ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಬೆಂಗಳೂರು ಪ್ರಾದೇಶಿಕ ಕೇಂದ್ರವು ತಿಂಗಳ ಕಾರ್ಯಕ್ರಮ ಆಯೋಜನೆಯಡಿ ಮೊದಲ ಬಾರಿಗೆ ಕಾವ್ಯ-ಗೀತ-ಕುಂಚ ಕಾರ್ಯಕ್ರಮವನ್ನು ಆಯೋಜಿಸಿದೆ. ಕಾರ್ಯಕ್ರಮದ ವಿವರವನ್ನು ತಪ್ಪದೆ ಮುಂದೆ ಓದಿ…
ದಿನಾಂಕ : ಫೆಬ್ರುವರಿ ೪, ೨೦೨೩
ಸ್ಥಳ : ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಬಯಲು ರಂಗಮಂದಿರ, ಮಲ್ಲತ್ತಹಳ್ಳಿ, ಕಲಾಗ್ರಾಮ. ಬೆಂಗಳೂರು
ಸಮಯ : ಶನಿವಾರ ಸಂಜೆ ೫ ಗಂಟೆ
ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ ಬೆಂಗಳೂರು ಪ್ರಾದೇಶಿಕ ಕೇಂದ್ರವು ತಿಂಗಳ ಕಾರ್ಯಕ್ರಮದಲ್ಲಿ ನಾಡಿನ ಹಿರಿಯ ಸುಪ್ರಸಿದ್ದ ಕಥೆಗಾರ, ವಿಮರ್ಶಕರಾದ ಶ್ರೀ ಎಸ್. ದಿವಾಕರ್ ಅವರು ಕಾವ್ಯ ಕುರಿತು ವಿಚಾರ ಮಂಡಿಸಲಿದ್ದಾರೆ. ಮತ್ತು ಹಲವು ಕವನಗಳನ್ನು ನಾಡಿನ ಹಿರಿಯ ಗಾಯಕಿ ನಾಗಚಂದ್ರಿಕಾ ಭಟ್ ಹಾಡಲಿದ್ದಾರೆ, ಕಾವ್ಯ ದೃಶ್ಯರೂಪ ಗ್ರಹಿಕೆಯನ್ನು ವಿಭಾಗೀಯ ನಿರ್ದೇಶಕರು ಡಿ.ಮಹೇಂದ್ರ ಅವರು ಮಂಡಿಸಲಿದ್ದಾರೆ. ಹಾಗೆ ಕೆಲವು ಕಾವ್ಯಗಳಿಗೆ ಕಲಾವಿದರು ಚಿತ್ರ ರಚಿಸುವ ಮೂಲಕ ಕಾರ್ಯಕ್ರಮಕ್ಕೆ ಮೆರಗು ನೀಡಲಿದ್ದಾರೆ.
ಸುಂದರ ಸಂಜೆಯ ಕಾರ್ಯಕ್ರಮ ನಂತರ ರುಚಿಕರ ಭೋಜನವು ಇರಲಿದೆ.
- ಆಕೃತಿ ನ್ಯೂಸ್