ಕಾಲದ ಪ್ರೇಯಸಿ

ಡಾ.ಬಂಜಗೆರೆ ಜಯಪ್ರಕಾಶ್ ರವರ ಕಳೆದ ಕಾಲದ ಪ್ರೇಯಸಿಯರ ಎನ್ನುವ ಕವಿತೆಯ ಕುರಿತು ಡಾ. ಕೃಷ್ಣವೇಣಿ. ಆರ್. ಗೌಡ ಅವರ ಲೇಖನವನ್ನು ತಪ್ಪದೆ ಮುಂದೆ ಓದಿ…

ಕವಿ ಹಾಗೂ ಸಾಂಸ್ಕೃತಿಕ ಚಿಂತಕರಾಗಿರುವ ಇವರು ಹುಟ್ಟಿದ್ದು ಜೂನ್ 17, 1965 ರಲ್ಲಿ, ಇವರ ಸ್ವಂತ ಊರು ಚಿತ್ರದುರ್ಗ ಜೆಲ್ಲೆಯ ಬಂಜಗೆರೆ. ಅವರು ಮೂರು ದಶಕಗಳಿಂದ ಜನಪರ ಚಳುವಳಿಯಲ್ಲಿ ಸಕ್ರಿಯರಾಗಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಿಂದ 1987ರಲ್ಲಿ ಎಂ ಎಸ್ ಡಬ್ಲೌ ಮಾಡಿ, 1999 ರಲ್ಲಿ ಕನ್ನಡ ವಿವಿ ಹಂಪಿಯಿಂದ ಡಾಕ್ಟರ್ ಆಫ್ ಲೀಟರೇಚರ್ ಪಡೆದಿದ್ದಾರೆ ಮತ್ತು  ಹಂಪಿ ವಿವಿಯ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಹೀಗೆ ಸುಮ್ಮನೆ ಮನೆಯೊಳು ಅದರಲ್ಲೂ ಬೇಸಿಗೆಯಲ್ಲಿ ತಂಪಾದ ನಗರದ ಕಾಂಕ್ರೀಟ್ ಚಾವಣಿ ಮನವನ್ನು ಕುಲುಕುವಾಗ ಈ ಪುಸ್ತಕದತ್ತ ಕಣ್ಣು ಹಾಯಾಸಿದಾಗ ಇದರೊಳ ಹಲವು ಕವಿತೆಗಳಲ್ಲಿ ಕೆಲವು ಕವಿತೆಗಳು ಅದರಲ್ಲೂ “ ಸತ್ತು ಬದುಕುವ ಹುಡುಗನಿಗೆ ಚರಮ ಗೀತೆ ” ಇದು ಎನಗೆ ತುಂಬಾ ಹಿಡಿಸಿತು.

ಸಾವು ಬೇಕು ಅವನಿಗೆ,
ಸಾವು ಬೇಕು ಅವಮಾನಕ್ಕೆ
ಸಾವು ಬೇಕು ಸಾಯಲೊಲ್ಲದ ನೀತಿಗೆ. 

ಅವರವರ ದೃಷ್ಠಿಕೋನಕ್ಕೆ ಇಂದಿನ ನಗರ ಮಾನ್ಯತೆ ಬಿಸಿಲಿಗೆ ಬಂಜೆಯಾಗಿರುವ

ಪ್ರಕೃತಿಗೆ ಏನೆಂದು ಹೇಳಲಿ
ಹಸು ಕೂಸುಗಳೆಲ್ಲ ಹೊಟ್ಟೆಯ ಒಳಗಡೆನೇ ಎಚ್ ಟು ಓ ಆಮ್ಲಜನಕ
ಮತ್ತು ಜಲಜನಕ ಒದ್ದೆಯಲ್ಲಿ ಒದ್ದಾಡಿ ನಗುತ್ತಿವೆ.
ಹೊರ ಜಗದೊಳು ಬರಿದಾದ ನೆಲದಲ್ಲಿ
ಹೊರಸೂಸುವ ಹೊತ್ತಿಗೆ
ತಂಪೆರೆಯುವ ಗಿಡಮರಗಳು
ಕಣ್ ಮರೆಯಾಗಿ
ಜಗದ ಸದ್ದು ಗದ್ದಲದ ಧೂಳು
ಎಲ್ಲರ ಮನೆಯ ಅಂಗಳದಲ್ಲಿ ರಂಗೋಲೆಯಾಗಿ
ಮಕ್ಕಳು ಪಾದದಿನಿಂದ
ಎಳೆದ ಗೋಲಾಕಾರದ ಮಣ್ಣ ಬಿಂದುವಾಗಿದೆ
ಇಡೀ ಕವಿದೆ
ಸತ್ತ ಜಗತ್ತ ಕಣದಲ್ಲಿ ಬೀಜಗಳು
ಸತ್ತು ಮೊಳಕೆ ಒಡೆದಿವೆ.
ನಗರದ ನೀರೀಕ್ಷೆಯೊಳು
ಸುತ್ತಲೂ ಸಾವಿಗೂ
ಅವಮಾನ ಚಿಕ್ಕಂದಿನ ಹಳ್ಳಿಯಲಿ ಆಡಿದ ಆಟ
ಇಂದು ಬರೀ ಕನಸಳು ಕನಸಾಗಿ
ದೇಶ ದೇಶಗಳ ನಡುವೆ ರಣಕಣಗಳ ಹಾದಿಯಲಿ
ಬಲಿಪಶುವಾದ ಚದುರಿ ಹೋದ ಹಕ್ಕಿಫಿಕ್ಕಿಗಳೇಷ್ಟೋ
ಸತ್ತ ಜಗತ್ತ ಕತ್ತಲೆಯೊಳು
ಅಂಧತನದ ಸಾವನ್ನೇ ಎದುರು ನೋಡುವ ಬದುಕ ಒಡಲುಗಳೆಷ್ಟೋ
ಅನ್ನುವ ನೀರೀಕ್ಷೆಯೋಳು
ಅಂದು ಅವರು ಬರೆದಿರುವ ಕವಿತೆ
ದಶಕಗಳ ಸಾಗುವಿಕೆಯಲ್ಲೂ
ಇಂದಿನ ಅಂಧತೆಯ ನಿಲುವು
ನಗುವಿನ ಒಲುಮೆಯೊಳು
ಕಣ್ಪಟ್ಟಿಕಟ್ಟಿಕೊಂಡು ಕೊಂಕಿನ ನಿರೀಕ್ಷೆ
ಸೀರೆ ಧರಿಸಿದ ಒಡಲು ಆಕ್ರಂಧನದಿ
ಸಿಡಿದೇಳುವ ದೇಹ
ಸತ್ತ ಕಟಕಟೆಯ ಕಂಬಿಯ ಮಧ್ಯೆ
ಸೋತು ಸತ್ತು ಜೋತು ಬಿದ್ದಿದೆ.
ಏಳಿಸಲಾರದ ನೋಟ
ಕೊಂಕ ಮಾತಿನಳು ಸತ್ತ ಅವಮಾನಕ್ಕೆ
ಮತ್ತಷ್ಟು ಸಾಯಿಸುವಗೋಜು
ಒಂದು ವಿಚಿತ್ರ ಸಿಡಿಲು ಬಡಿದ ಮರ
ಮತ್ಯಾವತ್ತು ಫಲ ಕೊಡುವುದಿಲ್ಲ
ಅನ್ನುವ ಹಾಗೆ ಈ ಕವಿತೆ
ನನ್ನ ಆಲೋಚನೆಯೊಳು ಭಾಸವಾಗಿದೆ.

ಸತ್ತು ಬಕುವ ಹುಡುಗನಿಗೆ ಚರ್ಮ ಶ್ಲೋಕ ಒಂದು ವಿಮರ್ಶೆಯ ಬದುಕು- ಸಾವು ಆಗರವಾದರೂ ಚರ್ಮ ಶ್ಲೋಕದ ಅಡಿಯಲ್ಲಿ ಕವಿ ರತ್ನ ಕಾಳಿದಾಸನ ಚಿತ್ರಣದ ದೃಶ್ಯವಳಿಯ ವ್ಯಂಗ್ಯ ನಗೆಯನ್ನು ನಿರ್ದೇಶಕ ಎತ್ತಿ ತೋರಿದ ಹಾಗೆ. ಕಣ್ಮರೆಯಲಿ ಸತ್ತ ವ್ಯಕ್ತಿಯ ದೇಹಕ್ಕೆ ಭೋಜರಾಜ ಭುವಂಗತೇ ಎನ್ನುವ ಶ್ಲೋಕ ನಮ್ಮನ್ನೆಲ್ಲ ಹಿಡಿದಿಟ್ಟ ಚಿತ್ರೀಕರಣ. ಆದರೂ ಎಲ್ಲೋ ಒಂದು ಸಾವನ್ನು ಹೀಗೂ ಎಚ್ಚರಿಸಿ ಬದುಕಿಸಬಹುದೇ? ಎನ್ನುವ ನನ್ನ ಈವತ್ತಿನ ವಾಸ್ತವಿಕ ಪ್ರಶ್ನೆ?…


  • ಡಾ. ಕೃಷ್ಣವೇಣಿ. ಆರ್. ಗೌಡ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading