ಜೀವ ತಂತಿ ನಿನ್ನ ಪ್ರೀತಿ, ಕನಸ ಕಾಡುತಿದೆ ಗೆಳತಿ…..ಸುಂದರ ಸಾಲುಗಳು ಡಾ. ಲಕ್ಷ್ಮಣ ಕೌಂಟೆ ಅವರ ಲೇಖನಿಯಲ್ಲಿ ಮುಂದೆ ಓದಿ…
ಕನಸ ಕಾಡುತಿದೆ ಗೆಳತಿ
ನಿನ್ನಯ ಸವಿನೆನಪು…
ಮನಸ ಸೇರುತಿದೆ ಗೆಳತಿ
ನಿನ್ನಯ ಸಿಹಿ ನೆನಪು…
ಪ್ರೇಮದ ಮಡಿಲು ನಿನ್ನೆದೆ ಮಹಲು
ಬಿಡದಂತೆ ಸೆಳೆಯುತಿದೆ
ಪ್ರೀತಿಯ ಕಡಲು ನಿನ್ನಯ ಒಡಲು
ಅಲೆಯಂತೆ ಬಡಿಯುತಿದೆ
ಪ್ರೀತಿಯ ನೋವ ಅರಿಯದ
ಜೀವ ನಿನ್ನನೇ ಕಾಯುತಿದೆ
ಒಲವ ಬೇಗೆ ಬೇಗ ತಣಿಸಲು
ಹೃದಯವು ಮಿಡಿಯುತಿದೆ
ಜೀವ ತಂತಿ ನಿನ್ನ ಪ್ರೀತಿ
ಹೃದಯವ ಮೀಟುತಿದೆ
ಒಲವೇ ಜೀವ ಎಂದ ಭಾವ
ಇನಿಯನ ಮರೆಯುತಿದೆ
Write to ನಾ ಬರೆದ ಕವನಗಳು
- ಡಾ. ಲಕ್ಷ್ಮಣ ಕೌಂಟೆ (ಕವಿ, ಲೇಖಕರು, ಉಪನ್ಯಾಸಕರು) ಕಲಬುರಗಿ.