‘ಬಾಯಬಿಡು ನೀ ಹೇಳಿದಂತೆ, ಅಲ್ಲಿರುವೆ ನಾ’…ಪ್ರೇಯಸಿಯ ಮನವನ್ನೊಲೈಸುವ ಪ್ರಯತ್ನದಲ್ಲಿ ಪ್ರೇಮಿಯೊಬ್ಬನ ಕವಿತೆ. ಯುವ ಕವಿ ಖಾದರ್ ಎ. ಕೆ ಅವರು ಬರೆದಿರುವ ಕವನ, ಓದಿ…
ಬಾ ಎಲ್ಲಿರುವೆ ಬಂದು ಬಿಡು
ನಾ ಎಲ್ಲೋ ನೀ ಎಲ್ಲೋ
ಜಗವು ಶೂನ್ಯವು
ಇರುಳಲ್ಲಿ ಹುಡುಕಲಾ ಕತ್ತಲ
ಪರದೆಯಾ ಸರಿಸಲಾ
ಕಣ್ಣಂತ್ತೂ ಕುರುಡಾಗುತ್ತಿರುವುದು
ವಿಮಾನವ ಹಾರಲಾ, ದೋಣಿಯಾ
ದಾಟಲಾ, ಓಡಿ ಬರಲಾ
ಹೇಳಿಬಿಡು ಯಾವುದು ಉಚಿತ
ಚಿನ್ನದ ಗಣಿಬೇಕಾ ಪ್ರೇಮದ
ಮಹಲ್ ಬೇಕಾ ಹೇಳಿಬಿಡು
ಹೃದಯವ ಒತ್ತಿಟ್ಟು ತಂದು ಬಿಡುವೇ
ಕಾಯಿಸದಿರು ನೀ ಇನ್ನೆಚ್ಚು
ಪರ್ವತದ ಮುಕುಟದಲ್ಲಿರುವೆಯಾ
ಭುವಿಯ ತಟದಲ್ಲಿರುವೆಯಾ ಸನ್ನೆಯ
ಮಾಡಿಬಿಡು ಹೇಗೋ ಬಂದು ಬಿಡುವೆ
ದೂರವೋ ಹತ್ತಿರವೋ
ಆಗಸದ ಉತ್ತುಂಗವೋ ಕೋಗೊಮ್ಮೆ
ಮರುಕ್ಷಣ ಸುಳಿದು ಬಿಡುವೆ
ಮಾರು ವೇಷದೀ ಬರಲಾ, ಇಲ್ಲಾ
ಏನಾದರೂ ಮಾರುತಲೀ ಬರಲಾ
ಬಾಯಬಿಡು ನೀ ಹೇಳಿದಂತೆ
ಅಲ್ಲಿರುವೆ ನಾ
ಕೊನೆಯದಾಗಿ ಹೇಳಿಬಿಡುವೆ ನೀ ಕೇಳು
ಕವನವೆಂದು ಕರೆದಿರುವೆ ಸುಮ್ಮನೆ
ಭಂಗ ಮಾಡದಿರು ನನ್ನ ಧ್ಯಾನವಾ
ನೆಮ್ಮದಿಯಿಂದ ನಾ ಇಲ್ಲಿರುವೆ
ಸ್ವಲ್ಪ ದಿನ ನೀ ಅಲ್ಲಿದ್ದು ಬಿಡು
- ಖಾದರ್ ಎ. ಕೆ (ಯುವ ಕವಿ), ಬಳ್ಳಾರಿ