ಹೂಲಿ ಶೇಖರ ರ ನಾಟಕ ಸಂಗ್ರಹ ಬಿಡುಗಡೆ

ಆರು ಜನಪ್ರಿಯ ರಂಗಕೃತಿಗಳ ಅಪರೂಪದ ಪ್ರಕಟಣೆ

ಸಾಕಷ್ಟು ಪ್ರಯೋಗ ಕಂಡೂ ಈಗಲೂ ರಂಗಮಂಚವೇರುವ ಹೂಲಿಶೇಖರರ ಆರು ನಾಟಕಗಳು ಇದೀಗ ಒಂದೆಡೆ ಲಭ್ಯ. ಬೆಲೆಯೂ ಬಹಳ ಕಡಿಮೆ. ಹೂಲಿಶೇಖರ ಜನಪ್ರಿಯ ನಾಟಕಕಾರರು. ಅವರು ರಚಿಸಿದ ಯಾವುದಾದರೂ ಒಂದು ನಾಟಕ ರಾಜ್ಯದ ಒಂದಲ್ಲಾ ಒಂದು ಹವ್ಯಾಸಿ ತಂಡಗಳಿಂದ ನಿರಂತರ ಪ್ರದರ್ಶನ ಕಾಣುತ್ತಿರುತ್ತವೆ. ಪ್ರಕಟಿತ ೩೦ ನಾಟಕ, ಆಕಾಶವಾಣಿಗೆ ೨೦, ಹತ್ತಾರು ಬೀದಿ ನಾಟಕಗಳು ಸೇರಿದಂತೆ ಅವರು ರಚಿಸಿದ ನಾಟಕಗಳ ಸಂಖ್ಯೆ ಎಸ್ಟೆoದು ಅವರಿಗೇ ಸರಿಯಾಗಿ ಗೊತ್ತಿಲ್ಲ. (ನಾಟಕ ಮೊದಲುಗೊಂಡು ಮೂಲತಃ ಕತೆಗಾರರೂ ಆಗಿರುವ ಅವರು ೧೨ ಕಾದಂಬರಿ, ೨ ಕತಾ ಸಂಕಲನಗಳನ್ನೂ ಪ್ರಕಟಿಸಿದ್ದಾರೆ.)

ನಟ, ನಿರ್ದೇಶಕ, ಸಂಘಟಕರಾಗಿ ಪಡೆದ ಅಪಾರ ರಂಗಾನುಭವದ ಹಿನ್ನೆಲೆಯಲ್ಲಿ ರಚಿಸಿರುವ ಅವರು ಬಹುತೇಕ ಎಲ್ಲಾ ನಾಟಕಗಳು ಪ್ರಯೋಗ ಕಂಡಿವೆ. ಅವುಗಳಲ್ಲಿ ಹಲವು ನಾಟಕಗಳು ಹತ್ತಾರು ಪ್ರದರ್ಶನ ಕಂಡಿವೆ. ನೂರಕ್ಕಿಂತ ಹೆಚ್ಚು ಪ್ರದರ್ಶನ ಕಂಡ ನಾಟಕಗಳೂ ಸಾಕಷ್ಟಿವೆ. ಅಂತಹ ಕನಿಷ್ಠ ನೂರಕ್ಕಿಂತ ಹೆಚ್ಚು ಪ್ರಯೋಗಕಂಡ ಆರು ನಾಟಕಗಳ ಸಂಕಲನವನ್ನು ಕಲಬುರಗಿಯ ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ ಇತ್ತೀಚಿಗೆ ಪ್ರಕಟಿಸಿದೆ. ದಫನ, ಬೆಕುವ,ಸತ್ಯವತಿ, ಹಲಗಲಿ ಬೇಡರ ದಂಗೆ, ರಾಕ್ಷಸ, ಅರಗಿನ ಬೆಟ್ಟ, ನಾಟಕಗಳನ್ನು ಈ ಪುಸ್ತಕ ಒಳಗೊಂಡಿದೆ. ಸತ್ಯವತಿ, ರಾಕ್ಷಸ, ಅರಗಿನ ಬೆಟ್ಟ ಆಧುನಿಕ ಜಾನಪದ ನಾಟಕಗಳು. ‘ಹಲಗಲಿ ಬೇಡರ ದಂಗೆ’ ಐತಿಹಾಸಿಕ.’ದಫನ’ ಮತ್ತು ‘ಬೆಕುವ ವಾಸ್ತವ (ರಿಯಾಲಿಸ್ಟಿಕ) ನಾಟಕಗಳು.

ಕನ್ನಡದ ಮಹಾನ ನಾಟಕಕಾರರು ಜಾನಪದ, ಪುರಾಣ, ಮಹಾಕಾವ್ಯ ಆಧರಿಸಿದ ನಾಟಕಗಳನ್ನೇ ಹೆಚ್ಚು ಬರೆದರು. ರಿಯಾಲಿಸ್ಟಿಕ ಬರೆಯಲಿಲ್ಲ. ಮರಾಠಿಯಲ್ಲಿ ರಿಯಾಲಿಸ್ಟಿಕ ಹೆಚ್ಚು ಬಂದವು ಎಂದು ಷರಾ ಬರೆಯುವ ರಾಜಕೀಯ ಧ್ವನಿಯೊಂದಿದೆ. ಅದರದು ಕ್ಷೀಣವಾಗಿದೆ. ಹಾಗೆ ನೋಡಿದರೆ ಕನ್ನಡದಲ್ಲೂ ವಾಸ್ತವ ಶೈಲಿಯ ಸಾಕಷ್ಟು ಸಂಖ್ಯೆಯ ನಾಟಕಗಳು ಬಂದಿವೆ. ಹೂಲಿಶೇಖರ ಅವರೇ ಹತ್ತಕ್ಕೂ ಅಧಿಕ ವಾಸ್ತವ (ರಿಯಾಲಿಸ್ಟಿಕ) ನಾಟಕ ಬರೆದಿದ್ದಾರೆ. ಅವು ಹೆಚ್ಚು ಪ್ರಯೋಗಗಳನ್ನೂ ಕಂಡಿವೆ.

– ಆರು ಜನಪ್ರಿಯ ರಂಗಕೃತಿಗಳ ಬಿಡುಗಡೆ ಕಾರ್ಯಕ್ರಮ

  • ಶಾಲಿನಿ ಹೂಲಿ ಪ್ರದೀಪ್

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW