ಸಾವಿನ ರಹದಾರಿಯಾಗುವುದನ್ನು ತಪ್ಪಿಸಿ…



ಹೊನ್ನಾವರದ ಗಾಂಧೀನಗರ ರಸ್ತೆ ಸರಿ ಮಾಡಿ, ಅಪಘಾತ ಆಗುವುದನ್ನು ತಡೆಯಿರಿ. ಇದು ಸಂಬಂಧ ಪಟ್ಟ ಇಲಾಖೆಯವರಲ್ಲಿ ಮನವಿ.

ಈ ಚಿತ್ರಗಳು ಹೊನ್ನಾವರದ ಗಾಂಧೀನಗರದಿಂದ ಹೈವೇ ನಂ 66 ನ್ನು ಪ್ರವೇಶಿಸುವ ರಸ್ತೆಯ ಚಿತ್ರಗಳು.

ಚಿತ್ರಗಳನ್ನು ಗಮನಿಸಿ. ಗಾಂಧೀನಗರದಿಂದ ಹೈವೇ ಪ್ರವೇಶಿಸುವ ಹಾದಿ ತುಂಬ ಕಡಿದಾಗಿ ಇಳಿಜಾರಿನಲ್ಲಿದೆ. ಈಗ ಹೈವೇ ಯ ಚತುಷ್ಪಥ ಕಾಮಗಾರಿ ನಡೆದಿದೆ. ಹೈವೇ ಅಗಲವಾಗಿ, ರಸ್ತೆಯ ಭಾಗವೂ ಇನ್ನಷ್ಟು ಕಡಿದು, ಇಳಿಜಾರು ತುಂಬ ಜಾಸ್ತಿಯಾಗಿದೆ.

ಕಿರಿದಾದ ಜಾರುಬಂಡಿಯಂಥ ಈ ರಸ್ತೆ ನೇರವಾಗಿ ಹೈವೇಯನ್ನೇ ಪ್ರವೇಶಿಸುತ್ತದೆ.

ಗಾಂಧೀನಗರ ಕಡೆಯಿಂದ ಹೈವೇ ಪ್ರವೇಶಿಸುವ ಅಥವಾ ಹೈವೇ ದಾಟಿ ಮಾರ್ಕೆಟ್ ಗೆ ಹೋಗುವ ವಾಹನಗಳು ತುಸು ಕಂಟ್ರೋಲ್ ತಪ್ಪಿದರೂ ಹೈವೇಯಲ್ಲಿ ವೇಗವಾಗಿ ಬರುತ್ತಿರುವ ವಾಹನಗಳಿಗೆ ಬಲಿಯಾಗುವದು ಖಂಡಿತ.

ಇಳಿಜಾರಿನ ಈ ದಾರಿ ಹೊಂಡ, ಮ್ಯಾನ್ ಹೋಲ್ ಗಳಿಂದ ಎಷ್ಟು ಹದಗೆಟ್ಟಿದೆಯೆಂದರೆ ಇಲ್ಲಿ ವಾಹನಗಳನ್ನು ಕಂಟ್ರೋಲ್ ಮಾಡುವದೂ ತುಂಬ ಕಷ್ಟವೇ. ಸಂಬಂಧಪಟ್ಟವರು ಇಂಥ ಅವೈಜ್ಞಾನಿಕ ಕಾಮಗಾರಿಯ ಕುರಿತು ಕೂಡಲೇ ಗಮನ ಹರಿಸಿ ಕ್ರಮ ಕೈಗೊಳ್ಳದಿದ್ದರೆ ಇದೊಂದು ತೀವ್ರವಾದ ಅಪಘಾತ ವಲಯವಾದೀತು. ಎಚ್ಚರ ವಹಿಸಿ ಪ್ರಾಣಹಾನಿ ತಪ್ಪಿಸಲು ಸಂಬಂಧಪಟ್ಟವರು ಮುಂದಾಗಬೇಕಿದೆ.


  • ಕ್ಯಾಮೆರಾ ಕಣ್ಣು: ಕಿರಣ್ ಭಟ್ ಹೊನ್ನಾವರ (ರಂಗಕರ್ಮಿ, ರಂಗ ಸಂಘಟಕರು, ಕಲಾವಿದರು, ನಿರ್ದೇಶಕರು, ಬರಹಗಾರರು) ಹೊನ್ನಾವರ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading