‘ಮಗಳನ್ನು ಬೀಳ್ಕೊಡುವಾಗ’ ಕವನ – ಪದ್ಮನಾಭ.ಡಿಮಗುವಾಗಿ ಅಮ್ಮನ ಮಡಿಲಲ್ಲಿ ಆಡಿ ಬೆಳೆದು ಮಗಳು ಮದುವೆಯಾಗಿ ಮನೆ ಬಿಟ್ಟಿ ಹೋಗುವಾಗ ಅಪ್ಪ- ಅಮ್ಮನಿಗೆ ಆಗುವ ವೇದನೆಯನ್ನು ಕವಿ ಪದ್ಮನಾಭ.ಡಿ ಅವರು ಬರೆದ ಸುಂದರ ಕವಿತೆ, ಮುಂದೆ ಓದಿ…

ಮಗಳನ್ನು ಬೀಳ್ಕೊಡುವಾಗ
ಬಳ್ಳಿಯ ಹೂ ತೊರೆವ ಸಮಯದಲಿ
ಬರೀ ಮೌನವೆ ತವರಿನ ತೋಟದಲಿ
ಕೈ ಮುಗಿದು ಬೇಡುವೆ ದೇವನಲಿ
ನಲಿವಿನ ನಾಳೆಯು ನಿನ್ನದಾಗಿರಲಿ

ನೀ ಪತಿಗೃಹವನು ಸೇರುವ ಕ್ಷಣದಲ್ಲಿ
ಜಾರಿದ ಕಣ್ಣೀರಿನ ಹನಿಗಳಲಿ
ಈ ತಂದೆಯ ಶುಭಹಾರೈಕೆಯಿದೆ
ನಿನ್ನ ಬಾಳಿನ ಸುಖದ ನಿರೀಕ್ಷೆಯಿದೆ

ಮಗುವಾಗಿ ಅಮ್ಮನ ಮಡಿಲಲ್ಲಿ
ನಲಿದಾಡಿ ಅಪ್ಪನ ತೋಳಿನಲಿ
ನೀ ಕಳೆದ ಕ್ಷಣಗಳ.ನೆನಪಿನಲಿ
ಕೊರಗದಿರು ಮಗಳೇ ನೀನಲ್ಲಿ

ನೀ ಹಚ್ಚುವ ದೀಪದ ಬೆಳಕಲ್ಲಿ
ಎರಡೂ ಮನೆಗಳು ಬೆಳಗಿರಲಿ
ನಿನ್ನ ಮನಸೆಂದೂ ಹಸಿರಾಗಿರಲಿ
ಪತಿಯೊಲವ ಆ ಜಲಧಾರೆಯಲಿ


  • ಪದ್ಮನಾಭ. ಡಿ ( ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ
    – 2022 ಕವಿಗಳು, ಲೇಖಕರು) ಮೈಸೂರು.

5 1 vote
Article Rating

Leave a Reply

0 Comments
Inline Feedbacks
View all comments
0
Would love your thoughts, please comment.x
()
x
%d bloggers like this:
Aakruti Kannada

FREE
VIEW