ಓದು ಎಂಬ ಒಡಲಿಗೆ ಎಷ್ಟು ಕೃತಿಗಳು ಇದ್ದರು ಸಾಲದು. ಎಷ್ಟು ಓದಿದರು ಆಗದು ಇಂತಹ ಓದು ಎಂಬ ಒಡಲನ್ನು ತುಂಬಿಸಲು ಸಾಹಸವೇ ಸರಿ. ಇನ್ನು ಓದಿನ ಹವ್ಯಾಸ ,ಅಭಿರುಚಿ, ಇದ್ದರಂತೂ ಹೊಸ ಜಗವೇ ನಮ್ಮನ್ನು ಸುತ್ತುವರಿದಂತೆ , ಇಂತಹ ತಾಪವ ದೂರಸರಿಸಿ ಭಾವಕ್ಕೂ ಬುದ್ದಿಗೂ ಚೈತನ್ಯ ತುಂಬುತ್ತದೆ. ಮುಂದೆ ಓದಿ ರೇಶ್ಮಾ ಗುಳೇದಗುಡ್ಡಾಕರ್ ಅವರ ಲೇಖನಿಯಲ್ಲಿ ನಾಲ್ಕು ಪುಸ್ತಕಗಳ ಕಿರು ಪರಿಚಯ….
ನಾವು ಓದುಗರಾಗಿ ಓದಿದ್ದು ಒಂದೆಡೆಡಯಾದರೆ, ಕೃತಿಗಳೆ ನಮ್ಮನ್ನು ಓದಿಸಿಕೊಂಡು ಹೋಗುತ್ತವೆ ಬಿಡದಂತೆ. ಕಾಡುತ್ತವೆ ಹೊರ ಬರದಂತೆ. ಇದು ಓದಿನ ಸವಿ ಅರಿತವರಿಗೆ ಚನ್ನಾಗಿ ಅನುಭವಕ್ಕೆ ಬರುತ್ತದೆ. ಕೆಲ ಕೃತಿಗಳು ಮರೆಯದೆ ಮನಸಾಗರದಲ್ಲಿ ಅಚ್ಚಾಗಿಉಳಿಯುತ್ತವೆ ಮತ್ತೆ ಮತ್ತೆ ಓದಲು ಪ್ರೇರೇಪಿಸುತ್ತವೆ. ಯಾರ ಬರಹ ಇಷ್ಟ ಯಾವ ಬರಹ ಮೆಚ್ಚು ಎಂದು ಹೇಳುವದು ಪ್ರಯಾಸದ ವಿಚಾರ ,ಅಂತೆಯೇ ಮೆಚ್ಚಿನ ಲೇಖಕರು ,ಬರಹಾಗರರು,ಲೇಖಕಿ ಎಂದು ಹೇಳುವದು ಕಷ್ಟವೇ … ಕುವೆಂಪು ,ಕಾರಂತರು , ಡಿವಿಜಿ ,ಗೊರುರು, ಎಂ.ಕೆ .ಇಂದಿರಾ , ತೇಜಸ್ವಿ,ಲಂಕೇಶ್, ಬೈರಪ್ಪ, ನೇಮಿಚಂದ್ರ,ಹೀಗೆ ಹಲವಾರು ಲೇಖಕರ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಕೆಲಕೃತಿಗಳು ನಾ ಇಲ್ಲಿ ಒಟ್ಟು ಮಾಡಿರುವೆ ಬಹುಪ್ರಯಾಸ ಪಟ್ಟು ! ನಾ ಮತ್ತೆ ಮತ್ತೆ ಓದಬೇಕು ಎನಿಸುವ ಕೃತಿಗಳ ಪುಟ್ಟ ವಿವರಣೆ ಇಲ್ಲಿದೆ .
೧) ಬಾಳ್ವೆಯ ಬೆಳಕು
ನಡೆದಾಡುವ ವ ವಿಶ್ವ ಕೋಶ ಜ್ಞಾನಪೀಠ ವಿಜೇತ ಡಾ.ಶಿವರಾಮ ಕಾರಂತರ ಕೃತಿ ಇದು ಗಾತ್ರದಲ್ಲಿ ಪುಟ್ಟದಾದರೂ ಇದರ ಅರಿವಿನ ವಿಸ್ತಾರ ಮುಗಿಲಗಲ.
ಈ ಕೃತಿಯಲ್ಲಿ ಒಟ್ಟು ಹದಿನಾಲ್ಕು ಅಧ್ಯಾಯಗಳಿವೆ. ಕೊನೆಯ ಅಧ್ಯಾಯ ಉಪಸಂಹಾರಕ್ಕೆ ಮೀಸಲಾಗಿದೆ. ಶೀರ್ಷಿಕೆಯಂತೆ ಇಡೀ ಕೃತಿ ಎಳೆ ಎಳೆಯಾಗಿ ಸಾರುತ್ತದೆ. ಬದುಕಿನ ಪ್ರೀತಿಯನ್ನು ಹಾಗೂ ಈ ಬಾಳಿನ ಮಹತ್ವವನ್ನು ತಿಳಿಸುತ್ತದೆ. ಕೃತಿ ಚಿಕ್ಕದಾದರೂ ಇಲ್ಲಿ ಮೌಲ್ಯಗಳು ಮತ್ತು ತಿಳಿವಿನ ಹರಿವು, ಇವುಗಳ ವ್ಯಾಪ್ತಿ ಆಗಾಧವಾಗಿದೆ. ಇದು ವಿಚಾರ ಸಾಹಿತ್ಯದ ಕೃತಿ. ಇಲ್ಲಿ ಇತಿಹಾಸ, ವಿಜ್ಞಾನ
ಆರ್ಥಿಕತೆ, ವಿದೇಶದ ಹಿಟ್ಲರ್ ಆತನಿಂದ ಸಮಾಜಕ್ಕಾದ ಹಾನಿ ಒಂದೆಡೆ ಚರ್ಚೆಯಾದರೆ. ಬುದ್ದನ ನಂತರ ಎರಡುಸಾವಿರ ವರ್ಷಗಳ ಅಂತರದಲ್ಲಿ ಗಾಂಧಿಜಿಯಲ್ಲಿ ಕಂಡ ಬುದ್ದನ ಅಂತಃಕರಣ ಜನರನ್ನು ಮತ್ತು ಸಮೂಹವನ್ನು ತಿದ್ದಿ ಸಮಾಜದ ಏಳಿಗೆಗೆ ಕಾರಣವಾದ ಬಗೆ. ಹೀಗೆ ಇಲ್ಲಿನ ವಿಚಾರ ಸರಣಿ ಜಗತ್ತಿನ ಎಲ್ಲ ಸ್ತರಗಳವರೆಗೂ ವಿಸ್ತರಿಸಿದೆ.
ಹುಟ್ಟು – ಸಾವಿನ ಚಕ್ರದಲ್ಲಿ ಮಾನವ ಸಾವಿನ ಕುರಿತ ಚಿಂತೆಯನ್ನು ಹುಟ್ಟಿನಿಂದಲೇ ಮಾಡುತ್ತಾನೆ ಅದನ್ನು ವೈಭವಿಕರಿಸಿದ್ದಾನೆ. ಆದರೆ ಬಾಳನ್ನು ಕಡಾಗಾಣಿಸಿದ್ದಾನೆ ಎಂದು ಮರುಗುತ್ತಾರೆ. ಜೀವನದ ಕೌತುಕ, ಇಂದಿನ ಆನಂದವನ್ನು ಕಾಣದೆ ಭವಿಷ್ಯದ ಚಿಂತೆಯಲ್ಲಿ ನೊಂದು ಈ ಬದುಕನ್ನು ಮೂರು ದಿನದ್ದು ಎಂದು ಹೇಳುವದನ್ನು ಕಾರಂತರು ಬಹು ವಿರೋಧಿಸುತ್ತಾರೆ .
ಯಾರೋ ಮಾಡಿಟ್ಟ ಸಂಪ್ರದಾಯದ ,ವಿಧಿವಿಧಾನಗಳಿಗೆ ಮೂಕವಾಗಿ ಒಪ್ಪಿಕೊಳ್ಳವ ಬದಲು .ನಮ್ಮ ತಿಳಿವನ್ನು ,ನಿಲುವನ್ನು ಗಟ್ಟಿಪಡಿಸಿಕೊಳ್ಳಬೇಕು ಎಂದು ಬಲವಾಗಿ ಹೇಳಿದ್ದಾರೆ .ಈ ಜೀವನದ ವ್ಯಾಪ್ತಿ ಹಿರಿಯದು ನಿಸರ್ಗಕ್ಕಿಂತ ಮಿಗಿಲಾದ ಪಾಠ ಶಾಲೆ ಇಲ್ಲ. ಅದರ ರಹಸ್ಯ ಅರಿತವರಿಲ್ಲ ಆದೊಂದು ವಿಸ್ಮಯ ಲೋಕ ಇದನ್ನು ಕಾಣಲು ಹಣ ಅಥವ ಅಧಿಕಾರದ ಅವಶಕ್ಯತೆ ಇಲ್ಲ .ಮನೆಯ ಬಾಗಿಲಲ್ಲೆ ಪ್ರಕೃತಿಯ ಸೊಬಗ ಆನಂದಿಸಿ ಮನವನ್ನು ಹಗುರಾಗಿಸಿಕೊಳ್ಳಬಹುದು ಎಂಬ ವಾಸ್ತವದ ಸತ್ಯ ಹೇಳುತ್ತದೆ ಈ ಕೃತಿ .
ಪೂರ್ವಾಗ್ರಹ ಪೀಡಿತ ದೃಷಿಕೋನದಿಂದ ನಮ್ಮಬದುಕಿನ ವೈಪಲ್ಯಕ್ಕೆ ನಾವೇ ನೇರ ಹೊಣೆಗಾರರು ಎಂಬುದನ್ನು ಮನವರಿಕೆ ಮಾಡುತ್ತದೆ ವೈಚಾರಕವಾಗಿ ವಿಶ್ಲೇಷಣೆಯ ನೀಡುತ್ತದೆ .

೨) ತಬ್ಬಲಿ ನೀ ನಾದೆ ಮಗನೆ
ಜೈಮಿನಿ ಭಾರತ ದ ಓದು ಮುಂದೆ ವಿದೇಶದ ಕದ ತಟ್ಟುತ್ತದೆ ! ಮೂಕತಾಯಿಗೆ ಮಾತಾಡುವ ಮಗ ! ಅಜ್ಜನ ಅಂಗಳ. ದನಕರುಗಳು ಕಲರವ ! ವೀದೇಶದ ಹಿಲ್ಡಾ ಸ್ವದೇಶ ದ ಸೊಸೆ ಅವಳಲ್ಲಿ ಮತ್ತೆ ಹುಟ್ಟಿ ಬರುವ ನಾಯಕನ ತಾಯಿ !
ಇದು ಎಸ್. ಎಲ್ . ಭೈರಪ್ಪನವರ ನಾ ಓದಿದ ಮೊದಲ ಕೃತಿ ಇದು ಸಿನಿಮಾವಾಗಿ ಇದೆ ಆದರೆ ನಾ ಆ ಸಿನಿಮಾ ನೋಡಿಲ್ಲ . ನಾ ಓದಿದಾಗ ನಮ್ಮದೇ ಆದ ಕಲ್ಪನೆಯಲ್ಲಿ ಕೃತಿ ನಮ್ಮೊಂದಿಗೆ ನಡೆಸುವ ಸಂಭಾಷಣೆ ಅನನ್ಯ ಎನಿಸುತ್ತದೆ ಹೀಗಾಗಿ ಇವುಗಳ ಮುಂದೆ ಸಿನಿಮಾ ನಿರಸವಾಗುತ್ತವೆ ಇದು ನನ್ನ ಅಭಿಪ್ರಾಯ ಮಾತ್ರ.
ಅದ್ಬುತವಾದ ತಿರುವುಗಳಿಂದ ಕೊಡಿದ ಈ ಕೃತಿ ಓದುಗನ ಕುತುಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ನಿರಂತರವಾಗಿ ಸಾಗುತ್ತದೆ . ತಂದೆ ಇಲ್ಲದೆ ಅಜ್ಜನ ಮಡಿಲ್ಲಿ ಬೆಳದ ಮಗನೊಬ್ಬ ತನ್ನ ಊರಿಗೆ “ಸಾಹೇಬನಾಗಿ” ಬರುತ್ತಾನೆ! ತನ್ನವರಿಂದಲೇ ದೂರ ವಾಗುತ್ತಾನೆ ಹತ್ತಿರ ಇದ್ದು, ತನ್ನ ತಾಯಿಯ ಚಿತೆಗೆ ಗೆಳಯನಿಂದ ಅಗ್ನಿ ಸ್ಪರ್ಶ ವಿದೇಶಿ ಬದಲಾವಣೆಯ ಸಾಂಪ್ರದಾಯಿಕ ನೆಲದಲ್ಲಿ ತರಲು ಪ್ರಯತ್ನಿಸಿದ ಭಾರತೀಯ ಬಾಂಧ್ಯವ್ಯವ ಕಳೆದುಕೊಂಡು ಮೂಕವಾಗಿ ಹುಡುಕಾಟವ ನಡೆಸುವ ನಾಯಕನ ವ್ಯಥೆ ,ಸಮಾಜದ ಕಟ್ಟುಪಾಡು ,ಸಂಬಂಧಗಳ ತೊಳಲಾಟ ಎಲ್ಲವೂ ನೈಜವಾಗಿ ಮೂಡಿಬಂದಿವೆ.
ಹೈನುಗಾರಿಕೆ ಯ ಒಂದು ಚಿತ್ರಣವೇ ಇಲ್ಲಿ ಬಹು ಪಾಲು ವ್ಯಾಪಿಸಿ ಓದುಗನಿಗೆ ತನ್ನ ನೆಲ ,ನೆಲದ ಸೂಗಡು , ಮೂಕ ಜೀವಿಗಳ ಮಾತನ್ನು ಹಾಗೂ ಸಾಂಸ್ಕೃತಿಕ – ಸಾಮಾಜಿಕ ಭಾವನೆಗಳ ಘರ್ಷಣೆಯನ್ನು ಚಿತ್ರಿಸಿದರೆ ಮತ್ತೊದೆಡೆ. ಎಲ್ಲಕಿಂತ ಮಿಗಿಲಾಗಿ ” ನನ್ನ ತನ” ಬ ಬಲವಾದ ಶಕ್ತಿ ಯನ್ನು ಈ ಕೃತಿ ಓದುಗರಲ್ಲಿ ಹುಡುಕಾಡುವಂತೆ ಮಾಡುವದು ಸುಳ್ಳಲ್ಲ . ಶಾಲಾ ದಿನಗಳಲ್ಲಿ ಓದಿದ ಕೃತಿ ಸದಾ ಹಸಿರು, ಮರೆಯಾಗುತ್ತಿರುವ ಹಾಗೂ ಇಗ ಆಧುನಿಕವಾಗಿ ಬದಲಾಗಿರುವ ಹೈನುಗಾರಿಕೆ ಯ ಚಿತ್ರಣ ಕಂಡಾಗ, ಗೋಧೋಳಿಯ ಸಮ ನೋಡಿದಾಗ, ತಬ್ಬಲಿ ನಿನಾದ ಮಗನೆ …. ತಟ್ಟನೆ ಮನದ ಪಟದಲ್ಲಿಮೂಡುತ್ತದೆ.

೩) ಮರುಭೂಮಿಯ ಹೂ
ಗಂಡು ಪ್ರಧಾನ ಸಮಾಜದ ಕಾರಳ ಬರ್ಬರ ದೌರ್ಜನ್ಯ ವ ಜಗತ್ತಿಗೆ ಸಾರಿ ಹೇಳಿದ ಈ ಕೃತಿ ಎಂದೂ ಬಾಡದಂತೆ ನಮ್ಮಗಳ ಮನದಲ್ಲಿ ಅರಳಿರುತ್ತದೆ ಎಂತಹ ಶುಷ್ಕ ಮನವನ್ನು ಆರ್ದ ಗೊಳಿಸುವ ಕೃತ ತೀವ್ರ ವಾಗಿ ಓದುಗರನ್ನು ಸೆಳೆಯುತ್ತದೆ. ಓದು – ಬರಹ ತಿಳಿಯದ ಮುಂದಿನಾ ದಾರಿ ಯಾವುದು ಎಂದು ನಿಖರವಿರದ ವಾರಿಸ್ ಅವರ ಓಟ ಅಮೇರಿಕದ ಮಾಡೆಲ್ ಲೋಕಕ್ಕೆ ಕರೆದೂಯ್ಯುತ್ತದೆ …….!
ಆದರೆ ಆ ಓಟಕ್ಕಾದ ಅಡ್ಡಿ ,ಅಡೆತಡೆ , ನೋವು ,ಅಪಮಾನ ,ಎಲ್ಲವ ಮೀರಿಯು ಬೆದರದೆ ಬಾಳಿದರೆ ಒಂದು ಬದುಕಿದೆ ಎಂಬ ಪ್ರಖರ ಸತ್ಯವ. ತೋರುವ ಕೃತಿ ಇದು.
ಬಹು ಯುವಜನರು ಖಿನ್ನತೆ, ತೋಳಲಾಟ, ಅಸಹಾಯಕ ಪರಿಸ್ಥಿತಿ ಇದೆ ಎನ್ನುವ ಮೊದಲು ಈ ಕೃತಿ ಓದ ಬೇಕಿದೆ . ಪ್ರತಿ ಕಾರ್ಯಗಳಿಗೂ ಯೋಜನೆ ( perfect plan ) ಇರ ಬೇಕು , ಮಾರ್ಗದರ್ಶನ ಮಾಡಲು ದೊಡ್ಡದು ಗುರು ಬೇಕು, ಪ್ರತಿಷ್ಟಿತ ಶಾಲೆ ,ಕಾಲೇಜಿನ ವಿದ್ಯ ಬೇಕು ಬೆಳೆಯಲು , ಇನ್ನು ಅನೇಕ ಬೇಕು, ಬೇಕು ಎಂಬ ಸಂಗತಿಗಳನ್ನು ಬೆಷರತ್ ಅಗಿ ತಳ್ಳಿ ಹಾಕಿ ನಮ್ನೊಳಗಿನ ನಾವೇ ನಿಜವಾದ ನಾಯಕ/ ನಾಯಕಿ ಎಂಬು ಚಿಂತನೆಯನ್ನು ಈ ಕೃತಿ ನೀಡುತ್ತದೆ ಯೋಚಿಸುವಂತೆ ,ಪ್ರೇರೆಪಿಸುತ್ತದೆ. ಕೃತಿ ಓದಿದ ಮೇಲೆಯೂ ಬಹು ಕಾಲ ನೆನಪಾಗುತ್ತದೆ … ವಾರಿಸನ್ ಅವರ ಸ್ಥೈರ್ಯ ,ಆತ್ಮವಿಶ್ವಾಸ ಓದುಗರ ಮನದಲ್ಲಿ ಸಂಚಲನವ ಉಂಟುಮಾಡುತ್ತದೆ.
೪) ಹಿಮಾಲಯದ ಮಾಹಾತ್ಮರ ಸನ್ನಿಧಿಯಲ್ಲಿ
ವೈಜ್ಞಾನಿಕವಾಗಿ ಆಧ್ಯಾತ್ಮದ ಪಯಣವನ್ನು ನಿರ್ದಿಷ್ಟ, ವ್ಯಕ್ತಿ ನಿಷ್ಟ ವಾಗಿ ತಣ್ಣಗೆ ನಮೊಳಗೆ ಸಾಗುತ್ತದೆ ಕೃತಿ ಇಲ್ಲಿ ಪೊಳ್ಳು ಆದರ್ಶಗಳು ಇಲ್ಲ , ಒಣ ಸಿದ್ದಾಂತಗಳಿಲ್ಲ,ಊಹಾತ್ಮಕ ಜಗದ ವಿವರಣೆ, ವರ್ಣನೆ ಇಲ್ಲವೇ ಇಲ್ಲ. ಎನಿದ್ದರು ಪ್ರಾಕ್ಟಿಕಲ್ …ಪ್ರಾಕ್ಟಿಕಲ್ …. ಮೂದಲು ೨೦೦ ಪುಟಗಳು ಓದುವದು ಸಾಹಸ ತದನಂತರ ಕೃತಿ ಶರವೇಗದಲ್ಲಿ ಸಾಗುತಗತದೆ . ಎಷ್ಷು ಬಾರಿ ಓದಿದರು ಅಷ್ಟು ಬಾರಿ ನೂತನ ಆಲೋಚನೆಗಳೆ ಮನದ ಪಟಲ ತುಂಬುತ್ತವೆ ! ನಕಾರಾತ್ಮಕತೆ, ತೊಳಲಾಟ , ಸಂಕುಚಿತ ,ಸಂಕೀರ್ಣ ತೆಗಳಿಗೆ ಈ ಕೃತಿಯಲ್ಲಿ ಜಾಗವಿಲ್ಲ ….!!
ನಿರ್ಮಲತೆಯನ್ನು, ಪ್ರಜ್ಞಾಪೂರ್ವಕ ಉತ್ತರಗಳನ್ನು ಕೃತಿ ನಮಗೆ ನೀಡುತ್ತದೆ. ಪ್ರತಿ ಅಧ್ಯಯಾವು ಓದುಗನೊಂದಿಗೆ ಸಂವಾದಿಸುತ್ತದೆ. ಸಂದರ್ಭಗಳು ತಾರ್ಕಿಕವಾಗಿ ಇಲ್ಲಿ ವಿಶ್ಲೇಷಣೆಯನ್ನು ನೀಡುತ್ತವೆ. ಇಲ್ಲಿ ಒಲವಿದೆ, ಗೆಲುವಿದೆ, ಛಲವಿದೆ, ಆತ್ಮವಿಶ್ವಾಸವಿದೆ.
ಈ ಕೃತಿ ಇನ್ನೊ ಓದುತ್ತಿರುವೆ ಹೀಗಾಗಿ ಹೆಚ್ಚೆನು ಹೇಳಲಾರೆ ಇದು ಮತ್ತೆ ಮತ್ತೆ ಓದುವ ಕೃತಿ ಹೌದು. ಹೆಚ್ಚಿನ ವಿವರಣೆ ಕೃತಿ ಓದಿಯೇ ತಿಳಿಯಬೇಕಿದೆ .
- ರೇಶ್ಮಾ ಗುಳೇದಗುಡ್ಡಾಕರ್ (ಲೇಖಕಿ, ಕವಯತ್ರಿ)
