ಕನ್ನಡ ಕಾವ್ಯಲೋಕದ ಮುಕ್ತಕ ಕವಯಿತ್ರಿ ಕಮಲಾ ರಾಜೇಶ್‌

ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಹುಟ್ಟಿಬೆಳೆದ ಕಮಲಾ ರಾಜೇಶ್ ಅವರು, ಹದಿನಾರು ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಅಪಿ೯ಸಿದ್ದಾರೆ, ಅವರ ಸಾಹಿತ್ಯ ಸೇವೆಯ ಕುರಿತು ಕವಿ , ಲೇಖಕ ನಾರಾಯಣಸ್ವಾಮಿ .ವಿ ಅವರು ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…

ಮುಕ್ತಕ ಇದೊಂದು ವಿಶಿಷ್ಟವಾದ ಕಾವ್ಯ ಪ್ರಕಾರ, ಕನ್ನಡ ಸಾಹಿತ್ಯಲೋಕದಲ್ಲಿ ಇತ್ತೀಚೆಗೆ ಸದ್ದು ಮಾಡುತ್ತಿದೆ. ಮುಕ್ತಕ ಕಾವ್ಯ ಪ್ರಕಾರ ಮೊದಲು ಆರಂಭಗೊಂಡಿದ್ದು ಹಿಂದಿ ಭಾಷೆಯಲ್ಲಿ ಅಂತ ಹಲವಾರು ಮಾಹಿತಿಗಳು ಸಿಗುತ್ತವೆ. ಈ ಕಾವ್ಯ ಕನ್ನಡದಲ್ಲಿ ಡಿ ವಿ ಜಿ ಮತ್ತು ಕುಮಾರ ನಿಜಗುಣರವರ ಮೂಲಕ ಕನ್ನಡ ಸಾಹಿತ್ಯಲೋಕದಿಂದ ಆರಂಭವಾಗಿ ಇತ್ತೀಚೆಗೆ ಮುಕ್ತಕ ಕಾವ್ಯ ಪ್ರಕಾರವನ್ನು ಕನ್ನಡದಲ್ಲಿ ಬರೆಯುತ್ತಿರುವವರ ಸಂಖ್ಯೆಯು ಗಣನೀಯವಾಗಿ ಏರುತ್ತಿದೆ…

ಮುಕ್ತಕ ಕಾವ್ಯ ಪ್ರಕಾರ ಒಂದು ವಿಶಿಷ್ಟವಾದ ಕಾವ್ಯ ಪ್ರಕಾರವಾಗಿದ್ದು ಸತತ ಅಧ್ಯಯನ, ಓದು, ಮನನ ಮಾಡಿಕೊಳ್ಳುವಿಕೆಯು ಸಾಧ್ಯವಿಲ್ಲವೆಂದಾದರೆ ಮುಕ್ತಕ ಕಾವ್ಯವನ್ನು ಬರೆಯಲು ಸಾಧ್ಯವಿಲ್ಲ. ಈ ಕಾವ್ಯ ಪ್ರಕಾರಕ್ಕೆ ಹಲವಾರು ನಿಯಮಗಳಿವೆ.. ಆದಿಪ್ರಾಸದಿಂದ ಕೂಡಿದ ಮಾತ್ರಾಗಣ ಆಧಾರಿತ ರಚನೆ ಇದಾಗಿದ್ದು, ನಾಲ್ಕು ಸಾಲುಗಳಲ್ಲಿ ಒಂದು ವಿಷಯ ಪ್ರಸ್ತಾಪಿಸಿ ಕೊನೆಯಲ್ಲಿ ಒಂದು ಸಂದೇಶ ನೀಡುತ್ತದೆ. ಸತತವಾಗಿ ಮುಕ್ತಕಗಳನ್ನು ಅಭ್ಯಾಸಿ, ಮುಕ್ತಕ ಪ್ರಪಂಚದ ಲೋಕದೊಳಗೆ ಕಾಲಿರಿಸಿ ಹಲವಾರು ಮುಕ್ತಕ ಕೃತಿಗಳನ್ನು ಹೊರತಂದು ಕನ್ನಡ ಸಾಹಿತ್ಯಲೋಕದಲ್ಲಿ ಮುಕ್ತಕ ಕವಯಿತ್ರಿಯೆಂದೆ ಗುರುತಿಸಿಕೊಳ್ಳುತ್ತಿರುವವರು ಶ್ರೀಮತಿ ಕಮಲಾ ರಾಜೇಶ್.

ಶ್ರೀಮತಿ ಕಮಲಾ ರಾಜೇಶ್ ರವರು ತುಮಕೂರು ಜಿಲ್ಲೆಯ ತುರುವೇಕೆರೆಯಲ್ಲಿ ಸಿಪಾಯಿ ಶ್ರೀ ರಂಗೇಗೌಡ ಮತ್ತು ಶ್ರೀಮತಿ ಜಯಲಕ್ಷ್ಮಮ್ಮನ ಮಗಳಾಗಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಅಮ್ಮಸಂದ್ರದಲ್ಲಿ ಮುಗಿಸಿದರು ನಂತರದಲ್ಲಿ ಇವರು ತುಮಕೂರಿನಲ್ಲಿ ವಿದ್ಯಾಭ್ಯಾಸ ಮುಂದುವರಿಸಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿಯನ್ನು ಪಡೆದರು.

ಪ್ರಾಥಮಿಕ ಶಿಕ್ಷಣ ಮಾಡುವಾಗಲೇ ಕಥೆ ಕವಿತೆಯನ್ನು ಓದುತ್ತಿದ್ದರು. ಶಾಲೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಬಹುಮಾನವನ್ನು ಪಡೆಯುತ್ತಾ ಶಿಕ್ಷಕರ ಮೆಚ್ಚುಗೆಯನ್ನು ಪಡೆಯುತ್ತಿದ್ದರು.

ಪ್ರೌಢಶಾಲೆಯ ವಿದ್ಯಾಭ್ಯಾಸ ಮಾಡುವಾಗಲೇ ಕುವೆಂಪು ಬೆಂದ್ರೆ, ಡಿ. ವಿ. ಜಿ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ರವರ ಸಾಹಿತ್ಯವನ್ನು ಓದುತ್ತಾ ಸಾಹಿತ್ಯದ ಕಡೆಗೆ ತನ್ನ ಒಲವನ್ನು ಬೆಳೆಸಿಕೊಂಡು, ಕವಿತೆ, ಕವನ, ಚುಟುಕು ಬರೆಯುತ್ತಾ ಸಾಹಿತ್ಯವನ್ನು ಪ್ರವೃತ್ತಿಯಾಗಿ ಬೆಳೆಸಿಕೊಂಡರು.

ಹಲವು ವರುಷಗಳ ನಂತರ ತುಮಕೂರಿನ ಸಾಹಿತಿಯಾದಂತಹ ಶ್ರೀ ರಾಜೇಶ್‌ ರವರೊಂದಿಗೆ ದಾಂಪತ್ಯ ಜೀವಕ್ಕೆ ಕಾಲಿರಿಸಿದ ಇವರು ಇಬ್ಬರು ಮಕ್ಕಳ ತಾಯಿಯಾಗಿ, ಗೃಹಿಣಿಯಾಗಿ ತಮ್ಮ ಸುಂದರ ಬದುಕನ್ನು ಮುಂದುವರಿಸಿದರು, ತಮ್ಮ ಪತಿಯೂ ಕೂಡ ಸಾಹಿತಿಯಾಗಿದ್ದರಿಂದ ಅವರ ಪ್ರೋತ್ಸಾಹದಿಂದ ಹಳೆಯ ತಮ್ಮ ಹವ್ಯಾಸವಾಗಿದ್ದ ಸಾಹಿತ್ಯದ ಬರವಣಿಗೆಯ ಕಡೆಗೆ ಮತ್ತೆ ಮರಳಿದರು.

 

ಸಾಹಿತ್ಯಲೋಕದ ಕಡೆಗೆ ಮತ್ತೆ ಒಲವು ಬೆಳೆಸಿಕೊಂಡ ಶ್ರೀಮತಿ ಕಮಲಾ ರಾಜೇಶ್ ರವರು ಹಲವಾರು ವಿಧದ ಸಾಹಿತ್ಯ ಪ್ರಕಾರಗಳಲ್ಲಿ ಬರಹವನ್ನು ಬರೆಯುತ್ತಾ “ಕಾತಿ೯ಕ ದೀಪ” ಎಂಬ ಕವನಸಂಕಲನವನ್ನು ಹೊರ ತಂದರಾದರೂ, ಮನಸ್ಸು ಯಾಕೋ ಛಂಧೋಬದ್ದ ಕಾವ್ಯ ರಚನೆಯನ್ನು ಮಾಡಬೇಕೆಂದು ಯೋಚಿಸುತ್ತಿತ್ತು. ಆಗ ಮೈಸೂರಿನ ಹಿರಿಯ ಮುಕ್ತಕ ಕವಿಗಳಾದ ಶ್ರೀ ಎಂ ಮುತ್ತುಸ್ವಾಮಿರವರ ಮಾಗ೯ದಶ೯ನದಲ್ಲಿ ಮುಕ್ತಕ ಕಾವ್ಯವನ್ನು ಬರೆಯುವುದು ಕರಗತ ಮಾಡಿಕೊಂಡು ಮುಕ್ತಕ, ರಗಳೆ, ತ್ರಿಪದಿ, ದ್ವಿಪದಿಗಳಂತಹ ಛಂದೋಬದ್ದ ಕಾವ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದುವರೆಗೂ ಸುಮಾರು ಹದಿನಾರು ಕೃತಿಗಳನ್ನು ಕನ್ನಡ ಸಾಹಿತ್ಯಲೋಕಕ್ಕೆ ಅಪಿ೯ಸಿರುವ ಇವರ ಕೃತಿಗಳೆಂದರೆ. ಕಾತಿ೯ಕ ಮಾಸ ಕವನಸಂಕಲನ, ಮುಕ್ತಕ ಮಾಲ, ಮುಕ್ತಕ ಮಾನಸ, ಶ್ರೀನಿವಾಸ ಕಲ್ಯಾಣ, ವಚನ ರಾಮಾಯಣ, ವಚನ ಭಾಗವತ, ಅಂಬರದ ಹಕ್ಕಿಗಳು, ಕನಕ ಚರಿತ್ರೆ, ಕೃಷ್ಣ ಚರಿತ್ರೆ, ಕಮಲದೊಳಗಿನ ಮುತ್ತು, ಮುಕ್ತಕ ಪಂಚ ಸಹಸ್ರ, ಮೈಸೂರು ಮಹಾರಾಜರ ಚರಿತ್ರೆ, ಪಂಚ ಮುಕ್ತಕ ಹಾರ, ಪಂಚಾಮೃತ ಖಂಡಕಾವ್ಯ, ಸಮಸ್ಸಾಪೂಣ೯ ಮುಕ್ತಕಗಳು, ಮುಕ್ತಕ ಚೂಡಮಣಿ, ಮುಕ್ತಕ ಪಂಚವಟಿ,
ಪಂಚ ಪುಪ್ಪಕ ಮಾಲೆ, ಕಮಲ ಪುಪ್ಪಗಳು, ಪಂಚ ಮುಕ್ತಕ ರತ್ನಗಳು, ಮುಕ್ತಕ ಗೀತಾಂಜಲಿ ಮುಂತಾದ ಕೃತಿಗಳನ್ನು ಹೊರತಂದು ಲೋಕಾರ್ಪಣೆ ಮಾಡಿ ಕನ್ನಡ ಸಾಹಿತ್ಯಲೋಕದಲ್ಲಿ ಹಿರಿಯ ಕವಯಿತ್ರಿಯೆಂದು ಗುರುತಿಸಿಕೊಂಡಿದ್ದಾರೆ.

ಇವರು ಬರೆದ ” ಮುಕ್ತಕ ಪಂಚ ಸಹಸ್ರಿ” ಎಂಬ ಐದು ಸಾವಿರ ದ್ವಿಪದಿ ಮುಕ್ತಕಗಳ ಕೃತಿಯು ಮುಕ್ತಕ ಸಾಹಿತ್ಯಲೋಕದಲ್ಲಿ ಇವರ ಪ್ರತಿಭೆಯನ್ನು ಅನಾವರಣಗೊಳಿಸಿ ಕೀತಿ೯ಯನ್ನು ತಂದುಕೊಟ್ಟಿದೆ. ಇವರು ರಚಿಸಿರುವ ಒಂದು ಸಾವಿರದ ಒಂದು ನೂರು ಹನ್ನೊಂದು ಪುಟಗಳ ಬೃಹತ್ ಚೌಪದಿ ಗ್ರಂಥ ಮುಕ್ತಕ ಸಾಹಿತ್ಯಲೋಕದಲ್ಲಿ ದಾಖಲೆಯನ್ನು ನಿಮಿ೯ಸುವ ಗ್ರಂಥವಾಗಿದೆ.

ಶ್ರೀಮತಿ ಕಮಲಾ ರಾಜೇಶ್ ರವರು ಬರೀ ಸಾಹಿತ್ಯ ಸಂಘಟನೆಗೆ ತಮ್ಮನ್ನು ಸೀಮಿತಗೊಳಸಿಕೊಳ್ಳದೇ ಮಾತೃ ಸೇವಾ ಚಾರಿಬಲ್ ಟ್ರಸ್ಟ್ ನ್ನು ಸ್ಥಾಪಿಸಿಕೊಂಡು ಅದರ ಅಧ್ಯಕ್ಷೆಯಾಗಿ ಬಡ ವಿಧ್ಯಾರ್ಥಿಗಳಿಗೆ ಬಡಜನರಿಗೆ ಸಹಾಯ ಮಾಡುತ್ತಾ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ಕೂಡ ತೊಡಗಿಸಿಕೊಂಡು ನಿಸ್ವಾರ್ಥದ ಸೇವೆಯನ್ನು ಮಾಡುತ್ತಿದ್ದಾರೆ. ಮತ್ತು ಇವರು ಹಲವಾರು ಸಂಘಸಂಸ್ಥೆಗಳಲ್ಲೂ ಕೂಡ ತಮ್ಮನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಸ್ವಂದನ ಸಿರಿ ವೇದಿಕೆಯ ತುಮಕೂರು ಜಿಲ್ಲಾ ಅಧ್ಯಕ್ಷರಾಗಿ, ಕನಾ೯ಟಕ ರಾಜ್ಯ ಮುಕ್ತಕ ಕವಿ ಪರಿಷತ್ತಿನ ತುಮಕೂರು ಜಿಲ್ಲಾ ಶಾಖೆಯ ಅಧ್ಯಕ್ಷೆಯಾಗಿ, ಮುದ್ದು ಕೃಷ್ಣ ಪ್ರಕಾಶನದ ಕಾರ್ಯದರ್ಶಿಯಾಗಿ, ಮುಕ್ತಕ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿಯೂ ಕೂಡ ಇವರು ಕಾರ್ಯವನ್ನು ನಿವ೯ಹಿಸುತ್ತಿದ್ದಾರೆ.

ಇವರ ಬರವಣಿಗೆ ಸಾಹಿತ್ಯ ಮತ್ತು ಸಮಾಜ ಸೇವೆಯನ್ನು ಗುರುತಿಸಿದ ರಾಜ್ಯಮಟ್ಟದ ಹಲವಾರು ಸಂಘಸಂಸ್ಥೆಗಳು ಇವರನ್ನು ಗೌರವಿಸಿ ಸನ್ಮಾನಿಸಿವೆ. ಮೈಸೂರಿನ ಮುಕ್ತಕ ಸಾಹಿತ್ಯ ಆಕಾಡೆಮಿಯು ಇವರಿಗೆ ಸಂಸ್ಥೆಯ ಪ್ರತಿಷ್ಠಿತ ಪುರಸ್ಕಾರ ಡಿ ವಿ ಜಿ ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಹಿಮಾಲಯ ಫೌಂಡೇಶನ್ ಸಾಧನಶ್ರೀಯೆಂಬ ಪ್ರಶಸ್ತಿಯನ್ನು, ಬೆಂಗಳೂರಿನ ಬುದ್ದ ಬಸವ ಗಾಂಧಿ ಟ್ರಸ್ಟ್ ನವರು ಅನಿಕೇತನ ಪ್ರಶಸ್ತಿಯನ್ನು, ಸಿರಿಗನ್ನಡ ವೇದಿಕೆಯಿಂದ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಿ ಗೌರವಿಸಿವೆ.

ಶ್ರೀಮತಿ ಕಮಲಾ ರಾಜೇಶ್ ರವರ ಸಾಹಿತ್ಯದ ಸೇವೆಗಾಗಿ ಮುಕ್ತಕ ಸಾಹಿತ್ಯ ಸೇವಾ ಪ್ರಶಸ್ತಿ, ವಿದ್ಯಾರಣ್ಯ ಪ್ರಶಸ್ತಿ, ಕಾಯಕ ರತ್ನ ಪ್ರಶಸ್ತಿ, ವಿಶ್ವ ಕನ್ನಡ ಸಿದ್ದಗಂಗಾ ಪ್ರಶಸ್ತಿ, ಮುದ್ದು ಕೃಷ್ಣ ಸೇವಾ ಪ್ರಶಸ್ತಿ, ಕಮಲಾಂಬೆ ಸೇವಾ ಪ್ರಶಸ್ತಿ, ಸಾಹಿತ್ಯ ಸೇವಾರತ್ನ ಪ್ರಶಸ್ತಿ, ಶ್ರಾವಣ ಸಿರಿ, ನಿಜಗುಣ ಸೇವಾ ಪ್ರಶಸ್ತಿ, ಕುಮಾರ ನಿಜಗುಣ ಸೇವಾ ಪ್ರಶಸ್ತಿ, ಕಿತ್ತೂರು ರಾಣಿ ಸೇವಾ ಪ್ರಶಸ್ತಿ, ಆಭಿರುಚಿ ಸಾಧನಾ ಶ್ರೀ ಪ್ರಶಸ್ತಿ, ನಾಡ ಧ್ವನಿ ಕಾಯಕ ರತ್ನ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ , ಆಕ್ಕ ಪ್ರಶಸ್ತಿ, ವಿದ್ಯಾಶ್ರೀ ಸೇವಾರತ್ನ ಪ್ರಶಸ್ತಿ, ಮುಕ್ತಕ ರತ್ನ ಪ್ರಶಸ್ತಿ ಇನ್ನೂ ಹಲವಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ.

ಶ್ರೀಮತಿ ಕಮಲಾ ರಾಜೇಶ್ ರವರು ರಾಜ್ಯಮಟ್ಟದ ಹಲವಾರು ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ. ಹಲವಾರು ಕಾರ್ಯಕ್ರಮಗಳ ಉದ್ಘಾಟಕಿಯಾಗಿ, ಹಲವಾರು ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡು ಕಾರ್ಯಕ್ರಮಗಳನ್ನು ಯಶಸ್ವಿಗೊಳಿಸಿದ್ದಾರೆ.

ಇವರು ಹೀಗೆಯೇ ಸಾಮಾಜಿಕ ಸೇವೆಯನ್ನು ಮಾಡುತ್ತಾ, ಬಡವರು ಶೋಷಿತರಿಗೆ ನೆರವಾಗುತ್ತಾ, ಸಾಹಿತ್ಯದ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡು ಇನ್ನಷ್ಟು ಗೌರವ ಪುರಸ್ಕಾರಗಳು ಲಭಿಸಲಿ ಎಂದು ಪತ್ರಿಕೆಯ ಪರವಾಗಿ ವೈಯಕ್ತಿಕವಾಗಿ ಹಾರೈಸುತ್ತೇನೆ.

ಹಿಂದಿನ ಸಂಚಿಕೆಗಳು :


  • ನಾರಾಯಣಸ್ವಾಮಿ .ವಿ – ವಕೀಲರು ಮತ್ತು ಲೇಖಕರು, ಮಾಸ್ತಿ ಕೋಲಾರ ಜಿಲ್ಲೆ.

0 0 votes
Article Rating

Leave a Reply

1 Comment
Inline Feedbacks
View all comments

[…] ಕನ್ನಡ ಕಾವ್ಯಲೋಕದ ಮುಕ್ತಕ ಕವಯಿತ್ರಿ ಕಮಲಾ… […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW