ಸಂಪ್ರದಾಯಿಕ ಕಳಲೆ ಪದಾರ್ಥ ಈಗಿನ ತಲೆಮಾರಿಗೆ ಇಷ್ಟವಿಲ್ಲ ಯಾಕೆ ? ಅವರಿಗಾಗಿ ಇಲ್ಲಿದೆ ರುಚಿ ರುಚಿ ಕಳಲೆ ಬಿರಿಯಾನಿ ರೆಸಿಪಿ.ತಪ್ಪದೆ ಮುಂದೆ ಓದಿ…
ಬೇಕಾಗುವ ಸಾಮಾನುಗಳು :
ಕಳಲೆ – ಬೇಕಾದಷ್ಟು
ಈರುಳ್ಳಿ -ಒಂದು ಬಟಲು
ಟೋಮೋಟೊ – ಒಂದು ಬಟಲು
ಉಪ್ಪು, ಹಳದಿ ಪುಡಿ – ಸ್ವಲ್ಪ
ಮೊಸರು – ಸ್ವಲ್ಪ
ಕಾರದ ಪುಡಿ – ರುಚಿಗೆ ತಕ್ಕಷ್ಟು
ಶುಂಠಿ ಬೆಳ್ಳುಳ್ಳಿ ಪೇಸ್ಟ್ – ಸ್ವಲ್ಪ
ಕಳಲೆ ಗಟ್ಟಿ ಗಸಿಯ ಪಲ್ಯ ಮತ್ತು ಅಕ್ಕಿ ರೊಟ್ಟಿ ಸಂಪ್ರದಾಯಿಕ ಅಡುಗೆ. ಈ ಸಂಪ್ರದಾಯಿಕ ಕಳಲೆ ಪಲ್ಯ, ಸಾರು ಮತ್ತು ಮಜ್ಜಿಗೆ ಹುಳಿ ಈಗಿನ ಮಕ್ಕಳು ಇಷ್ಟ ಪಡೋದು ಕಮ್ಮಿ… ಅಂತವರಿಗೆ ಇಲ್ಲಿದೆ ‘ಕಳಲೆ ಬಿರಿಯಾನಿ’ ರೆಸಿಪಿ.

ಮಾಡುವ ವಿಧಾನ :
ಸ್ವಲ್ಪ ದೊಡ್ಡ ಸ್ಲೈಸ್ ಆಗಿ ಕತ್ತರಿಸಿದ ಕಳಲೆ ಮೂರು ದಿನ ನೀರಲ್ಲಿ ನೆನಸಿ ಪ್ರತಿ ದಿನ ನೀರು ಬದಲಿಸಿ ಅದರಲ್ಲಿರುವ ನೈಸರ್ಗಿಕ ಟಾಕ್ಸಿನ್ ನಿವಾರಿಸಿ ನಂತರ ಅಡುಗೆಗೆ ಮೊದಲು ಚೆನ್ನಾಗಿ ತೊಳೆದು ಉಪ್ಪು ಮತ್ತು ಹಳದಿ ಪುಡಿ ಹಾಕಿ ಬೇಯಿಸಿಕೊಳ್ಳಿ ನಂತರ ತಣ್ಣಗಾದ ನಂತರ ನೀರು ಬಸಿದು ಇದಕ್ಕೆ ಮೊಸರು, ಕಾರದ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ 10 ನಿಮಿಷ ಮ್ಯಾರಿನೇಟ್ ಮಾಡಿ.

ತುಪ್ಪ ಅಥವಾ ಎಣ್ಣೆಯಲ್ಲಿ ಈರುಳ್ಳಿ/ ಟೋಮೋಟೊ ಹುರಿದು ಅದಕ್ಕೆ ಒಂದು ಕಪ್ ಅಕ್ಕಿ ಹಾಕಿ ಹುರಿಯಿರಿ. ನಂತರ ಮ್ಯಾರಿನೇಟೆಡ್ ಕಳಲೆ ಸೇರಿಸಿ ಹುರಿಯಿರಿ. ನಿಮಗಿಷ್ಟವಾದ ರೀತಿಯ ಬಿರಿಯಾನಿ ಮಸಾಲೆ ತಯಾರಿಸಿ ಸೇರಿಸಿ ಇದಕ್ಕೆ ಎರೆಡು ಕಪ್ಪು ನೀರು ಸೇರಿಸಿ ಮಿಶ್ರ ಮಾಡಿ ಕುಕ್ಕರ್ ನಲ್ಲಿ 2 ವಿಷಲ್ ಮಾಡಿದ ನಂತರ ಸ್ಟವ್ ಆಫ್ ಮಾಡಿ.

ಮೊಸರು ಬಜ್ಜಿಯೊಂದಿಗೆ ಕಳಲೆ ಬಿರಿಯಾನಿಯ ಹೊಸ ರುಚಿ ಈಗಿನ ನವ ಜಮಾನದವರಿಗೂ ಹಾಗೆ ಹಳೇ ಜಮಾನದವರಿಗೂ ಹಿಡಿಸದಿದ್ದರೆ ಹೇಳಿ. ಇವತ್ತು ನಮ್ಮ ಮನೆಯ ಕಳಲೆ ಬಿರಿಯಾನಿ.
- ಅರುಣ ಪ್ರಸಾದ್
