‘ಒಲವುಗಳ ಪರಿಚಯವ ಪರಿಚಿಸಿದ ಪರಿಚಿತಳೆ, ಕೂಗುವ ಮುನ್ನವೆ ಹೀಗೇಕೆ ದೂರವಾದೆ’…ವಿಕಾಸ್. ಫ್. ಮಡಿವಾಳರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ, ತಪ್ಪದೆ ಮುಂದೆ ಓದಿ…
ಕಣ್ಣ ಹನಿಗೆತಕೆ ಮಾತು ಬೇಕಾಗಿದೆ
ಸಣ್ಣ ಹನಿಯೊಂದಿಗೆ ಮನಸು ಮುದ್ದಾಡಿದೆ
ಪ್ರೀತಿಯ ಒಲವದು ಉತ್ತರ ಹುಡುಕೆಂದಿದೆ
ಹುಡುಕುವ ಮುನ್ನವೆ ನೀನೆಲ್ಲಿ ಮರೆಯಾದೆ
ಒಲವುಗಳ ಪರಿಚಯವ ಪರಿಚಿಸಿದ ಪರಿಚಿತಳೆ
ಕೂಗುವ ಮುನ್ನವೆ ಹೀಗೇಕೆ ದೂರವಾದೆ
ನನ್ನೆದೆಯ ಗಾಯಗಳು ಮಾಸುವ ಹೊತ್ತಿಗೆ
ಮರೆಯುವ ಮುನ್ನವೆ ಮತ್ತೇಕೆ ನೆನಪಾದೆ
ಒಂದು ಸಾರಿ ತಿರುಗಿ ನೋಡು,
ನೋಡುವಾಸೆ ನಿನ್ನ ನಗುವನ್ನು.
ಬಿಟ್ಟು ಹೋದರೆ ಹೀಗೆ ನೀನು
ಕರೆಯಲಿ ನಾ ಯಾರನ್ನು
ಏಕಾಂತವು ಸೋತಂತಿದೆ ಮರೆಮಾಚುತ ಭಾವುಕತೆ.
ನೋವಿನಲ್ಲಿ ಈ ಪಯಣವು
ಇರಲಿ ಅಳುವು ನನ್ನ ಜೊತೆ
ಕಣ್ಣಹನಿಗೆತಕೆ ಮಾತು ಬೇಕಾಗಿದೆ
ಕ್ಷಮೆಯಿಲ್ಲದ ಈ ಹೃದಯಕೆ ಏಕೆ ನಿನ್ನ ನೆನಪುಗಳು.
ನಿನ್ನ ಖುಷಿಯನ್ನು ಕಸಿದುಕೊಳ್ಳಲು
ನಾ ಯಾರು ನೀನೆ ಹೇಳು
ಸಂತಾಪಕು ಸುಖವೊಂದಿದೆ ಯಾರು ಬಲ್ಲರು ಆ ಸವಿಯನ್ನು
ಕೊನೆಯಿಲ್ಲದ ಕಣ್ಣೀರಿಗೆ ಹೇಗೆ ಕೊಡಲಿ ನಾ ಮಾತನ್ನು
ಕಣ್ಣಹನಿಗೆತಕೆ ಮಾತು ಬೇಕಾಗಿದೆ…#
- ವಿಕಾಸ್. ಫ್. ಮಡಿವಾಳರ – ಯುವ ಲೇಖಕ