‘ಕಿಟಕಿಯಲ್ಲಿ ಮುಂಜಾನೆ’ ಕವನ – ಮೇಗರವಳ್ಳಿ ರಮೇಶ್



“Morning at the Window” ಟಿ.ಎಸ್. ಏಲಿಯಟ್ ಪ್ರಾರಂಭದಲ್ಲಿ ಬರೆದ ಒಂಭತ್ತು ಸಾಲುಗಳ ಒಂದು ಚಿಕ್ಕ ಕವನ. ಕವಿ ಮೇಗರವಳ್ಳಿ ರಮೇಶ್ ಅವರು  ಕನ್ನಡಕ್ಕೆ ಅನುವಾದಿಸಿದ್ದಾರೆ. ಮುಂದೆ ಓದಿ…

ಕಿಟಕಿಯ ಮೂಲಕ ಮುಂಜಾನೆಯನ್ನು ನೋಡುತ್ತಲೇ ಮನುಷ್ಯ ಜೀವನದ ಒಳಗನ್ನು ಶೋಧಿಸುವ ಈ ಕವಿತೆಯ ಕನ್ನಡಾನುವಾದ ನನ್ನ ಗ್ರಹಿಕೆಗೆ ದಕ್ಕಿದಂತೆ ಇಲ್ಲಿದೆ.  ಈ ಕವಿತೆಯಲ್ಲಿ ಏಲಿಯಟ್ ಬಡ ತನದ ಮೇಲೆ ಕವಿತೆಯನ್ನು ಕೇಂದ್ರೀಕರಿಸಿದ್ದಾನೆ. ಕಂದು ಮಂಜಿನ ಅಲೆಗಳು ನಗರದ ವಾಯುಮಾಲಿನ್ಯವನ್ನು ಸೂಚಿಸುತ್ತದೆ. ಈ ಕವಿತೆ ಅರಳುವುದು ಒಂದು ಸ್ಲಮ್ಮಿನಲ್ಲಿ ಪ್ರತಿಮೆಗಳ ಮೂಲಕ.

ಫೋಟೋ ಕೃಪೆ : full stop

#ಕಿಟಕಿಯಲ್ಲಿ ಮುಂಜಾನೆ
ತಳದ ಅಡಿಗೆ ಮನೆಗಳ ಉಪಾಹಾರದ ತಟ್ಟೆಗಳನ್ನವರು ಧಡ ಧಡ ಅಲ್ಲಾಡಿಸುತ್ತಿರುವರು
ದಾಪುಗಾಲಲಿ ತುಳಿದ ಬೀದಿಯ ಕೊನೆಯವರೆಗೂ

ನನಗರಿವಿದೆ ಮನೆಗೆಲಸದ ಹೆಂಗಸರ ಆರ್ದ್ರ ಚೇತನಗಳು
ನಿರಾಶೆಯಲ್ಲಿ ಗೇಟುಗಳ ಬಳಿ ಮೊಳಕೆಯೊಡೆಯುವುದರ ಬಗ್ಗೆ

ದಟ್ಟ ಮಂಜಿನ ಕಂದು ಅಲೆಗಳು ಸವರುತ್ತವೆ ನನ್ನನ್ನು
ಬೀದಿಯ ತಳದ ಮುಖಗಳನು ತಿರುಚುತ್ತವೆ
ಮತ್ತು ಅಲ್ಲೇ ಸಾಗುತ್ತಿರುವ ಕೊಳೆಯಾದ ಸ್ಕರ್ಟಿನವಳ ಕಣ್ಣುಗಳಲ್ಲಿ ನೀರು
ಗುರಿಯಿಲ್ಲದೊಂದು ಮುಗುಳು ನಗೆ ಗಾಳಿಯಲಿ ಸುಳಿದು
ಮಾಯವಾಗುತ್ತದೆ ಮಹಡಿ ಮನೆಗಳ ತಾರಸಿಗಳೆತ್ತರದ ಮಟ್ಟದಲ್ಲಿ

(ಇಂಗ್ಲಿಶ್ ಮೂಲ: ಟಿ.ಎಸ್.ಏಲಿಯಟ್)

  • ಕನ್ನಡಕ್ಕೆ: ಮೇಗರವಳ್ಳಿ ರಮೇಶ್ (ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ)

0 0 votes
Article Rating

Leave a Reply

0 Comments
Inline Feedbacks
View all comments
All Articles
Menu
About
Send Articles
Search
×
0
Would love your thoughts, please comment.x
()
x

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

Aakruti Kannada

FREE
VIEW