ಪಕ್ಕೆಲುಬಿನ (Ribs) ಕೆಳಗೆ ಪದೇ ಪದೇ ತಡೆಯಲಾರದ ನೋವು ಕಾಣಿಸಿಕೊಳ್ಳುವುದು ಕೂಡಾ ಕಿಡ್ನಿ ಕಲ್ಲುಗಳು ಇರುವಿಕೆ ಸೂಚನೆ, ಕಿಡ್ನಿ ಕಲ್ಲುಗಳು ಹೇಗೆ ಆಗುತ್ತವೆ, ಅದಕ್ಕೆ ಪರಿಹಾರವೇನು ಏನು ಎನ್ನುವುದನ್ನು ಮಂಜುನಾಥ್ ಪ್ರಸಾದ್ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಓದಿ…
ಕೆಲವೊಮ್ಮೆ ದೇಹದಲ್ಲಿರುವ ಉಪ್ಪಿನಾಂಶ, ಕೆಲವೊಂದು ಲವಣಾಂಶ ಸಣ್ಣ ಸಣ್ಣ ಹರಳಿನ (Crystal) ರೂಪದಲ್ಲಿ ಮಾರ್ಪಾಡುಗೊಂಡು ನಮ್ಮ ಕಿಡ್ನಿಯಲ್ಲಿ ಜಮೆಯಾಗುತ್ತವೆ. ಕಿಡ್ನಿ ಸ್ಟೋನ್ (Kidney Stone) ಅಂದರೆ ಇದೇ. ಇಷ್ಟೇ ಅಲ್ಲ, ಮೂತ್ರದಲ್ಲಿ ಕ್ಯಾಲ್ಸಿಯಂ (Calcium), ಅಕ್ಸಲೆಟ್ ಮತ್ತು ಯೂರಿಕ್ ಆಸಿಡ್ (Uric Acid) ಅಂಶ ಹೆಚ್ಚಾದಾಗಲೂ ಕಿಡ್ನಿಯಲ್ಲಿ ಸ್ಟೋನ್ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಈ ಹರಳುಗಳು ಮೂತ್ರದಲ್ಲಿ ಸರಾಗವಾಗಿ ಹೊರಗೆ ಹೋಗುತ್ತವೆ. ಗಾತ್ರದಲ್ಲಿ ದೊಡ್ಡದಿರುವ ಹರಳುಗಳು ಕಿಡ್ನಿಯಲ್ಲೇ ಉಳಿಯುತ್ತವೆ. ಕಿಡ್ನಿಯ ಕಾರ್ಯನಿರ್ವಹಣೆಗೆ ಸಮಸ್ಯೆ ತಂದೊಡ್ಡುತ್ತವೆ. ಇದರಿಂದ ಅಸಾಧ್ಯ ನೋವು ಉಂಟಾಗುತ್ತದೆ.
ಕಿಡ್ನಿಯಲ್ಲಿ ಸ್ಸೋನ್ ಆಗಿರುವುದನ್ನು ತಿಳಿದುಕೊಳ್ಳಲು ಲಕ್ಷಣಗಳೆಂದರೆ :
1.ಪಕ್ಕೆಲುಬಿನ (Ribs) ಕೆಳಗೆ ಪದೇ ಪದೇ ತಡೆಯಲಾರದ ನೋವು ಕಾಣಿಸಿಕೊಳ್ಳುವುದು. ( ಚಿತ್ರ – 2 ).
2.ಮೂತ್ರ (Urine) ವಿಸರ್ಜನೆ ಮಾಡುವಾಗ ತೀವ್ರ ನೋವುಂಟಾಗುವುದು. ಮೂತ್ರದ ಜೊತೆ ರಕ್ತ ಹೋಗುವುದು.
3.ಕೆಲವೊಮ್ಮೆ ವಾಂತಿ (vomiting) ಸಹಾ ಉಂಟಾಗುತ್ತದೆ.
ಕಿಡ್ನಿ ಸ್ಟೋನ್ (Kidney Stone) ಅನುವಂಶೀಯವೂ ಹೌದು. ನಿಮ್ಮ ಕುಟುಂಬ ಸದಸ್ಯರಿಗೆ ಕಿಡ್ನಿ ಸ್ಟೋನ್ ಸಮಸ್ಯೆ ಇದ್ದರೆ, ಅದು ಅನುವಂಶೀಯವಾಗಿ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ನಮ್ಮ ಅನಾರೋಗ್ಯಕರ ಜೀವನ ಶೈಲಿಯಿಂದಲೂ ಕಿಡ್ನಿ ಸ್ಟೋನ್ ಕಾಣಿಸಿಕೊಳ್ಳಬಹುದು.
ಕಿಡ್ನಿಯಲ್ಲಿ ಹರಳುಗಳು ಸೃಷ್ಟಿಯಾಗಲು ಮುಖ್ಯವಾದ ಕಾರಣಗಳು :
1. ಸಾಕಷ್ಟು ನೀರು ಕುಡಿಯದೇ ಇರುವುದು :
ಚಳಿ ಇರಲಿ, ಬಿಸಿಲಿರಲಿ, ನಮ್ಮ ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕೇ ಬೇಕು. ದಿನಕ್ಕೆ 2-3 ಲೀಟರ್ ನೀರು ಕುಡಿಯಲೇ ಬೇಕು. ಇಷ್ಟು ಪ್ರಮಾಣದ ನೀರು ಕುಡಿಯದೇ ಹೋದರೆ ಡಿಹೈಡ್ರೇಶನ್ (Dehydration) ಉಂಟಾಗುತ್ತದೆ. ಇದರಿಂದ ಮೂತ್ರದಲ್ಲಿ ಸುಣ್ಣದ ಅಂಶ ( Calcium) ಹರಳಿನ ರೂಪದಲ್ಲಿ ಜಮೆಯಾಗುತ್ತದೆ. ಈ ಹರಳು ಕಿಡ್ನಿಯಲ್ಲಿ ಸೇರಿಕೊಳ್ಳುತ್ತವೆ. ಇದು ಕಿಡ್ನಿ ಸ್ಟೋನ್ ಗೆ ಕಾರಣವಾಗುತ್ತದೆ. ( ಚಿತ್ರ 1 ಮತ್ತು 1a ನೋಡಿ ).
2. ಅತ್ಯಧಿಕ ಸೋಡಿಯಂ ಸೇವನೆ :
ನಾವು ಯಾವ ಆಹಾರ ಹೆಚ್ಚು ಸೇವಿಸುತ್ತೇವೆ ಎಂಬುದು ಸಹಾ ಕಿಡ್ನಿಯಲ್ಲಿ ಕಲ್ಲುಗಳಾಗಲು ಕಾರಣವಾಗಬಹುದು. ಬ್ರೋಕಲಿ, ನಟ್ಸ್ (Nuts), ಪಾಲಕ್ ಸೊಪ್ಪು, ಅಧಿಕ ಮಾಂಸಾಹಾರ ಸೇವನೆ ಮುಂತಾದ ಕೆಲವು ಆಹಾರಗಳಲ್ಲಿ ಅಕ್ಸಲೆಟ್ ಅಂಶ ಅಧಿಕವಾಗಿರುತ್ತದೆ. ಇದನ್ನು ಅಧಿಕ ಪ್ರಮಾಣದಲ್ಲಿ ತಿಂದರೆ ಅಕ್ಸಲೆಟ್ ಕ್ಯಾಲ್ಸಿಯಂ ಜೊತೆ ಅಂಟಿಕೊಂಡು ಕಿಡ್ನಿಯಲ್ಲಿ ಜಮೆಯಾಗುತ್ತದೆ. ಇದು ಸ್ಟೋನ್ ಗೆ ಕಾರಣವಾಗುತ್ತದೆ. ಅತಿಯಾದ ಮದ್ಯಪಾನ, ತಂಬಾಕು, ಗುಟ್ಕಾ ಸೇವನೆ ಸಹ ಕಾರಣ.
3. ಬ್ಲಡ್ ಶುಗರ್ ಲೆವೆಲ್ ನಿಯಂತ್ರಣದಲ್ಲಿಡಿ :
ಸಕ್ಕರೆ ಕಾಯಿಲೆ (Diabetes) ಮೂತ್ರವನ್ನು ಅಸಿಡಿಕ್ ಮಾಡಿ ಬಿಡುತ್ತದೆ. ಅಂದರೆ ಮೂತ್ರದಲ್ಲಿ ಆಮ್ಲದ ( Uric acid ) ಪ್ರಮಾಣ ಆಧಿಕವಾಗುತ್ತದೆ. . ಇದರಿಂದ ಸ್ಟೋನ್ ಉಂಟಾಗುವ ಅಪಾಯ ಹೆಚ್ಚಿರುತ್ತದೆ. ಡಯಾಬಿಟಿಕ್ ಇರುವವರು ತಮ್ಮ ಬ್ಲಡ್ ಶುಗರ್ (Blood Sugar) ಲೆವೆಲ್ ನಿಯಂತ್ರಣದಲ್ಲಿಡಬೇಕು. ಇಲ್ಲದೇ ಹೋದರೆ, ಕಿಡ್ನಿ ಸ್ಟೋನ್ ಉಂಟಾಗಬಹುದು.
4. ಬೊಜ್ಜು ಬೆಳೆಸಿಕೊಳ್ಳಬೇಡಿ:
ಬೊಜ್ಜು ಪೀಡಿತ ವ್ಯಕ್ತಿಗೆ ಕಿಡ್ನಿ ಸ್ಟೋನ್ ಉಂಟಾಗುವ ಅಪಾಯ ಅತ್ಯಧಿಕವಾಗಿರುತ್ತದೆ. ವ್ಯಕ್ತಿಯ BMI – Body Mass Index ) 30ಕ್ಕಿಂತ ಹೆಚ್ಚಾಗಿದ್ದರೆ ಅಂಥವರಿಗೆ ಕಿಡ್ನಿ ಸ್ಟೋನ್ ಉಂಟಾಗುವ ಅಪಾಯ ಹೆಚ್ಚಾಗಿರುತ್ತದೆ. ಬೊಜ್ಜು ನಿಯಂತ್ರಣದಲ್ಲಿಡಿ. ನಿತ್ಯ ವ್ಯಾಯಾಮ, ನಡಿಗೆ, ಯೋಗಾಭ್ಯಾಸ ಮಾಡಿ.
5. ಅತ್ಯಧಿಕ ಕ್ಯಾಲ್ಸಿಯಂ ಸೇವನೆ :
ಮೂಳೆ ಮತ್ತು ಹಲ್ಲು ಬಲಿಷ್ಠವಾಗಿಡಲು ದೇಹಕ್ಕೆ ಕ್ಯಾಲ್ಸಿಯಂ ಅತ್ಯಗತ್ಯ. ಒಂದು ವೇಳೆ ನೀವು ಅಧಿಕ ಪ್ರಮಾಣದಲ್ಲಿ ಕ್ಯಾಲ್ಸಿಯಂ ಸಪ್ಲಿಮೆಂಟ್ ತೆಗೆದುಕೊಳ್ಳುತ್ತಿದ್ದರೆ, ಅದರಿಂದಲೂ ಕಿಡ್ನಿ ಸ್ಟೋನ್ ಉಂಟಾಗಬಹುದು.
6. ಇತ್ತಿಚಿನ ದಿನಗಳಲ್ಲಿ junk food ಸೇವನೆ, preservatives ಹಾಕಿರುವ ಡಬ್ಬದ ready to eat ಆಹಾರ ಸೇವನೆ, aerated soft drinks ಸೇವನೆ ಮೂತ್ರಪಿಂಡಗಳ ಕಲ್ಲಿಗೆ ಕಾರಣ.
7. ಮಾಂಸಹಾರ ಇತ್ಯಾದಿ ಅತಿಯಾದ ಪ್ರೊಟೀನ್ ಯುಕ್ತ ಆಹಾರಗಳ ಸೇವನೆ ಕಿಡ್ನಿಯಲ್ಲಿ ಹರಳುಗಳಾಗಳು ಮತ್ತೊಂದು ಕಾರಣ ( Agent’s ಗಳು ಮಾರುವ ಅಧಿಕ ಪ್ರೊಟೀನ್ ಇರುವ Health drink’s ಕುಡಿಯುವವರು ಗಮನಿಸಿ ) ಇನ್ನು ಈ ಮೂತ್ರಪಿಂಡಗಳ ಕಲ್ಲುಗಳ ನಿವಾರಣೆಗೆ ಹೆಚ್ಚು ಪ್ರಚಲಿತವಿರುವ ಮನೆಮದ್ದು ಎಂದರೆ, ನೀರನ್ನು ಧಾರಾಳವಾಗಿ ಕುಡಿಯುವುದು. ಎಳನೀರು, ನಿಂಬೇರಸ, ಬಾರ್ಲಿ ನೀರು ಸೇವನೆ, ಬಾಳೆ ದಿಂಡಿನ ರಸ ಸೇವನೆ ಕೂಡ ಒಳ್ಳೆಯದು. ದಾಳಿಂಬರೆ ಹಣ್ಣು, ಬೆಂಡೆಕಾಯಿ ಸಹ ಉತ್ತಮ.
ಇನ್ನು ಕೊತ್ತಂಬರಿ ಸೊಪ್ಪು ಅಥವ ಬೀಜದ ಕಷಾಯದ ಸೇವನೆ, ಪಪ್ಪಾಯಿ ಹಣ್ಣು, ಬಾಳೆ ಹಣ್ಣು ಸಹ ಸ್ವಲ್ಪ ಸಹಾಯಕ. ಕಾಫಿ ಸೇವನೆ ಸಹಾ ಒಳ್ಳೆಯದು.
ಮುಸುಕಿನ ಜೋಳದ ( Maize / Sweet corn ) ಕೂದಲುಗಳನ್ನು ( Styles / Silk ) ಚೆನ್ನಾಗಿ ತೊಳೆದು ಬೇಯಿಸಿ, ಶೋಧಿಸಿ ರಸ ಕುಡಿದರೆ ಸಹಾ ಸಣ್ಣ ಕಲ್ಲುಗಳು ಕರಗುತ್ತವೆ.
ಆದರೆ ಈ ಮನೆಮದ್ದುಗಳು, ಕಲ್ಲುಗಳು ಸುಮಾರು 1 – 2 ಮಿಲಿ ಮೀಟರ್ ಗಾತ್ರದಲ್ಲಿ ಇದ್ದರೆ ಮಾತ್ರ ಕರಗಿ ಹೊರಹೋಗಲು ಸಹಾಯ. ಕಲ್ಲುಗಳು ಅದಕ್ಕಿಂತ ದೊಡ್ಡದಾದರೆ ಕರಗುವುದು ಬಹಳ ಕಷ್ಟ.
ಕಲ್ಲುಗಳು ದೊಡ್ಡದಾದನಂತರ ಸಹಜವಾಗಿ ಹೊರಹೋಗುವುದಿಲ್ಲ ಆಗ ನಿಮ್ಮ ವೈದ್ಯರು scan ಮಾಡಿ ನೋಡಿ, ಕಲ್ಲುಗಳ ಸಂಖ್ಯೆ, ಗಾತ್ರ ಮತ್ತು ಇರುವ ಜಾಗಗಳನ್ನು ಗುರುತಿಸಿಕೊಂಡು Ureteroscopy ಅಥವಾ Nephrolithotomy ಎಂಬ ಆಪರೇಷನ್ ಮೂಲಕ ಮಾಡುತ್ತಾರೆ. ( ವೀಡಿಯೋಗಳನ್ನು ನೋಡಿ ).
ಆದ್ದರಿಂದ ಸದಾ ಚಟುವಟಿಕೆಯಿಂದ ಇದ್ದು, ಆಹಾರದ ಸೇವನೆ ನಿಯಂತ್ರಣದಲ್ಲಿಟ್ಟುಕೊಂಡು, dehydration ಆಗದಂತೆ ಸಾಕಷ್ಟು ನೀರು, ದ್ರವ ಪದಾರ್ಥಗಳನ್ನು ಕುಡಿದು, ಉತ್ತಮವಾದ ಜೀವನ ಶೈಲಿ ಅಳವಡಿಸಿಕೊಂಡು, ಕಿಡ್ನಿಯಲ್ಲಿ ಕಲ್ಲುಗಳು ಆಗದಂತೆ ನೋಡಿಕೊಳ್ಳುವುದೇ ಜಾಣತನ.
- ಮಂಜುನಾಥ್ ಪ್ರಸಾದ್