ಲೇಖನ : ಶ್ರೀಮತಿ ರೇಶ್ಮಾ ಗುಳೇದಗುಡ್ಡಾಕರ್
ಪರಿಚಯ : ಶ್ರೀಮತಿ ರೇಶ್ಮಾಗುಳೇದಗುಡ್ಡಾಕರ್ ವಿಜ್ಞಾನ ವಿಷಯದಲ್ಲಿ ಪದವಿಯನ್ನು ಪಡೆದಿದ್ದಾರೆ. ಗೃಹಿಣಿಯಾಗಿದ್ದು, ಸಾಹಿತ್ಯದಲ್ಲಿ ಆಸಕ್ತಿಯನ್ನು ಹೊಂದಿದ್ದಾರೆ. ಅವರು ರಚಿಸಿದ ‘ಗಾಂಧಿ ಕವನ’ ವು ಕೇಂದ್ರ ಸಾಹಿತ್ಯ ಅಕಾಡೆಮಿಯ ವಾರ್ಷಿಕ ಪುಸ್ತಕದಲ್ಲಿ ಪ್ರಕಟಗೊಂಡಿದೆ. ಅವರ ಇನ್ನೊಂದು ಕವನ ‘ನನ್ನೊಳಗಿನ ನಾನು ಋಜುವಾತು ಮಾಡಬೇಕಿದೆ’ ಆಕೃತಿಯಲ್ಲಿ ಪ್ರಕಟಿಸಲಾಗಿತ್ತು. ಅದನ್ನು ೨,೦೦೦ಕ್ಕೂ ಹೆಚ್ಚು ಜನ ಓದಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಈ ಯುವ ಬರಹಗಾರ್ತಿಯ ಲೇಖನಗಳನ್ನು ಓದಿ ಪ್ರೋತ್ಸಾಹಿಸಿ.
ಕೊರೊನಾ ಸಾವಿರದ ಗಡಿದಾಟಿದೆ. ಇಂತಹ ಆತಂಕದ ಸ್ಥಿತಿಯಲ್ಲಿ ಸರ್ಕಾರ ಶಾಲೆಗಳನ್ನು ಪುನರಾರಂಭಗೊಳಿಸಲು ಚಿಂತನೆ ನಡೆಸಿದೆ. ಸಾರಿಗೆ ಸಂಚಾರ ಆರಂಭವಾದರೆ ಜನಸಂಖ್ಯೆ ಹೆಚ್ಚಿರುವ ರಾಜ್ಯದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಕಷ್ಟ. ಅವುಗಳ ಮಧ್ಯೆ ಶಾಲೆಯನ್ನು ಎರಡು ಪಾಳೆಯಂತೆ ಪುನಾರಂಭ ಮಾಡಲು ಸಚಿವರು ಹೇಳಿದ್ದಾರೆ. ಶಾಲೆಗಳಲ್ಲಿ ಕೊರೊನಾ ತಡೆಗಟ್ಟಲು ಸೂಕ್ತ ವ್ಯವಸ್ಥೆ ಇದೆಯೇ ಎಂದು ಮೊದಲು ಪರಿಶೀಲಿಸಬೇಕು. ಮಕ್ಕಳ ಪ್ರಪಂಚವೇ ಬೇರೆ. ಅವರು ಶಾಲಾ ಅವರಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವೇ ? ಎಂಬ ಪ್ರಶ್ನೆ ಉದ್ಬವಾಗುತ್ತದೆ. ಪೂರ್ವ ಪ್ರಾಥಮಿಕ ಮಕ್ಕಳ ಆರೋಗ್ಯ ಭದ್ರತೆಗೆ ಸ್ಯಾನಿಟೈಸರ್ ಬಳಕೆ ನೆಚ್ಚಿಕೊಂಡು ಮಕ್ಕಳನ್ನು ಕಾಪಾಡಲು ಸಾಧ್ಯವಿಲ್ಲ.
ಮಕ್ಕಳನ್ನು ಇಷ್ಟು ದಿನ ಕಷ್ಟ ಪಟ್ಟು ಹಿಡಿದಿಟ್ಟ ಪಾಲಕರು ಒಮ್ಮಿಂದೊಮ್ಮೆಲೆ ಶಾಲೆಗೆ ಕಳುಹಿಸಿದರೆ ಮಕ್ಕಳು ಆಟವಾಡುವಾಗ, ಊಟಮಾಡುವಾಗ ತಮ್ಮ ಸಹಪಾಠಿಗಳೊಂದಿಗೆ ಅಂತರವನ್ನು ಕಾಯ್ದುಕೊಳ್ಳುವುದಿಲ್ಲ. ಶಾಲೆಯ ವಿರಾಮದ ಸಮಯದಲ್ಲಿ ಒಬ್ಬರಿಗೊಬ್ಬರು ಕೈಹಿಡಿದು ಎಳೆದಾಡುತ್ತ ಓಡಾಡುವ ಚಿಣ್ಣರನ್ನು ನಿಗ್ರಹಿಸುವುದು ಶಿಕ್ಷಕರಿಗೆ ಸವಾಲಿನ ಸಂಗತಿ .
ಕೊರೊನಾ ದೆಸೆಯಿಂದ ಕೆಲಸ ಕಳೆದುಕೊಂಡು ನಗರಗಳಿಂದ ಆಗಾಧ ಪ್ರಮಾಣದಲ್ಲಿ ಜನರು ತಮ್ಮ ಸ್ವಗ್ರಾಮಗಳಿಗೆ ತೆರಳಿದ್ದಾರೆ. ಈ ಗ್ರಾಮಗಳಲ್ಲಿಯೂ ಶಾಲೆಗಳಿವೆ. ಇಲ್ಲಿನ ಮಕ್ಕಳ, ಶಿಕ್ಷಕರ ಆರೋಗ್ಯವು ನಾವು ಗಮನಿಸಬೇಕು. ಈಗ ನಗರಗಳಿಗಿಂತ ಜನರ ಪ್ರಮಾಣ ಗ್ರಾಮಗಳಲ್ಲಿ ಹೆಚ್ಚಿದೆ. ಇಗ ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅವುಗಳ ಸಾಮರ್ಥ್ಯ, ಅಲ್ಲಿನ ವೈದ್ಯಕೀಯ ಸೌಲಭ್ಯ ಎಲ್ಲವು ಮುಖ್ಯ ಪಾತ್ರವಹಿಸುತ್ತವೆ .
ಈಗಿನ ಪರಿಸ್ಥಿತಿಯಲ್ಲಿ ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರು ಲಭ್ಯವಿಲ್ಲ. ಕೊರೊನಾ ಕಾರಣದಿಂದ ಇಂತಹ ಸಂದರ್ಭಗಳಲ್ಲಿ ಗ್ರಾಮೀಣ ಮಕ್ಕಳ ಆರೋಗ್ಯ ಕಾಪಾಡುವುದು ಹೇಗೆ?. ಇದನ್ನು ಗಂಭೀರವಾಗಿ ಯೋಚಿಸಬೇಕಿದೆ. ಇಂದು ದಿನೇ ದಿನೇ ವ್ಯಾಪಕವಾಗಿ ಕೊರೊನಾ ಹರಡುತ್ತಿದೆ. ಅದನ್ನು ಬಗ್ಗು ಬಡೆಯುವುದರ ಬಗ್ಗೆ ಹೆಚ್ಚು ಚಿಂತನೆ ನಡೆಸಬೇಕು.
ಶಾಲೆ ಪುನರಾರಂಭಿಸುವ ಬದಲು ಇಂದು ತಂತ್ರಜ್ಞಾನದಲ್ಲಿ ನಾವು ಸಾಕಷ್ಟು ಮುಂದೊರೆದಿದ್ದೇವೆ. ಅವುಗಳನ್ನು ಉಪಯೋಗಿಸಿಕೊಂಡು ಆನ್ಲೈನ್ ಮೂಲಕ ಶಾಲೆಗಳು ಪಾಠ ಮಾಡಬಹುದು. ಅದಕ್ಕೆ ಬೇಕಾಗುವ ಅಗತ್ಯತೆಗಳನ್ನು ಪೂರೈಸಲು ಸರ್ಕಾರ ಚಿಂತನೆ ನಡೆಸಿದರೆ ಉತ್ತಮ.
ಕೊರೊನ ವಾರಿಯರ್ಸ್ ಗಳಾದ ಪೋಲಿಸ್ ಸಿಬ್ಬಂದಿ, ವೈದ್ಯಕೀಯ ಸಿಬ್ಬಂದಿಗಳನ್ನೇ ಈ ಕೊರೊನ ಬಿಡಲಿಲ್ಲ. ಹೀಗಿರುವಾಗ ಶಾಲೆಗಳು ಮತ್ತೆ ಆರಂಭವಾದರೆ ಶಿಕ್ಷಕರನ್ನು , ಮಕ್ಕಳನ್ನು , ಶಾಲಾ ಸಿಬ್ಬಂದಿಗಳನ್ನೂ ಕೊರೊನಾ ಬಿಡುತ್ತದೆಯೇ? ಎನ್ನುವ ಪ್ರಶ್ನೆ ಎಲ್ಲ ಪಾಲಕರನ್ನು ಕಾಡಲು ಶುರುವಾಗಿದೆ.
ಲಾಕ್ ಡೌನ್ ತೆರವು ಮತ್ತಷ್ಟು ಕೊರೊನಾ ಅಟ್ಟಹಾಸಕ್ಕೆ ದಾರಿ ಮಾಡಿದೆ. ಮುಂದಾಗುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ನಿಯಮರೂಪಿಸಿ ಜನರ ಬದುಕನ್ನು ಉಳಿಸಬೇಕಾದ ತುರ್ತು ಅಗತ್ಯವಿದೆ. ಇಲ್ಲವಾದಲ್ಲಿ ರಾಜ್ಯದಲ್ಲಿ ಮಾರಣ ಹೋಮವೇ ನಡೆಯುವುದರಲ್ಲಿ ಸಂಶಯವಿಲ್ಲ .
( ಸೂಚನೆ : ಕತೆ, ಕವನ, ಲೇಖನ ಬರೆಯುವ ಆಸಕ್ತಿಯುಳ್ಳವರು ಇ – ಮೇಲ್ : akrutikannada@gmail.com ಮಾಡಬಹುದು. ಮತ್ತು ನಿಮ್ಮ ಅಭಿಪ್ರಾಯವನ್ನು ಮೇಲಿನ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಬಹುದು.)
ರೇಶ್ಮಾಗುಳೇದಗುಡ್ಡಾಕರ್ ಅವರ ಹಿಂದಿನ ಬರಹಗಳು :