ಮಕ್ಳಿಗೆ ಕಷ್ಟ ಅಂದ್ರೆ ಅಮ್ಮನ ಕಣ್ಣಲ್ಲಿ ನೀರು ಬರುತ್ತೆ, ಅಮ್ಮನಿಗಿಂತ ತ್ಯಾಗಮಹಿ ಯಾರಿಲ್ಲ.ಆ ಪ್ರೀತಿಯ ಮಮತೆಯ ಮೇಲೆ ರಾಘವೇಂದ್ರ ಕೆ ಅವರು ಬರೆದ ಸುಂದರ ಕವಿತೆ ತಪ್ಪದೆ ಓದಿ…
ಅಮ್ಮಾ ಅಮ್ಮಾ……
ತಿಳಿ ಮನಸಿನ ಅಮ್ಮನ ಪ್ರೀತಿ
ಬದುಕಿಗೊಂದು ಭರವಸೆಯ ನೀತಿ
ಯಾರಿಹರು ಅಮ್ಮನ ರೀತಿ
ಎಣಿಸಿದೊಡೆ ಕಾಡುವುದು ಭೀತಿ
ಒಂದೊಮ್ಮೆ ನೀವಿಲ್ಲದಿದ್ರೆ ಏನಾಗ್ತಾ ಇತ್ತು ನಮ್ಮ ಪರಿಸ್ಥಿತಿ.
ಅಮ್ಮ ಅಮ್ಮ ಅಮ್ಮ ಕೊಟ್ಬಿರಿ ನಮಗೆ ಜನ್ಮ
ಜೀವನೇ ಒತ್ತೆ ಇಟ್ಟು ಸಾಕಿದಿರಿ ನಮ್ನ
ಎದೆ ಹಾಲು ಕುಡಿಸಿದಿರಿ ನೀವು
ಅಲ್ಛೋಹಾಲು ಕುಡಿತೀವಿ ನಾವು
ಅಯ್ಯೋ ಪಾಪ ಗೊತ್ತಾದ್ರೆ ಪಡ್ತೀರಿ ನೀವು ನೋವು
ಹೆತ್ತವರೇ ದೇವರು ಅಂತ ಎಲ್ಲರೂ ಹೇಳ್ತಾರೆ
ತುಪ್ಪದ ದೀಪ ಮಾತ್ರ ದೇವರಿಗೆ ಹಚ್ತಾರೆ
ಬೆಳಗೆದ್ದು ದೇವರ ಫೋಟೋ ನೋಡ್ಬೇಕು ಅಂತಾರೆ
ದೇವ್ರಂತ ಅಮ್ಮ ಕಂಡ್ರೆ ಸೈಡ್ ಗೆ ಹೋಗಿ ಅಂತಾರೆ
ದೇವರು ಬರೆದ ಕಥೆಯಲ್ಲಿ ಅಮ್ಮನ ಹೆಸರೇ ಮೊದಲು
ಮಕ್ಕಳು ಮಾಡೋ ಕಾರ್ಯದಲ್ಲಿ ಅಮ್ಮಗೆ ಮೊದಲು ವ್ಯಥೆ ಅಲ್ಲಿ.
ಚಂದಮಾಮನ ತೋರ್ಸಿ ಊಟ ಮಾಡಿಸಿದ್ದು ಅಮ್ಮಾ
ನಾವ್ ಹೇಗೆ ಇದ್ರು ನನ್ನ ಮಗ ಅನ್ನೋರು ಪ್ರಪಂಚದಲ್ಲಿ ನೀವೊಬ್ರೆ ಕಣಮ್ಮ
ಅಮ್ಮಾ ಅಮ್ಮಾ ಅಮ್ಮಾ ದೇವರು ನಿಮಗೆ ಅದೆಷ್ಟು ಸಹನೆ ನೀಡಿಹನಮ್ಮಾ
ಜೀವನವಿಡೀ ನಮ್ಮನ್ನ ಅದು ಹೇಗೆ ಸಹಿಸುವಿರಮ್ಮ..
ಹೆತ್ತವರಿಗೆ ಮಕ್ಕಳೇ ಪ್ರಪಂಚವಂತೆ
ಅಮ್ಮಾ I love you ಅಂದರೆ ಪ್ರಪಂಚವನ್ನೇ ಮರೆಯುವರಂತೆ
ಹೆತ್ತವರ ಪ್ರೀತಿಗೆ ರಾಮಾಯಣ ಮಹಾಭಾರತವೆ ಸಾಕ್ಷಿಯಂತೆ.
ಅಂತೆ ಅಂತೆ ತಾಯಿನೆ ದೇವರಂತೆ..
ಹೇಳೋಕೆ ಇಡೀ ಜೀವನವೇ ಸಾಲಲ್ಲವಂತೆ
ಅಮ್ಮ ನೀವಿಲ್ಲದ ಬದುಕು ಕೇವಲ ಗಜಿ ಬಿಜಿಯ ಸಂತೆ.
ಜಗವೆಲ್ಲ ಮಲಗಿರುವಾಗ
ಹೆತ್ತವರು ಏಳುವರು ಆಗ
ಮಕ್ಳು ಮಕ್ಳು ಮಕ್ಳು ಅಂದ್ಕೊಂಡ್ ಅವರಿಗಾಗಿ ಮಾಡ್ತಾರೆ ತ್ಯಾಗ
ತ್ಯಾಗ ತ್ಯಾಗ ತ್ಯಾಗ!
ಆದ್ರೆ ಹೆಚ್ಚಿನ ಮಕ್ಳು ಮಾಡೋದು ಏನು ಗೊತ್ತಾ
ಕೇವಲ ಭೋಗ
ಹೆತ್ತವರು ಹೇಳೋದು ಒಂದೇ
ಯಾರಿಲ್ಲ ನಮ್ ಮಕ್ಕಳ ಮುಂದೆ
ಅದೆಷ್ಟು ರಾತ್ರಿಗಳನ್ನ ನಮಗಾಗಿ
ಕಳೆದಿರಿ ಅಮ್ಮಾ…
ಜ್ವರ ಬಂದ ಕೈಗಳನ್ನ ಹಿಡಕೊಂಡೇ
ಮಲಗಿದಿರಮ್ಮ
ಅಮ್ಮಾ ..ಅಮ್ಮಾ ..ಅಮ್ಮಾ…
ಪುಣ್ಯ ಗರ್ಬೆಯು ನೀವು
ನಿಮ್ಮ ಉದರದಿ ಬೆಳೆದವು ನಾವು
ಅಮ್ಮ ನೀವೇ ದೇವರಂತ ಎಲ್ಲಾ ಹೇಳ್ತಾರೆ
ಅಮ್ಮನ ಜೊತೆ ಅಪ್ಪ ಇರೋದ್ ಮರ್ತೆ ಬಿಡ್ತಾರೆ
ವಯಸ್ಸಾದ ಮೇಲೆ ಮನೆಯಿಂದ ಹೊರ ನೆಡೆಯಿರಿ ಅಂತಾರೆ
ಮನೆ ಕಟ್ಟಿದ್ ಕೂಡ ನಮ್ಮನ್ನ ಬೆಳ್ಸಿದ್ ಕೂಡ ಅವ್ರೇನೆ ಅನ್ನೋದನ್ನ ಮರ್ತೆ ಬಿಡ್ತಾರೆ…..
ಮಕ್ಳಿಗೆ ಕಷ್ಟ ಅಂದ್ರೆ ನೀವು ಕಣ್ಣೀರು ಹಾಕ್ತೀರಾ
ನಿಮ್ಗೆನೇ ಕಷ್ಟ ಬಂದ್ರೆ ಹೇಳ್ದೆ ಸುಮ್ನೆ ಇರ್ತೀರಾ
ಹೆತ್ತವರು ಮಾತ್ರ ಮಕ್ಳು ತುಂಬಾ ಸಾಚಾ ಅಂದ್ಕೊಂಡೆ ಇರ್ತಾರೆ
ಸಾಚಾ ಅಂಸ್ಕೊಂಡ್ ಮಕ್ಳು ಮಾತ್ರ ಮಾಡ್ಬಾರ್ದನ್ನೆ ಮಾಡ್ತಾರೆ
ಪಾಪ ಅಮ್ಮ ನೀವು ಮಕ್ಳು ಕೆಟ್ಟವ್ರೆ ಅಂದ್ರೆ ನಂಬೋದೆ ಇಲ್ಲ
ಹೇಳ್ತೀರಾ ನನ್ನ ಎದೆಹಾಲು ಕುಡಿದ ಮಗು ಹಾಗೆಲ್ಲ ಮಾಡೋದೇ ಇಲ್ಲಾ
ಅಯ್ಯೋ ದೇವ್ರೆ ಮಕ್ಳು ಎಣ್ಣೆ ಕುಡ್ಕೊಂಡ್ ಬಂದ್ರು ನಿಮ್ಗೆ ಗೊತ್ತಾಗೋದೇ ಇಲ್ಲ.
ಅಮ್ಮಾ… ಅಮ್ಮಾ… ಅಮ್ಮಾ ಅಮ್ಮಾ….
- ರಾಘವೇಂದ್ರ ಕೆ (ಸಮಾಜ ಸೇವಕರು, Kannadigana Creations ಸಂಸ್ಥಾಪಕರು, ಹವ್ಯಾಸಿ ಬರಹಗಾರರು) ನೊಣಬೂರು