ಧೋಲ್ಕಲ್ ಗಣೇಶ

ದಾಂತೇವಾಡ ಜಿಲ್ಲೆಯ ಬೈಲಾಡಿಲಾ ಪರ್ವತ ಶ್ರೇಣಿ, ದಟ್ಟ ಕಾಡಿನ ನಡುವೆ 10 ನೇ ಮತ್ತು 11 ನೇ ಶತಮಾನದ ನಡುವೆ ಚಿಂಡಕ್ ನಾಗವಂಶಿ ರಾಜರ ಅವಧಿಯಲ್ಲಿ ನಿರ್ಮಿಸಲಾದ ಗಣೇಶನ 3 ಅಡಿ ಸುಂದರವಾದ ಕಲ್ಲಿನ ವಿಗ್ರಹವು ಇದಾಗಿದ್ದು,ಗಣೇಶನ ಭಕ್ತರಿಗೆ ಮತ್ತು ಹಚ್ಚ ಹಸಿರಿನ ಬೆಟ್ಟಗಳ ನಡುವೆ ಚಾರಣ ಮಾಡಲು ಇಷ್ಟಪಡುವವರಿಗೆ ಸ್ವರ್ಗಸಮಾನವಾದ ಸ್ಥಳವಾಗಿದೆ. ವಸಂತ ಗಣೇಶ್ ಅವರು ಧೋಲ್ಕಲ್ ಗಣೇಶನ ವಿಶೇಷತೆಯ ಬಗ್ಗೆ ಓದುಗರ ಮುಂದೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಭಾರತದಲ್ಲಿ ಪುರಾತನ ದೇವಾಲಯಗಳು ದೇವರ ವಿಗ್ರಹಗಳು ಎಲ್ಲೆಲ್ಲಿಯೂ ಇರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಟ್ಟದ ತಪ್ಪಲಿನಲ್ಲಿ, ನದಿಯ ದಡದಲ್ಲಿ, ಸಮುದ್ರದ ದಂಡೆಯಲ್ಲಿ, ಗುಹೆಯಲ್ಲಿ ಎಲ್ಲೆಡೆಯೂ ನಮ್ಮ ಪೂರ್ವಿಕರು ದೇವಾಲಯಗಳಲ್ಲಿ ದೇವರನ್ನು ಪ್ರತಿಷ್ಠಾಪಿಸಿದ್ದಾರೆ. ಆದರೆ ಇದೊಂದು ಗಣೇಶನ ಮೂರ್ತಿಗೆ ದೇವಾಲಯವಾಗಲೀ, ಕೊನೆಗೆ ಒಂದು ಕಲ್ಲಿನ ಮಂಟಪವಾಗಲಿ ಇಲ್ಲ. ಸಮುದ್ರ ಮಟ್ಟದಿಂದ 3000 ಅಡಿ ಎತ್ತರದಲ್ಲಿ ಪರ್ವತದ ತುತ್ತ ತುದಿಯಲ್ಲಿ, ಬಟ್ಟ ಬಯಲಿನಲ್ಲಿ ಕುಳಿತಿದ್ದಾನೆ ಈ ಗಣೇಶ, ಅವನೇ #ಧೋಲ್ಕಲ್_ಗಣೇಶ.
ಛತ್ತೀಸ್‌ಗಢ ರಾಜ್ಯದ ರಾಯ್‌ಪುರದಿಂದ ಸುಮಾರು 350 ಕಿಮೀ ದೂರದಲ್ಲಿರುವ ದಂತೇವಾಡ ಜಿಲ್ಲೆಯ ಬೆಟ್ಟದ ಬುಡದಲ್ಲಿರುವ ಫರ್ಸಾಪಾಲ್ ಗ್ರಾಮದ ಸಮೀಪದಲ್ಲಿರುವ ಧೋಲ್ಕಲ್ ಎಂಬ ಬೆಟ್ಟದ ಮೇಲೆ ನೆಲೆ ನಿಂತಿದ್ದಾನೆ ಈ ಧೋಲ್ಕಲ್ ಗಣೇಶ. ಇದು ಸಮುದ್ರ 3000 ಅಡಿ ಎತ್ತರದಲ್ಲಿದೆ.

ದಾಂತೇವಾಡ ಜಿಲ್ಲೆಯ ಬೈಲಾಡಿಲಾ ಪರ್ವತ ಶ್ರೇಣಿ, ದಟ್ಟ ಕಾಡಿನ ನಡುವೆ 10 ನೇ ಮತ್ತು 11 ನೇ ಶತಮಾನದ ನಡುವೆ ಚಿಂಡಕ್ ನಾಗವಂಶಿ ರಾಜರ ಅವಧಿಯಲ್ಲಿ ನಿರ್ಮಿಸಲಾದ ಗಣೇಶನ 3 ಅಡಿ ಸುಂದರವಾದ ಕಲ್ಲಿನ ವಿಗ್ರಹವು ಇದಾಗಿದ್ದು, ಪ್ರಕೃತಿ ಪ್ರಿಯರಿಗೆ, ಗಣೇಶನ ಭಕ್ತರಿಗೆ ಮತ್ತು ಹಚ್ಚ ಹಸಿರಿನ ಬೆಟ್ಟಗಳ ನಡುವೆ ಚಾರಣ ಮಾಡಲು ಇಷ್ಟಪಡುವವರಿಗೆ ಸ್ವರ್ಗಸಮಾನವಾದ ಸ್ಥಳವಾಗಿದೆ.

ಪುರಾಣದ ಒಂದು ಕಥೆಯ ಪ್ರಕಾರ ಪರಶುರಾಮ ಮತ್ತು ಗಣೇಶನ ನಡುವೆ ಇಲ್ಲಿ ಯುದ್ಧ ನಡೆಯುತ್ತದೆ. ಆಗ ಗಣೇಶನ ಒಂದು ದಂತವನ್ನು ಪರಶುರಾಮರು ಮುರಿದುಬಿಡುತ್ತಾರೆ. ನಂತರ ಪರಶುರಾಮರು ಈ ಗಣೇಶನನ್ನು ಅಲ್ಲಿ ಪ್ರತಿಷ್ಟಾಪಿಸಿದರು ಎನ್ನಲಾಗಿದೆ. ಪರಶುರಾಮರು ತಮ್ಮ ಫರ್ಸಾ (ಕೊಡಲಿಯಿಂದ) ಗಣೇಶನ ಮೇಲೆ ದಾಳಿ ಮಾಡಿದನು. ಹಾಗಾಗಿಯೇ ಬೆಟ್ಟದ ಬುಡದಲ್ಲಿರುವ ಗ್ರಾಮಕ್ಕೆ ಫರ್ಸಾಪಾಲ್ ಎಂಬ ಹೆಸರು ಬಂದಿದೆ ಎನ್ನುತ್ತಾರೆ. ಇವರಿಬ್ಬರ ನಡುವಿನ ಯುದ್ಧದಲ್ಲಿ ಯಾರು ಗೆದ್ದರು ಎಂಬುದು ಮಾತ್ರ ನಿಗೂಢವಾಗಿ ಉಳಿದಿದೆ.
ಈ ಧೋಲ್ಕಲ್ ಗಣೇಶ ಅಲ್ಲಿರುವುದು 2012 ರ ವರೆಗೂ ಯಾರಿಗೂ ತಿಳಿದಿರಲಿಲ್ಲ. 2012 ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಇದನ್ನು ಪ್ರಥಮ ಬಾರಿಗೆ ಕಂಡು ಹಿಡಿಯುತ್ತಾರೆ. 2017 ರಲ್ಲಿ ದುಷ್ಟರು ಈ ಗಣಪತಿಯನ್ನು ಬೆಟ್ಟದಿಂದ ಕೆಳಗೆ ಎಸೆದು ಅದು 56 ಚೂರುಗಳಾಗಿರುತ್ತದೆ. ನಂತರ ಅದನ್ನು ಸ್ಥಳೀಯರು ರಾಸಾಯನಿಕಗಳನ್ನು ಉಪಯೋಗಿಸಿ ಮತ್ತೆ ಕೂಡಿಸಿ ಬೆಟ್ಟದ ಮೇಲೆ ಪ್ರತಿಷ್ಟಾಪಿಸದ್ದಾರೆ.

ದೊರೆತಿರುವ ಪುರಾವೆಗಳ ಪ್ರಕಾರ ಪರಶುರಾಮ ಮತ್ತು ಗಣೇಶನ ನಡುವಿನ ಯುದ್ಧದ ನೆನಪಿಗಾಗಿ, 11 ನೇ ಶತಮಾನದಲ್ಲಿ ಚಿಂಡಕ್ ನಾಗವಂಶಿ ರಾಜರು ಬೆಟ್ಟದ ತುದಿಯಲ್ಲಿ ಗಣೇಶನ 3 ಅಡಿಗಳ ಈ ವಿಗ್ರಹವನ್ನು ಧೋಲಕ್‌ನ ಆಕಾರದಲ್ಲಿ ಕೆತ್ತಿ ಸ್ಥಾಪಿಸಿದರು ಎಂದು ತಿಳಿದು ಬಂದಿದೆ. (ಧೋಲಕ್ ಎಂದರೆ ಶಾಸ್ತ್ರೀಯ ಸಂಗೀತದಲ್ಲಿ ಸಾಮಾನ್ಯವಾಗಿ ಬಳಸುವ ಸಂಗೀತ ವಾದ್ಯ) ಆದ್ದರಿಂದ ಬೆಟ್ಟಕ್ಕೆ ಧೋಲ್ಕಲ್ ಎಂದು ಹೆಸರಿಡಲಾಗಿದೆ. ಗಣೇಶನ ವಿಗ್ರಹವು ವಿಶಿಷ್ಟವಾದ ಲಲಿತಾಸನ ಅಥವಾ ಆರಾಮ ಭಂಗಿಯಲ್ಲಿ ಕುಳಿತಿರುವಂತೆ ಕೆತ್ತಲಾಗಿದೆ.
ಈಗ ಇದನ್ನು ಸರ್ಕಾರ ನಿರ್ವಹಿಸುತ್ತಿದ್ದು ಹೆಲಿಕಾಪ್ಟರ್ ಮೂಲಕ ಅಲ್ಲಿಗೆ ಹೋಗಿ ಪೂಜೆ ಸಲ್ಲಿಸುವಂತೆ ವ್ಯವಸ್ಥೆ ಮಾಡಲಾಗಿದೆ. ಹಿಂದೆ ಕೇವಲ ಅಲ್ಲಿನ ಬುಡಕಟ್ಟು ಜನರು ಮಾತ್ರ ನಿಗದಿತ ದಿನದಂದು ಹತ್ತಿ ಪೂಜೆ ಸಲ್ಲಿಸುತ್ತಿದ್ದರಂತೆ. ಈಗ ಚಾರಣೋತ್ಸಾಹಿ ಯುವಕ ಯುವತಿಯರು ಪ್ರತಿದಿನ ಹತ್ತಿ ಗಣೇಶನ ದರ್ಶನ ಪಡೆಯುತ್ತಿದ್ದಾರೆ.

ಇಲ್ಲಿ ಮಾಘ ಮಾಸದಲ್ಲಿ (ಜನವರಿ-ಫೆಬ್ರವರಿ ನಡುವೆ ವಿಶೇಷ ಜಾತ್ರೆ ನಡೆಯುತ್ತದೆ. ಜಗದಲ್‌ಪುರದಿಂದ ಚಾರಣಿಗರು ಫರ್ಸಾಪಾಲ್ ಗ್ರಾಮವನ್ನು ತಲುಪಲು 2 ಗಂಟೆಗಳು ಬೇಕು. ಇದು ಧೋಲ್ಕಲ್ ಗಣೇಶನ ಚಾರಣಕ್ಕೆ ಒಂದು ರೀತಿಯ ಬೇಸ್ ಪಾಯಿಂಟ್ ಆಗಿದೆ. ನಂತರ ಇಲ್ಲಿಂದ ಚಾರಣವನ್ನು ಮುಗಿಸಿ ಗಣೇಶವನ್ನು ತಲುಪಲು 16 ಗಂಟೆಗಳು ಬೇಕಾಗುತ್ತದೆ. ದಟ್ಟವಾದ ಕೋನಿಫರ್ ಕಾಡುಗಳ ನಡುವೆ ಚಾರಣ ಮಾಡಬೇಕಾಗಿರುವ ಕಾರಣ, ರಸ್ತೆಯನ್ನು ತಿಳಿಯಲು ಸ್ಥಳೀಯರ( ಗೈಡ್) ಮಾರ್ಗದರ್ಶನದ ಅಗತ್ಯವಿದೆ. ಬೆಟ್ಟದ ತುದಿಯಿಂದ ಇಡೀ ಕಾಡಿನ ವಿಹಂಗಮ ನೋಟವು ಚಾರಣದ ನೋವನ್ನು ಖಂಡಿತವಾಗಿಯೂ ನಿವಾರಿಸುತ್ತದೆ.


  • ವಸಂತ ಗಣೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW