ಕಂಗ ಕಾಯಿ ಮಹತ್ವ- ಸುಮನಾ ಮಳಲಗದ್ದೆ

ಕಂಗ ಅಥವಾ ಜ್ಯೋತಿಷ್ಯ್ಮತಿ ಎಂದು ಕರೆಯಲ್ಪಡುವ ಈ ಗಿಡ ಬೇರು, ದಂಟು, ಬೀಜಗಳಲ್ಲಿ ಮೆಡಿಸಿನ್ ಗುಣ ಅಪಾರವಿದೇ ಎನ್ನುತ್ತಾ ಈ ಗಿಡದ ಮಹತ್ವವನ್ನು ನಟಿ ವೈದ್ಯರಾದ ಸುಮನಾ ಮಳಲಗದ್ದೆ ಅವರು ಓದುಗರೊಂದಿಗೆ ಹಂಚಿಕೊಳ್ಳುತ್ತಾರೆ, ಮುಂದೆ ಓದಿ…

ಕಂಗ (ಜ್ಯೋತಿಷ್ಯ್ಮತಿ): ಶ್ರಾವಣದ ಮಳೆ ಮಧ್ಯೆ ಹಸಿರು ಬಣ್ಣದ ಕಾಯಿಗಳು ಕೆಸರಿ ಬಣ್ಣಕ್ಕೆ ತಿರುಗಿ ನಂತರ ಒಡೆದು ಬೀಜ ಹೊರಗೆ ಕಾಣುತ್ತದೆ. ಕೈಯಲ್ಲಿ ಸ್ವಲ್ಪ ಹಿಸುಕಿ ಒಳಗೆ ಎಳ್ಳಿನ ಬಣ್ಣದ ಬೀಜ ಸಿಗುತ್ತದೆ. ನವಿರಾದ ಪರಿಮಳ ಆಸ್ವಾದಿಸುತ್ತಿದ್ದಂತೆ ಮನಸ್ಸು ಶಾಂತವಾದ ಅನುಭವ ಆಹಾ ಅದು ಅವರ್ಣನೀಯ.

ಫೋಟೋ ಕೃಪೆ : medicinallive

ಮಕ್ಕಳಿಗೆ ಪೆಟ್ಳು (ಬಿದುರಿನಿಂದ ಮಾಡುವ ಒಂದು ಆಟಿಕೆ ) ಹರಳಾಗಿ ಬಳಸುತ್ತಿದ್ದ ಕಾಲದಲ್ಲಿ ಬೇಡವೆಂದರೂ ಬುದ್ಧಿ ಚುರುಕಾಗುತ್ತಿತ್ತು .ಈಗ ನಾವದನ್ನು ಕೃತಕ ವಾಗಿ ಮಾಡಬೇಕಾಗಿದೆ. ಇದರಲ್ಲಿ ಎರಡು ವಿಧ. ಬಿಳಿ ಮತ್ತು ಕೆಂಪು. ಕೆಂಪು ಒಂದು ತೊಟ್ಟಿನಲ್ಲಿ ಎರಡು ಮೂರು ಕಾಯಿ ಹೊಂದಿದ್ದು ಸ್ವಲ್ಪ ಉದ್ದ ಗೊಂಚಲು ತೊಗಟೆ ಬಣ್ಣ ಗಾಢ ಗುಲಾಬಿ. ಇದು ಮೆಡಿಸಿನ್ ಗೆ ಹೆಚ್ಚು ಶ್ರೇಷ್ಠ. ಬಿಳಿ ಒಂದೊಂದೇ ಕಾಯಿ ತೊಗಟೆ ಬಿಳಿ ಮಿಶ್ರಿತ ಗುಲಾಬಿ. ಇದರ ಬೇರು, ದಂಟು, ಬೀಜಗಳಲ್ಲಿ ಮೆಡಿಸಿನ್ ಗುಣ ಅಪಾರ.

ಫೋಟೋ ಕೃಪೆ : google

ಎಲೆ ಹೆಣ್ಣಿನ ಯೋನಿ ಆಕಾರ ಹೊಂದಿದೆ. ಇದನ್ನು ಗರ್ಭಧಾರಣೆ ಆಗಿದೆ ಎಂದು ತಿಳಿಯಲು(ಈಗಿನ ಪ್ರೇಗಾ ನ್ಯೂಸ್) ಹಿರಿಯರು ಕಂಡು ಕೊಂಡ ವಿಧಾನದಲ್ಲಿ ಒಂದು. ಬೇರಿನಿಂದ ತಯಾರಿಸುವ ಪದಾರ್ಥ ಹುಚ್ಚನ್ನೂ ಸಹ ಗುಣಪಡಿಸಬಲ್ಲದು. ಇದರ ಬೀಜ ಸಂಗ್ರಹಿಸಿ ಒಣಗಿಸಿ ಎಣ್ಣೆ ತೆಗೆದು ತಯಾರಿಸಿದ ಪದಾರ್ಥ ದ ಒಂದು ಹನಿ ನೆತ್ತಿಯ ಮೇಲೆ ಹಾಕಿ 21 ಬಾರಿ ಮನೆದೇವರನ್ನು ನೆನಪು ಮಾಡಿಕೊಂಡು ತಟ್ಟಿದರೆ ನೆನಪಿನ ಶಕ್ತಿಯನ್ನು ಹೆಚ್ಚಿಸುತ್ತದೆ. ಈಗ ಎಣ್ಣೆ ತೆಗೆಯುವ ಸಿಜನ್ ಆದ್ದುದ್ದರಿಂದ ತಯಾರಿಕಾ ಹಂತದಲ್ಲಿ ಇದೆ .ಅಗತ್ಯ ಇದ್ದವರಿಗೆ ನನ್ನಲ್ಲಿ ಸಿಗುತ್ತದೆ. ತರಿಸಿಕೊಂಡು ಉಪಯೋಗಿಸಿ ಲಾಭವನ್ನು ಪಡೆದುಕೊಳ್ಳಬಹುದು. ಈಗ ಕಾಲ ಬದಲಾಗಿದೆ ಎಲ್ಲಿ ನೋಡಿದರೂ ಪಾಳುಭೂಮಿ ಸಾಗುವಳಿ ಆಗಿದೆ.

ಮಲೆನಾಡಿನಲ್ಲಿ ಸಾಕಷ್ಟು ಕಾಣಸಿಗುತ್ತಿದ್ದ ಬಳ್ಳಿ ಮನುಷ್ಯನ ಕಮರ್ಷಿಯಲ್ ಮೈಂಡ್ ಗೆ ಬಲಿಯಾಗುತ್ತಿದೆ.


  • ಸುಮನಾ ಮಳಲಗದ್ದೆ.(ನಾಟಿವೈದ್ಯೆ)  ಸಾಗರ 
0 0 votes
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW