ಗೃಹಿಣಿಗೆ ವಾರದ ರಜಾ ಇಲ್ಲ, CL/PL(ಹಕ್ಕಿನ raje) ಇಲ್ಲ. ಸಂಬಳವೂ ಇಲ್ಲ. ಬೋನಸ್ ಇಲ್ಲ. ಅವಳಿಗಾಗಿ ಸ್ವಂತದ ಸಮಯಗಳಿಲ್ಲ. ಒಂದು ಹೆಣ್ಣಿನ ಕುರಿತಾದ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…
ಮನೆಯಲ್ಲಿನ ಎಲ್ಲ ಕೆಲಸಗಳನ್ನು ಜವಾಬ್ದಾರಿಯುತವಾಗಿ ಪ್ರೀತಿಯಿಂದ ನಿಭಾಯಿಸುವ, ಬಿಡುವಿಲ್ಲದೆ ಅನವರತ ದುಡಿಯುವ ಗೃಹಿಣಿಗೆ ರಜೆ ಕೊಡುವವರು ಯಾರು? ಇದು ಒಳ್ಳೆಯ ಪ್ರಶ್ನೆ ಉತ್ತರ ಯಾರು ಹೇಳಬೇಕು ನನಗೆ ಗೊತ್ತಿಲ್ಲ. ನೀವಾದರೂ ಹೇಳಿ.
ವಾರದ ರಜಾ ಇಲ್ಲ, CL/PL(ಹಕ್ಕಿನ raje) ಇಲ್ಲ. ಸಂಬಳವೂ ಇಲ್ಲ. ಬೋನಸ್ ಇಲ್ಲ. ಇಲ್ಲ ಇಲ್ಲ. ಸದಾ ಕಾಲ ಗಾಣದೆತ್ತಿನಂತೆ, ಬಿಡುವಿಲ್ಲದೆ ದುಡಿಯುವ ಕಾಯಕ. ಆದರೆ ಈ ಕೆಲಸಗಳಿಗೆ ಯಾರದು ಬಲವಂತವಿಲ್ಲ ಇಷ್ಟಪಟ್ಟು ಪ್ರೀತಿಯಿಂದ ಮಾಡುವ ಕೆಲಸ. ಮನೆಯಲ್ಲಿರುವ ಎಲ್ಲರ ಮನಸ್ಸು ತಿಳಿದು, ಅವರುಗಳ ಇಷ್ಟಗಳನ್ನು ಸಮಯಕ್ಕೆ ಸರಿಯಾಗಿ ನಡೆಸಬೇಕು. ಪ್ರೀತಿಯಿಂದ, ಮಮತೆಯೊಡನೆ, ಅಕ್ಕರೆಯಿಂದ, ಕಾಳಜಿಯೊಡನೆ ಬೇಕು ಬೇಡಗಳನ್ನು ನೋಡಿಕೊಳ್ಳಬೇಕು. ಎಲ್ಲರ ಇಷ್ಟಗಳನ್ನು ಅರಿತವಳು, ಚತುರೆ, ಜವಾಬ್ದಾರಿಯುತ ನಮ್ಮ ಈ ಗೃಹಿಣಿ.
ಎಲ್ಲರ ಮನಕ್ಕೂ ಒಪ್ಪುವ ಹಾಗೆ ನಡೆದುಕೊಳ್ಳಬೇಕು. ಯಾರಿಗೂ ತೊಂದರೆ ಆಗಬಾರದು, ಯಾರಿಗೂ ಲೇಟ್ ಆಗಬಾರದು, ಬೆಳಿಗ್ಗೆ 6:00ಗೆನೇ ಅವಳಕಾಯಕ ಆರಂಭ.
ಎಲ್ಲೋ ದೂರದಲ್ಲಿ ಕೋಳಿಯು ಕೂಗಿರಬೇಕು. ಬೆಳ್ಳಾನೆ ಬೆಳಗಾಯಿತು ಎದ್ದೇಳು ಎಂದು ಎಚ್ಚರಿಸಿರಬೇಕು ಅಲ್ಲವಾ. ನಿತ್ಯ ಶುರು.
ಬೆಳಗಿನ ಕಾಫಿ,ಉಪಹಾರ, ಗಡಿಬಿಡಿ ಯಲ್ಲಿ ತಯಾರಾಗಿ ನಿಂತ ಯಜಮಾನರಿಗೆ ಲಂಚ್ ಬಾಕ್ಸ್, ರೆಡಿ ಮಾಡಬೇಕು. ಮಕ್ಕಳಿಗೆ ಯುನಿಫಾರ್ಮ್, ಅವರ ಟಿಫಿನ್ ಬಾಕ್ಸ್ ರೆಡಿ ಮಾಡಬೇಕು,, ಇದೆಲ್ಲಾ ಆದ ಮೇಲೆ ಮನೆಯಿಂದ ಹಿರಿಯರಾದ ಅತ್ತೆ ಮಾವನಿಗೆ ಬೆಳಗಿನ ಉಪಹಾರ ಕೊಡಬೇಕು, ಜೊತೆಗೆ ಅವರುಗಳು ತೆಗೆದುಕೊಳ್ಳುವ ಮಾತ್ರೆಗಳನ್ನು,
ಅವರ ಡೈನಿಂಗ್ ಟೇಬಲ್ ಮೇಲೆ ಇಡಬೇಕು.

ಫೋಟೋ ಕೃಪೆ : google
ಅವರ ಕಾಳಜಿ ವಹಿಸಬೇಕು…. ಇರೋದು ಎರಡೇ ಕೈ, ಎಲ್ಲದಕ್ಕೂ ಸಮಯವನ್ನು ಮೀಸಲು ಮೀಸಲು ಇಡಬೇಕು. ತರಕಾರಿಯನ್ನು ಇಂದಿನ ರಾತ್ರಿಯೇ ಅತ್ತೆ ತರಕಾರಿ ಹೆಚ್ಚಿ ಇಟ್ಟಿರುತ್ತಾರೆ.ಅದನ್ನು ಫ್ರಿಡ್ಜ್ ಇಂದ ತೆಗೆದು ತರಕಾರಿ ಸಾಂಬಾರ್ ಮಾಡಲು ಬಳಸಬೇಕು, ಕುಕ್ಕರ್ ಕೂಗಿಸಬೇಕು, ಸಾಂಬಾರಿಗೆ ಬೇಕಾಗುವ ಮಸಾಲಾ ಪದಾರ್ಥಗಳನ್ನು ಮಿಕ್ಸಿಗೆ ಹಾಕಬೇಕು, . ಚಪಾತಿಯ ಜೊತೆಗೆ, ಚೆಟ್ನಿ ಯನ್ನು ತಯಾರು ಮಾಡಬೇಕು..
ಕೆಲಸದವರು ಇದ್ದಿದ್ದರೆ ಚೆನ್ನಾಗಿತ್ತು ಆದ್ರೆ ನಾವೇ ಬೇಡ ಎಂದು ಸುಮ್ಮನಾಗಿದ್ದೀವೆ. ಅದೊಂದು ಹೆಚ್ಚಿನ ಖರ್ಚು 3000/ಸಾವಿರಕ್ಕೆ ಕಡಿಮೆಗೆ ಕೆಲಸದವ್ರು ಸಿಗೋಲ್ಲ. Washing machine ಇದೆ, ಪಾತ್ರೆ ತೊಳೆದುಕೊಂಡರೆ ಆಯಿತು, ಬೆಳಗಿನ ಎಲ್ಲಾ ಕೆಲಸ ಮುಗಿದಮೇಲೆ ನಿಧಾನವಾಗಿ mopper ಬಳಸಿ ನೆಲ clean ಮಾಡಿದರಾಯಿತು. ಬೆಳಿಗ್ಗೇನೆ ನೆಲ ಗುಡಿಸರುತ್ತಿದ್ದೆ. ಆಗಿಂದಾಗಲೇ ಬೀಳುವ ಪಾತ್ರೆ ತೊಳೆದುಕೊಂಡರೆ ಅದು ಬೆಟ್ಟದಂತೆ, ಬೆಳೆಯೋದಿಲ್ಲಾ, ಎಲ್ಲಾ ಕೆಲಸ ಗಳ ಸಾಫ್ಟ್ವೇರ್ ಪ್ರೋಗ್ರಾಮ್ ಹಿಂದಿನರಾತ್ರೆಯೆ ಮೈಂಡ್ ಅನ್ನೋ ಹ್ಯೂಮನ್ ಕಂಪ್ಯೂಟರ್ ಗೆ ತುಂಬಿಡಬೇಕು. ನಂತರ ರಾತ್ರಿ ನೆಮ್ಮದಿಯ ನಿದ್ರೆ ಮಾಡ ಬಹುದು. ಬೆಳಗ್ಗೆ ಎದ್ದಮೇಲೆ instrction ಗಳನ್ನು ಫಾಲೋ ಮಾಡಿದರೆ ಆಯಿತು. ಎಲ್ಲಾ ಕೆಲಸ ಗಳು ಸರಾಗ ವಾಗಿ ನೆಡೆಯುತ್ತವೆ.
ಯಜಮಾನರ ಲಂಚ್ ಬಾಕ್ಸ್, ಮಕ್ಕಳ Tiifin box, mattu ಮಕ್ಕಳಿಗೆ ಯುನಿಫಾರ್ಮ್ ರೆಡಿಮಾಡಿ, ಮುಗಿಸುವುದ್ರಲ್ಲಿ ಸಾಕು ಸಾಕಾಗಿ ಹೋಗುತ್ತದೆ. ಇನ್ನೂ ಕಾಫಿ ಕುಡಿಯೋಕೆ
ಪುರುಸೊತ್ತಾಗಿಲ್ಲ. ಇರಲಿ ಆಮೇಲೆ ಕುಡಿದರಾಯಿತು. ಎಸ್ಟೊoದು ಕೆಲಸಗಳು ಮಾಡಲೇ ಬೇಕು, ಬೇಸರಿಸಿಕೊಳ್ಳುವಂತಿಲ್ಲ. ಎಲ್ಲರೂ ನನಗೆ ಬೇಕಾದವ್ರೆ, ಒಳ್ಳೆಯ ನಂಟು, ಅಂಟು ಎರಡು ಇದೆ. ಎಲ್ಲರೂ ನನಗೆ ಪ್ರೀತಿಪಾತ್ರರೆ. ನಂಟಿನಲ್ಲಿ ಬಂಧಿತಳಾಗಿದ್ದೀನೆ.
ಎಲ್ಲರ ಮೇಲೂ ನನಗೆ ಪ್ರೀತಿ /ಅಕ್ಕರೆ, ಬಾಂಧವ್ಯ ಇದೆ. ಯಾರ ಮೇಲೂ ನನಗೆ ಬೇಸರವಿಲ್ಲ. ನನ್ನ ದಿನ ನಿತ್ಯದ ಕೆಲಸ ಗಳಿಗೆ ಯಾರಲ್ಲಿ ಸಹಾಯ ಬೇಡಲಿ. ಅತ್ತೆಮಾವhh ವಯಸ್ಸಾದವ್ರು, ಅವರಿಂದ ಸಹಾಯ expect ಮಾಡೋದು ತಪ್ಪು. ಅದು ನನಗೆ ಚನ್ನಾಗಿ ತಿಳಿದಿದೆ.ಮಕ್ಕ್ಳು ಇನ್ನೂ ಎಳೆಯರು,ಅವ್ರಿಗೆ ಸಾಕಷ್ಟು ಹೋಂ work ಗಳಿರುತ್ತವೆ. I can not diturb them. ಅವರ golden time ನ ಬಳಸಬಾರದು. ಇಂದು ಅನ್ನದ ಮಕ್ಕಳು ನಾಳೆಗೆ ಚಿನ್ನದ ಮಕ್ಕಳು. ಓದಿ ಮುಂದೆ ಬರಲಿ.
ದೊಡ್ಡೋರಾದ ಮೇಲೆ ಪ್ರೀತಿಯಿಂದ ನಮ್ಮನ್ನು ಕಾಣಲಿ, ಸಧ್ಯ ನಮ್ಮನ್ನು oldage home ಗೆ ಕಳಿಸದಿದ್ರೆ ಸಾಕು. ಹಾಗೆ ಮಾಡಲ್ಲ ಅನ್ನೋ ನಂಬಿಕೆ ನನಗಿದೆ. ಇನ್ನು ಯಜಮಾನರು ಅವ್ರು ಈ ಮನೆಯ ಆಧಾರ ಸ್ಥoಭ ಅವರು ನಮ್ಮ ಮನೆಯ bread winner. ಸುಮಾರು 10 ಗಂಟೆ ಹೊರಗಿದ್ದು ಸುಸ್ತಾಗಿ ಸಂಜೆ ಬಸವಳಿದು ಮನೆಗೆ ಬರ್ತಾರೆ ಅವ್ರು ರೆಸ್ಟ್ ತೊಗಳ್ಳ ಲಿ, ಅವರನ್ನು ದೇವರಂತೆ ನೋಡಿಕೊಳ್ಳುವೆ, ಅವ್ರು ಚೆನ್ನಾಗಿದ್ದರೆ ನಮ್ಮ ಮನೆ ಸ್ವರ್ಗವಿದ್ದಂತೆ.

ಫೋಟೋ ಕೃಪೆ : google
ಇಷ್ಟೆಲ್ಲ ಆದರೂ ನನ್ನ ಒಳಮನಸ್ಸು ಹೇಳುತ್ತದೆ ವಾರಕ್ಕೊಮೆಯಾದ್ರೂ ರಜಾ ಬೇಡವ ಅಂತ. ನೀನು ಕೆಲಸ ಮಾಡುವ robot ಅಲ್ಲ. ಹ್ಯೂಮನ್ beeing.
ನನಗೂ ನನ್ನ ಸ್ವಂತದ ಸಮಯ ಬೇಕು, ವಾರಕ್ಕೊಮ್ಮೆಯಾದರೂ ನನ್ನ ಗೆಳತಿಯರನ್ನು,, ನನ್ನ ಆಪ್ತರನ್ನು ಭೇಟಿ ಮಾಡಿ ಅವರಲ್ಲಿ ನನ್ನ ಬರೆದ ದುಗುಡಗಳನ್ನು, ಸುಖ ಸಂತೋಷಗಳನ್ನು ಹಂಚಿಕೊಳ್ಳಬೇಕು ಸಮಾಧಾನ ಪಡಬೇಕು. ಏನೇನೋ ಆಸೆಗಳು.
ಅಂತೂ ರೆಗ್ಯುಲರ್ routine ನಿಂದ ಸ್ವಲ್ಪ break ಬೇಕು . ಅದಕ್ಕಾಗಿ ಅಮ್ಮನ ಮನೆಗೆ ಬಂದಿದ್ದೀನಿ. ಇಲ್ಲಿಗೆ ಬಂದರೂ ನನ್ನದೇಹ ಇಲ್ಲಿ ಮನಸ್ಸು ಮಾತ್ರ ನನ್ನ ಮನೆಯಲ್ಲಿರುತ್ತದೆ ಅದು ಮೋಹ ಅಲ್ಲದೆ. ಮತ್ತೇನು. ಅಣ್ಣ ತಂಗಿ ಸಿಕ್ಕರೂ ಸಾಕಷ್ಟು ಹರಟಿದ್ದಾಯಿತುಇನ್ನೂ ಅಮ್ಮ. ಮನೆಯೊಳಗೇ ಕಾಳಿಡು ವಾಗಲೇ ಅಮ್ಮ ಕೈಹಿಡಿದು ಸಿದಾ ಅಡುಗೆ ಮನೆಗೆ ಕರೆದುಕೊಂಡು ಹೋದಳು. ಬಿಸಿ ಕಾಫಿ ಕೊಟ್ಟು ನನಗೆ ಯಾವ ಅಡುಗೆ ಬೇಕು ತಿಳಿದುಕೊಂಡಳು. ಭರ್ಜರಿ ಊಟದ ನಂತರ ಕಣ್ಣಿಗೆ ಜೋoಪು ಶುರು ಆಯಿತು ಎಳೆ ಮಗುವಿನಂತೆ ಅಮ್ಮನ ತೊಡೆಮೇಲೆ ತಲೆ ಇಟ್ಟು ಮಲಗಿದೆ. ಜೋರಾದ ನಿದ್ರೆ ಹತ್ತಿತು. ಅಮ್ಮ ಪ್ರೀತಿಯಿಂದ ತಲೆ ಸವರುತ್ತಲೇ ಇದ್ದಳು ಅದು ಒಂದು ರೀತಿಯ ಸoಮೋಹನ ಮ್ಯಾಜಿಕಲ್ touch ಅನ್ನಬಹುದು.
ಎಸ್ಟುಹೊತ್ತು ಮಲಗಿದ್ದೆನೋ ಗೊತ್ತಿಲ್ಲ. ಏನೋ ಬಿಸಿಯಾಗಿ ಹನಿಗಳು ಕೆನ್ನೆಯ ಮೇಲೆ ಬಿದ್ದಂತಾಯಿತು. ಅದು ಅಮ್ಮನ ಕಣ್ಣೀರು ಅಲ್ಲ ಪನ್ನೀರು. ಎಲ್ಲೋ ಅವಳು ನನ್ನ ಬಾಲ ಲೀಲೆಗಳನ್ನು ನೆನೆಸಿ ಕೊಂಡಿರ ಬೇಕು. ಎಚ್ಚರ ಮಾಡಿಕೊಂಡೆ.ನನ್ನ ಕೆನ್ನೆ ಒರೆಸಿಕೊಂಡು ಅಮ್ಮನ ಕಣ್ಣನ್ನೂ ಒರೆಸಿದೆ.ಅಮ್ಮನ ಸ್ಪರ್ಶ ಆನಂದವಾಗಿತ್ತು. ನಮ್ಮಿಬ್ಬರಲ್ಲಿ ಮಾತೆ ಇರಲಿಲ್ಲ ಬರಿ ಸ್ಪರ್ಶವೆ ಮಾತಾಡುತ್ತಿತ್ತು. ಮಾತು ಮೌನ ವಾಗಿತ್ತು. ಅಮ್ಮ ಅಂದ್ರೆ ಅಮ್ಮಾನೆ ಅವ್ಳಿಗೆ ಅವಳ ಮಾತೃ ವಾತ್ಸಲ್ಯಕ್ಕೆ ಯಾರೂ ಯಾವುದೂ ಸಮ ಇಲ್ಲ.
- ಜಯರಾಜ್ . ಜೈನ್- ರಾಮೋಹಳ್ಳಿ…. ಬೆಂಗಳೂರು
