ಐವಿಎಫ್ ಮಗು : ಸುಮಾ ಮಂಜುನಾಥ್

ಇನ್ ವಿಟ್ರೊ ಫರ್ಟಿಲೈಸೇಶನ್ (IVF) ದಂಪತಿಗಳು ಫಲವತ್ತತೆಯ ಸಮಸ್ಯೆಗಳನ್ನು ನಿವಾರಿಸಲು ಮತ್ತು ಮಗುವನ್ನು ಗರ್ಭಧರಿಸಲು ಸಹಾಯ ಮಾಡುವ ಒಂದು ಸಂಕೀರ್ಣ ವಿಧಾನವಾಗಿದೆ. ಇದೊಂದು ಬಹು ಹಂತಗಳನ್ನು ಹೊಂದಿರುವ ದೀರ್ಘ ಪ್ರಕ್ರಿಯೆಯಾಗಿದೆ. ಇದರ ಕುರಿತು ಸುಮಾ ಮಂಜುನಾಥ್ ಅವರು ಮಾಹಿತಿಯನ್ನು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಐವಿಎಫ್ ಬಂದ ಕೂಡಲೇ ಹೆಣ್ಣು ಮಕ್ಕಳು ಅದನ್ನೇ ಆಯ್ಕೆ ಮಾಡಿ ಕೊಳ್ಳುತ್ತಾರೆ ನಮಗೆ ಮದುವೆ ಸೆಕ್ಸ್ ಇದೆಲ್ಲಾ ಹೇಗೆ ಎಂಬ ಗಂಡಸರ ಹಾಗೂ ಸಂಸ್ಕೃತಿ ಪಾಠ ಮಾಡುತ್ತಿರುವ ಹೆಂಗಸರದ್ದು ಅನವಶ್ಯಕ ಭಯ.

ಮಕ್ಕಳು ಆಗಿಲ್ಲದ ಕಾರಣಕ್ಕೆ ಐವಿಎಫ್ ಒಳಗಾದ ನಿಮ್ಮ ಆತ್ಮೀಯ ಹೆಣ್ಣುಗಳು ಅಕ್ಕ ತಂಗಿ ಇದ್ರೆ ಒಬ್ಬಳೇ ಇದ್ದಾಗ ಹೇಗಿತ್ತು ಅನುಭವ ಕೇಳಿ ಎರಡು ಕಣ್ಣು ಕೂಡಲೇ ಹನಿ ಗೊಳ್ಳುತ್ತಾರೆ. ಅದೇನು ಗಂಡು ಹೆಣ್ಣು ಮಿಲನದ ಹಾಗೆ ಖುಷಿ ನೀಡುವ ಕ್ರಿಯೆಯಲ್ಲ. ಅದೊಂದು ತಾಯಿಯಾಗಲೇ ಬೇಕೆಂಬ ಬಯಕೆಗೆ ಆಕೆ ದಾಟುವ ಅಗ್ನಿ ಪರೀಕ್ಷೆ.

ಮೊಟ್ಟ ಮೊದಲನೆಯದಾಗಿ ಇದು ಆರ್ಥಿಕವಾಗಿ ಹೊರೆ. ದುಡ್ಡು ನೀರಿನಂತೆ ಖರ್ಚಾಗುತ್ತದೆ. ಇದಕ್ಕೆ ಆರ್ಥಿಕವಾಗಿ ಮಾನಸಿಕವಾಗಿ ತಯಾರಾದ ಮೇಲೆ ಮೊದಲು ಆಕೆಗೆ ಗರ್ಭ ಕೋಶ ಸರಿ ಇದೆಯೇ ನೋಡಲು ಲ್ಯಾಪ್ರಸೋಪ್ ಟೆಸ್ಟ್ ಮಾಡಲಾಗುತ್ತದೆ. ಅದೇನು ಸ್ಯಾನಿಂಗ್ ಅಲ್ಲ ಹೊಟ್ಟೆ ಮೇಲೆ ಮೌಸ್ ಆಡಿಸೋ ರೀತಿ ಆಡಿಸಿ ನೋಡೋದಲ್ಲ. ಆಕೆಯ ಯೋನಿ ಮೂಲಕ ಕ್ಯಾಮರ್ ಹಾಗೂ ಕಿಬ್ಬೊಟ್ಟೆಯ ಎರಡು ಕಡೆ ಕೀ ಹೋಲ್ ಮಾಡಿ ಉಪಕರಣ ತೂರಿ ಬಿಟ್ಟು ನೋಡುವ ಪುಟ್ಟ ಪ್ರಕ್ರಿಯೆ ಆದ್ರೂ ಆಕೆಗೆ ಅದು ಬಲು ಹಿಂಸೆ.

ಫೋಟೋ ಕೃಪೆ : ಅಂತರ್ಜಾಲ

ನಂತರ ತೊಂದ್ರೆ ಇಲ್ಲದಿದ್ರೆ ಅಂಡಾಣು ಬಿಡುಗಡೆಗೆ ಮಾತ್ರೆ . ಬಿಡುಗಡೆ ಆಯ್ತಾ ನೋಡಲು ಸ್ಯಾನಿಂಗ್ ಮತ್ತೆ ಮತ್ತೆ ಸ್ಯಾನಿಂಗ್ ಅಂಡಾಣು ಹೊರ ತೆಗೆಯುವಿಕೆ. ಹೆಣ್ಣಿನ ಅಂಡವನ್ನು ತೆಗೆದು ವೀರ್ಯದೊಂದಿಗೆ ಲ್ಯಾಬ್ ನಲ್ಲಿ ಒಂದಾಗಿಸಿ ನಂತರ ಅದನ್ನ ಗರ್ಭ ಕೋಶದ ಒಳಗೆ ಇಡಲಾಗುತ್ತದೆ. ಈ ಅಂಡಾಣು ಗರ್ಭ ಕೋಶದ ಗೋಡೆಗೆ ಅಂಟಿ ಕೊಂಡರೆ ಮಾತ್ರ ಗರ್ಭ ನಿಲ್ಲುತ್ತದೆ ಇಲ್ಲದೆ ಹೋದಲ್ಲಿ ಋತು ಸ್ರಾವವಾಗುತ್ತದೆ. ಮತ್ತೆ ಮುಂದಿನ ತಿಂಗಳು ಇದನ್ನೇ ಪುನರಾವರ್ತನೆ ಮಾಡಿ ಪ್ರಯತ್ನಿಸಬೇಕಾಗುತ್ತದೆ. ಅದಕ್ಕೆ ಪೂರ್ವ ತಯಾರಿ ಎಂದು ಮಾತ್ರೆ ಹಾರ್ಮೋನ್ ಇಂಜೆಕ್ಷನ್ ನೀಡಲಾಗುತ್ತದೆ. ಇವೆಲ್ಲಾ ಸುಲಭದ ಪ್ರಕ್ರಿಯೆಯಲ್ಲ ಮೂಡು ಸ್ವಿಂಗ್ ಇರತ್ತೆ.ಇಷ್ಟಕ್ಕೆ ಆಕೆ ಎಷ್ಟು ಮಾನಸಿಕ ತಯಾರಿ ಇರ್ಬೇಕು. ಆಸ್ಪತ್ರೆಯಲ್ಲಿ ಎಷ್ಟೇ ಘನತೆಯಿಂದ ಡಾಕ್ಟರ್ ನರ್ಸ್ ನಡೆಸಿಕೊಂಡರು ಹೆಣ್ಣಿನ ಸಹಜ ಸಂಕೋಚ ಅವಳನ್ನು ಒಳಒಳಗೆ ಮುಜುಗರದ ಮುದ್ದೆ ಯಾಗಿಸುತ್ತದೆ. ಇಷ್ಟೆಲ್ಲಾ ಆಗಿಯೂ 2/3 ತಿಂಗಳಿಗೆ ಗರ್ಭ ಪಾತ ವಾಗಬಹುದು ಚಿಗುರಿದ ಆಸೆ ಕಮರಿ ಹೋದ ನೋವು ಗಂಡನಿನ ಅನುಭವಕ್ಕೆ ದಕ್ಕದ ವಿಚಾರ. ಇದೆಲ್ಲಾ ಗೊತ್ತಿಲ್ಲದೆ ಪೋಸ್ಟ್ ಮಾಡಿ ಆಶೀಲ ಕಾಮೆಂಟ್ ಹಾಕಿ ವಿಕೃತಿ ಮರೆಯಬೇಡಿ ಪ್ಲೀಸ್

ಮಾನವೀಯತೆ ದೃಷ್ಟಿಯಿಂದನಾದ್ರು ತಾಯಿಯಾಗುವವಳನ್ನು ಆಡಿಕೊಳ್ಳದೆ ಗೌರವಿಸಿ.


  • ಸುಮಾ ಮಂಜುನಾಥ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading