‘ಹಿಮಜಾಲ’ ಪುಸ್ತಕ ಪರಿಚಯ – ವಿವೇಕಾನಂದ ಕಾಮತ್

ಕಾದಂಬರಿಕಾರ ವಿವೇಕಾನಂದ ಕಾಮತ್ ಅವರು ಹಿಮಜಾಲ ಪುಸ್ತಕದ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ಈ ಕೃತಿಯನ್ನು ನಾಗೇಶ್ ಕುಮಾರ್ ಸಿ.ಎಸ್ ಬರೆದಿದ್ದು, ಇದೊಂದು ಪತ್ತೇದಾರಿ ಪುಸ್ತಕವಾಗಿದೆ,ಮುಂದೆ ಓದಿ…

ಪುಸ್ತಕ : ಹಿಮಜಾಲ
ಪ್ರಕಾಶಕರು : ನ್ಯೂ ವೇವ್ ಬುಕ್ಸ್,‌‌ ಬೆಂಗಳೂರು
ಲೇಖಕರು : ನಾಗೇಶ್ ಕುಮಾರ್ ಸಿ.ಎಸ್.
ಪ್ರಕಾರ : ಪತ್ತೇದಾರಿ 

ಬೆಲೆ : 95.00
ಪುಟಗಳು. : 112

ನಾಗೇಶ್ ಕುಮಾರ್ ಅವರ ಅಬಲೆಯ ಬಲೆ ಕಾದಂಬರಿ ಹಿಂದೆ ಓದಿದ್ದೆ. ಭಿನ್ನ ಕಥಾವಸ್ತು ಹೊಂದಿದ್ದು ತುಂಬಾ ಮೆಚ್ಚುಗೆಯಾಗಿತ್ತು. ಅದರಲ್ಲಿ ಮನಿ ಲಾಂಡರಿಂಗ್ ಬಗ್ಗೆ ಅಧ್ಯಯನ ಪೂರ್ಣವಾಗಿ ಬರೆದಿದ್ದಾರೆ. ಹಾಗಾಗಿ ಸಹಜವಾಗಿ ಹಿಮಜಾಲ ಬಗ್ಗೆ ಕುತೂಹಲ ಮೂಡಿತ್ತು.

ಅಬಲೆಯ ಬಲೆಯಲ್ಲಿದ್ದಂತೆ ಇಲ್ಲೂ ಕೂಡ ಪತ್ನಿ ನಾಪತ್ತೆಯಾದ ಕೇಸ್ ವಿಜಯ್-ವಿಕ್ರಮ್ ಅವರಿಗೆ ಬರುತ್ತದೆ.‌ ದುಷ್ಯಂತ – ನಿರ್ಮಲ ದಂಪತಿ, ಉತ್ತರಭಾರತದ ಪ್ರವಾಸಕ್ಕೆ ಹೋದಾಗ ಪ್ರವಾಹ ಬಂದು ನಿರ್ಮಲ ನಾಪತ್ತೆಯಾಗುತ್ತಾರೆ. ಸರ್ಕಾರಿ ನೌಕರಿಯಲ್ಲಿರುವ ದುಷ್ಯಂತ್ ನಾಪತ್ತೆಯಾದ ಪತ್ನಿಯನ್ನು ಹುಡುಕಿಕೊಡುವ ಜವಾಬ್ದಾರಿ ಖಾಸಗಿ ಪತ್ತೇದಾರರಾದ ವಿಜಯ್ – ವಿಕ್ರಮ್ ಅವರಿಗೆ ವಹಿಸುತ್ತಾರೆ.

ನಿರ್ಮಲಾ ನಾಪತ್ತೆಯಾದ ಕರ್ಣಪ್ರಯಾಗಕ್ಕೆ ಬರುವ ವಿಕ್ರಂ ನಿರ್ಮಲರನ್ನು ಹುಡುಕುವಲ್ಲಿ ಎದುರಿಸಿದ ಸವಾಲುಗಳೇನು? ಅವನ ಹಾದಿಯಲ್ಲಿ ಬಂದ ಡ್ರಗ್ಸ್ ಜಾಲವನ್ನು ಭೇದಿಸಿದನೇ..?
ವಿಕ್ರಮ್ ನಿಗೆ ಅವನ ಶೋಧಕಾರ್ಯದಲ್ಲಿ ಸಹಕರಿಸಿದ ಕನ್ನಿಕಾ ಯಾರು..? ದುಷ್ಯಂತ್ ವಹಿಸಿದ ಪತ್ತೆ ಕಾರ್ಯದಲ್ಲಿ ಇವರು ಸಫಲರಾದರೇ.. ನಿರ್ಮಲ ಸಿಕ್ಕಿದರೇ..? ಪುಟದಿಂದ ಪುಟಕ್ಕೆ ರೋಚಕ ತಿರುವುಗಳನ್ನು ಹೊಂದಿರುವ ಪತ್ತೇದಾರಿ ಕಾದಂಬರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ.

‘ಹಿಮಜಾಲ’ ಪುಸ್ತಕದ ಲೇಖಕರು ನಾಗೇಶ್ ಕುಮಾರ್ ಸಿ.ಎಸ್.

ಪಕ್ಕಾ ಪೈಸಾ ವಸೂಲ್ ಸಿನಿಮಾದಂತೆ ಇದು ಕೂಡ ಆರಂಭದಿಂದ ಕೊನೆಯ ತನಕ ನಿಮಗೆ ಎಲ್ಲೂ ಬೋರ್ ಹೊಡೆಸದೇ ಕುತೂಹಲದಿಂದ ಮುಂದೇನು ಎಂದು ಓದಿಸಿಕೊಂಡು ಹೋಗುತ್ತದೆ. ಇಂತಹ ಗಟ್ಟಿ ಪತ್ತೇದಾರಿ ಕಾದಂಬರಿಗಳು ವಿರಳವಾಗಿರುವ ಕಾಲದಲ್ಲಿ ಇದು ನಿಮಗೆ ಖಂಡಿತ ನಿರಾಸೆ ಮಾಡುವುದಿಲ್ಲ. ಚಿಕ್ಕ ಗಾತ್ರದಲ್ಲಿರುವ ಈ ಕಾದಂಬರಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿಬಿಡಬಹುದು.


  • ವಿವೇಕಾನಂದ ಕಾಮತ್ – ಕಾದಂಬರಿಕಾರರು

0 0 votes
Article Rating

Leave a Reply

0 Comments
Inline Feedbacks
View all comments
Home
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW