ಮಹಿಳೆಯರಲ್ಲಿನ ಕಾಡುವ ಒಂಟಿತನ ಸಮಸ್ಯೆ

ಮಹಿಳೆಯರಲ್ಲಿನ ಒಂಟಿತನ ಸಮಸ್ಯೆಗೆ ಕಾರಣವೇನು ಎನ್ನುವುದರ ಕುರಿತು ಲೇಖಕ ನಟರಾಜ್ ಮೈದುನಹಳ್ಳಿ ಅವರು ಒಂದು ಪುಟ್ಟ ಲೇಖನದ ಮೂಲಕ ಅರ್ಥಪೂರ್ಣವಾಗಿ ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ತಪ್ಪದೆ ಓದಿ…

ಸಾಮಾನ್ಯವಾಗಿ ಅನೇಕ ಮಹಿಳೆಯರಿಗೆ 40 ವರ್ಷ ದಾಟಿದ ನಂತರ ಒಂಟಿತನದ ಫೀಲಿಂಗ್ ಉಂಟಾಗುತ್ತದೆ. ಏಕೆಂದರೆ ಮದುವೆಯಾದ ಮೊದಲ 10 ವರ್ಷ ಗಂಡ ಸಾಮಾನ್ಯವಾಗಿ ಸದಾ ಜೊತೆಗಿರುತ್ತಾನೆ, ಭಾವನೆಗಳಿಗೆ ಕಿವಿಯಾಗುತ್ತಾನೆ, ಬೇಕು ಬೇಡಗಳನ್ನು ಪೂರೈಸುತ್ತಾನೆ. ಇಬ್ಬರ ನಡುವೆ ದೈಹಿಕ ಆಕರ್ಷಣೆಯೂ ಹೆಚ್ಚಾಗಿರುತ್ತದೆ. ಅಲ್ಲದೆ ಮಕ್ಕಳ ಲಾಲನೆ, ಪಾಲನೆ, ಸ್ಕೂಲ್ ಗೆ ರೆಡಿ ಮಾಡಿ ಕಳುಹಿಸುವುದು ಇವುಗಳ ಬ್ಯುಸಿಯಲ್ಲಿ ಕಾಲ ಸರಿದು ಹೋಗುವುದು ಗೊತ್ತೇ ಆಗುವುದಿಲ್ಲ.

ಫೋಟೋ ಕೃಪೆ : google

ನಂತರ ಮಕ್ಕಳು ದೊಡ್ಡವರಾಗಿ ಕಾಲೇಜು ಅಂಥ ಎಲ್ಲೋ ದೂರದ ಊರಿಗೆ ಹೋಗಿ ಹಾಸ್ಟೆಲ್, ಪಿ.ಜಿ. ಸೇರುತ್ತಾರೆ. ಮಕ್ಕಳು ಕಾಲೇಜು, ಫ್ರೆಂಡ್ಸ್ ಅಂಥ ಅವರದೇ ಲೋಕದಲ್ಲಿ ಇರುತ್ತಾರೆ. ಮನೆಗೆ ಬರುವುದು ಅಪರೂಪವಾಗುತ್ತದೆ. ಮನೆ ಬಣಗುಡುತ್ತಿರುತ್ತದೆ. ಗಂಡ ಹೊಸ ಮನೆ ಮತ್ತು ಹೊಸ ಕಾರಿನ EMI ಕಟ್ಟುವುದಕ್ಕೆ, ಮಕ್ಕಳ ಶಿಕ್ಷಣದ ಖರ್ಚು, ನಂತರ ಮಕ್ಕಳನ್ನು ಒಳ್ಳೆಯ ಕೆಲಸಕ್ಕೆ ಸೇರಿಸುವ ಜವಾಬ್ದಾರಿ, ಮದುವೆ ಮಾಡಲು ಹಣದ ಕೂಡಿಡುವಿಕೆ ಹೀಗೆ ನಾನಾ ತಾಪತ್ರಯಗಳನ್ನು ಸರಿದೂಗಿಸಲು ಚೆನ್ನಾಗಿ ದುಡಿಯಬೇಕೆಂದು ಆತನದೇ ಪ್ರಪಂಚದಲ್ಲಿ ಮುಳುಗಿ ಹೋಗುತ್ತಾನೆ ಅಥವಾ ಕುಡಿತದಂತಹ ಚಟಗಳ ಹಿಂದೆ ಬಿದ್ದು ಅದೇ ಮನಸ್ಥಿತಿಯ ಸ್ನೇಹಿತರ ಬಳಗದಲ್ಲಿದ್ದು ಮನೆಯಲ್ಲಿ ಇರುವುದು ಅಪರೂಪವಾಗುತ್ತದೆ. ಹೆಂಡತಿಗೆ ಸಮಯ ಕೊಡುವುದು ಕಷ್ಟವಾಗುತ್ತದೆ.

ಫೋಟೋ ಕೃಪೆ : google

ಈ ಸಮಯದಲ್ಲಿ ಹೆಂಡತಿ ಉದ್ಯೋಗಸ್ಥೆಯಾಗಿದ್ದರೆ ಅಥವಾ ಸಾಹಿತ್ಯ ಬರವಣಿಗೆ, ನಾಟಕ ಹೀಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಒಂಟಿತನ ಅಷ್ಟಾಗಿ ಕಾಡುವುದಿಲ್ಲ. ಆದರೆ ಕೇವಲ ಗೃಹಿಣಿಯಾಗಿ ಮನೆಯಲ್ಲೇ ಮೂರೊತ್ತು ಅಡುಗೆ ಮಾಡುವುದು, ಬಟ್ಟೆ ಒಗೆಯುವುದು, ಮನೆ ಸ್ವಚ್ಛ ಮಾಡುವುದು ಹೀಗೆ ಇರುವವರಿಗೆ ಒಂಟಿತನ ಕಾಡಬಹುದು. “ತನ್ನ ಮಾತುಗಳನ್ನು ಸಮಾಧಾನದಿಂದ ಕೇಳಿಸಿಕೊಳ್ಳುವ, ಭಾವನೆಗಳಿಗೆ ಸ್ಪಂದಿಸುವ ಒಂದು ನರಪ್ರಾಣಿಯೂ ಇಲ್ಲವಲ್ಲ” ಎನ್ನಿಸಬಹುದು. “ಎಷ್ಟೇ ಚೆಂದ ಡ್ರೆಸ್ ಮಾಡಿಕೊಂಡರೂ ಇತ್ತೀಚಿಗೆ ಗಂಡನಿಂದ ಒಂದು ಮೆಚ್ಚುಗೆಯೂ ಸಿಗುತ್ತಿಲ್ಲವಲ್ಲ” ಎಂದು ನಿರಾಶೆಯಾಗಬಹುದು. “ತಾನು ದಪ್ಪ ಆಗಿ, ಸೊಂಟದಲ್ಲಿ ಟೈರ್ ಗಳು ಬಂದು, ಕಣ್ಣುಗಳ ಕೆಳಗೆ ಕಪ್ಪಾಗಿ, ತಲೆಯ ಕೂದಲುಗಳು ಉದುರಿ, ದಟ್ಟ ಕೇಶರಾಶಿ ತೆಳುವಾಗಿ, ಬಿಳಿ ಕೂದಲುಗಳು ಮೂಡಿ, ತನ್ನ ಸೌಂದರ್ಯ ಕಡಿಮೆಯಾಗುತ್ತಿದೆಯಾ” ಎಂದು ಆತಂಕವಾಗಬಹುದು. ಬದುಕಿನ ಏಕತಾನತೆ ಬೇಸರ ತರಿಸಬಹುದು.

ಗಂಡ ತನ್ನ ಬಗ್ಗೆ ಕೇರ್ ಮಾಡುತ್ತಿಲ್ಲ, ತನಗಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರವಾದಾಗ, ಇಂತಹ ಸಂದರ್ಭದಲ್ಲಿ ತನ್ನ ಭಾವನೆಗಳಿಗೆ ಸ್ಪಂದಿಸುವ, ಮಾತುಗಳನ್ನು ಇಷ್ಟ ಪಟ್ಟು ಆಲಿಸುವ, ತನ್ನ ಸೌಂದರ್ಯವನ್ನು ಮೆಚ್ಚುವ ಒಬ್ಬ ಗೆಳೆಯ ಸಿಕ್ಕಿದಾಗ ಹೆಣ್ಣು ಆತನೆಡೆಗೆ ಆಕರ್ಷಿತಳಾಗಬಹುದು. ಆದರೆ ಈ ಆಕರ್ಷಣೆ ಲೈಂಗಿಕವಾಗಿ ಆಗಿರದೆ ಐಡೆಂಟಿಟಿ ಕ್ರೈಸಿಸ್ ನಿಂದ ಆಗಿರುತ್ತದೆ. ಇಂತಹ ಸಮಸ್ಯೆಗಳಿಂದ ಹೊರಬರುವುದು ಗಂಡ ಹೆಂಡಿರ ಕೈಯಲ್ಲಿಯೇ ಇರುತ್ತದೆ.


  • ನಟರಾಜ್ ಮೈದುನಹಳ್ಳಿ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading