ಪರಿಚಯ : ನಾಗರಾಜ್ ಲೇಖನ್ ಅವರು ಹುಟ್ಟಿ ಬೆಳೆದದ್ದು ಹೊನ್ನಾವರದ ಹರಡಸೆಯಲ್ಲಿ , ಪ್ರಸ್ತುತ ಬೆಂಗಳೂರಿನಲ್ಲಿ ವಾಸ್ತವ್ಯವಾಗಿದ್ದಾರೆ. ಕಥೆ, ಕವನ, ಚುಟುಕು, ಚಿತ್ರಕಥೆ , ಸ೦ಭಾಷಣೆ, ಸಾಹಿತ್ಯ ಬರೆಯುವುದು ಅವರ ಹವ್ಯಾಸಗಳು.
“ಮುರುಗಲು” ಈ ಶಬ್ದ ಬೆಂಗಳೂರಿಗರಿಗೆ, ನಗರ ಪ್ರದೇಶದವರಿಗೆ ಹೊಸದೇನಿಸಬಹುದು. ಆದರೆ, ಇಂಗ್ಲೀಷ್ನಲ್ಲಿ ‘ಕೋಕಮ್’ ಅಂದಕೂಡಲೆ ಬೇಗನೆ ಅರ್ಥವಾಗುತ್ತದೆ. ಅದರ ನಿಜಾವಾದ ಕನ್ನಡ ಅರ್ಥವೇ “ಮುರುಗಲು ಅಥವಾ ಪುನರ್ಪುಳಿ”. ನಮ್ಮ ಪಶ್ಚಿಮ ಘಟ್ಟದ, ಮಲೆನಾಡಿನ ಹಚ್ಚ ಹಸುರಿನ ಸಸ್ಯ ಸಂಕೂಲಗಳ ಮಧ್ಯೆ ಬೆಳೆಯುವಂತಹ ತುಂಬಾ ವಿಶೇಷವಾದ,ವಿಶಿಷ್ಟವಾದ ಅಪರೂಪದ ಸುಂದರ ಮರ ಈ ಮುರುಗಲು. ಇದರ ವೈಶಿಷ್ಟ್ಯಗಳನ್ನು ಅರಿತವರು ನಮ್ಮವರಿಗಿಂತ ಹೊರಗಿನವರೆ ಹೆಚ್ಚು. ಇದನ್ನು ಸಸ್ಯ ಶಾಸ್ತ್ರದಲ್ಲಿ ‘ಗಾರ್ಸಿನಿಯಾ ಇಂಡಿಕಾ’ ಕನ್ನಡದಲ್ಲಿ ಮುರುಗಲು, ಮುರುಗುಳಿ, ಪುನರ್ಪುಳಿ ಎಂದು ಇಂಗ್ಲೀಷ್ ಮತ್ತು ಹಿಂದಿಯಲ್ಲಿ ‘ ಕೋಕಂ’ ಎಂತಲೂ ಸಂಸ್ಕೃತದಲ್ಲಿ‘ವೃಕ್ಷಾಮ್ಲ’ ಎಂದು ಕರೆಯುತ್ತಾರೆ. ಲಂಬವಾಗಿ ಒರಟು-ಒರಟಾಗಿ ಬೆಳೆಯುವ ಈ ಮರದಲ್ಲಿ ಕೆಲವೊಮ್ಮೆ ಅದರ ಬಣ್ಣದಂತೆ ಕಾಣುವ ಮರ ಹಾವುಗಳ ವಾಸಸ್ಥಾನವು ಆಗಿರುತ್ತದೆ. ಮರದ ಹತ್ತಿರ ಹೋಗುವಾಗ ತುಂಬಾ ಎಚ್ಚರಿಕೆಯಿಂದರ ಬೇಕಾಗುತ್ತದೆ.
ಇದರಲ್ಲಿ ಔಷಧೀಯ ಗುಣಗಳು ತುಂಬಾ ಇರುತ್ತದೆ. ಇದರ ಎಲೆ, ಹಣ್ಣು, ಸಿಪ್ಪೆ, ಬೀಜ, ಮರದ ತೊಗಟೆ ಎಲ್ಲವೂ ಉಪಯೋಗಕ್ಕೆ ಬರುತ್ತದೆ. ಇವುಗಳನ್ನು ಮರ ಹತ್ತಿಕೀಳುವಂತಹ ಅವಶ್ಯಕತೆಯೇನೂ ಇರುವುದಿಲ್ಲಾ ಹಣ್ಣಾದಮೇಲೆ ಇವುಗಳೇ ನೆಲಕ್ಕೆ ಬೀಳತ್ತೆ. ಆದರೂ, ಕೆಲವೊಮ್ಮೆ ಅತೀ ಆಸೆಯಿಂದ ಕೆಲವರು ಇದರ ಉಪಯೋಗ ತಿಳಿಯದೆ ಮರಗಳನ್ನು ಹತ್ತಿ ಕೊಂಬೆಗಳನ್ನು ಕಡಿದು ಹಣ್ಣುಗಳನ್ನು ಕೀಳುವವರು ಇದ್ದಾರೆ ಮೂರ್ಖರು. ಈವಾಗ ”ಲಾಕ್ ಡೌನ್” ಸಮಯದಲ್ಲಿ ಹಣ್ಣು ತರಕಾರಿಗಳು ಸಿಗದ ಸಂದರ್ಭದಲ್ಲಿ ಇದರ ಬಹಳಷ್ಟು ಉಪಯೋಗಗಳು ನಮ್ಮವರಿಗೆ ತಿಳಿದಿರಬಹುದು. ಹಣ್ಣುಗಳು ಕೆಂಪು, ಕಡುಗೆಂಪು ಬಣ್ಣವನ್ನು ಹೊಂದಿರುತ್ತದೆ. ಸಿಪ್ಪೆಯನ್ನು ತೆಗೆದಾಗ ಒಳಗಡೆ ಬಿಳಿ ಬಣ್ಣದ ಬೀಜವಿರುತ್ತದೆ. ಇದರ ಸಿಪ್ಪೆಯನ್ನು ಸೂರ್ಯನ ಬೆಳಕಿನಲ್ಲಿ ಒಣಗಿಸಿಟ್ಟರೆ 3, 4 ವರ್ಷಗಳವರೆಗೂ ಹಾಗೆಯೇ ಇರುತ್ತದೆ. ವರ್ಷಕೊಮ್ಮೆ ಆವಾಗವಾಗ ಬಿಸಿಲಿಗೆ ಹಾಕಿ ಉಪಯೋಗಿಸುತ್ತಿರಬಹುದು.
ಉಪಯೋಗಗಳು:-
1. ಹಣ್ಣಿನ ಸಿಪ್ಪೆಯನ್ನು ಒಣಗಿಸಿ ಉಪ್ಪಿನಕಾಯಿ ಮಾಡಬಹುದು.
2. ಒಣಗಿಸಿದ ಸಿಪ್ಪೆಯನ್ನು ಉಪ್ಪಿನೊಂದಿಗೆ ಬೇರಿಸಿ 3, 4 ವರ್ಷಗಳವರೆಗೂ ಉಪಯೋಗಿಸಬಹುದು.
3. ತಾಜಾ ಹಣ್ಣಿನಿಂದ ರಸಂ ಮಾಡಬಹುದು (ಲಾಕ್ ಡೌನ್ ಸಮಯದಲ್ಲಿ ಉಪಯೋಗಕಾರಿ)
4. ಸಿಪ್ಪೆಯಿಂದ ಕೂಡ ಜ್ಯೂಸ್, ಸಾರು, ರಸಂ ಮಾಡಬಹುದು.
5. ಬೀಜವನ್ನು ಸಹ ಸಕ್ಕರೆ ಹಾಕಿ ಒಣಗಿಸಿಟ್ಟರೆ ಉಪಯೋಗಕ್ಕೆ ಬರುತ್ತದೆ.
6. ಎಲೆಯಿಂದಲೂ ಸಹ ಮನೆ ಮದ್ದುಗಳನ್ನು ಮಾಡಿ ಗಾಯಕ್ಕೆ ಹಚ್ಚುತ್ತಾರೆ.
7. ರಸಂ ಸೇವನೆಯಿಂದ ದೇಹವನ್ನು ತಂಪಾಗಿ ಇರಿಸುತ್ತದೆ.
8. ಸಿರಪ್, ಬಟರ್, ಕ್ಯಾಂಡಿ, ಜೆಲ್ಲಿ ಹಾಗೂ ಸೌಂದರ್ಯ ವರ್ಧಕಗಳಲ್ಲಿ ಉಪಯೋಗಿಸುತ್ತಾರೆ.
ಔಷಧೀಯಗುಣಗಳು:-
1. ಇದು ನಾರಿನಾಂಶವನ್ನು ಹೊಂದಿದೆ.
2. ರಸಯುಕ್ತ ಬೀಜದಿಂದ ಮಾಡಿದ ಶರಬತ್ತನ್ನು ಸೇವಿಸುವುದರಿಂದ ದೇಹದಲ್ಲಿನ ಉಷ್ಣಾಂಶವು ಕಡಿಮೆಯಾಗುತ್ತದೆ.
3. ಒಣಗಿಸಿದ ಸಿಪ್ಪೆಯನ್ನು ನೀರಿನೊಂದಿಗೆ ದಿನನಿತ್ಯ ಬೆಳಿಗ್ಗೆ ಎದ್ದ ತಕ್ಷಣ ಕುಡಿಯುವುದರಿಂದ ಪಿತ್ತ ಕಡಿಮೆಯಾಗುತ್ತದೆ.
4. ಹಳದಿ ಬಣ್ಣದ ಮುರುಗಲುವನಿಂದ ತಯಾರಿಸಿದ ಪಾನೀಯಗಳು ಇನ್ನೂ ಹೆಚ್ಚಿನ ಔಷಧೀಯ ಗುಣಗಳನ್ನು ಹೊಂದಿದೆ.
5. ಬೀಜದಿಂದ ತಯಾರಿಸಿದ ಎಣ್ಣೆಯನ್ನು ಪಾದದ ಬಿರುಕುಗಳಿಗೆ ಲೇಪಿಸಿವುದರಿಂದ ಪಾದದ ಕಾಂತಿ ಹೆಚ್ಚುತ್ತದೆ.
6. ಜ್ಯೂಸ್,ರಸಂ ಸೇವನೆಯಿಂದ ಅಜೀರ್ಣದಿಂದ ಹೊಟ್ಟೆಯಲ್ಲಿ ಉಂಟಾಗುವ ಉರಿ, ಮಲಬದ್ಧತೆ, ಕರುಳಿನ ಹುಣ್ಣು ಹತೋಟಿಗೆ ಬರುತ್ತದೆ.
7. ಚರ್ಮದ ಅಲರ್ಜಿ,ದೇಹದಲ್ಲಿನ ಕೊಬ್ಬಿನಾಂಶ ಕಡಿಮೆ ಮಾಡಲು ಸಹಕಾರಿ.
8. ಮುಖ್ಯವಾಗಿ ಮುರುಗಲಿನಲ್ಲಿ ವಿಟಮಿನ್’ಸಿ’ ಇರುವುದರಿಂದ, ದೇಹದಲ್ಲಿ ಕ್ಯಾನ್ಸರ್ ಹರಡುವ ‘ಫ್ರೀ ರಾಡಿಕಲ್’ ಎಂಬ ಕಣಗಳು ದೇಹಕ್ಕೆ ತೊಂದರೆಯನ್ನುಂಟು ಮಾಡದಂತೆ ನೆರವಾಗುತ್ತದೆ ಎಂಬುದು ವೈದ್ಯಶಾಸ್ತ್ರದ ಪ್ರಕಾರ ಹಾಗೂ ತಜ್ಞರ ಅಭಿಪ್ರಾಯವಾಗಿದೆ.
10. ಅಸ್ತಮಾ,ಕೆಮ್ಮು,ಕಫ಼ ನಿವಾರಣೆ ಮಾಡುತ್ತದೆ.
11. ಹೃದಯ ಸಂಬಂಧಿ ಕಾಯಿಲೆಗಳಿಗೆ ಇದು ಪ್ರಯೋಜನಕರವಾಗಿದೆ.
12. ರಕ್ತ ಶುದ್ಧಿಕರಣಕ್ಕೆ ಸಹಾಯಕ.
ಹೀಗೆ ಗಿಡಮೂಲಿಕೆ, ಆಯುರ್ವೇದ ಔಷಧೀಯಾಗಿ ಮುರಗಲು ಬಹಳಷ್ಟು ಪೌಷ್ಟಿಕಾಂಶಗಳನ್ನು ಹೊಂದಿದೆ ಹಾಗೂ ಪ್ರಯೋಜನಕಾರಿಯಾಗಿದೆ. ಇದನ್ನು ಯಾವುದೇ ರೂಪದಲ್ಲಿ ಸೇವಿಸಿದರೂ ತೊಂದರೆಯಿಲ್ಲಾ ಎನ್ನುವುದು ನಮ್ಮ ಆಯುರ್ವೇದ ತಜ್ಞರ ಅಭಿಮತವಾಗಿದೆ.
ಇದನ್ನು ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿರಸಿ, ಸಿದ್ಧಾಪುರ, ಕುಮಟಾ, ಹೊನ್ನಾವರ, ಹೊಸಗದ್ದೆ ತೋಟಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಮಾರ್ಚ, ಮೇ ತಿಂಗಳಿನಲ್ಲಿ ಇದನ್ನು ಮಾರಾಟ ಮಾಡಿ ಆದಾಯಗಳಿಸುವ ತುಂಬಾ ಮಂದಿ ಈ ಕಡೇ ಇದ್ದಾರೆ . ಇವತ್ತಿನ ಉರಿ ಬಿಸಿಲಿನ ಸಮಯದಲ್ಲಿ ನಾವುಗಳು ಆದಷ್ಟು ಇದರ ಪ್ರಯೋಜನಗಳನ್ನು ಪಡೆದುಕೊಳ್ಳೋಣ.
ಹರಡಸೆ, ಹೊನ್ನಾವರ.
ನಾಗರಾಜ್ ಲೇಖನ್ ಅವರ ಹಿಂದಿನ ಬರಹ :