ಎಂ.ಕೆ .ಇಂದಿರಾ ಅವರು ಪ್ರಾಥಮಿಕ ಶಿಕ್ಷಣ ಮಾತ್ರ ಮುಗಿಸಿದ್ದರು.ಆದರೆ ಅವರಲ್ಲಿನ ಬರಹದ ಶಕ್ತಿ ಸದಾ ಹರಿಯುವ ನೀರಿನಂತೆ ಓದುಗರಲ್ಲಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ನಮ್ಮ ಕನ್ನಡಕ್ಕೆ ಎಂ.ಕೆ .ಇಂದಿರಾ ಸದಾ ಅಮೂಲ್ಯರು. ಮುಂದೆ ಓದಿ…
ಮೊದಲು ಎಂ.ಕೆ .ಇಂದಿರಾ ಅವರ ಬರಹ ಓದಿದ್ದು ಶಾಲಾದಿನಗಳಲ್ಲಿ “ಮನದಣಿಯೇ ನೋಡಿ ಮಣಿದೆ” ಎಂಬ ಶೀರ್ಷಿಕೆ ಇದ್ದ ಬರಹ ನನಗೆ ಪಠ್ಯ ವಾಗಿತ್ತು. ಇದು ಒಂದು ಪ್ರವಾಸ ಬರಹದಲ್ಲಿ ಆಯ್ದು ಬರಹವನ್ನು ಪಠ್ಯವಾಗಿ ಮಾಡಲಾಗಿತ್ತು.
ಪುಸ್ತಕ ತೆಗೆದುಕೊಂಡಾಗಲೆ ಎಲ್ಲ ಪಾಠದ ಪದ್ಯ ,ಗದ್ಯ ಓದುವದು ನನಗೆ ಮೊದಲಿನಿಂದಲು ಬಂದ ಹವ್ಯಾಸ. ಅಂತೇ ಈ ಬರಹವನ್ನು ಓದಿದಾಗ ಇಲ್ಲಿ ಅವರು ಕನ್ಯಾಕುಮಾರಿಗೆ ಭೇಟಿ ನೀಡಿದಾಗ ಸಮುದ್ರದಲ್ಲಿ ಇರುವೆ ವಿವೇಕಾನಂದ ಅವರ ಹೆಬ್ಬಂಡೆಯ ಕುರಿತ ವಿವರಣೆ ಅದು.ಇವರನ್ನು ಸೆಳೆದ ರೀತಿ ಅಲ್ಲಿನ ಪರಿಸರದ ಪರಿಚಯ ಈ ಲೇಖನದ ತಿರುಳು. ಯಾರನ್ನು ಆಕರ್ಷಿಸಲಾಗದ ಬಂಡೆ ವಿವೇಕಾನಂದನ್ನು ಹೇಗೆ ಮೋಡಿ ಮಾಡಿತು?. ಅಲ್ಲಿ ಭೇಟಿ ನೀಡಿದವರು ಯಾಕೆ ವಿವೇಕಾನಂದರಂತೆ ಆಗಲು ಸಾಧ್ಯವಿಲ್ಲ ಎಂಬ ಕಳವಳವನ್ನು ಲೇಖಕಿ ವ್ಯಕ್ತಪಡಿಸುತ್ತಾರೆ.

ಫೋಟೋ ಕೃಪೆ : Udayavani
ಇದೇಲ್ಲದಕ್ಕಿಂತ ನನಗೆ ಅದ್ವಿತೀಯವಾಗಿದ್ದು ಲೇಖಕಿಯ ಪರಿಚಯದಲ್ಲಿ ಇದ್ದ ಅವರ ಕುರಿತ ವಿವರ ಅವರು ಪ್ರಾಥಮಿಕ ಶಿಕ್ಷಣ ಮಾತ್ರ ಪಡೆದಿರುವರು ಎಂಬ ಮಾಹಿತಿ ಅಂದಿಗೂ ಇಂದಿಗೂ ಅಚ್ಚರಿಯನ್ನುಂಟು ಮಾಡುತ್ತದೆ !.
ಪ್ರಾಥಾಮಿಕ ಶಾಲೆ ಓದಿದ ಇಂದಿರಾ ಸಮಾಜವನ್ನು ತಿದ್ದುವ ಹಲವಾರು ಬರಹಗಳನ್ನು ಬರೆದಿದ್ದಾರೆ. ಅದರಲ್ಲಿಯೂ ಅವರು ಬರಹ ಆರಂಭಿಸಿದ್ದು 45 ರ ನಂತರ ! . ತಾವು ಬೆಳೆದ ಮಲೆನಾಡಿನ ರಮ್ಯತೆಯನ್ನು ಹೆಣ್ಣಿನ ನೀರವ ಮೌನವನ್ನು ಅಂದಿನ ಸಾಮಾಜಿಕ ಕಟ್ಟಳೆ ಸಂಕೀರ್ಣವಾದ ಬದುಕಿನಲ್ಲಿ ಅವಶೇಷವಾಗಿ ಉಳಿದ ಹೆಣ್ಣಿನ ಚಿತ್ರಣವನ್ನು ಅವರ ಬರಹಗಳಲ್ಲಿ ಕಾಣಬಹುದು.
ಅವರ ಹಲವು ಕಾದಂಬರಿಗಳು ಗಂಭೀರವಾದ ವಿಚಾರಗಳನ್ನು ಚರ್ಚಿಸುವಂತೆ ಸಮಾಜದಲ್ಲಿ ಸಂಚಲನ ಉಂಟು ಮಾಡಿದೆ. ಇಂದಿಗೂ ಆ ಕೃತಿಗಳನ್ನು ಓದಿದಾಗ ಅವರ ಬರಹದ ಗಟ್ಟಿತನ ಸಮಾಜದ ಬಗ್ಗೆ ಇರುವ ಕಾಳಜಿ , ಹೆಣ್ಣಿನ ವಿವಿಧ ಸಂಘರ್ಷ ಗಳನ್ನು ವಿವಿಧ ಪಾತ್ರಗಳ ಮೂಲಕ ಚಿತ್ರಿಸಿದ್ದಾರೆ .
ಆಧುನಿಕ ಕಾಲದಲ್ಲಿಯೂ ನಾವು ನಿರಾಂತಕವಾಗಿ ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಸಲು ಇನ್ನೊ ಚಡಪಡಿಸುತ್ತೇವೆ. ಹೀಗಿರುವಾಗ ಎಂ .ಕೆ .ಇಂದಿರಾ ಅವರ ಬರಹ ಅಂದಿನ ಕಾಲ ಘಟ್ಟದ ಎಲ್ಲ ಮಜಲುಗಳನ್ನು ಪ್ರಶ್ನಿಸುವ, ಅಥವಾ ಓದುಗರನ್ನು ಚಿಂತನೆಗೆ ಹಚ್ಚುವ. ವಿಚಾರ ಧಾರೆಗಳನ್ನು ತಮ್ಮ ಬರಹಗಳಲ್ಲಿ ಮೂಡಿಸಿ ಕ್ರಾಂತಿ ಮಾಡಿದ್ದಾರೆ.
ಅವರ ಹಲವು ಕಾದಂಬರಿ ಗಳು ಚಲಚಿತ್ರವಾಗಿ ಪ್ರೇಕ್ಷಕರ ಮನಸೊರೆಗೊಂಡಿರುವದು ಎಲ್ಲರಿಗೂ ತಿಳಿದ ವಿಚಾರ . ತನ್ನದೇ ಆದ ಶೈಲಿಯಲ್ಲಿ ಕತೆಗಳು ಹೇಳುವ ಇಂದಿರಾ ರವರು ನೈಜತೆಯ ಪರಿಧಿಯಲ್ಲಿ ಓದುಗರಿಗೆ ಪಾತ್ರಗಳು ಹತ್ತಿರ ವಾಗುವಂತೆ ಮಾಡುತ್ತಾರೆ .
ಮಯೂರ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾದಗಿದ್ದ “ಸದಾನಂದ “ಕಾದಂಬರಿ ಮಲೆನಾಡಿ ಪರಿಸರದಲ್ಲಿ ನಡೆಯುವ ತುಂಬು ಕುಟುಂಬದ ಕತೆ .

ಸರಾಗವಾಗಿ ಓದಿಸಿಕೊಂಡು ಹೋಗುವ ಕೃತಿ ಪುಟ ಪುಟವು ವರ್ಣರಂಜಿತವಾಗುತ್ತಾ ಅಗಣಿತ ತಿರುವು ಪಡೆಯತ್ತದೆ . ವಿಧುರ ಸದಾನಂದನ ಆಗಮನ ಕಾದಂಬರಿಯ ದಿಕ್ಕನ್ನು ಬದಲಿಸುತ್ತದೆ ” ರಮಾನಂದ ” ಎಂಬ ಹೆಸರಿನಿಂದ ಕಾದಂಬರಿ ,ಬರಹಗಳನ್ನು ಬರೆಯವ ಸಾದನಂದ ಅವರು ಹೆಣ್ಣಿನ ಶೋಷಣೆ ,ವಿಧವೆಯ ಪಾಡು ಇವೇ ಮೊದಲಾದ ಪ್ರಧಾನ ವಿಷಯ ವಸ್ತುಗಳಾಗಿರುತ್ತವೆ ..
ಇದೇ ಕಾದಂಬರಿಗೆ ಪ್ರಮುಖ ವಾಗುತ್ತದೆ ಬರಹದಂತೆಯೇ ನಾಯಕ ತನ್ನ ಬಾಳನ್ನು ವಿಧವೆ ಕಮಲಾಳ ಜೊರೆ ಹಂಚಿಕೊಳ್ಳುತ್ತಾನೆ .ರಾಜು, ಅಪಘಾತದಲ್ಲಿ ಕಾಲು ಕಳೆದುಕೊಂಡ ಗೌರಿಯ ವಿವಾಹವಾಗುವಂತೆ ಪ್ರೇರಣೆ ಯಾಗುತ್ತದೆ ಒಟ್ಟಾರೆ ಕಾದಂಬರಿ ಅಗೋಚರ ತಿರುವುಗಳ ಮೂಲಕ ಸುಖಾಂತ್ಯವಾಗುತ್ತದೆ .
ಉತ್ಕೃಷ್ಟ ಬರಹಗಳು, ಪ್ರಜ್ಞಾಪೂರ್ವಕ ವಿಚಾರಗಳನ್ನು ಒಳಗೊಂಡ ಬರಹ ನಮ್ಮ ಕನ್ನಡಕ್ಕೆ ಸದಾ ಅಮೂಲ್ಯ . ಬರಹ ಹರಿಯುವ ನದಿಯಂತೆ ಹರಿಯುತ್ತಲೇ ಜನಮನಗಳನ್ನು ತಲುಪಿ ವಿಚಾರ ಕ್ರಾಂತಿಯ ಮಾಡುತ್ತವೆ ಅಂತಹ ಬರಹಗಳಲ್ಲಿ ಎಂ.ಕೆ .ಇಂದಿರಾ ಬರಹವು ನಿಲ್ಲುತ್ತದೆ .
ರೇಶ್ಮಾ ಗುಳೇದಗುಡ್ಡಾಕರ್