ಹೊಸ ವರ್ಷದ ಸಂಕಲ್ಪ : ಡಾ. ಮಲ್ಲಿಕಾರ್ಜುನ ಎಸ್

ಜನವರಿ ಒಂದು ಎಲ್ಲಾ ಹಬ್ಬಕ್ಕಿಂತ ವೈಭವ ಪೂರಿತವಾಗಿ ಆಚರಿಸುತ್ತಾರೆ. ಈ ಆಂಗ್ಲ ನೂತನ ವರ್ಷಕ್ಕೆ ಸುಜನರಾದ ನಾವೆಲ್ಲ ಸೇರಿ ಸಂಕಲ್ಪ ಮಾಡಬೇಕಾದ ಅವಶ್ಯಕತೆ ಇದೆ ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ನಮ್ಮ ಭಾರತೀಯ ಪರಂಪರೆಯ ನೂತನ ವರುಷ, ಹರುಷದ ಯುಗಾದಿಯಾದರು. ನಾವೆಲ್ಲ ಒಗ್ಗಿಕೊಂಡಿರುವ ಮತ್ತು, ಅತಿ ಆಡಂಬರದಿ ಸ್ವಾಗತಿಸುವ. ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಪಂಚದಲ್ಲಿ ಅತಿ ಹೆಚ್ಚಾಗಿ ಉಪಯೋಗಿಸಲ್ಪಡುವ ಕ್ಯಾಲೆಂಡರ್ (ಪಂಚಾಂಗ).

ಅಲೋಸಿಯಸ್ ಲಿಲಿಯಸ್ ಎಂಬ ವೈದ್ಯನಿಂದ ಪ್ರಸ್ತಾಪಿಸಲ್ಪಟ್ಟ ಈ ಕ್ಯಾಲೆಂಡರ್, ಫೆಬ್ರುವರಿ 24, 1582ರಂದು (ಇಶ್ವಿ ಒಂದೆಯಾದರು,ದಿನಾಂಕ, 4-10-1582ಅನ್ನೋ ಅನ್ನೋ ವಾದ ಕೂಡಾ ಇದೆ ) ಪೋಪ್ ಹದಿಮೂರನೆ ಗ್ರೆಗೊರಿಯ ಆದೇಶದ ಮೇರೆಗೆ ಜಾರಿಗೆ ಬಂದಿತು. ಅಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಜುಲಿಯನ್ ಕ್ಯಾಲೆಂಡರ್ನ ಲೆಕ್ಕದಲ್ಲಿ ವರ್ಷದ ಉದ್ದವು ಹೆಚ್ಚಾಗಿತ್ತು. ಇದು ಪ್ರತಿ ವರ್ಷ೩೬೫ ದಿನಗಳ ೬ ಗಂಟೆಗಳ ಉದ್ದ ಇತ್ತು. ಆದರೆ ಲೆಕ್ಕಾಚಾರಗಳು ಒಂದು ವರ್ಷದ ನಿಜವಾದ ಸರಾಸರಿ ಉದ್ದ ಸ್ವಲ್ಪ ಕಡಿಮೆ (365 ದಿನ, 5 ಗಂಟೆ 49 ನಿಮಿಷ) ಎಂದು ತೋರಿಸಿದರು. ಆದಕಾರಣ ಗ್ರೆಗೋರಿಯನ್ ಕ್ಯಾಲೆಂಡರನ್ನು ವಿಶ್ವದ ನಮ್ಮ ದೇಶವು ಸೇರಿಕೊಂಡು ಬಹುತೇಕ ದೇಶಗಳು, ಒಪ್ಪಿ ಅಪ್ಪಿಕೊಂಡು ಜನವರಿ ಒಂದರಂದು, ನೂತನ ವರ್ಷವನ್ನು ಎಲ್ಲಾ ಹಬ್ಬಕ್ಕಿಂತ ವೈಭವ ಪೂರಿತವಾಗಿ (ಮತ್ತಿನ ಗತ್ತಿನಲ್ಲಿ) ಆಚರಿಸುತ್ತಿವೆ. ಅದಕ್ಕಾಗಿ ದಿನದರ್ಶಿಕೆಯ ಆಂಗ್ಲ ಹೊಸವರ್ಷಕ್ಕೆ ಪ್ರಪ್ರಥಮದಲ್ಲಿ ಸಕಲ ಸುಜನರಿಗೂ ಹಾರ್ದಿಕ ಶುಭಾಶಯಗಳು. ತಿಳಿಸುತ್ತಾ ಈ ಆಂಗ್ಲರ ನೂತನ ವರ್ಷದ ಪ್ರಥಮ ದಿನವನ್ನು ಅಥವಾ ಅದರ ಹಿಂದಿನ ದಿನವನ್ನು ಕುಡುಕರ, ಬೇಡ ಇದು ಒರಟು ಪದವಾದರೆ, ಮದ್ಯಪಾನಿಗಳ ದಿನಾಚರಣೆಯನ್ನಾಗಿ ಘನವೆತ್ತ ಸರಕಾರ ಘೋಷಣೆ ಮಾಡಬೇಕೆನ್ನುವದು ಒತ್ತಾಯ ಪೂರ್ವಕ ನನ್ನ ವಯಕ್ತಿಕ ಅಭಿಪ್ರಾಯ. ಏಕೆಂದರೆ, ಆ ದಿನದ ಮುನ್ನ ರಾತ್ರಿ ಮದ್ಯದ ಪ್ರವಾಹವೇ ಆರ್ಭಟಿಸುತ್ತದೆ, ಮಾದಕ ವಸ್ತುಗಳಿಂದ ಶೃಂಗಾರ ಗೊಂಡಿರುವ ದುರ್ವ್ಯಸನಿಗಳ ಅನಧಿಕೃತ ಸಾಮ್ರಾಜ್ಯವೇ ಅನಾವರಣ ಗೊಳ್ಳುತ್ತದೆ. ಅಷ್ಟೊಂದು ನಾವು ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಬಿಟ್ಟಿದ್ದೇವೆ, ಯುಗಾದಿ ಹಬ್ಬಕ್ಕೆ ಬೇವು,( ಬೇವು, ಬೆಲ್ಲ, ಹಲವಾರು ಪೌಷ್ಟಿಕಾಂಶ ಒಳ್ಳ ಹಣ್ಣುಗಳಿಂದ, ಮತ್ತು ಡ್ರೈ ಫ್ರೂಟ್ಸ್, ಮಿಶ್ರಣದ ಪಾನಕ ) ಕುಡಿಯಲು ಹತ್ತಾರು ಬಾರಿ ಕರೆದರು ಬರೋದಿಲ್ಲ, ಆದ್ರೆ ಬಾರು, ಡಾಬಾಗಳಿಗೆ ಏನೋ ದೋಸ್ತ ಹೊಸ ವರ್ಷಕ್ಕೇನು ಟ್ರೀಟ್ ಇಲ್ವಾ,ಅಂತ ಅಗಣಿತ ಸಂಖ್ಯೆಯಲ್ಲಿ ಬರ್ತಾರೆ, ಇನ್ನು, ಹಬ್ಬ ಹರಿದಿನ, ಊರ ದೇವರ ಜಾತ್ರಾ ಮಹೋತ್ಸವಗಳಲ್ಲಿ, ನಮ್ಮನ್ನು ಅನವರತವು ಸಲಹುತ್ತಿರುವ, ದೇವಲೀಲಾಮೃತವನ್ನು ಜನತೆ ಕೇಳಲೆಂದು, ನಮ್ಮ ಹೆಮ್ಮೆಯ, ಹಿಂದೂಸ್ತಾನಿ, ಕರ್ನಾಟಕ, ಶಾಸ್ತ್ರೀಯ, ಸಂಗೀತ ಕಾರ್ಯಕ್ರಮಗಳನ್ನು ಏರ್ಪಡಿಸದರೆ, ಅತ್ತ ಕಡೆ ತಲೆ ಸಹಿತ ಹಾಕಿ ಮಲಗದೆ, ಸಾವಿರಾರು ರೂಪಾಯಿಗಳು ಖರ್ಚು, ಪಬ್, ಡಿಸ್ಕೊತೆಕ್ಕೂ ಗಳಲ್ಲಿ, ಮತ್ತಿನ ಮತ್ತಿನಲ್ಲಿ ತೇಲಾಡುತ್ತಾರೆ, ಥೂ ಇದು ನಮ್ಮ ಸಂಸ್ಕೃತಿಯೇ ?. ಪರಮಪವಿತ್ರ ಭರತ ಭುವಿಯಲ್ಲಿ ಜನ್ಮವೆತ್ತಿ, ಪಾಶ್ಚಿಮಾತ್ಯ ಸಂಸ್ಕೃತಿಯ ಅಡಿಯಳಾಗುತ್ತಿದ್ದೇವೆಲ್ಲ ಎಂತಹ ದುರ್ಗತಿ ನಮ್ಮದು. ಇದು ಹೀಗೆ ಮುಂದುವರೆದರೆ ಮಹಾನ್ ವೀರರ ಹೋರಾಟ, ತ್ಯಾಗ, ಬಲಿದಾನದ ಪ್ರತಿಫಲವಾಗಿ ಲಭಿಸಿರುವ, ಶ್ರೇಷ್ಠ ಸ್ವಾತಂತ್ರ್ಯವನ್ನು ಕಳೆದುಕೊಂಡು ಮತ್ತೆ ಆಂಗ್ಲರ ಅಡಿಯಾಳಾಗಿ ಬದುಕುವ, ದುಃಸ್ಥಿತಿ ಬಂದೊದಗಿದರು ಆಶ್ಚರ್ಯವಿಲ್ಲ.

ಅದಕ್ಕಾಗಿ ಈ ಆಂಗ್ಲ ನೂತನ ವರ್ಷಕ್ಕೆ ಸುಜನರಾದ ನಾವೆಲ್ಲ ಸೇರಿ ಸಂಕಲ್ಪ ಮಾಡಬೇಕಾದ ಅವಶ್ಯಕತೆ ಇದೆ, ಮೊಟ್ಟಮೊದಲು ಮಾಡುವ ಸಂಕಲ್ಪವೆಂದ್ರೆ ಪರದೇಸಿ ಸಂಸ್ಕೃತಿಯ ಪಾಶಾಂಕುಶದಲ್ಲಿ ಸಿಲುಕಿ ನರಳುತ್ತಿರುವ ಕೆಲವರನ್ನಾದ್ರು ಮರಳಿ ನಮ್ಮ ಭವ್ಯ -ದಿವ್ಯ ಸಂಸ್ಕೃತಿಗೆ ಕರೆತರುವದು, ಒಂದೆ ಬಾರಿಗೆ ಎಲ್ಲವನ್ನು ಸರಿಮಾಡಲು ಯಾರು ಮಹಾನ್ ವ್ಯಕ್ತಿಯೋ, ಅಥವಾ ಮಹಿಮಾ ಪುರುಷರು ಅಲ್ಲ. ಆದ್ದರಿಂದ ಅದಕ್ಕೆ ಭಾರತಮಾತೆಯ ಧೀರಕುವರರ ಅತ್ಯಾವಶ್ಯಕತೆಯಿದೆ ತಾವೆಲ್ಲರು ಕೂಡ ಈ ಆಶಯಕ್ಕೆ, ಸರ್ವ ಸುಜನರು ಶಕ್ತಿಯುಕ್ತಿಯ ಬಲವು ನೀಡುವರೆನ್ನುವ ಅಪಾರವಾದ ನಂಬಿಕೆಯಿದೆ.

ಇನ್ನೊಂದು ಸಂಕಲ್ಪವೆಂದ್ರೆ, ನಮ್ಮ ಮಾತೃಭೂಮಿ ಭಾರತ, ಜನ್ಮಭೂಮಿ ಕರುನಾಡಿನ ನೆಲ, ಜಲ, ಭಾಷೆಯ ತಂಟೆಗೆ ಬಂದವರಿಗೆ ತಕ್ಕ ಪಾಠವನ್ನು ಕಲಿಸುವದು, ಘಟಿಸಿದ ಕರಾಳ ಘಟನೆ ಮರುಕಳಿಸದಂತೆ ದಿಟ್ಟ ಉತ್ತರಕೊಡುವದು.ಜಾತಿ, ಮತ, ಕುಲವನ್ನೆಲ್ಲ ಬದಿಗೊತ್ತಿ, ಸರ್ವರು ಸಾಮರಸ್ಯದಿ ಒಂದಾಗಿರಿ ಕನ್ನಡಿಗರೇ, ಭರತ ಭುವಿಯ ಕುಡಿಗಳೇ ಸಾಮರಸ್ಯದ ಕನ್ನಡನಾಡು, ನವ್ಯ ದಿವ್ಯ ಭವ್ಯಸಮೃದ್ಧಿಯ ಭಾರತ ಕಟ್ಟೋಣ ವಿಷಜಂತುಗಳನ್ನ ಚಟ್ಟಕ್ಕೆ ಅಟ್ಟೋಣ…

ಜೈ ಹಿಂದ್ ಜೈ ಕರ್ನಾಟಕ…ಘೋಷವಾಕ್ಯ ವೀರತ್ವದೀ ನುಡಿಯೋಣ.


  •  ಡಾ. ಮಲ್ಲಿಕಾರ್ಜುನ ಎಸ್ ಆಲಮೇಲ, ಯಡ್ರಾಮಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW