ಕೂದಲನ್ನು ಕಪ್ಪಾಗಿಸಲು : ನೀಲಿ ಸೊಪ್ಪು (ಇಂಡಿಗೋ)

ನೀಲಿ ಸೊಪ್ಪನ್ನು ಬಳಸುವುದರಿಂದ ಕೆಮಿಕಲ್ ಮುಕ್ತವಾಗಿ ಕೂದಲನ್ನು ಕಪ್ಪಾಗಿಸಬಹುದು ಎನ್ನುತ್ತಾರೆ ನಾಟಿ ವೈದ್ಯೆ  ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ನಮ್ಮ ವಾಡಿಕೆಯಲ್ಲಿ ನೀಲಿ ಸೊಪ್ಪು ಎನ್ನುವುದಕ್ಕಿಂತ ಇಂಡಿಗೋ ಎಂದರೆ ಜನರಿಗೆ ಬೇಗನೆ ಅರ್ಥವಾಗುತ್ತದೆ. ಇದನ್ನು ಸಾಧಾರಣವಾಗಿ ಕೂದಲಿನ ಬಣ್ಣ ಬರಿಸಲು, ಹಿಂದೆ ಶಾಯಿ ಎಂದರೆ ಇಂಕ್ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಈಗ ಇವೆರಡಕ್ಕೂ ಕೆಮಿಕಲ್ ಪ್ರವೇಶ ಆಗಿದೆ. ಈಗಲೂ ನಾವು ಮನಸ್ಸು ಮಾಡಿದರೆ ಕೆಮಿಕಲ್ ಮುಕ್ತವಾಗಿ ಕೂದಲನ್ನು ಕಪ್ಪಾಗಿಸಬಹುದು.

ಇದಕ್ಕೆ ಪ್ರಮುಖ ಪಾತ್ರ ನೀಲಿ ಸೊಪ್ಪು ವಹಿಸುತ್ತದೆ. ಬಣ್ಣ ಹಸಿರಾಗಿದ್ದರು ಸೊಪ್ಪನ್ನು ರುಬ್ಬಿದಾಗ ನೀಲಿ ಬಣ್ಣಕ್ಕೆ ತಿರುಗುತ್ತದೆ. ಹೂ ಗಾಢವಾದ ಗುಲಾಬಿ ಬಣ್ಣವನ್ನು ಹೋಲುತ್ತದೆ. ನೋಡುವುದಕ್ಕೆ ಇದೇ ರೀತಿಯ ಗಿಡಗಳು ಇದೇ ಪ್ರಭೇದಕ್ಕೆ ಸೇರಿದ್ದು ಇರುತ್ತದೆ. ಹಾಗಾಗಿ ಸರಿಯಾಗಿ ಮಾಹಿತಿಯನ್ನು ತಿಳಿದು ಇದನ್ನು ಉಪಯೋಗಿಸುವುದು ಒಳ್ಳೆಯದು.

ಫೋಟೋ ಕೃಪೆ : google

ಹೊರಗಡೆ ಹಚ್ಚುವಾಗ ಸ್ವಲ್ಪ ಹೆಚ್ಚು ಕಡಿಮೆ ಆದರೂ ಪರವಾಗಿಲ್ಲ. ಹೊಟ್ಟೆಗೆ ತೆಗೆದುಕೊಳ್ಳುವಾಗ ಮಾತ್ರ ಮಾಹಿತಿ ಇದ್ದವರಲ್ಲಿ ಸಂಗ್ರಹಿಸಿ ತೆಗೆದುಕೊಳ್ಳಿ.
ಇದರ ಸೊಪ್ಪು ಬೇರು, ಎಲೆ, ಹೂವು, ಕಾಂಡ ಎಲ್ಲವೂ ಉಪಯೋಗಕ್ಕೆ ಬರುತ್ತದೆ.

1) ಇದರ ಸೊಪ್ಪನ್ನು ಅರೆದು ಮೂಲವ್ಯಾಧಿ ಮೊಳಕೆಗೆ ಹಚ್ಚುವುದರಿಂದ ಗುಣವಾಗುತ್ತದೆ.

2) ನಾಭಿಯ ಕೆಳಗೆ ಸೊಪ್ಪಿನ ಪೇಸ್ಟನ್ನು ಹಚ್ಚುವುದರಿಂದ ಮೂತ್ರ ಕಟ್ಟು ಸಲ್ಲಿಸಾಗಿ ಹೊರ ಹೋಗುತ್ತದೆ.

3) ನೀಲಿಯ ಹಸಿಯಾದ ಸೊಪ್ಪನ್ನು ಅರೆದು ಕೂದಲಿಗೆ ಹಚ್ಚುವುದರಿಂದ ಕೂದಲು ಉದುರುವುದು ಹೊಟ್ಟು ನಿವಾರಣೆ ಆಗುತ್ತದೆ ಮತ್ತು ಬಣ್ಣ ಬರುತ್ತದೆ.

4) ಪ್ರಮುಖವಾಗಿ ನೀಲಿ ಸೊಪ್ಪನ್ನು ಉಪಯೋಗಿಸಿ ಅಳಲೆ ಕಾಯಿ, ತಾರೆ ಕಾಯಿ, ನೆಲ್ಲಿಕಾಯಿ,ವಾಯುವಿಳಂಗ, ಒಂದೆಲಗ, ನೀಲಿ ಸೊಪ್ಪು ಮದರಂಗಿ, ಹೊನಗನ್ನೆ, ಭೃಂಗರಾಜ ಸೊಪ್ಪು, ಇಲಿ ಕಿವಿ ಸೊಪ್ಪು, ವಿಳ್ಯದೆಲೆ, ಕೆಂಪು ದಾಸವಾಳ ಹೂವು, ಗರಗ ಸೊಪ್ಪು, ನಾಮಧಾರಿ ಸೊಪ್ಪು, ಗಾಂಧಾರಿ ಸೊಪ್ಪು, ಕರಿಬೇವಿನ ಸೊಪ್ಪು, ಆಲದ ಮರದ ಬಿಳಲು, ಅಂತರ ಗಂಗೆ, ದಡಸಲು ಸೊಪ್ಪು, ಮಲ್ಲಿಗೆ ಹೂ, ಜಟಮಾಸಿ ಇವುಗಳನ್ನು ಕುಟ್ಟಿ ಪುಡಿ ಪುಡಿ ಮಾಡಿ ಬಾಳೆಯ ದಿಂಡಿನ ಸರದಲ್ಲಿ ಪೇಸ್ಟ್ ಮಾಡಿ ಒಣಗಿಸಿ ಸೋಪು ಮತ್ತು ಎಣ್ಣೆಗೆ ಉಪಯೋಗಿಸುತ್ತೇನೆ.

ಫೋಟೋ ಕೃಪೆ : google

ಅಗತ್ಯ ಇದ್ದವರು ಉಪಯೋಗ ಪಡೆಯಬಹುದು :

5) ಸುಮಾರು ಎರಡು ಚಮಚದಷ್ಟು ರಸವನ್ನು ಅಷ್ಟೇ ಹಾಲಿನೊಂದಿಗೆ ಸೇರಿಸಿ ಹೊಟ್ಟೆಗೆ ತೆಗೆದುಕೊಳ್ಳುವುದರಿಂದ ಹುಚ್ಚುನಾಯಿ ಕಡಿತದ ವಿಷ ಗುಣವಾಗುತ್ತದೆ ಮತ್ತು ಕಚ್ಚಿದ ಜಾಗಕ್ಕೆ ಇದರ ಪೇಸ್ಟನ್ನು ಹಚ್ಚಬೇಕು ಕೆಲವರಿಗೆ ತಲೆನೋವು ಬರಬಹುದು ಭಯಪಡುವ ಅಗತ್ಯ ಇಲ್ಲ.

6) ಬೇರಿನ ನಯವಾದ ಪುಡಿಯನ್ನು ಹಲ್ಲಿನ ಒಳಗಡೆಗೆ ತುಂಬುವುದರಿಂದ ಹಲ್ಲು ನೋವು ನಿವಾರಣೆ ಆಗುತ್ತದೆ.

7) ನೀಲಿ ಸೊಪ್ಪಿನ ಪೇಸ್ಟನ್ನು ಹಚ್ಚುವುದರಿಂದ ಸರ್ಪ ಸುತ್ತು ಗುಣವಾಗುತ್ತದೆ.

8) ತಲೆಯಲ್ಲಿ ಆಗುವ ಜಿರಳೆ ಹುಣ್ಣಿಗೆ ಇದರ ಪೇಸ್ಟ್ ಒಳ್ಳೆಯ ಔಷಧಿ.

9) ಸೊಪ್ಪಿನ ಪೇಸ್ಟನ್ನು ಕೆಚ್ಚಲಿಗೆ ಹಚ್ಚುವುದರಿಂದ ಕೆಚ್ಚಲ ಬಾವು ನಿವಾರಣೆ ಯಾಗುತ್ತದೆ. ಇದು ತಲೆಮಾರಿನಿಂದ ಕೆಚ್ಚಲು ಬಾವಿಗೆ ಉಪಯೋಗಿಸಿಕೊಂಡು ಬಂದ ಔಷಧಿ.

10) ನೀಲಿ ಬೀಜವನ್ನು ಚೆನ್ನಾಗಿ ಅರೆದು ವಸ್ತ್ರಗಾಳಿದ ಚೂರ್ಣ ಮಾಡಿ ಕಣ್ಣಿಗೆ ಅಂಜನ ಇಡುವುದರಿಂದ ಕಣ್ಣಿನ ಪೊರೆ ನಿವಾರಣೆಯಾಗುತ್ತದೆ.

11) ಆಕಸ್ಮಿಕವಾಗಿ ಯಾವುದೇ ಕಬ್ಬಿಣ ಅಥವಾ ಇನ್ನಿತರೆ ಧಾತುಗಳು ದೇಹದಲ್ಲಿ ಸೇರಿಕೊಂಡಾಗ ಇದರ ಕಷಾಯವನ್ನು ಕುಡಿಯುತ್ತಾ ಬಂದರೆ ಅದು ನಿವಾರಣೆಯಾಗುತ್ತದೆ.

12) ಇದರ ಕಷಾಯ ಕುಡಿಯುತ್ತಾ ಬಂದರೆ ಚರ್ಮರೋಗ ನಿವಾರಣೆ ಆಗುತ್ತದೆ.

ವಿಶೇಷ ಸೂಚನೆ : 

13) ಹೊಟ್ಟೆಗೆ ತೆಗೆದುಕೊಳ್ಳುವಾಗ ಭೇದಿ ಆಗುವ ಸಾಧ್ಯತೆ ಹೆಚ್ಚು.


  •  ಸುಮನಾ ಮಳಲಗದ್ದೆ 

0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d
Aakruti Kannada

FREE
VIEW