ಪಾಕ್​ಗೆ  ನಡುಕ ಹುಟ್ಟಿಸುತ್ತಿರುವ ಮಹ್ರಾಂಗ್ ಬಲೋಚ್

ಪಾಕಿಸ್ತಾನ ಸೇನೆಯೇ ಆಕೆಯ ಹೆಸರನ್ನು ಕೇಳಿದರೆ ನಿದ್ರೆಯಲಿ ಬೆಚ್ಚಿ ಬೀಳುತ್ತದೆ. ಇವರ ಹೋರಾಟದ ಮುಂದೆ ಪಾಕಿಸ್ತಾನದ ವಿರುದ್ಧ ಬಲೂಚ್ ಸೇನೆಯ ದಾಳಿಗಳು ಸಹ ಚಿಕ್ಕದಾಗಿ ಕಾಣುತ್ತವೆ. ಆಕೆಯೇ ಬಲೋಚ್ ನ ಮನೆಮಗಳು, ಅಹಿಂಸೆ ಹೋರಾಟದಲ್ಲಿ ನಂಬಿಕೆ ಇಟ್ಟಿರುವ ಡಾ.ಮಹ್ರಾಂಗ್ ಬಲೂಚ್. ಡಾ.ಗುರುಪ್ರಸಾದ ರಾವ್ ಹವಲ್ದಾರ್ ಅವರ ಚಿಂತನ ಲೇಖನವನ್ನು ತಪ್ಪದೆ ಮುಂದೆ ಓದಿ…

(ಹಿಂಸೆಯ ಸಾಗರದಲ್ಲೊಂದು ಆಹಿಂಸೆಯ ದೀವಿಗೆ)

ಪಾಕಿಸ್ತಾನದಲ್ಲಿ ಬಲೂಚಿಸ್ತಾನ ಪ್ರಾಂತ್ಯದ  ಮೂಲನಿವಾಸಿಗಳಾದ ಬಲೂಚಿ ರಾಷ್ಟ್ರವಾದಿಗಳು ದಶಕದಿಂದಲೂ ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಒಂದು ಕಡೆ ಬಲೂಚ್ ನ ಬಲೂಚ್ ಲಿಬರೇಶನ್ ಆರ್ಮಿವರು  ಮರೆಯದ ರೀತಿಯಲಿ ಪಾಕ್ ಸೇನೆ ಆಡಳಿತಕ್ಕೆ ಗೆ ಹೊಡೆತ ನೀಡುತ್ತಿದ್ದರೆ,  ಮೊತ್ತೊಂದು ಕಡೆ  ಬಲೂಚಿಯ ಹೆಣ್ಣು ಮಗಳೊಬ್ಬಳು ಯಾವುದೇ ಶಸ್ತ್ರಾಸ್ತ್ರ ಹಿಡಿಯದೇ, ಜೊತೆಗೆ ತನ್ನ ಬೆಂಬಲಿಗರೂ ಸಹ ಹಿಂಸಾಚಾರವನ್ನು ಮಾಡದಂತೆ ಪ್ರತಿಭಟಿಸುವುದನ್ನು ನೋಡಿ  ಪಾಕಿಸ್ತಾನ ಸೇನೆಯೇ ಆಕೆಯ ಹೆಸರನ್ನು ಕೇಳಿದರೆ ನಿದ್ರೆಯಲಿ ಬೆಚ್ಚಿ ಬೀಳುತ್ತದೆ. ಇವರ ಹೋರಾಟದ ಮುಂದೆ ಪಾಕಿಸ್ತಾನದ ವಿರುದ್ಧ ಬಲೂಚ್ ಸೇನೆಯ ದಾಳಿಗಳು ಸಹ ಚಿಕ್ಕದಾಗಿ ಕಾಣುತ್ತವೆ. ಆಕೆಯೇ ಬಲೋಚ್ ನ ಮನೆಮಗಳು ಮಹ್ರಾಂಗ್ ಬಲೋಚ್ (Mahrang Baloch).

ಪಾಕಿಸ್ತಾನದ ಬಲೂಚಿಗಳು ಅಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನದ ಬಗ್ಗೆ ಜಗತ್ತಿನಾದ್ಯಂತ ದ್ವನಿ ದಾಖಲಿಸಿ ಜಗತ್ತೇ ಬಲೂಚಿಸ್ತಾನ್ ಕಡೆ ತಿರುಗುವಂತೆ ಮಾಡಿದ ದಿಟ್ಟ ಮಹಿಳೆ. ಭಾರತದ ವಿರುದ್ಧ ಪ್ರತಿಯೊಂದಕ್ಕೂ ಕುತಂತ್ರ ಮಾಡುವ ಪಾಕಿಸ್ತಾನ, ತನ್ನದೇ ಹೊಟ್ಟೆಯೊಳಗೆ ತಡೆದುಕೊಳ್ಳಲಾಗದ ನೋವುಗಳನ್ನು, ಹೊಡೆತಗಳನ್ನು ತಿನ್ನುತ್ತಿದೆ. ಅಷ್ಟದರೂ ಭಾರತಕ್ಕೆ ಗೊಡ್ಡು ಬೆದರಿಕೆ,  ಅಪಪ್ರಚಾರದಂಥ ಪಿತೂರಿಗಳನ್ನು ಮಾಡೋದನ್ನು  ನಿಲ್ಲಿಸಲ್ಲ.

ಪಾಕ್​ನಲ್ಲಿ ಹೊತ್ತಿರುವ ಆಂತರಿಕ ಬೇಗೆ ದಿನದಿಂದ ದಿನಕ್ಕೆ ಹೊತ್ತಿ ಉರಿಯುತ್ತಿದೆ. ಅದಕ್ಕೆ ಕಾರಣ, ಬಲೂಚಿಸ್ತಾನ್!

ಬಲೂಚಿಸ್ತಾನ ಎಂಬ ಸಂಪತ್ತು ಭರಿತ ಪಾಕಿಸ್ತಾನದ ಒಂದು ಭಾಗ. ಕಳೆದ ೭೦ ವರ್ಷ ಗಳಿಂದ ಈ ಭಾಗದ ಬಲೂಚಿಗಳ ಮೇಲೆ ಪಾಕಿಸ್ತಾನದ ಆಡಳಿತ, ಸೈನಿಕರು ನಡೆಸಿದ ಹೇಯ ಕೃತ್ಯಗಳು ಒಂದೆರಡಲ್ಲ ಸಾವಿರಾರು, ಅದರೆ ಈಗ ಪರಿಸ್ಥಿತಿ ಬದಲಾಗಿದೆ,ಇಲ್ಲಿಗೆ ಬರಲು ಪಾಕಿಸ್ತಾನಿ ನಾಯಕರು ಇರಲಿ, ಸೈನಿಕರೂ ಸಹ ಹಿಂಜರಿಯುತ್ತಾರೆ. ಕೆಲವು ವರ್ಷಗಳಿಂದ ಬಲೂಚ್ ಲಿಬರೇಶನ್ ಆರ್ಮಿ, ಪಾಕ್ ಸರ್ಕಾರದ ವಿರುದ್ಧ ನಡೆಸ್ತಿರುವ ಚಳವಳಿ ಇಷ್ಟಕ್ಕೆಲ್ಲ ಕಾರಣ. ಅವರ ಹೋರಾಟ ಎಷ್ಟು ಉಗ್ರ ಮತ್ತು ತೀವ್ರವಾಗಿದೆ ಅಂದರೆ ಪಾಕ್ ಸೇನೆಯೇ ಗಢಗಢ ನಡುಗುತ್ತಿದೆ! ಅಷ್ಟರ ಮಟ್ಟಿಗೆ ಪಾಕ್ ಸೇನೆಗೆ ಬಲೂಚ್ ನಾಯಕರು ಮರೆಯಲಾಗದ ಪೆಟ್ಟು ಕೊಡ್ತಿದ್ದಾರೆ.

ಒಂದು ಕಡೆ ಬಲೂಚ್ ನಬಲೂಚ್ ಲಿಬರೇಶನ್ ಆರ್ಮಿ ಮರೆಯದ ರೀತಿಯಲಿ ಪಾಕ್ ಗೆ ಹೊಡೆತ ನೀಡುತ್ತಿದ್ದರೆ,  ಮೊತ್ತೊಂದು ಕಡೆ ಬಲೂಚಿಯ ಹೆಣ್ಣು ಮಗಳೊಬ್ಬಳು
ಯಾವುದೇ ಶಸ್ತ್ರಾಸ್ತ್ರ ಹಿಡಿಯದೇ, ಜೊತೆಗೆ ತನ್ನ ಬೆಂಬಲಿಗರೂ ಸಹ ಹಿಂಸಾಚಾರವನ್ನು ಮಾಡದಂತೆ ಪ್ರತಿಭಟಿಸುವುದನ್ನು ನೋಡಿ  ಪಾಕಿಸ್ತಾನವೂ ಆಕೆಯ ಹೆಸರನ್ನು ಕೇಳಿದರೆ ನಿದ್ರೆಯಲಿ ಬೆಚ್ಚಿ ಬೀಳುತ್ತದೆ. ಇವರ ಹೋರಾಟದ ಮುಂದೆ ಪಾಕಿಸ್ತಾನದ ವಿರುದ್ಧ ಬಲೂಚ್ ಸೇನೆಯ ದಾಳಿಗಳು ಸಹ ಚಿಕ್ಕದಾಗಿ ಕಾಣುತ್ತವೆ.

ಬಲೋಚ್ ನ ಮನೆಮಗಳು ಮಹ್ರಾಂಗ್ ಬಲೋಚ್ (Mahrang Baloch).
ಬಲೂಚಿಗಳು ಅಲ್ಲಿನ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ನದ ಬಗ್ಗೆ ಜಗತ್ತಿನಾದ್ಯಂತ ದ್ವನಿ ದಾಖಲಿಸಿ ಜಗತ್ತೇ ಬಲೂಚಿಸ್ತಾನ್ ಕಡೆ ತಿರುಗುವಂತೆ ಮಾಡಿದ ದಿಟ್ಟ ಮಹಿಳೆ.

ಭಾರತದೊಂದಿಗಿನ ಮಿಲಿಟರಿ ಸಂಘರ್ಷದಲ್ಲಿ ಪಾಕಿಸ್ತಾನ ಭಾರೀ ಅವಮಾನ ಎದುರುಸಿತು. ಬೆನ್ನಲ್ಲೇ ಮಹ್ರಾಂಗ್ ಬಲೂಚ್ ಅವರ ವೀಡಿಯೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿದೆ. ಅವರ ಭಾಷಣಗಳ ಸ್ವರ ಎಷ್ಟು ಉರಿಯುತ್ತಿದೆಯೆಂದರೆ, ಎಲ್ಲರೂ ಸಹ ಆಕೆಯ ಮಾತುಗಳನ್ನು ಕೇಳಲು ಆರಂಭಿಸಿದ್ದಾರೆ.

ಬಲೂಚಿಸ್ತಾನದ ಜನರ ಹೊಸ ಆಶಾಕಿರಣ,
ಅಹಿಂಸೆ ಹೋರಾಟದಲ್ಲಿ ನಂಬಿಕೆ ಇಟ್ಟಿರುವ
ಮಹ್ರಾಂಗ್ ಬಲೂಚ್-

ಬಲೂಚ್ ಯಕ್ಜೆಹತಿ ಸಮಿತಿಯ (BYC: Baloch Yakjehti Committee) ನಾಯಕಿ,  ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ವಕೀಲೆ. ಪಾಕಿಸ್ತಾನ ಸರ್ಕಾರ ಮತ್ತು ಸೇನೆಯು ಬಲೂಚಿಸ್ತಾನದ ಮೇಲೆ ನಡೆಸ್ತಿರುವ ದಬ್ಬಾಳಿಕೆ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಪಾಕ್ ಸರ್ಕಾರದ ನಿರಂತರವಾಗಿ ಪ್ರತಿಭಟನೆ ಮಾಡ್ತಿದ್ದಾರೆ. ಮಹ್ರಾಂಗ್ ಬಲೂಚ್ಅವರು ಬಲೂಚಿಸ್ತಾನ್‌ನ (ಪಾಕಿಸ್ತಾನ) ದ ಫೆಬ್ರವರಿ 3, 1993 ರಂದು ಬಲೂಚಿಸ್ತಾನದ ಕಲಾತ್‌ನಲ್ಲಿ ಜನಿಸಿದ  ಮಹ್ರಾಂಗ್ ತಂದೆಯ ಹೆಸರು ಅಬ್ದುಲ್ ಗಫರ್ ಬಲೂಚ್,ಅವರ  ಐದು ಹೆಣ್ಮಕ್ಕಳಲ್ಲಿ ಒಬ್ಬರು,ಜೊತೆಗೆ ಓರ್ವ ಸಹೋದರ ಇದ್ದಾನೆ .ಅವರ ಸಂಬಂಧಿಗಳು ಮತ್ತು ಪೂರ್ವಜರು ಬಲೂಚ್ ರಾಷ್ಟ್ರೀಯತಾವಾದಿ ಚಳುವಳಿಯಲ್ಲಿ ಭಾಗವಹಿಸಿದ್ದಾರೆ.
ಮಹ್ರಾಂಗ್ ಬಲೂಚ್ ಬಲೂಚಿಸ್ತಾನ್‌ನಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪೂರ್ಣಗೊಳಿಸಿದರು. ನಂತರ, ವೈದ್ಯಕೀಯ ಕಾಲೇಜಿನಿಂದ ಎಂಬಿಬಿಎಸ್ ಪೂರ್ಣಗೊಳಿಸಿದ ನಂತರ ವೈದ್ಯೆಯೂ ಆಗಿದ್ದಾರೆ.ಬಾಲ್ಯದಿಂದಲೂ ಬಲೂಚಿಸ್ತಾನ್‌ನಲ್ಲಿ ನಡೆಯುತ್ತಿದ್ದ ಸೇನಾ ದಬ್ಬಾಳಿಕೆ, ಆರ್ಥಿಕ ಅನ್ಯಾಯ ಮತ್ತು ಸಾಂಸ್ಕೃತಿಕ ದಬ್ಬಾಳಿಕೆಗಳು ಅವರ ಮೇಲೆ ಗಾಢ ಪರಿಣಾಮ ಬೀರಿದವು.  ರಾಜಕೀಯ ಕಾರ್ಯಕರ್ತರಾಗಿ , ಡಾ.ಮಹ್ರಾಂಗ್ ಬಲೂಚ್ ತಮ್ಮ ಯೌವನದಲ್ಲೇ ಬಲೂಚ್ ರಾಷ್ಟ್ರೀಯತಾವಾದಿ ಚಳುವಳಿಗಳಲ್ಲಿ ಭಾಗವಹಿಸಲು ಆರಂಭಿಸಿದರು.  – ಬಲೂಚ್ ನ್ಯಾಷನಲ್ ಮೂವ್ಮೆಂಟ್ (BNM) ಸಂಘಟನೆಯೊಂದಿಗೆ ಸಕ್ರಿಯವಾಗಿ ಸಂಬಂಧ ಹೊಂದಿದ್ದಾರೆ.

2009ರಲ್ಲಿ ಮಹ್ರಾಂಗ್​ಗೆ 16 ವರ್ಷವಿದ್ದಾಗ  ಬಲೂಚಿಸ್ತಾನ್ ರಾಷ್ಟ್ರೀಯ ಪಕ್ಷದ (ಬಿಎನ್‌ಪಿ) ಕಾರ್ಮಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದ ಆಕೆಯ ತಂದೆ ಅಬ್ದುಲ್ ಗಫರ್ ಲ್ಯಾಂಗೊ ಅವರನ್ನು ಬಲವಂತವಾಗಿ ನಾಪತ್ತೆ ಮಾಡಲಾಯಿತು. ಎರಡು ವರ್ಷಗಳ ನಂತರ, ಅವರ ವಿರೂಪಗೊಂಡ ದೇಹವು ಅವರ ಮೃತದೇಹದ ಮೇಲೆ ಪಾಕಿಸ್ತಾನಿ ಸೇನೆಯ ಕ್ರೌರ್ಯ ಮತ್ತು ಅನಾಗರಿಕತೆಯ ಗುರುತುಗಳಿದ್ದವು. ತಂದೆಯ ದೇಹ ನೋಡಿದ ಸ್ಥಳದಲ್ಲೇ ಮಹ್ರಾಂಗ್, ಪಾಕಿಸ್ತಾನ ಸರ್ಕಾರದ ವಿರುದ್ಧ ಪ್ರತಿಜ್ಞೆ ಮಾಡಿದರು. ಅಲ್ಲಿಂದಲೇ ಸರ್ಕಾರ ವಿರುದ್ಧ ರಣಕಹಳೆ ಮೊಳಗಿಸಿದರು.

ತಂದೆಯ ಹತ್ಯೆಯ ನಂತರ ಮಹ್ರಾಂಗ್​ಗೆ ಇದ್ದ ಏಕೈಕ ಸಹೋದರನನ್ನು 2017ರಲ್ಲಿ ಪಾಕ್ ಸೇನೆ ಅಪಹರಿಸಿತ್ತು ಮತ್ತೆ ಮಹ್ರಾಂಗ್ ದೊಡ್ಡ ಹೋರಾಟ ನಡೆಸಿದರು. ಈ ಹೋರಾಟ ಎಷ್ಟು ತೀವ್ರವಾಗಿತ್ತು ಅಂದರೆ ಪಾಕಿಸ್ತಾನಿ ಸೇನೆ ಮತ್ತು ಸರ್ಕಾರ ಈಕೆಯ ಪ್ರತಿಭಟನೆಗೆ ಮಂಡಿಯೂರಿತು.

ಸತತ ಮೂರು ತಿಂಗಳ ಕಾಲ ನಡೆದ ಆಂದೋಲನಕ್ಕೆ ಬೆಚ್ಚಿಬಿದ್ದ ಪಾಕಿಸ್ತಾನ ಸರ್ಕಾರ, ಮಹ್ರಾಂಗ್ ಸಹೋದರನ ಬಿಡುಗಡೆ ಮಾಡಿತು. ಅಷ್ಟಕ್ಕೂ ಮಹ್ರಾಂಗ್ ತಮ್ಮ ಹೋರಾಟವನ್ನು ನಿಲ್ಲಿಸಲಿಲ್ಲ. ಬಲೂಚಿಸ್ತಾನದಲ್ಲಿ ಯುವಕರು ಮತ್ತು ಮಹಿಳೆಯರ ಮೇಲಿನ ಅನುಮಾನಾಸ್ಪದ ಕಣ್ಮರೆಗಳು ಮತ್ತು ದೌರ್ಜನ್ಯಗಳ ವಿರುದ್ಧ ಧ್ವನಿಯಾಗಿ , ಬಲೂಚ್ ಪ್ರತಿರೋಧ ಚಳುವಳಿಯಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದರು.

1,600 ಕಿಲೋಮೀಟರ್ ಲಾಂಗ್ ಮಾರ್ಚ್ 2023 ರಲ್ಲಿ, ಅವರು ತಮ್ಮ ತಾಯ್ನಾಡಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದ ಬಲೂಚಿಸ್ತಾನದಿಂದ ಇಸ್ಲಾಮಾಬಾದ್‌ಗೆ 1,600 ಕಿಲೋಮೀಟರ್ ಲಾಂಗ್ ಮಾರ್ಚ್ ಅನ್ನು ಮುನ್ನಡೆಸಿದರು. ಮಹ್ರಾಂಗ್ ಅವರ ಒಂದು ಕರೆ ಇಂದು ಸಾವಿರಾರು ಮಂದಿ ತಮ್ಮ ಪ್ರಣವನ್ನೇ ತ್ಯಾಗ ಮಾಡಲು ಸಿದ್ಧರಾಗುತ್ತಾರೆ.

ಅಂತರರಾಷ್ಟ್ರೀಯ ಸಮುದಾಯಗಳು, ವಿಶ್ವಸಂಸ್ಥೆ, 

  • “ಪಾಕಿಸ್ತಾನದ ಮೇಲೆ ಅಂತರರಾಷ್ಟ್ರೀಯ ಒತ್ತಡ (ಆರ್ಥಿಕ ನಿರ್ಬಂಧಗಳು, ರಾಜಕೀಯ ಪ್ರತಿಬಂಧಗಳು) ಹೇರಬೇಕು” ಎಂಬುದು ಅವರ ಮನವಿ.
  • ಭಾರತ, USA, EUಮತ್ತು ಇತರ ರಾಷ್ಟ್ರಗಳು ಬಲೂಚಿಸ್ತಾನ್  ರ ಸಮಸ್ಯೆಗೆ ತಟಸ್ಥ ನೀತಿ ತ್ಯಜಿಸಬೇಕು ಎಂದು ಮನವಿ ಮಾಡುತ್ತಲೇ ಇದ್ದಾರೆ
  • “ಬಲೂಚಿಸ್ತಾನ್‌ನ ಸ್ವಾತಂತ್ರ್ಯಕ್ಕಾಗಿ ನನ್ನ ಜೀವನವೇ ಮೀಸಲು” ಎಂಬ ಘೋಷಣೆ ಮಾಡಿರುವ ಮಹ್ರಾಂಗ್ ಬಲೂಚ್ ರವರು
  • ಪಾಕಿಸ್ತಾನದಿಂದ ನಿರಾಶ್ರಿತರಾಗಿ ವಿದೇಶದಲ್ಲಿ ವಾಸಿಸುತ್ತಿದ್ದರೂ, ಬಲೂಚ್ ಚಳುವಳಿಗಾಗಿ ಹಿಂದುರುಗಿ ,ತಮ್ಮ  ಪ್ರಾಣವನ್ನೇ  ಮುಡಿಪಾಗಿಟ್ಟಿದ್ದಾರೆ.
  • ಹಿಂಸೆಯ ಬದಲು ರಾಜಕೀಯ, ಕಾನೂನು ಮತ್ತು ಮಾಧ್ಯಮ ಹೋರಾಟದ ಮೂಲಕ ಬದಲಾವಣೆ ತರುವ ನಂಬಿಕೆ ಅವರದು, ಆದರೆ, ಪಾಕಿಸ್ತಾನದ ಸೇನೆ, ಆಡಳಿತದ ದಮನಕಾರಿ ನೀತಿಗಳು ಬಲೂಚ್ ಯುವಕರನ್ನು  ಹಿಂಸಾತ್ಮಕ, ಸಶಸ್ತ್ರ ಹೋರಾಟದತ್ತ ತಳ್ಳುತ್ತಿವೆ ಎಂಬ ಆತಂಕ ಅವರದು.
  • ಮಹ್ರಾಂಗ್ ಬಲೂಚ್ ಅವರ ವಿಚಾರಧಾರೆ ಬಲೂಚ್ ರಾಷ್ಟ್ರೀಯತೆ, ಸ್ವಾತಂತ್ರ್ಯ,ಬಲೂಚ್ ಮಹಿಳೆಗಳು ಮತ್ತು ಮಕ್ಕಳ ಮೇಲಿನ ಹಿಂಸೆಯನ್ನು ವಿರೋಧಿಸುವುದು.
    ಮತ್ತು ಮಾನವ ಹಕ್ಕುಗಳ ಹೋರಾಟದ , ಮತ್ತು ಪಾಕಿಸ್ತಾನದ ರಾಜಕೀಯ, ಸೇನಾ ಮತ್ತು ಆರ್ಥಿಕ ದಬ್ಬಾಳಿಕೆಯ ವಿರುದ್ಧ ಅವರ ಹೋರಾಟ ಶಾಂತಿಯುತವಾಗಿದ್ದರೂ, ಪಾಕಿಸ್ತಾನದ ಸರ್ಕಾರ ಅದನ್ನು ರಾಜ್ಯದ ಭದ್ರತೆಗೆ ಬೆದರಿಕೆ ಎಂದು ಪರಿಗಣಿಸಿ ಜೈಲಿಗಟ್ಟಿದೆ, ಮಹ್ರಂಗ್ ಬಲೂಚ್ ಅವರನ್ನು ಪ್ರಸ್ತುತ ಯಾವುದೇ ಕಾನೂನು ಕ್ರಮಗಳಿಲ್ಲದೆ ಕ್ವೆಟ್ಟಾ ಜಿಲ್ಲಾ ಜೈಲಿನಲ್ಲಿ ಇರಿಸಲಾಗಿದ್ದು, ಅವರ ವಕೀಲರು ಮತ್ತು ಕುಟುಂಬದೊಂದಿಗೆ ಸಂಪರ್ಕ ಕಡಿತಗೊಂಡಿದೆ. ಅವರ ಸೋದರಸಂಬಂಧಿ ಅಸ್ಮಾ ಬಲೂಚ್ ಅವರು, ಅಧಿಕಾರಿಗಳು ತಮ್ಮ ಕುಟುಂಬವು ಅವರಿಗೆ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ತಲುಪಿಸುವುದನ್ನು ತಡೆಯುತ್ತಿದ್ದಾರೆ ಎಂದು ವರದಿ ಮಾಡಿದ್ದಾರೆ. ಅವರಿಗೆ ಯಾವುದೇ ತೆರನಾದ ಸೌಲಭ್ಯಗಳನ್ನು ನೀಡದೆ ಅವರ ಧ್ವನಿಯನ್ನು ಹತ್ತಿಕ್ಕುವ ಕಾರ್ಯಮಾಡುತ್ತಿದೆ.ಅಮ್ನೆಸ್ಟಿ ಇಂಟರ್ನ್ಯಾಷನಲ್ ಮತ್ತು ಫ್ರಂಟ್ ಲೈನ್ ಡಿಫೆಂಡರ್ಸ್ ಸೇರಿದಂತೆ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಈ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಮತ್ತು ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿವೆ.
    ಜೊತೆಗೆ ಪಾಕಿಸ್ತಾನ ಮತ್ತು ಅದರ ಮಿತ್ರರಾಷ್ಟ್ರಗಳು (ಚೀನಾ, ಸೌದಿ ಅರೇಬಿಯಾ) ಅವರನ್ನು “ಪಾಕಿಸ್ತಾನ ವಿರೋಧಿ ಏಜೆಂಟ್”ಎಂದು ಕರೆದಿದೆ.  ಪಾಕ್ ನ ಕಲವು ಮಾಧ್ಯಮಗಳು, ಸಾಹಿತಿಗಳು, ವಿಮರ್ಶಕರು ಅವರ ನಿಲುವುಗಳನ್ನು “ಪ್ರತ್ಯೇಕತಾವಾದಿ” ಎಂದು ಟೀಕಿಸಿದ್ದಾರೆ.

    ಬಲೂಚಿಸ್ತಾನದ ಜನರ ಹೊಸ ಆಶಾಕಿರಣ, ಅಹಿಂಸೆ ಹೋರಾಟದಲ್ಲಿ ನಂಬಿಕೆ ಇಟ್ಟಿರುವ ಡಾ.ಮಹ್ರಾಂಗ್ ಬಲೂಚ್ ಅವರು ಈ ಬಾರಿಯ ನೊಬೆಲ್ ಶಾಂತಿ ಪ್ರಶಸ್ತಿ ಗೆ ನಾಮ ನಿರ್ದೇಶನಗೊಂಡಿದ್ದಾರೆ , ಬಲೂಚ್ ಮತ್ತು ಅಲ್ಲಿರುವ ಅಲ್ಪಸಂಖ್ಯಾತರ ಅಸ್ತಿತ್ವಕ್ಕಾಗಿ, ಉಳಿವಿಗಾಗಿ, ಸ್ವಾತಂತ್ರಕ್ಕಾಗಿ  ನಡೆಸುತ್ತಿರುವ ಹೋರಾಟವು ಗಮ್ಯ ತಲುಪಲಿ…


  • ಡಾ.ಗುರುಪ್ರಸಾದ ರಾವ್ ಹವಲ್ದಾರ್

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading