ಪದ್ಮ ಮಂಜುನಾಥ ವ್ಯಕ್ತಿ ಒಬ್ಬರಾದರು ಇವರಲ್ಲಿನ ಪ್ರತಿಭೆ ಹಲವಾರು. ಬೆಂಗಳೂರಿನಲ್ಲಿ ನೆಲೆಸಿರುವ ಇವರು ತರಕಾರಿ ಕೆತ್ತನೆ, ಬೊಂಬೆ ತಯಾರಿ, ಹಸೆ ಚಿತ್ತಾರ, ಪೇಂಟಿಂಗ್, ಕೊಬ್ಬರಿ ಕೆತ್ತನೆ, ಮದುವೆ ಮತ್ತು ಶುಭ ಸಮಾರಂಭಗಳಲ್ಲಿ ಅಲಂಕಾರಿಕೆ ವಸ್ತುಗಳ ತಯಾರಿಕೆಗಳಲ್ಲಿ ಸಾಕಷ್ಟು ನೈಪುಣ್ಯರಾಗಿದ್ದಾರೆ. ಇವರ ಪ್ರತಿಭೆಯ ಬಗ್ಗೆ ನಮ್ಮ ಆಕೃತಿ ಕನ್ನಡದಲ್ಲಿಈ ಹಿಂದೆ ಸಂದರ್ಶನವನ್ನು ಮಾಡಲಾಗಿತ್ತು.
ಪದ್ಮ ಮಂಜುನಾಥ ಅವರ ಪ್ರತಿಭೆಗೆ ಇನ್ನೊಂದು ಸಾಕ್ಷಿ ಎನ್ನುವಂತೆ ಅವರು ಕಂಚಿ ಸೀರೆಯ ಮೇಲೆ ಕೈಯಲ್ಲಿ ಹೆಣೆದ ಕಸೂತಿಯ ಲಲಿತಾ ಸಹಸ್ರನಾಮವೂ ಒಂದು. ಈ ಸೀರೆಯು ಹದಿನಾರು ಅಡಿಯ ಉದ್ದ ಮತ್ತು ನಾಲ್ಕು ಕಾಲು ಅಡಿಅಗಲವಾಗಿದ್ದು, ಸೀರೆಯ ಮೇಲೆ ಶ್ರೀ ಲಲಿತಾ ಸಹಸ್ರನಾಮ ಸ್ತೋತ್ರವೂ ಸೇರಿದಂತೆ ಶ್ರೀ ಲಲಿತಾಂಬಿಕೆಯು, ಶ್ರೀ ಮಹಾಕಾಳಿ, ಶ್ರೀ ಮಹಾ ಲಕ್ಷ್ಮಿ, ಶ್ರೀ ಮಹಾ ಸರಸ್ವತಿ, ತ್ರಿಮೂರ್ತಿ ಸ್ವರೂಪಳಾದ್ದರಿಂದ, ಅವರ ವಾಹನಗಳಾದ ಸಿಂಹ [೦೮], ಕಮಲ [೦೮], ನವಿಲು [೦೭] ಇವುಗಳನ್ನು ಅಂದವಾಗಿ ಇಲ್ಲಿ ಕಸೂತಿಯನ್ನು ಕೈಯಲ್ಲಿ ಹೆಣೆಯಲಾಗಿದೆ. ಜೊತೆಗೆ ನವರತ್ನ, ಮುತ್ತು ಮತ್ತು ಹವಳಗಳಿಂದ ಅಲಂಕರಿಸಿದ್ದಾರೆ. ಜಗತ್ತಿನಲ್ಲಿಯೇ ಇಂಥ ಉತ್ಕೃಷ್ಟ ಮತ್ತು ವಿಶೇಷ ಸಾಧನೆ ಮಾಡಿದ ಕೀರ್ತಿ ಶ್ರೀಮತಿ ಪದ್ಮ ಮಂಜುನಾಥ್ ಅವರಿಗೆ ಸಲ್ಲುತ್ತದೆ.
ಈ ಸೀರೆಯನ್ನು ಇತ್ತೀಚಿಗೆ ಶೃಂಗೇರಿಯ ಶಾರದಾಂಬೆಗೆ ಪದ್ಮಮಂಜುನಾಥ ದಂಪತಿ ಸಮರ್ಪಿಸಿದರು. ಉಭಯ ಶ್ರೀಗಳ ಸೂಚನೆಯಂತೆ ಅದನ್ನು ಶಾಶ್ವತವಾಗಿ ಗುರುಭವನದಲ್ಲಿ ಇಡಲಾಗಿದೆ.ಶೃಂಗೇರಿ ಶಾರದಾಂಬೆಯ ಸನ್ನಿಧಿಗೆ ಭೇಟಿ ನೀಡಿದಾಗ ಪದ್ಮ ಮಂಜುನಾಥ ಅವರ ಕಂಚಿ ಸೀರೆಯ ಮೇಲಿರುವ ಕಸೂತಿಯ ಲಲಿತ ಸಹಸ್ರನಾಮವನ್ನು ತಪ್ಪದೆ ವೀಕ್ಷಿಸಿ…
ಪದ್ಮ ಮಂಜುನಾಥ ಅವರ ಪ್ರತಿಭೆಯ ಬಗ್ಗೆಇನ್ನಷ್ಟು ತಿಳಿಯೋಣ…ಈ ಲಿಂಕ್ ನ್ನು ಒತ್ತಿ
ಲೇಖನ : ಶಾಲಿನಿ ಪ್ರದೀಪ್