‘ಕಾಡಿಸುತ್ತಿದೆ’ ಕವನ – ಅನಂತ್ ನಾಯಕ್

ಉಲಿದ ಮಾತುಗಳೆಲ್ಲ ಬರಿ ನೆನಪುಗಳಾದವೇ….ಹಲವಾರು ಭರವಸೆಗಳು ಹುಸಿಯಾದವೇ…ಅನಂತ  ನಾಯ್ಕ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಕಾಡಿಸುತ್ತಿದೆ ಮನದಿ ಕುಡಿನೋಟ ನಸುನಗುವು
ಬೇಡುತಿದೆ ನಿನ್ನಿರುವು ಪ್ರತಿ ನಿಮಿಷವೂ|
ಬೀಡಾದ ತನುವೆಲ್ಲ ಕಂಪಿಸುತ್ತಿದೆ ಗೆಳೆಯಾ
ಬಾಡುತಿಹೆ ವಿರಹದಲಿ ಬಳಿ ಬಾರೆಯಾ ||

ಉಲಿದ ಮಾತುಗಳೆಲ್ಲ ಬರಿ ನೆನಪುಗಳಾದವೇ
ಹಲವಾರು ಭರವಸೆಗಳು ಹುಸಿಯಾದವೇ|
ಚೆಲುವ ನಿನ್ನಯ‌‌ ಭಾವ ನಾನೆಂದೂ ಅರಿಯೆನು
ಒಲವ ಧಾರೆಯ ಹರಿಸು ಬಳಿ ಬಂದು‌ ಇನ್ನು ||

ಸನ್ನೆ ಮಾಡುತ ಎನಗೆ ಅಂದು ಕರೆದವ ಬಳಿಗೆ
ಭಿನ್ನ ಮೊಗ ಮಾಡೀಗ‌‌ ನಿಲುವುದೇಕೆ?|
ಕನ್ನ ಹಾಕಿದ ಹೃದಯ ಮಿಡಿಯುತಿದೆ ನಿರುತವು
ಬನ್ನಗೊಳಿಪುದು ಹಿತವೆ? ನಿನಗೇಕೆ ಸೆಡವು ||

ದೂರು ಕೊಡಲೇ? ಜಗದೊಡೆಯ ನೀನಹುದು
ದೂರಾಗಿ ಬಿಡುವೆಯೆಂಬ ಭಯವಿರುವುದು|
ತೋರಿಕೆಯ ಪ್ರೀತಿಯದು ನಿನದಲ್ಲ ಬಲ್ಲೆನು
ಮಾರಜನಕನೆ ಎನ್ನ ಕರಪಿಡೆಯೆ ಕಾದಿಹೆನು ||

ಅಂತರಾಳದಿ ನಿಂತ ತುಂಟ ಗೋಪರ ಗುರುವೆ
ಸಂತತವು ಕಾರುಣ್ಯವನು ಬೇಡುತ್ತಲಿರುವೆ|
ಸಂತಳಲ್ಲವು ಪ್ರಭುವೆ ಭಕ್ತಿ ಮಾಡರಿಯೆನು
ಅನಂತಶಯನನೆ ನೀನು ಎಲ್ಲ ಬಲ್ಲಿದನು‌ ||


  • ಅನಂತ  ನಾಯ್ಕ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW