ಕನ್ನಡ ಕಲ್ಪತರು..! – ಎ.ಎನ್.ರಮೇಶ್. ಗುಬ್ಬಿ




“ಕನ್ನಡಗುಡಿ ನಮ್ಮ ತವರು.. ಕನ್ನಡನುಡಿ ನಮ್ಮುಸಿರು..”

“ಈ ನಾಡು ನಮ್ಮ ಹೆಮ್ಮೆಯೂ ಹೌದು. ನಮ್ಮ ಗರ್ವವೂ ಹೌದು. ಈ ಭಾಷೆ ನಮ್ಮ ಧರ್ಮವೂ ಹೌದು. ನಮ್ಮ ಸರ್ವವೂ ಹೌದು. ಸಮಸ್ತ ಕನ್ನಡ ಹೃದಯಗಳಿಗೂ, ಸಕಲ ಅಕ್ಷರ ಬಂಧುಗಳಿಗೂ, ೬೬ ನೆಯ ಕರ್ನಾಟಕ ರಾಜ್ಯೋತ್ಸವದ ನಲ್ಮೆಯ, ಒಲ್ಮೆಯ ಹಾರ್ದಿಕ ಶುಭಕಾಮನೆಗಳು. ಈ ಸಂಭ್ರಮಕ್ಕೆ ಸವಿ ಸವಿ ಕನ್ನಡ ಕವಿತೆ ಒಪ್ಪಿಸಿಕೊಳ್ಳಿ.” – ಪ್ರೀತಿಯಿಂದ ಎ.ಎನ್.ರಮೇಶ್.ಗುಬ್ಬಿ.

ಕನ್ನಡ ಕಲ್ಪತರು..!

ಈ ಕನ್ನಡ ಗುಡಿಯಲಿ ಜನಿಸಿದ
ಜೀವಿಸುವ ಪುಣ್ಯ ನಮ್ಮದು.!
ಹುಟ್ಟಿದವರಷ್ಟೇ ನೆಲೆಸಿದವರಷ್ಟೇ
ಬಲ್ಲರು ಕರುನಾಡಿನ ಸೌಂದರ್ಯ!

ಈ ಕನ್ನಡನುಡಿ ನುಡಿವ ಕೇಳುವ
ಸವಿಯುವ ಸೌಭಾಗ್ಯ ನಮ್ಮದು.!
ಆಡಿದವರಷ್ಟೇ ಆಲಿಸಿದವರಷ್ಟೇ
ಬಲ್ಲರು ಕನ್ನಡಭಾಷೆ ಮಾಧುರ್ಯ!

ಈ ಕನ್ನಡ ತಾಯಿಯ ಪೂಜಿಸುವ
ಪಾಡುವ ಧನ್ಯತೆಯು ನಮ್ಮದು.!
ಆರಾಧಿಸಿ ಅನುಭಾವಿಸಿದವರಷ್ಟೇ
ಬಲ್ಲರು ಕನ್ನಡಾಂಬೆ ಔದಾರ್ಯ.!

ಈ ಕನ್ನಡ ಕೀರ್ತಿಬಾವುಟ ಏರಿಸುವ
ಹಾರಿಸುವ ಸುಕೃತವು ನಮ್ಮದು.!
ಹಿಡಿದು ಬಾನೆತ್ತರ ಹಾರಿಸಿದವರಷ್ಟೇ
ಬಲ್ಲರು ಕನ್ನಡಾಭಿಮಾನ ಕೈಂಕರ್ಯ.!

ಕನ್ನಡವೆಂಬುದು ಬರಿಯ ಭಾಷೆ
ನಾಡು-ನುಡಿಯಷ್ಟೇ ಅಲ್ಲ ನಮಗೆ.!
ನಮ್ಮ ಹೃದಯಗಳ ನಿತ್ಯದುಸಿರು.!
ಧಮನಿ ಧಮನಿಗಳ ಹರಿವ ನೆತ್ತರು.!

ಕರ್ನಾಟಕವೆಂದರೆ ಬರೀ ನಮ್ಮಯ
ಜನ್ಮಭೂಮಿಯಷ್ಟೇ ಅಲ್ಲ ನಮಗೆ
ಬದುಕು ಬೆಳಕು ನೀಡಿದ ದೇವರು.!
ಜೀವ-ಭಾವಗಳ ಪೊರೆವ ಕಲ್ಪತರು.!!


  • ಎ.ಎನ್.ರಮೇಶ್. ಗುಬ್ಬಿ (ಲೇಖಕರು, ಕವಿಗಳು), ಕೈಗಾ

0 0 votes
Article Rating

Leave a Reply

1 Comment
Inline Feedbacks
View all comments

[…] ಹೂಬಳ್ಳಿ ಸುಡಬೇಕಿದೆ ನಾನು.. ಬೂದಿ ಮಾಡುವ #ಬೆಂಕಿ ಎಲ್ಲಿದೆ […]

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

1
0
Would love your thoughts, please comment.x
()
x
Aakruti Kannada

FREE
VIEW