ಹದಿನೈದು ದಿನವಾಗಿರಬಹುದೇನೋ ಸಮಯದಲ್ಲಿ ನಾನು ಏನ್ ಸಾರ್ ಇಷ್ಟು ಬುಕ್ ಬರೆದಿರಿ, ಒಂದು ಪುಸ್ತಕನೂ ಓದೋಕೆ ಕೊಟ್ಟಿಲ್ಲ ಅಂದೆ, ರೀ ವಕೀಲರೇ ನಾನು ಪುಸ್ತಕ ಬರೆದಿದ್ದಿನಿ ಅಷ್ಟೇ ನಾನು ಬರೆದ ಪುಸ್ತಕ ನನಗೆ ಓದಲು ಇಲ್ಲಾರಿ ಎಂದು ಯಾವಾಗಾದರೂ ಮನೆಗೆ ಬನ್ನಿ ಎಂದಿದ್ದರು ಲಕ್ಕೂರ್ ಅನಂದ್ ಅವರು, ಈಗ ಬಾರದ ಲೋಕಕ್ಕೆ ತೆರಳಿಬಿಟ್ಟರು, ಅಂತಿಮ ನಮನಗಳು..
ಇಪ್ಪತ್ತು ದಿನವಾಗಿರಬಹುದೇನೋ “ರೀ ವಕೀಲರೆ ಎಲ್ರಿ ಇದ್ದಿರಾ” ನೀವು ಬರೆದಿರುವ ಪುಸ್ತಕ ಗಳನ್ನು ತಗೊಂಡು ಚಿಕ್ಕತಿರುಪತಿ ಗ್ರಂಥಾಲಯಕ್ಕೆ ಬನ್ರಿ ನಿಮಗಾಗಿ ಕಾಯುತಿನಿ” ನಾನು ರಾತ್ರಿ ರೈಲಿಗೆ ಗುಲ್ಬರ್ಗ ಕಡೆ ಹೊರಟಿರುವೆ” ಅಂದರು… ಸಾರ್ ಈಗ ತಾನೆ ಬೆಂಗಳೂರಿನಿಂದ ಊರಿಗೆ ಬಂದೆ, ಊರಲ್ಲಿ ಇದ್ದಿನಿ ಒಂದು ಅರ್ಧಗಂಟೆ ಸರ್ ಬಂದುಬಿಡುವೆ ಅಂತ ಹೇಳಿ ಚಿಕ್ಕತಿರುಪತಿಯ ಗ್ರಂಥಾಲಯಕ್ಕೆ ಹೋದೆ. ನನ್ನ ಗಜಲ್ ಸಂಕಲನ ಕೊಟ್ಟೇ, ರಾತ್ರಿ ಪ್ರಯಾಣದಲ್ಲಿ ಓದುವೆ ಅಂತ ಹೇಳಿದರು.
ಅವರ ಜೊತೆಯಲ್ಲಿ ಕುಳಿತರೇ ನನ್ನಂಥಹ ಸಾಹಿತ್ಯದ ಅರಿವು ಇಲ್ಲದವನಿಗೆ ಕನ್ನಡ ಸಾಹಿತ್ಯದ ಮಜಲುಗಳು ಗೋಚರವಾಗುತ್ತದೆ. ಪಕ್ಕದ ಊರಾದರೂ ಲಕ್ಕೂರ್ ಅನಂದ್ ನನಗೆ ಪರಿಚಯವಿರಲಿಲ್ಲ. ನಾಲ್ಕು ವರುಷದ ಹಿಂದೆ ಅವರೇ ಕಾಲ್ ಮಾಡಿ ಮಾತನಾಡಿಸಿದ್ದರು. ಅದೇನೋ ಆತ್ಮೀಯತೆ ಬೆಳೆಯಿತೋ ಗೊತ್ತಿಲ್ಲ. ವಾರಕ್ಕೆ ಎರಡು ಮೂರು ಬಾರಿ ಕಾಲ್ ಮಾಡಿ ಮಾತನಾಡುತ್ತಿದ್ದರು. ನನ್ನ ಇವರ ಭೇಟಿ ಇದೆ ಮೊದಲಲ್ಲ ನಾನು ಬೆಂಗಳೂರಿನಿಂದ ಊರಿಗೆ ಹೋಗುವ ದಾರಿಯಲ್ಲಿಯೇ ಅವರ ಊರು ಲಕ್ಕೂರು. ನಮ್ಮೂರಿನಿಂದ ಸುಮಾರು ಐದಾರು ಕಿಲೋಮೀಟರ್ ಇರಬಹುದು ಅಷ್ಟೇ. ನಾನು ಶನಿವಾರ ಊರಿಗೆ ಹೊರಟಾಗ ಅವರಿರುವಲ್ಲಿಗೆ ಹೋಗಿ ಒಂದಷ್ಟು ಗಂಟೆ ಮಾತನಾಡಿ ಹೊರಡುತ್ತಿದ್ದೆ. ಇತ್ತೀಚೆಗೆ ಲಕ್ಕೂರ್ ಅನಂದ್ ರವರು ಬಹಳಷ್ಟು ದೂರ ಹೋಗಿ ಕೇಂದ್ರಿಯ ವಿಶ್ವವಿದ್ಯಾಲಯ ಗುಲ್ಬರ್ಗ ಇಲ್ಲಿ ಪಿ ಎಚ್ ಡಿ ಗೆ ಸೇರಿಕೊಂಡಿದ್ದರು. ನಾನು ಕೂಡ ಆಗಾಗ ರಾತ್ರಿ ಸಮಯದಲ್ಲಿ ಕಾಲ್ ಒಂದಷ್ಟು ಸಾಹಿತ್ಯದ ಬಗ್ಗೆ ಮಾಡುತ್ತಿದ್ದೆ. ಸರಳ ಜೀವಿ ಮಾನವೀಯತೆಯ ಜೀವಾಳ ಕನ್ನಡ ನಾಡಿನ ಖ್ಯಾತ ಲೇಖಕರು ಕೇಂದ್ರ ಸಾಹಿತ್ಯ ಆಕಾಡೆಮಿ ಪ್ರಶಸ್ತಿ ಪುರಸ್ಕೃತರು ಆದ ಲಕ್ಕೂರ್ ಅನಂದ್ ಸರ್.

ಮೊನ್ನೆಯ ಭೇಟಿಯು ಹದಿನೈದು ದಿನವಾಗಿರಬಹುದೇನೋ ಸಮಯದಲ್ಲಿ ನಾನು ಎನು ಸಾರ್ ಇಷ್ಟು ಬುಕ್ ಬರೆದಿರಿ ಒಂದು ಪುಸ್ತಕನೂ ಕೊಟ್ಟಿಲ್ಲ ಅಂದೆ, ರೀ ವಕೀಲರೇ ನಾನು ಪುಸ್ತಕ ಬರೆದಿದ್ದಿನಿ ಅಷ್ಟೇ ನಾನು ಬರೆದ ಪುಸ್ತಕ ನನಗೆ ಓದಲು ಇಲ್ಲಾರಿ, ಬಾ ಮನೆಯಲ್ಲಿ ಯಾವುದಾದರೂ ಇದೆಯೇನೋ ನೋಡೋಣ ಅಂತ ಮನೆಗೆ ಕರೆದುಕೊಂಡು ಹೋಗಿ ಅವರು ತೆಲುಗಿನಿಂದ ಕನ್ನಡಕ್ಕೆ ಅನುವಾದ ಮಾಡಿರುವ ಮಧುಶಾಲೆ ಪುಸ್ತಕವನ್ನು ಬಳುವಳಿಯಾಗಿ ಕೊಟ್ಟರು. ನಂತರ ಆದಿನ ರಾತ್ರಿ ನನ್ನ ಬೈಕ್ ನಲ್ಲಿ ಕರೆದುಕೊಂಡು ಹೋಗಿ ಮಾಲೂರು ಪ್ರವಾಸಿ ಮಂದಿರದಲ್ಲಿ ಬಿಟ್ಟು ಊರಿಗೆ ಹೋದೆ.. ಎರಡು ದಿನದ ನಂತರ ಬೆಳಗ್ಗೆ ಪೋನ್ ಮಾಡಿ ಗುಲ್ಬರ್ಗ ಸೇರಿದೆ ವಕೀಲರೇ, ನಿಮ್ಮ ಪುಸ್ತಕ ಓದಿದೆ.. ನಿಮಗೆ ಕವಿತೆ ಕೈಯಿಡಿಯಲಿಲ್ಲ ಗಜಲ್ ಕೈಯಿಡಿದಿದೆ ಮುಂದುವರಿಸಿ, ನಾನು ತೆಲುಗಿನ ಹಲವು ಕೃತಿಕಾರರನ್ನು ಭೇಟಿ ಮಾಡಿಸುವೆ ಅವರುಗಳಿಂದ ಹಕ್ಕುಗಳನ್ನು ಪಡೆದು ಅನುವಾದ ಮಾಡಿ ಅಂದರು. ನಾಲ್ಕು ದಿನದ ಹಿಂದೆಯು ಕಾಲ್ ಮಾಡಿ ಮಾತನಾಡಿದ್ದರು. ಅವರ ಸಾವಿನ ಸುದ್ದಿ ಮುಖಪುಟದಲ್ಲಿ ನೋಡಿ ತೀವ್ರವಾದ ನೋವಾಯಿತು.
- ನಾರಾಯಣ ಸ್ವಾಮಿ – ಕವಿಗಳು, ವಕೀಲರು,
