದರೆ, ಮಹಿಳೆಯರಲ್ಲಿ ಹೊಕ್ಕಳು, ಮಗುವಿಗಾಗಿ ಆಪರೇಷನ್ ಆದಭಾಗ, ಉದರದ ಒಳಗಿನ ಭಾಗದಲ್ಲಿ ಆಗುವುದು ಹೆಚ್ಚು. 

1) ವ್ಯಾಯಾಮ ಅಥವಾ ಬೇರೆ ಕಾರಣಕ್ಕೆ ಹೊಟ್ಟೆಗೆ ಅತಿಯಾದ ಒತ್ತಡ.

2) ಎಸಿಡಿಟಿ.

3) ಮಲಬದ್ಧತೆ.

4) ಅತಿಯಾದ ಕೆಮ್ಮು.

5) ಬೊಜ್ಜು.

6) ಗರ್ಭಿಣಿ ಸ್ತ್ರೀಯರಿಗೆ ಸರಿಯಾದ ಆರೈಕೆ ಇಲ್ಲದಾಗ.

7) ದಿಡೀರ್ ಭಾರ ಎತ್ತಿದಾಗ.

8) ಹೆಂಡಾ ಬೀಡಿ ಗುಟಕಾ ಅತಿ ಸೇವನೆ.

ಇವಿಷ್ಟು ಕಾರಣದಿಂದ ಬರುತ್ತದೆ ಅಂತ ನಾನು ಗಮನಿಸಿದಾಗ ಕಂಡುಬಂದ ವಿಷಯ. ಇದಕ್ಕೆ ಲೋಳೆಸಾರ (ಘತ ಕುಮಾರಿ)ಕ್ಕೆ ಹರಳೆಣ್ಣೆ ಸೇರಿಸಿ ಹಚ್ಚಿದರೆ ಮೊದಲ ಹಂತದಲ್ಲಿ ಗುಣಪಡಿಸಬಹುದು. ಹಂತ ಮೀರಿದನಂತರ ಆಲೋಪತಿ ವೈದ್ಯರ ಬೇಟಿ ಆಪರೇಷನೇ ಕೊನೆಗೆ ಪರಿಹಾರ .ಆದರೆ ನಾಟಿವೈದ್ಯ ದಲ್ಲಿ ಆಪರೇಷನ್ ಇಲ್ಲದೇ ಗುಣಪಡಿಸಬಹುದು. ನನ್ನಲ್ಲಿ ಮೆಡಿಸಿನ್ ಗೆ ಬರುವುದಾದರೆ ಎರಡು ದಿನ ಮೊದಲೇ ತಿಳಿಸಿ ಬರಬೇಕಾಗುತ್ತದೆ. ಏಕೆಂದರೆ ಮೆಡಿಸಿನ್ ತಯಾರಿಸಲು ಸಮಯ ಬೇಕು. ವಾರದಲ್ಲೇ ನೋವು ಬಾಧೆ ನಿವಾರಣೆ ಆಗುತ್ತದೆ.


  • ಸುಮನಾ ಮಳಲಗದ್ದೆ – ಪಾರಂಪರಿಕ ವೈದ್ಯರು

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading