ಕನ್ನಡದ ಹೆಮ್ಮೆಯ ಕವಿ,ಕತೆಗಾರ ಜಯಂತ ಕಾಯ್ಕಿಣಿ ಯಾರಿಗೆ ಗೊತ್ತಿಲ್ಲ. ಹೃದಯದ ಮಿಡಿತವನ್ನು ಅರಿತು ಅವುಗಳಿಗೆ ಪದಗಳ ರೂಪವನ್ನು ನೀಡಿದ ನಮ್ಮೆಲ್ಲರ ನೆಚ್ಚಿನ ಕವಿ ಇವರು.
ದಕ್ಷಿಣ ಏಷ್ಯಾದ ಸಾಹಿತ್ಯ ಕೃತಿಗಳಿಗೆ ನೀಡುವ ಡಿಎಸ್ ಸಿ ಪುರಸ್ಕಾರಕ್ಕೆ ಜಯಂತ ಕಾಯ್ಕಿಣಿ ಅವರ ಕೃತಿ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದು ನಿಜಕ್ಕೂ ನಮ್ಮೆಲ್ಲರಿಗೂ ಸಂತೋಷ ತಂದಿದೆ.
ಅಂತಿಮ ಸುತ್ತಿನಲ್ಲಿ ಜಯಂತ ಕಾಯ್ಕಿಣಿ ಅವರ ಕೃತಿ ಸೇರಿದಂತೆ ಭಾರತದ ನೀಲ್ ಮುಖರ್ಜಿ, ಸುಜಿತ್ ಸರಾಫ್, ಮನು ಜೋಸೆಫ್ ಮತ್ತು ಪಾಕಿಸ್ತಾನ ಮೂಲದ ಕಮಿಲಾ ಶಾಮ್ ಜಿ, ಮೊಹಸೀನ್ ಹಮೀದ್ ಅವರ ಕೃತಿಗಳು ಕೊನೆಯ ಸುತ್ತಿಗೆ ಆಯ್ಕೆಯಾಗಿವೆ.
ಕನ್ನಡದಿಂದ ಆಯ್ಕೆಯಾದ ಏಕೈಕ ಲೇಖಕ ಜಯಂತ ಕಾಯ್ಕಿಣಿ ಅವರು. ಡಿಎಸ್ ಸಿ ಪುರಸ್ಕಾರ ಇವರ ಕೈ ಸೇರಲಿ ಎನ್ನುವುದು ನಮ್ಮ ಆಕೃತಿ ಕನ್ನಡ ಮತ್ತು ಎಲ್ಲಾ ಕನ್ನಡಿಗರ ಆಶಯ. ಇವರಿಗೆ ಶುಭವಾಗಲಿ…