ಅಂತಾರಾಷ್ಟ್ರೀಯ ಮಹಿಳಾ ದಿನ ಶುಭಾಶಯಗಳು

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳಾ ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಘೋಷಣೆಗಳು ಗಾಳಿಯಲ್ಲೇ ಉಳಿದಿವೆ. 2021 ರಲ್ಲಿ 31,677 ಅತ್ಯಾಚಾರದ ಪ್ರಕರಣಗಳು, 6795ರಷ್ಟು ವರದಕ್ಷಿಣೆ ಸಾವುಗಳನ್ನು ಪೊಲೀಸರು ದಾಖಲಿಸಿದ್ದಾರೆ. ಈ ಎಲ್ಲಾ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿ ಎಂದು ಆಶೀಸುತ್ತಾ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು….

ಮಹಿಳೆಯರ ಮೇಲಿನ ದೌರ್ಜನ್ಯ, ಬೆಲೆ ಏರಿಕೆ, ನಿರುದ್ಯೋಗ, ಶಿಕ್ಷಣ-ಆರೋಗ್ಯದ ವ್ಯಾಪಾರೀಕರಣಗಳನ್ನು ತಡೆಗಟ್ಟಿ! ಮಾರ್ಚ್ 8 ಅಂತರರಾಷ್ಟ್ರೀಯ ಮಹಿಳಾ ದಿನ.

1908 ಮಾರ್ಚ್ 8 ರಂದು , ಅಮೇರಿಕಾದ ನ್ಯೂಯಾರ್ಕ್‍ನ ಸಿದ್ಧ ಉಡುಪಿನ ಕಾರ್ಖಾನೆಯ ಮಹಿಳಾ ಕಾರ್ಮಿಕರು ಬೀದಿಗಿಳಿದರು. ಕಾರ್ಖಾನೆಗಳಲ್ಲಿ, ಉಸಿರುಗಟ್ಟಿಸುವ ಪರಿಸ್ಥಿತಿಯ ವಿರುದ್ಧ, ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ, ದುಡಿಮೆಯ ಅವಧಿ 8 ಗಂಟೆಗೆ ನಿಗಧಿ ಪಡಿಸುವಂತೆ, ಹೆರಿಗೆಯ ರಜೆಯ ಹಕ್ಕಿಗಾಗಿ, ನ್ಯೂಯಾರ್ಕ್‍ನ ಬೀದಿಗಳಲ್ಲಿ ಸಹಸ್ರ ಸಂಖ್ಯೆಯಲ್ಲಿ ಮಹಿಳೆಯರು ಪ್ರತಿಭಟನೆಯ ಧ್ವನಿಯೆತ್ತಿದರು. ತಮ್ಮ ನ್ಯಾಯಯುತ ಬೇಡಿಕೆಗಳ ಘೋಷಣೆಗಳೊಂದಿಗೆ ಮುನ್ನೆಡೆಯುತ್ತಿದ್ದ ಸುಮಾರು 30ಸಾವಿರ ನಿಶ್ಯಸ್ತ್ರ ಮಹಿಳೆಯರ ಮೇಲೆ ಆಳ್ವಿಕರು ಗುಂಡಿನ ಮಳೆಗರೆದರು. ಅಂದು ನ್ಯೂಯಾರ್ಕ್‍ನ ಬೀದಿಗಳು ಈ ಹೋರಟಗಾರ್ತಿಯರ ರಕ್ತದಿಂದ ಕೆಂಪಾದವು. ಕೊರೆಯುವ ಚಳಿಯನ್ನು ಲೆಕ್ಕಿಸದೆ, ಆಳ್ವಿಕರ ಬಂದೂಕಿನ ಗುಂಡಿಗೆ ಜಗ್ಗದೆ 13ವಾರಗಳ ಕಾಲ ನಡೆದ ಈ ಹೋರಾಟದ ಸ್ಫೂರ್ತಿ ವಿಶ್ವದೆಲ್ಲೆಡೆ ಮಹಿಳೆಯರಿಗೆ ‘ಮಹಿಳಾ ವಿಮೋಚನೆ’ಯ ಪತಾತೆಯನ್ನು ಎತ್ತಿಹಿಡಿಯುವ ಪ್ರೇರಣಾಶಕ್ತಿಯಾಗಿ ನಿಂತಿದೆ. ಈ ಐತಿಹಾಸಿಕ ಮಹಿಳಾ ಹೋರಾಟದ ಸ್ಮರಣೆಯಲ್ಲಿ ಖ್ಯಾತ ಸಮಾಜವಾದಿ ನಾಯಕಿಯಾದ ಕ್ಲಾರಾ ಜೆಟ್‍ಕಿನ್ ರವರು ಕೊಪೆನ್‍ಹೆಗನ್‍ನಲ್ಲಿ 1910ರಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಮಹಿಳಾ ಕಾಂಗ್ರೆಸ್‍ನಲ್ಲಿ ಮಾರ್ಚ್ 8 ಅನ್ನು ಅಂತರರಾಷ್ಟ್ರೀಯ ಮಹಿಳಾ ದಿನ ವೆಂದು ಘೋಷಿಸಿ ಅದಕ್ಕೆ ವಿಶ್ವಮಾನ್ಯತೆ ನೀಡಿದರು.

ನಮ್ಮ ದೇಶದ ಮಹಿಳೆಯರ ಪರಿಸ್ಥಿತಿ:

ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಮಹಿಳಾ ಸ್ವಾತಂತ್ರ್ಯ, ಸಮಾನತೆ ಹಾಗೂ ಘನತೆಯ ಘೋಷಣೆಗಳು ಗಾಳಿಯಲ್ಲೇ ಉಳಿದಿವೆ. ದೆಹಲಿಯ ಶ್ರದ್ಧಾ ಕೊಲೆ, ಮಳವಳ್ಳಿಯ ಪುಟ್ಟ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ, ರಾಮನಗರದ ಯುವತಿಯ ಮೇಲೆ ಆಸಿಡ್ ದಾಳಿ, …ಹೀಗೆ ಪ್ರತಿನಿತ್ಯ ದಿನಪತ್ರಿಕೆಗಳಲ್ಲಿ ವರದಿಯಾಗುವ ಅತ್ಯಾಚಾರ-ಗುಂಪು ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮರ್ಯಾದ ಹತ್ಯೆ, ಬಾಲ್ಯವಿವಾಹ, ಹೆಣ್ಣುಮಕ್ಕಳ ಕಳ್ಳಸಾಕಾಣಿಕೆ, ಸ್ತ್ರೀ-ಭ್ರೂಣ ಹತ್ಯೆ-ಶಿಶು ಹತ್ಯೆ ಪ್ರಕರಣಗಳು ನಮ್ಮ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಕ್ಕೆ ಕನ್ನಡಿ ಹಿಡಿದಂತಿವೆ.
ಎನ್.ಸಿ.ಆರ್.ಬಿ(ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯರೋ) ವರದಿಯ ಪ್ರಕಾರ 2021ರಲ್ಲಿ ದಾಖಲುಗೊಂಡಿರುವ ಅಪರಾಧಗಳು 4,28,278. 2020ಕ್ಕೆ ಹೋಲಿಸಿದರೆ ಒಂದು ವರ್ಷದಲ್ಲಿ ಶೇ.15.3ರಷ್ಟು ಏರಿಕೆಯಾಗಿದೆ! 2021 ರಲ್ಲಿ 31,677 ಅತ್ಯಾಚಾರದ ಪ್ರಕರಣಗಳು, 6795ರಷ್ಟು ವರದಕ್ಷಿಣೆ ಸಾವುಗಳನ್ನು ಪೊಲೀಸರು ದಾಖಲಿಸಿದ್ದಾರೆ. ಅಂದರೆ ದೇಶದಲ್ಲಿ ದಿನಕ್ಕೆ 86 ಅತ್ಯಾಚಾರ ಪ್ರಕರಣಗಳು, 20 ವರದಕ್ಷಿಣೆ ಸಾವು! ಪ್ರತಿವರ್ಷ ಭಾರತದಲ್ಲಿ ಸುಮಾರು 300 ಆಸಿಡ್ ದಾಳಿಗಳು ವರದಿಯಾಗುತ್ತಿವೆ. ಪೋಕ್ಸೋ ಕಾಯ್ದೆ ಅಡಿಯಲ್ಲಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯಗಳು 52,836 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 33,036 ಅತ್ಯಾಚಾರದ ಪ್ರಕರಣಗಳಾಗಿವೆ! ಇತ್ತೀಚೆಗೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೊಸ ಆಯಾಮವನ್ನು ಪಡೆದುಕೊಳ್ಳುತ್ತಿವೆ. ತನ್ನ ಜೊತೆಗಾರ್ತಿಯನ್ನು ಅತ್ಯಂತ ಕ್ರೂರ ರೀತಿಯಲ್ಲಿ ಕೊಲ್ಲುವುದು, ಕೊಲೆಯಾದ ಮಹಿಳೆಯನ್ನು ಹಲವು ತುಂಡುಗಳಾಗಿ ಕತ್ತರಿಸಿ ಅನೇಕ ಸ್ಥಳಗಳಲ್ಲಿ ಎಸೆಯುವಂತಹ ಪ್ರಕರಣಗಳು ಜನಮಾನಸದಲ್ಲಿ ದಿಗಿಲುಟ್ಟಿಸಿವೆ.

ಇಂತಹ ಘೋರ ಅಪರಾಧಗಳನ್ನು ಎಸಗುವವರಿಗೆ ಸರ್ಕಾರ ಹಾಗೂ ಕಾನೂನು ಉಗ್ರಶಿಕ್ಷೆಯನ್ನು ಖಾತ್ರಿಪಡಿಸಿ ಸಮಾಜದಲ್ಲಿ ಎಚ್ಚರಿಕೆಯ ಗಂಟೆ ಬಾರಿಸಬೇಕಾದದ್ದು ಆದ್ಯ ಕರ್ತವ್ಯ. ಆದರೆ ದೇಶವನ್ನೇ ಬೆಚ್ಚಿಬೀಳಿಸಿದ ಬಿಲ್ಕಸ್ ಬಾನು ಪ್ರಕರಣದಲ್ಲಿ ಭಾಗಿಯಾದ 11 ಜನ ಅತ್ಯಾಚಾರಿ-ಕೊಲೆಗಡುಕರಿಗೆ ಗುಜರಾತ್ ಸರ್ಕಾರ ‘ಸನ್ನಡತೆಯ’ ಆಧಾರದ ಮೇಲೆ ಬಿಡುಗಡೆ ಮಾಡಿರುವುದು ಅಪರಾಧಿಗಳಿಗೆ ನಿರ್ಭೀತಿಯಿಂದ ಇಂತಹ ಕೃತ್ಯಗಳನ್ನು ಮಾಡುವ ಪರವಾನಗಿ ನೀಡಿದಂತಾಗಿದೆ! ಇನ್ನು ಇಂತಹ ಅಪರಾಧಗಳಿಗೆ ಪ್ರಮುಖ ಕಾರಣಗಳಾದ ಮಾದ್ಯಮಗಳಲ್ಲಿ-ಅಂತರ್ಜಾಲದಲ್ಲಿ ವ್ಯಾಪಕವಾಗಿ ಹರಡುವ ಅಶ್ಲೀಲತೆ, ಕ್ರೌರ್ಯ ಬಿತ್ತರಿಸುವ ಚಿತ್ರಗಳು ಮತ್ತು ಸುಲಭವಾಗಿ ಸಿಗುವ ಮದ್ಯ-ಮಾದಕ ವಸ್ತುಗಳ ಬಗ್ಗೆ ಸರ್ಕಾರದ ದಿವ್ಯ ಮೌನದ ನಡೆ ಮಹಿಳೆಯರ ಬಗ್ಗೆ ಇರುವ ಕಾಳಜಿಯನ್ನು ಎತ್ತಿತೋರಿಸುತ್ತದೆ!

ಕೊರೋನ ನಂತರದಲ್ಲಿ ಜನರ ಬದುಕು ಬೀದಿಗೆ ಬಂದಿದೆ. ಕೋಟ್ಯಾಂತರ ಉದ್ಯೋಗಗಳು ನಾಶವಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನವಿರೋಧಿ ಆರ್ಥಿಕ ನೀತಿಗಳು ಜನರನ್ನು ಬಾಣಲೆಯಿಂದ ನೇರವಾಗಿ ಬೆಂಕಿಗೆ ಎಸೆದಂತ್ತಿವೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ-ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಆಶಾ, ಅಂಗನವಾಡಿ, ಬಿಸಿಊಟ ಯೋಜನೆಯಲ್ಲಿ, ಗಾರ್ಮೆಂಟ್ಸ್ ನಲ್ಲಿ ದುಡಿಯುವ.. ಅಸಂಖ್ಯಾತ ಅಸಂಘಟಿತ ಮಹಿಳಾ ಕಾರ್ಮಿಕರು ಗೌರವಯುತ ಕನಿಷ್ಠವೇತನದಿಂದ, ಉದ್ಯೋಗ ಭದ್ರತೆಯಿಂದ ವಂಚಿತರಾಗಿದ್ದಾರೆ. ಕುಟುಂಬದ ಸದಸ್ಯರಿಗೆಲ್ಲಾ ಬಡಿಸಿ ಕೊನೆಯಲ್ಲಿ ಉಳಿದರೆ ತಿನ್ನುವ, ಇಲ್ಲವಾದರೆ ಹೊಟ್ಟೆಗೆ ತಣ್ಣೀರು ಬಟ್ಟೆಹಾಕಿಕೊಳ್ಳುವ ದೇಶದ ಬಹುಪಾಲು ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದ ಖಾಸಗೀಕರಣದಿಂದಾಗಿ ಬಡ ಮಹಿಳೆಯರು ಕನಿಷ್ಠ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸಾಮಾಜಿಕ ಒತ್ತಡದಿಂದ ಅನೇಕ ಅಪ್ರಾಪ್ತ ಹೆಣ್ಣುಮಕ್ಕಳು ಚಿಕ್ಕವಯಸ್ಸಿನಲ್ಲೇ ಮದುವೆ, ನಂತರ ಗರ್ಭದಾರಣೆಯಿಂದ ಶೇ.13.5 ರಷ್ಟು ಶಾಲೆಯಿಂದ ಹೊರಗುಳಿದಿದ್ದಾರೆ. ಶೇ 66.4ರಷ್ಟು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

ಇಂತಹ ಸಂದರ್ಭದಲ್ಲಿ, ಬಂಡವಾಳಿಗರಿಗೆ ಹೆಚ್ಚಿನ ಲಾಭ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ, ರಾಜ್ಯ ಬಿಜೆಪಿ ಸರ್ಕಾರವು ವಿಧಾನಸಭೆಯಲ್ಲಿ ಯಾವುದೇ ಚರ್ಚೆಯಿಲ್ಲದೇ , ಕಾರ್ಖಾನೆಗಳಲ್ಲಿ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುಲು ಅನುಮತಿ ನೀಡುವ, ದುಡಿತದ ಅವಧಿಯನ್ನು ಹೆಚ್ಚಿಸುವ ಕರಾಳ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ) ಮಸೂದೆ-2023’ ಯನ್ನು ಅಂಗೀಕರಿಸಿರುವುದು ಅತ್ಯಂತ ಮಹಿಳಾ ಮತ್ತು ಕಾರ್ಮಿಕ ವಿರೋಧಿಯಾಗಿದೆ. ಮಹಿಳೆಯರ ಆರೋಗ್ಯ-ಸುರಕ್ಷತೆ ಬಗ್ಗೆಯಾಗಲಿ ಅಥವಾ ಕುಟುಂಬದಲ್ಲಿ ಮಕ್ಕಳ ಪೋಷಣೆಯಲ್ಲಿ ತಾಯಿಯ ಪಾತ್ರದ ಬಗ್ಗೆ ಕನಿಷ್ಠ ಅರಿವಿಲ್ಲದವರ ನಡೆ ಇದಾಗಿದೆ. ಸಾವಿರಾರು ಕಾರ್ಮಿಕರು ರಕ್ತಹರಿಸಿ ಗಳಿಸಿಕೊಂಡಂತಹ ಹಲವು ಕಾರ್ಮಿಕ ಹಕ್ಕುಗಳನ್ನು ಒಂದೊಂದಾಗಿ ಕಸಿದುಕೊಳ್ಳುತ್ತಿರುವ ನೀತಿಗಳನ್ನು ನಾವೆಲ್ಲರು ಒಕ್ಕೊರಳಿನಿಂದ ವಿರೋಧಿಸಬೇಕಿದೆ.

ನಮ್ಮ ಮುಂದಿರುವ ಕರ್ತವ್ಯ:

ರಾಷ್ಟ್ರೀಯ ಕುಟುಂಬ ಆರೋಗ್ಯ ಸರ್ವೆಯ ಸಮೀಕ್ಷೆಯಲ್ಲಿ ಕಂಡುಬಂದದ್ದು ಕುಟುಂಬವನ್ನು ಒಟ್ಟಾಗಿ ಇರಿಸಲು ಮಹಿಳೆಯರು ಹಿಂಸೆ-ಹೊಡೆತವನ್ನು ಸ್ವೀಕರಿಸಬೇಕೆಂದು ದೇಶದ ಶೇ.65 ರಷ್ಟು ಪುರುಷರು ಹಾಗೂ ಶೇ.30ರಷ್ಟು ಮಹಿಳೆಯರ ನಂಬಿಕೆಯಾಗಿದೆ. ಹಾಗಾಗಿ ಪುರುಷರು ಮತ್ತು ಮಹಿಳೆಯರಲ್ಲಿ ಆಳವಾಗಿ ಬೇರೂರಿರುವ ಊಳಿಗಮಾನ್ಯ ಪುರುಷ ಪ್ರಧಾನ ಮೌಲ್ಯಗಳು ಮತ್ತು ಇಂದಿನ ಬಂಡವಾಳಶಾಹಿ ವ್ಯವಸ್ಥೆಯ ಕೊಳೆತ ಕುಸಂಸ್ಕøತಿಯನ್ನು ಹಿಮ್ಮೆಟ್ಟಿಸಬೇಕಿದೆ. ಆದ್ದರಿಂದ ಇಂದು ಮಹಿಳೆಯು ಊಳಿಗಮಾನ್ಯ ಶೃಂಖಲೆಗಳಿಂದ ಬಿಡಿಸಿಕೊಂಡು, ಪ್ರಜಾತಾಂತ್ರಿಕ ಹಕ್ಕುಗಳನ್ನುಗಳಿಸಿಕೊಳ್ಳುತ್ತಾ, ಬಂಡವಾಳಶಾಹಿ ವ್ಯವಸ್ಥೆಯ ವಿರುದ್ಧ ಪುರಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸಮರ ಸಾರಬೇಕಿದೆ. ಈ ಹೋರಾಟದೊಂದಿಗೆ ಬೆಸೆದುಕೊಳ್ಳುವುದರಲ್ಲೇ ಆಕೆಯ ನಿಜವಾದ ವಿಮುಕ್ತಿ ಅಡಗಿದೆ.

ಈ ಸಂದರ್ಭದಲ್ಲಿ ಮಾರ್ಚ್ 8-ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಎಲ್ಲಾ ರೀತಿಯ ಶೋಷಣೆಗಳಿಂದ ಮುಕ್ತವಾದ ಸಮಾಜವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಮಹಿಳೆಯರು ಸಜ್ಜಾಗುವ ರೀತಿಯಲ್ಲಿ ಆಚರಿಸಬೇಕೆಂದು ಎಐಎಂಎಸ್‍ಎಸ್ ಕರೆ ನೀಡುತ್ತದೆ. ಬನ್ನಿ, ಎಲ್ಲರು ಜೊತೆಗೂಡಿ ದೇಶಲ್ಲಿರುವ ಎಲ್ಲಾ ರೀತಿಯ ತಾರತಮ್ಯದ ವಿರುದ್ಧ, ಅಸತ್ಯ-ಅನ್ಯಾಯದ ವಿರುದ್ಧ ಹೋರಾಟವನ್ನು ಹರಿಬಿಡೋಣ. ನೈಜ ಪ್ರಜಾತಾಂತ್ರಿಕ ಮೌಲ್ಯಗಳನ್ನು ಎಲ್ಲೆಡೆ ಹರಡುತ್ತಾ ಮಹಿಳಾ ದಿನವನ್ನು ಯಶಸ್ವಿಗೊಳಿಸೋಣ !!

ಮಹಿಳಾ ಹೋರಾಟ ಚಿರಾಯುವಾಗಲಿ! ಅಂತರರಾಷ್ಟ್ರೀಯ ಮಹಿಳಾ ದಿನ ಯಶಸ್ವಿಯಾಗಲಿ!

ಬೇಡಿಕೆಗಳು:

1.ಮಹಿಳೆಯರ ಮತ್ತು ಹೆಣ್ಣುಮಕ್ಕಳ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳಿ.
2.ಅತ್ಯಾಚಾರಿಗಳಿಗೆ-ಅಪರಾಧಿಗಳಿಗೆ ನಿದರ್ಶನೀಯ ಶಿಕ್ಷೆನೀಡಿ. ದೌರ್ಜನ್ಯಗಳಿಗೆ ಕೊನೆಹಾಕಿ.
3.ಅಶ್ಲೀಲ ಸಿನಿಮಾ-ಸಾಹಿತ್ಯ-ಜಾಹಿರಾತು-ವೆಬ್‍ಸೈಟ್ ಹಾಗೂ ಮದ್ಯ ಮಾದಕ ವಸ್ತುಗಳನ್ನು ನಿಷೇಧಿಸಿ.
4.ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುಲು ಅನುಮತಿ ನೀಡಿರುವ ಕರಾಳ ‘ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ)ಮಸೂದೆ-2023’ ಹಿಂಪಡೆಯಿರಿ
5.ಶಿಕ್ಷಣ ಮತ್ತು ಆರೋಗ್ಯದ ಖಾಸಗೀಕರಣವನ್ನು ನಿಲ್ಲಿಸಿ. ಎಲ್ಲಾ ಮಹಿಳೆಯರಿಗೆ ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗವನ್ನು ಖಾತ್ರಿಪಡಿಸಿ.
6.ಶಿಕ್ಷಣ ಸಂಸ್ಥೆಗಳಲ್ಲಿ ಜೂಡೋ-ಕರಾಟೆಯಂತಹ ಆತ್ಮರಕ್ಷಣೆಯ ಕೋರ್ಸ್‍ಗಳನ್ನು ಕಡ್ಡಾಯಗೊಳಿಸಿ.
7.ಆಶಾ, ಅಂಗನವಾಡಿ, ಮುಂತಾದ ಅಸಂಘಟಿಕ ಕಾರ್ಮಿಕರಿಗೆ ರೂ.25000 ಕನಿಷ್ಠ ವೇತನ ನಿಗದಿಮಾಡಿ.
8.ಮಹಿಳೆಯರಲ್ಲಿ ಮತ್ತು ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಿ…

ಕಾರ್ಯಕ್ರಮಗಳು :

ವಿವಿಧ ಬದಲಾವಣೆಗಳಲ್ಲಿ
*ಸೂಕ್ತಿ ಹಾಗೂ ಛಾಯಾಚಿತ್ರ ಪ್ರದರ್ಶನ
*ಬೀದಿಬದಿ ಸಭೆಗಳು
*ಸಿನಿಮಾ ಪ್ರದರ್ಶನ
*ಸಾಂಸ್ಕೃತಿಕ ಕಾರ್ಯಕ್ರಮಗಳು
*ಚರ್ಚೆ ಹಾಗೂ ಸಂವಾದಗಳು

“ಒಂದು ಐತಿಹಾಸಿಕ ಯುಗದ ಅಭಿವೃದ್ಧಿಯನ್ನು ಅಲ್ಲಿನ ಮಹಿಳೆಯರು ಸ್ವಾತಂತ್ರ್ಯದತ್ತ ಸಾಗಿರುವ ಪ್ರಗತಿಯ ಪ್ರಮಾಣದಿಂದ ಅಳೆಯಬಹುದು. ಮಹಿಳಾ ವಿಮುಕ್ತಿಯ ಮಟ್ಟವು ಸಮಾಜದ ಸಂಪೂರ್ಣ ವಿಮುಕ್ತಿಯ ನೈಜ ಮಾನದಂಡವನ್ನು ಬಿಂಬಿಸುತ್ತದೆ” –ಕಾರ್ಲ್ ಮಾಕ್ರ್ಸ್


  • ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ
0 0 votes
Article Rating

Leave a Reply

0 Comments
Inline Feedbacks
View all comments
Home
News
Search
All Articles
Videos
About
0
Would love your thoughts, please comment.x
()
x
%d bloggers like this:
Aakruti Kannada

FREE
VIEW