ಇತ್ತ ಹಾಯಲಿ ಚಿತ್ತ ಕೃತಿ ಪರಿಚಯ

ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಲೇಖಕಿ ಕವಿತಾ ಹೆಗಡೆ ಅಭಯಂ ಇವರು ಈಗಾಗಲೇ ಎರಡು ಕವನ ಸಂಕಲನವನ್ನು ಹಾಗೂ ಒಂದು ಪ್ರಬಂಧ ಸಂಕಲನವನ್ನೂ ಪ್ರಕಟಿಸಿದ್ದಾರೆ. ಇದು ಅವರ ಇಂಗ್ಲಿಷ್ ಭಾಷೆಯಲ್ಲಿರುವ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ ೧೦ ಕಥೆಗಳಿರುವ ಸಂಕಲನ. ಈ ಕೃತಿಯ ಕುರಿತು ಮಾಲತಿ ರಾಮಕೃಷ್ಣ ಭಟ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ ತಪ್ಪದೆ ಮುಂದೆ ಓದಿ…

ಕೃತಿ : ಇತ್ತ ಹಾಯಲಿ ಚಿತ್ತ.
ಲೇಖಕರು: ಕವಿತಾ ಹೆಗಡೆ ಅಭಯಂ.
ಪ್ರಕಾಶನ : ವೀರಲೋಕ ಬೆಂಗಳೂರು.
ಮುದ್ರಣದ ವರ್ಷ: ೨೦೨೦.
ಪುಟಗಳು: ೯೨ 
ಬೆಲೆ: ರೂ ೧೧೦

ಈಗ ಇಲ್ಲಿನ ಕೆಲವು ಕಥೆಗಳತ್ತ ಹಾಯಲಿ ನಮ್ಮ ಚಿತ್ತ…

* ನಂಬಲೇನು ನಿನ್ನ?
ಓದದೇ,ಉದ್ಯೋಗ ಮಾಡದೇ ಹೆತ್ತವರಿಗೆ ನೋವು ಕೊಟ್ಟು ಜವಾಬ್ದಾರಿ ಇಲ್ಲದ ಹುಟ್ಟು ಅಲೆಮಾರಿಯಾಗಿ ಓಡಾಡಿ ಕೊಂಡಿದ್ದ ಆತ ‘ ಸಮರ್ಪಣಾ’ ಆಶ್ರಮದಲ್ಲಿ ಕೆಲದಿನಗಳಿಂದ ನೆಲೆಸಿದ್ದ. ಅಲ್ಲಿನ ಗುರೂಜಿ ಹೇಳುವುದು ‘ಬದುಕಿನಲ್ಲಿ ಭರವಸೆ ಮೂಡಿದಾಗ ಅಲ್ಲಿಂದ ದೂರ ಹೊರಟು ಬೇರೆಯವರ ನೋವಿಗೆ ಮದ್ದಾಗ’ ಬೇಕೆಂದು. ಈ ಸ್ವಯಂ ಅನ್ವೇಷಣೆ ಮತ್ತು ಪರರಿಗಾಗಿ ಅರ್ಪಣೆಯ ಪ್ರಯೋಗದಲ್ಲಿ ಒಬ್ಬರ ಆತ್ಮದ ನಾಶ ಹಾಗೂ ಮನಸ್ಸಿನ ಮೇಲೆ ಹತೋಟಿ ಸಾಧಿಸುವುದು ಎಂಬ ವಿಷಯ ಕೇಳಿ ಆತ ಭಯ ಭೀತನಾಗಿದ್ದ. ಅಂತೆಯೇ ಆ ದಿನ ಸಂಮೋಹಿತನಾಗಿ ಕಣ್ಮುಚ್ಚಿ ಕುಳಿತವನ ಸಂದೇಹ ನಿವಾರಣೆಯಾಯಿತೇ?….

*ಇತ್ತ ಹಾಯಲಿ ಚಿತ್ತ.
ವಾಲಿಬಾಲ್ ಮ್ಯಾಚೆಂದು ಊರೂರು ತಿರುಗುವ ಜವಾಬ್ದಾರಿ ಇಲ್ಲದ ಮಗ ಮಂಜನಿಗೆ ಹುಬ್ಬಳ್ಳಿಯ ಗೆಳೆಯ ಅಂಗಡಿ ನೋಡಿ ಕೊಳ್ಳುವ ಕೆಲಸಕ್ಕೆ ಕರೆದಾಗ ತಾಯಿ ಹೋಗಲು ಒತ್ತಾಯಿಸಿ ಕಳಿಸಿದ್ದಳು.

ಅವನು ಒಪ್ಪಿದಾಗ ‘ಮತ್ತೂ ನಾಲ್ಕು ಮೀನಿನ ಹೋಳು ಗಳು ಮಂಜನ ತಾಟಿಗೆ ಬಿದ್ದವು’ ಎಂಬ ವಾಕ್ಯದಲ್ಲಿ ಆ ತಾಯಿಯ ಸಂತೋಷದ ಭಾವ ವ್ಯಕ್ತವಾಗುವ ಬಗೆ ಮತ್ತು ‘ವಾಲಿಬಾಲಿನ ಕನಸನ್ನು ಸೂಟ್ಕೇಸಿನಲ್ಲಿ ಮುಚ್ಚಿಟ್ಟು ಮಂಜ ಅಂಗಡಿಯಲ್ಲಿ ನಿಂತ ‘ ಎಂಬಲ್ಲಿ ಆತನ ನಿರಾಸೆಯನ್ನು ನಾವು ಅರ್ಥ ಮಾಡಿಕೊಳ್ಳ ಬಹುದು. ಮುಂದೆ ಆತ ಹಂತ ಹಂತವಾಗಿ ಬೆಳೆದು ತಾನು ಕೆಲಸ ಮಾಡುತ್ತಿದ್ದ ಅಂಗಡಿಯ ಮಾಲೀಕನಾಗಿದ್ದು, ಅಲ್ಲಿ ಹೇಮಾ ಎಂಬ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆಯಾಗುವ ಯೋಚನೆ, ಮನೆಯಲ್ಲಿ ಹಕ್ಕಿ ಗೂಡು ಕಟ್ಟಿದ್ದರಿಂದಲೇ ‘ಅದೃಷ್ಟ’ ಬಂತೆಂದು ತಿಳಿಯುವ ಅವರ ನಂಬಿಕೆಯನ್ನು ಇಲ್ಲಿ ಕಲಾತ್ಮಕವಾಗಿ ಬರೆದ ರೀತಿ ಮೆಚ್ಚುಗೆಯೆನಿಸಿತು.

*ಸಂಭಾವನೆ ಸುಬ್ಬಿ.
ತಾನು ಅನಾಥೆ, ದಿಕ್ಕಿಲ್ಲದವಳೆಂದು ಹೇಳುತ್ತಾ, ವರ್ಷಕ್ಕೊಮ್ಮೆ ಸುತ್ತ ಮುತ್ತಲಿನ ಹಳ್ಳಿಗಳಿಗೆ ಬಂದು ಸಂಭಾವನೆ ರೂಪದಲ್ಲಿ ಅಷ್ಟಿಷ್ಟು ಪುಡಿಗಾಸು ಒಟ್ಟು ಮಾಡಿಕೊಂಡು ಹೋಗುವ ಸುಬ್ಬಿ ಎಂಬ ಹೆಂಗಸನ್ನು ನೋಡುತ್ತಲೇ ಅವಳು ಬೆಳೆದಿದ್ದಳು. ಒಳ್ಳೇ ಉದ್ಯೋಗ ಸಿಕ್ಕಿದ ಮೇಲೆ ಊರಿಗೆ ಬಂದಾಗ ತಾಯಿಯಲ್ಲಿ ಈಗ ಸುಬ್ಬಿಯ ಸಮಾಚಾರ ಏನೆಂದು ವಿಚಾರಿಸಿ ,ಆಕೆಗೆ ಏನಾದರೂ ಸಹಾಯ ಮಾಡಲು ಆಶಿಸಿದ್ದಳು. ಹಾಗೆ ಹುಡುಕಿಕೊಂಡು ಸುಬ್ಬಿಯ ಮನೆಗೆ ಹೋದಾಗ ತಿಳಿದ ಸತ್ಯವೇನು?…

* ವಿಷವುಂಡವನ ಹೆಂಡತಿ.

ಪ್ರಾರಂಭದಲ್ಲಿ ಆಸ್ಪತ್ರೆಯ ವಾತಾವರಣದಲ್ಲಿ ನರ್ಸ ಹಾಗೂ ರೋಗಿಗಳ ಕಡೆಯ ಜನರ ಮಾತುಕತೆ ಐಸಿಯು ಅಂದರೆ ಯಮಪುರಿಯ ದ್ವಾರ ಎಂದು ಭಾವಿಸಿದವರು, ಒಳ್ಳೆಯ ಸುದ್ದಿ ಬರಬಹುದೆಂದು ಕಾಯುವ ಸಂಬಂಧಿಸಿದ ಜನರ ನಿರೀಕ್ಷೆ ಇವುಗಳನ್ನು ಲೇಖಕಿ ನಿರೂಪಿಸಿದ ರೀತಿ ನಮ್ಮಲ್ಲೂ ಸಮ್ಮಿಶ್ರ ಭಾವಗಳನ್ನು ಒಡ ಮೂಡಿಸುತ್ತದೆ.

‘ಹೂವಿನ ಸೀರೆಯೊಂದು ನೆಟ್ಟಗೆ ಜಿಗಿದು ನಿಂತಿತು’ ಎಂದು ಕಟ್ಟಿಗೆಯಂತೆ ಇರುವ ಮೂಕಿ- ಕಿವುಡಿ ಹೆಣ್ಣೊಬ್ಬಳನ್ನು’ ಕಟ್ಟಿಗೆ ಮತ್ತು ಸೀರೆಗೆ ಅದೆಲ್ಲಿಂದಲೋ ಕೈ ಕಾಲು ಒಡಮೂಡಿ ಜೀವ ಬಂದ ಹಾಗೆ ನೆಟ್ಟಗೆ ನಡೆದು ನರ್ಸ್ ಮುಂದೆ ಎದೆ ಸೆಟೆಸಿ ನಿಂತಿತು’ ಎಂದು ವಿನೋದಮಯ ಜೊತೆಗೆ ಕಾವ್ಯಾತ್ಮಕವಾಗಿ ಬರೆದಿದ್ದಾರೆ.

ಶಿವಾ ಎಂಬ ವ್ಯಕ್ತಿಯೊಬ್ಬ ಹೋಳಿ ಹಬ್ಬದ ದಿನದಂದು ವಿಷ ಕುಡಿದು ಆಸ್ಪತ್ರೆ ಸೇರಿದ್ದ. ಆತನನ್ನು ಅಲ್ಲಿಗೆ ದಾಖಲು ಮಾಡಿದವರ ಮಾನವೀಯತೆಯ ಜೊತೆಗೆ ವಾಚ್ ಮೆನ್ ಶಿವಾ ಎಂಬ ಸಹೃದಯಿಯ ಹಿನ್ನಲೆಯ ಅನಾವರಣವಾಗುತ್ತದೆ. ಅವನು ನಿಜವಾಗಿಯೂ ವಿಷ ವುಂಡನೇ? ಆತನ ಹೆಂಡತಿ ಮಾಯಕ್ಕ, ಮಗ ಅಶೋಕ ಇವರೆಲ್ಲಾ ಶಿವನ ಸ್ವಂತದವರೇ ಹೌದಾ?…. ಎನ್ನುವುದನ್ನು ಕಥೆಯನ್ನು ಓದಿಯೇ ತಿಳಿಯ ಬೇಕು.

ಇಂತಹ ಇನ್ನಷ್ಟು ಚೆಂದದ ಕಥೆಗಳು ಇಲ್ಲಿವೆ. ಇಲ್ಲಿನ ವೈವಿಧ್ಯಮಯ ಕಥೆಗಳಲ್ಲಿ ಕಂಡು ಬರುವ ಕಥೆಗಾರಿಕೆಯ ತಂತ್ರ, ಗಮನ ಸೆಳೆವ ಶೀರ್ಷಿಕೆಗಳು, ನಿರೂಪಣೆ ಮತ್ತು ಲೇಖಕಿ ಅಲ್ಲಲ್ಲಿ ಪ್ರಾದೇಶಿಕ ಆಡು ಭಾಷೆಯನ್ನು ದುಡಿಸಿ ಕೊಂಡ ಬಗೆ ಇವೆಲ್ಲಾ ಮೆಚ್ಚುಗೆಯಾಗುತ್ತದೆ. ನೀವೂ ಓದಿ….

ಮಾಲತಿ ರಾಮಕೃಷ್ಣ ಭಟ್ ಅವರು ಸಾಕಷ್ಟು ಪುಸ್ತಕಗಳನ್ನು ಓದಿ ಓದುಗರಿಗೆ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಅವರು ಮಾಡಿದ ಪುಸ್ತಕಗಳ ಪರಿಚಯ : 


  • ಮಾಲತಿ ರಾಮಕೃಷ್ಣ ಭಟ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW