ಹಣಸಿನ ಹಣ್ಣಿನ ಉಪ್ಕರಿ ಮಾಡಲು ಅತ್ಯಂತ ಸರಳ ಮತ್ತು ರುಚಿ. ಹಲಸಿನ ಹಣ್ಣಿನ ಪ್ರಿಯರಿಗೆ ವಸುಧಾ ಪ್ರಭು ಅವರು ಕೈ ಚಳಕದಲ್ಲಿ ಹಣಸಿನ ಹಣ್ಣಿನ ಉಪ್ಕರಿ ಸಿದ್ದ. ಮಾಡಿ ನೋಡಿ, ಅಭಿಪ್ರಾಯ ಹಂಚಿಕೊಳ್ಳಿ…
ಬೇಕಾಗುವ ಸಾಮಗ್ರಿಗಳು :
- ಹಲಸಿನ ಹಣ್ಣು ತೊಳೆ ಒಂದು ಬಟ್ಟಲು
- ಕೆಂಪು ಮಣೆಸಿನ ಕಾಯಿ ಸ್ವಲ್ಪ
- ಕರಿಬೇವು
- ಸಾಸಿಮೆ
- ರುಚಿಗೆ ತಕ್ಕಷ್ಟು
- ಬೆಲ್ಲ ಸ್ವಲ್ಪ

ಮಾಡುವ ವಿಧಾನ :
ಮೊದಲು ಹಲಸಿನ ತೊಳೆಗಳನ್ನು ಚಿಕ್ಕ ತುಂಡುಗಳನ್ನಾಗಿಟ್ಟುಕೊಳ್ಳಬೇಕು. ಸ್ಟೋವ್ ಮೇಲೆ ಬಾಣಲೆಯನ್ನಿಟ್ಟು ಅದರಲ್ಲಿ ಎಣ್ಣೆಯನ್ನು ಹಾಕಿಕಾಯ್ದನಂತರ ಕರಿಬೇವು, ಸಾಸಿವೆ ಮತ್ತು ಒಂದು ಕೆಂಪು ಮೆಣಸಿನ ಕಾಯಿ ಒಗ್ಗರಣೆ ಕೊಡಬೇಕು. ಅನಂತರ ಅದರಲ್ಲಿ ಹೆಚ್ಚಿಟ್ಟ ಹಲಸಿನ ತೊಳೆಗಳನ್ನು ಹಾಕಬೇಕು. ಜೊತೆಗೆ ಉಪ್ಪು, ಸಿಹಿಗೆ ಬೆಲ್ಲ ಸೇರಿಸಿ ಚನ್ನಾಗಿ ಕುದಿಸುವುದು.
- ಕೈ ಚಳಕ : ವಸುಧಾ ಪ್ರಭು
