ಭೂ ತಾಯಿಯ ಮಡಿಲು : ಅವಿನಾಶ ಸೆರೆಮನಿ

ಯುಗಾದಿ ಹಬ್ಬವನ್ನು ಕರ್ನಾಟಕ ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿನ ಬದಲಾವಣೆಯನು ಸವಿಯಲು ಇತರ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿಯೂ ಕೂಡ ಬಹಳ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಹೊಸ ವರುಷದ ಆದಿ ಯುಗಾದಿ ಕುರಿತು ಲೇಖಕ ಅವಿನಾಶ ಸೆರೆಮನಿ ಅವರು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…

ಎಲ್ಲೆಲ್ಲೋ ಭೂ ತಾಯಿಯ ಮುಡಿಗೆ ಹಸಿರಿನ ಕಳೆಯು ಮನ ಮನಗಳಲಿ ಹಚ್ಚಹಸಿರಾಗಿದೆ.ನವ ಉತ್ಸಾಹ ನವೋಲ್ಲಾಸ ನವಚೈತನ್ಯ ಸೂಸಿ ಹೊಸ ಭಾವ ಮೂಡಿಸಿ ಉತ್ಸಾಹದ ಚಿಲುಮೆಯ ರಮಣೀಯ ನಯನ ಮನೋಹರ ದೃಶ್ಯ.ಎಲ್ಲಿ ನೋಡಿದರಲ್ಲಿ ಮಾವಿನ ಗಿಡದಲ್ಲಿ ಕೋಗಿಲೆ ಇಂಚರ ಬೇವಿನ ಗಿಡದಲ್ಲಿ ಘಮ ಘಮಿಸುವ ಕುಸುಮಗಳ ಸುಗಂಧದ ಔತಣ.ವಸಂತನ ಅಗಮನಕೆ ಇಳೆಯು ಸ್ವಾಗತಿಸಲು ಸಜ್ಜಾಗಿ ನಿಂತಂತಿದೆ.
ಇದುವೆಯಲ್ಲವೇ ಹೊಸ ವರುಷಕೆ ಪ್ರತೀಕವು.

ಯುಗಾದಿ ಎಂಬುದು ಮೂರು ಅಕ್ಷರಗಳ ಪದವಾದರೂ ಅಗಮ್ಯವಾದ ಅರ್ಥವನ್ನು ಒಳಗೊಂಡಿದೆ ಯುಗ ಮತ್ತು ಆದಿ ಪದಗಳ ಸಮ್ಮಿಲನವೇ ಯುಗಾದಿ ಯುಗ ಎಂದರೆ
ಹೊಸ ಆದಿ ಎಂದರೆ ಪ್ರಾರಂಭ ಒಟ್ಟಿನಲ್ಲಿ ಯುಗಾದಿ ಎಂದರೆ ಹೊಸ ಕಾಲದ ಆರಂಭ ಎಂದರ್ಥ.ಹಾಗಾಗಿ ಈ ಅರ್ಥಪೂರ್ಣ ದಿನವೂ ಹೊಸತನ ಕರುಣಿಸುವ ಶ್ರೇಷ್ಠವಾದ ದಿನ.
ಯುಗಾದಿ ಹಬ್ಬವನ್ನು ಆಚರಿಸಲು ಹಲವಾರು ರೀತಿಯಲ್ಲಿ ಕಾರಣಗಳಿವೆ.ಆ ಎಲ್ಲ ರೀತಿಯ ಕಾರಣಗಳು ಯುಗಾದಿಯ ಹಬ್ಬಕ್ಕೆ ಮೂಲ ಬೇರಾಗಿವೆ.ಭಾರತ ಕಂಡ ಅತ್ಯಂತ ಶ್ರೇಷ್ಠ ಗಣಿತ ತಜ್ಞರಾದ ಭಾಸ್ಕರಾಚಾರ್ಯರ ಖಗೋಳದ ಅಣತಿಯಂತೆ ಸೂರ್ಯೋದಯದಿಂದ ಯುಗಾದಿ ದಿನವನ್ನುನವ ಆರಂಭ,ನೂತನ ಮಾಸಿಕ,ನವ ದಿನವೆಂದು ಹೇಳಿದರು.ನೂತನ ಆರಂಭ ಸಂಭ್ರಮಿಸಲು ಜೊತೆಗೆ ಸಮೃದ್ಧಿ ಸಂತಸಕ್ಕೆ ಪ್ರಾರ್ಥಿಸುವ ಶುಭದಿನ.

ಯುಗಾದಿ ಹಬ್ಬವನ್ನು ಕರ್ನಾಟಕ ರಾಜ್ಯಗಳಲ್ಲಿ ಅಷ್ಟೇ ಅಲ್ಲದೆ ಪ್ರಕೃತಿಯಲ್ಲಿನ ಬದಲಾವಣೆಯನು ಸವಿಯಲು ಇತರ ಪಕ್ಕದ ರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶದಲ್ಲಿಯೂ ಕೂಡ ಬಹಳ ವಿಜ್ರಂಭಣೆಯಿಂದ ಆಚರಿಸುತ್ತಾರೆ. ಜೊತೆಗೆ ಸಮಕ್ಷಮ ಸಂತೋಷ ಆನಂದವನ್ನು ಹಂಚಿಕೊಂಡು ಖುಷಿಯಲಿ ಮಿಂದೇಳುತ್ತಾರೆ.ಬೇವು ಮತ್ತು ಬೆಲ್ಲವು ಕಹಿ ಸಿಹಿಗಳನ್ನು ವ್ಯಕ್ತಪಡಿಸುವುದಲ್ಲದೆ ಸಕಲ ನಿವಾರಣೆಗೆ ಪ್ರತೀಕವಾಗಿ ಬೇವಿನ ಹೂವುಗಳನ್ನು ಬೆಲ್ಲದ ಜೊತೆಗೆ ಸೇರಿಸಿ ಸವಿದು ನೋವು ನಲಿವುಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಭಾವ ಮೂಡಿಸುತ್ತದೆ.

ಬೇವು -ಬೆಲ್ಲವು ಯುಗಾದಿ ಹಬ್ಬಕ್ಕೆ ಮೂಲವಾಗಿವೆ ಬೇವು ಎಂದರೆ ಕಹಿಯಾಗಿರುವುದು ಎಂಬುದು ಎಲ್ಲರಿಗೂ ಗೊತ್ತು ಈ ಹಬ್ಬದಲ್ಲಿ ಇದು ತನ್ನದೆಯಾದ ಪ್ರಾಮುಖ್ಯತೆಯನ್ನು ಹೊಂದಿದೆ ಜೊತೆಗೆ ಅಗಾಧವಾದ ಅರ್ಥವನ್ನು ಒಳಗೊಂಡಿದೆ.ಏನೇ ನೋವುಗಳಿರಲಿ ಅವುಗಳನ್ನು ದಿಟ್ಟತನದಿ ಸ್ವೀಕರಿಸುತ ಎದುರಿಸಿ ಸುಖವು ಬರುತ್ತೆ ಎಂಬ ಭರವಸೆ ಬಿತ್ತುವುದು. ಇನ್ನೊಂದು ಬೆಲ್ಲ ಇದು ಸಿಹಿಯ ಪ್ರತೀಕ ಸಂತಸದ ಸೂಚಕ ಸಂತಸ,ಆನಂದವನ್ನು ಸಂಭ್ರಮದಿಂದ ಅನುಭವಿಸುತ ಉಲ್ಲಾಸದಿಂದ ಬಾಳಬೇಕು ಎಂಬುದು ಇದರ ತಾತ್ಪರ್ಯ ಒಟ್ಟಿನಲ್ಲಿ ಬೇವು ಬೆಲ್ಲವು ಸಿಹಿ ಕಹಿಗಳ ದ್ಯೋತಕ ಹಾಗಾಗಿ ನೋವುಗಳನ್ನು ನಮ್ರದಿ ಸ್ವೀಕರಿಸಿ ಸಂತೋಷವನ್ನು ಸಂಭ್ರಮದಿಂದ ಹಬ್ಬದಂತೆ ಆಚರಿಸಬೇಕು ಎಂದರ್ಥ.ಹೀಗಾಗಿ ಈ ದಿನವು ಅತ್ಯಂತ ಶುಭಕರವಾದ ದಿನ.

ಈದಿನ ಯಾವುದೇ ಹೊಸ ಕಾರ್ಯಗಳನ್ನು ಮಾಡಲು ಉನ್ನತವಾದ ದಿನವಾಗಿದ್ದು ಸಂತಸ ಮೂಡಿಸುತ್ತದೆ.ನಾಡಿನ ಎಲ್ಲರಿಗೂ ಈ ಸಂವತ್ಸರವು ನೆಮ್ಮದಿ,ಸಂತೋಷ,ಆಯುರಾರೋಗ್ಯ,ಉತ್ಸುಕತೆಯನ್ನು ನೀಡಲಿ ಬರಡಾಗಿ ಬತ್ತಿದಂತಾದ ಬಾಳು ಹಸಿರಿನಂತೆ ದಿನೇ ದಿನೇ ಸಂತಸದಿ ಕೂಡಿರಲಿ.ಈ ಹಬ್ಬವು ಸಕಲರಿಗೂ ಒಳಿತನ್ನು ನೀಡಲಿ ಎಂದು ಪ್ರಾರ್ಥಿಸುತ ಈ ಹಬ್ಬವು ಸಕಲವನ್ನು ಕರುಣಿಸಲಿ ಎಂದು ಸೃಷ್ಟಿಕರ್ತನಲ್ಲಿ ಪ್ರಾರ್ಥಿಸೋಣ.

ಹೊಸ ವರುಷದಿ ಸಂತಸ ಚಿಗುರಲಿ
ನೋವು ನಲಿವುಗಳು ಬಾಳು ಬೆಳಗಲಿ
ಯುಗಾದಿ ಹಬ್ಬವು ಬದುಕಿಗೆ ಉಸಿರಾಗಲಿ
ಎಲ್ಲರಿಗೂ ಸಮೃದ್ಧಿ,ಸಂತೋಷ ಕರುಣಿಸಲಿ

ಮರಳಿ ಮರಳಿ ಬರುತಿದೆ ಯುಗಾದಿ ಮನ ಮನಗಳಲಿ ಬೆಳಗಲಿ ನವ ಹುರುಪಿನ ಹಣತೆ.ಹೊಸತನವ ಹೊತ್ತ ಈ ಬೇವು ಬೆಲ್ಲದ ಹಬ್ಬ ಎಲ್ಲರ ಬಾಳಲಿ ನೆಮ್ಮದಿಯ ತರಲಿ ಪ್ರೀತಿ, ವಿಶ್ವಾಸಗಳ ಹೊನಲನು ಹರಿಸಲಿ.ಹರ್ಷದ ಹೊನಲಾಗಿ ಬರಲಿ ಯುಗಾದಿಯ ಸಿರಿ ಹೊಸತಿನ ಬೀಜವು ಮೊಳಕೆಯೊಡೆದು ಬದುಕಾಗಲಿ ಹಸಿರಿನ ಐಸಿರಿ.


  • ಅವಿನಾಶ ಸೆರೆಮನಿ – ಬೈಲಹೊಂಗಲ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW