ಇದು ಕಾಶಿಯಲ್ಲಿ ವಿಶ್ವನಾಥನ ಲಿಂಗ ಪ್ರತಿಷ್ಠಾಪನೆ ಆಗುವ ಮೊದಲೇ, ಈ ಶ್ರೀ ಚಕ್ರ ಲಿಂಗೇಶ್ವರ ಲಿಂಗ ಪ್ರತಿಷ್ಠಾಪನೆ ಆಗಿತ್ತು. ಇತಿಹಾಸದ ಪ್ರಕಾರ ಪಾಂಡವರು ಪ್ರತಿಷ್ಠಾಪಸಿ ಪೂಜಿಸಿದ ಶಿವ ಲಿಂಗವಿದು ಮತ್ತು ಶ್ರೀ ಶಂಕರಾಚಾರ್ಯರಿಂದ ಜೀರ್ಣೋದ್ಧಾರ ವಾದ ಶಿವ ಲಿಂಗವಿದು. ಶಂಕುಂತಲಾ ಸವಿ ಅವರ ಲೇಖನಿಯಲ್ಲಿ ಮೂಡಿ ಬಂದ ಈ ಲೇಖನವನ್ನು ತಪ್ಪದೆ ಓದಿ…
ಈ ಶಿವ ಲಿಂಗದ ವಿಶೇಷವೆಂದರೆ, ಶಿವ ಲಿಂಗದ ತಲೆಯ ಮೇಲೆ ಶ್ರೀ ಚಕ್ರವನ್ನು ಕೆತ್ತಲಾಗಿದೆ ಇದು ಶಿವ ಶಕ್ತಿಯರ ಸಮ್ಮಿಲನ ಪ್ರತಿವಾಗಿದೆ, ಅತ್ಯಂತ ಶಕ್ತಿಯುತ್ತ ತರಂಗಗಳನ್ನು ಹೊರ ಸುಸುವ ಶಿವ ಶಕ್ತಿಯರ ಲಿಂಗವಿದು, ದರ್ಶನ ಮಾತ್ರದಿಂದಲೇ ಸರ್ವ ಕಷ್ಟಗಳನ್ನು ಪರಿಹರಿಸಿ ಕೊಳ್ಳಬಹುದು, ವಿಪರ್ಯಾಸ ವೇನೆಂದರೆ ಕಾಶಿ ಜನರ ಮನೆಗಳ ಒತ್ತಡದಿಂದ ಈ ದೇವಾಲಯ ಹೊರ ಜಗತ್ತಿಗೆ ದೂರವಾಗಿ ಪಾಳು ಬಿದ್ದಿತ್ತು.
ಒಮ್ಮೆ ಕಂಚಿಯ ಕಾಮಕೋಟಿ ಪೀಠದ ಮಹಾ ಪೆರಿಯಾರ್ ಶ್ರೀ ಶ್ರೀ ಚಂದ್ರಶೇಖರ ಸರಸ್ವತಿಯವರ, ಕನಸಿನಲ್ಲಿ ಜಗನ್ಮಾತೆ ಪ್ರಸನ್ನಳಾಗಿ ವಾರಾಣಸಿಯಲ್ಲಿ ಪಾಳು ಬಿದ್ದಿರುವ,ಈ ದೇವಾಲಯದ ಬಗ್ಗೆ ತಿಳಿಸುತ್ತಾಳೆ.
1936 ಕಾಲದಲ್ಲಿ ಶ್ರೀ ಶ್ರೀ ಚಂದ್ರಶೇಖರ ಸರಸ್ವತಿಯವರು, ಕಾಶಿಗೆ ಪಾದಯಾತ್ರೆ ಬರುತ್ತಾರೆ, ಆಗ ಗಂಗಾ ತೀರದ ಹನುಮಾನ್ ಘಾಟಿಯ ಚಿಕ್ಕ ಗಲ್ಲಿಯ ಒಳಗೆ ಇರುವ, ಈ ಶ್ರೀ ಚಕ್ರ ಲಿಂಗೇಶ್ವರ ದೇವಾಲಯವನ್ನು ಗುರುತಿಸುತ್ತಾರೆ, ಮತ್ತೆ ಅದನ್ನು ಜೀರ್ಣೋದ್ಧಾರ ಮಾಡುತ್ತಾರೆ,ಅಂದಿನಿಂದ ಕಂಚಿಯ ಕಾಮಕೋಟಿ ಪೀಠವು ಇದರ ಎಲ್ಲಾ ಕೈಕಾರ್ಯವನ್ನು ನಡೆಸುಕೊಂಡು ಬರುತ್ತಿದೆ.
ನೀವು ಕಾಶಿಗೆ ಹೋದರೆ ಈ ಶ್ರೀ ಚಕ್ರ ಲಿಂಗೇಶ್ವರ ದೇವಾಲಯವನ್ನು ದರ್ಶಿಸಿ, ಶಿವ ಶಕ್ತಿಯರ ಕೃಪೆಗೆ ಪಾತ್ರರಾಗಿ ಎಂದು ಹೇಳುತ್ತೇನೆ.
- ಶಂಕುಂತಲಾ ಸವಿ